ಕರ್ನಾಟಕ ಲೋಕಸೇವಾ ಆಯೋಗ(KPSC)ದಿಂದ 86 ಕೃಷಿ ಅಧಿಕಾರಿ 586 ಸಹಾಯಕ ಕೃಷಿ ಅಧಿಕಾರಿ ನೇಮಕಾತಿಗೆ ಅರ್ಹ ಅಭ್ಯರ್ಥಿಗಳು ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು(AO and AAO Online Application Last Date) ನಿಗದಿ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.
ಕೃಷಿ ಇಲಾಖೆಯ 86 ಕೃಷಿ ಅಧಿಕಾರಿ 586 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ(AO and AAO Recruitment) ಭರ್ತಿ ಮಾಡಲು ದಿನಾಂಕ: 20-09-2024 ರಂದು ಕರ್ನಾಟಕ ಲೋಕಸೇವಾ ಆಯೋಗ(KPSC) ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿತ್ತು ಅದರೆ ಆನ್ಲೈನ್ ಮೂಲಕ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದಿಲ್ಲ, ರಾಜ್ಯ ಸರಕಾರದಿಂದ ದಿನಾಂಕ 18-09-2024ರಂದು ಜಾರಿಗೆ ತಂದ ಕ್ರೀಡಾ ಸಾಧಕ ಅಭ್ಯರ್ಥಿಗಳ ಮೀಸಲಾತಿಯನ್ನು ಈ ಹುದ್ದೆಗಳಿಗೆ ಅಳವಡಿಕೆ ಮಾಡುವ ಕಾರಣದಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಮುಂದೂಡಲಾಗಿರುತ್ತು.
ಇದನ್ನೂ ಓದಿ: Land ownership act-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕಾನೂನು ಏನು ಹೇಳುತ್ತದೆ?
ಪ್ರಸ್ತುತ KPSC ಯಿಂದ 86 ಕೃಷಿ ಅಧಿಕಾರಿ 586 ಸಹಾಯಕ ಕೃಷಿ ಅಧಿಕಾರಿ ನೇಮಕಾತಿಗೆ(AO and AAO Notification) ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ನಿಗದಿಪಡಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ನೇಮಕಾತಿಗೆ(AO and AAO Application) ಕುರಿತು ರಮಣದೀಪ್ ಚೌಧರಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಇವರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು ಈ ಹುದ್ದೆಗಳ ವಿದ್ಯಾರ್ಹತೆ ವಯೋಮಿತಿ, ಮೀಸಲಾತಿ ಅರ್ಜಿ ಶುಲ್ಕ ಇತ್ಯಾದಿ ವಿವರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದಿನಾಂಕ 20-09-2024ರ ಅಧಿಸೂಚನೆಯನ್ನು ನೋಡಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: PM-Kisan-ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ ಕುರಿತು ಮಹತ್ವದ ಮಾಹಿತಿ ಪ್ರಕಟ!
AO and AAO Online Application Last Date-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ: 03 ಜನವರಿ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01 ಪೆಬ್ರವರಿ 2025
ಅಧಿಕೃತ ಆದೇಶದ ಪ್ರತಿ:
ಇದನ್ನೂ ಓದಿ: E-Khata Download-ಮೊಬೈಲ್ ನಲ್ಲೇ ಆಸ್ತಿ ಮತ್ತು ಸೈಟ್ ನ ಇ-ಖಾತಾ ಡೌನ್ಲೋಡ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!
AO and AAO Recruitment-ನೇಮಕಾತಿ ವಿವರ:
ಕೃಷಿ ಅಧಿಕಾರಿ- 86 ಹುದ್ದೆಗಳು
ಸಹಾಯಕ ಕೃಷಿ ಅಧಿಕಾರಿ- 586 ಹುದ್ದೆಗಳು
AO and AAO Monthly Salary-ಮಾಸಿಕ ವೇತನ:
ಕೃಷಿ ಅಧಿಕಾರಿ- 43,100-83,900 ರೂ.
ಸಹಾಯಕ ಕೃಷಿ ಅಧಿಕಾರಿ- 40,900-78,200 ರೂ
ಇದನ್ನೂ ಓದಿ: Village Map-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇಲ್ಲಿದೆ ಅಧಿಕೃತ ದಾರಿ ನಕ್ಷೆ!
AO and AAO Job Age Limit-ಅರ್ಜಿ ಸಲ್ಲಿಸಲು ವಯೋಮಿತಿ
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ ಸಾಮಾನ್ಯ:- 38 ವರ್ಷ, ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ:- 41 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1:- 43 ವರ್ಷ ನಿಗದಿಪಡಿಸಲಾಗಿದೆ.
AO and AAO online application link-ಆನ್ಲೈನ್ ಮೂಲಕರ್ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಲು ಅರ್ಜಿ ಸಲ್ಲಿಕೆ ಆರಂಭವಾದ ದಿನದಿಂದ ಮುಕ್ತಾಯವಾಗುವುದರ ಒಳಗಾಗಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅಧಿಕೃತ ಕರ್ನಾಟಕ ಲೋಕಸೇವಾ ಆಯೋಗ(KPSC)ದ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
Step-1: ಮೊದಲಿಗೆ ಈ ಲಿಂಕ್ AO and AAO online application ಮೇಲೆ ಕ್ಲಿಕ್ ಮಾಡಿ ಅಧಿಕೃತ ಕರ್ನಾಟಕ ಲೋಕಸೇವಾ ಆಯೋಗ(KPSC)ದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: RTC Crop Details-ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಪಡೆಯಲು ಈ ವರ್ಷದ ಬೆಳೆ ಮಾಹಿತಿ ಬಿಡುಗಡೆ!
Step-2: ಬಳಿಕ ಇಲ್ಲಿ “Agriculture Officer and Asst.Agriculture Officer in the Dept.of Agriculture(RPC and HK)” ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮೊದಲ ಬಾರಿಗೆ ಈ ಜಾಲತಾಣಕ್ಕೆ ಭೇಟಿ ಮಾಡುತ್ತಿರುವವರು ಮೊದಲು “New Registration” ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿಯನ್ನು ರಚನೆ ಮಾಡಿಕೊಂಡು “Login” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು. ಈಗಾಗಲೇ ಬಳಕೆದಾರ ಐಡಿಯನ್ನು ರಚನೆ ಮಾಡಿಕೊಂಡವರು ನೇರವಾಗಿ ಲಾಗಿನ್ ಅಗಬಹುದು.
Step-3: ಲಾಗಿನ್ ಅದ ನಂತರ Apply ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ಮತ್ತು ದಾಖಲಾತಿಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಬೇಕು.
For More Information-ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಉಪಯುಕ್ತ ಕೊಂಡಿಗಳು:
AO and AAO Notification-ಅಧಿಕೃತ ಅಧಿಸೂಚನೆ: DOWNLOAD NOW
AO and AAO Application-ಅರ್ಜಿ ಸಲ್ಲಿಸಲು ದಿನಾಂಕ ನಿಗದಿಯ ಅಧಿಸೂಚನೆ: DOWNLOAD NOW
KPSC Website link-ಕರ್ನಾಟಕ ಲೋಕಸೇವಾ ಆಯೋಗ(KPSC)ದ ಅಧಿಕೃತ ಜಾಲತಾಣ: CLICK HERE