ಕಂದಾಯ ಇಲಾಖೆಯಿಂದ ಅಭಿವೃದ್ದಿಪಡಿಸಿರುವ land records ತಂತ್ರಾಂಶವನ್ನು ಭೇಟಿ ಮಾಡಿ ರೈತರು ತಮ್ಮ ಮೊಬೈಲ್ ನಲ್ಲೇ ಸರ್ವ ನಂಬರ್ ವಾರು ಯಾವೆಲ್ಲಾ ಬ್ಯಾಂಕ್ ಗಳಲ್ಲಿ ಎಷ್ಟು ಮೊತ್ತದ ಸಾಲವನ್ನು(Crop Loan) ಪಡೆಯಲಾಗಿದೆ ಎನ್ನುವ ಮಾಹಿತಿಯನ್ನು ತಿಳಿಯಲು ಅವಕಾಶವಿದ್ದು ಇದರ ಕುರಿತು ಸಂಪೂರ್ಣ ವಿವರ ಇಲ್ಲಿ ಲಭ್ಯ.
ಇಂದಿನ ಡಿಜಿಟಲ್ ಯುಗದಲ್ಲಿ ಕೈಯಲ್ಲಿ ಮೊಬೈಲ್ ಮತ್ತು ಇಂಟರ್ ನೆಟ್ ಸೌಲಭ್ಯವಿದ್ದಲ್ಲಿ ದೈನಂದಿನ ಜೀವನದ ಹಲವು ಬಗ್ಗೆಯ ಕೆಲಸಗಳ ಮಾಹಿತಿಯನ್ನು ಕ್ಷಣಾರ್ದದಲ್ಲಿ ತಮ್ಮ ಮೊಬೈಲ್ ನಲ್ಲೇ ಪಡೆಯಬಹುದಾಗಿದೆ ಇದಕ್ಕೆ ಪೂರಕವಾಗಿ ರೈತರು ತಮ್ಮ ಕೃಷಿ ಜಮೀನಿನ ಮೇಲೆ ಯಾವ ಯಾವ ಬ್ಯಾಂಕ್ ಗಳಲ್ಲಿ ಎಷ್ಟು ಮೊತ್ತದ ಸಾಲವನ್ನು(Crop Loan Details) ಪಡೆಯಲಾಗಿದೆ ಎನ್ನುವ ಮಾಹಿತಿಯನ್ನು ಹೇಗೆ ತಿಳಿಯಬಹುದು ಎಂದು ತಿಳಿಸಲಾಗಿದೆ.
ಬಹುತೇಕ ರೈತರು ತಮ್ಮ ಜಮೀನಿನ ಮೇಲೆ ಬ್ಯಾಂಕ್ ಗಳಲ್ಲಿ ಸಾಲವನ್ನು(Agriculture Loan) ಪಡೆದಿರುತ್ತಾರೆ ಯಾವ ಯಾವ ಸರ್ವೆ ನಂಬರಿನ ಜಮೀನಿನ ಮೇಲೆ ಎಷ್ಟು? ಸಾಲವನ್ನು(Bele Sala Mahiti) ಪಡೆಯಲಾಗಿದೆ? ಎನ್ನುವ ಮಾಹಿತಿಯನ್ನು ಯಾವುದೇ ಸರಕಾರಿ ಕಚೇರಿ ಅಥವಾ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡದೇ ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂದು ಇಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Land Purchase Records- ಆಸ್ತಿ ಮಾರಾಟ ಮತ್ತು ಖರೀದಿ ಮಾಡುವಾಗ ಈ ದಾಖಲೆಗಳನ್ನು ತಪ್ಪದೇ ಪರೀಶಿಲಿಸಿ!
Online Crop Loan details check on mobile- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಎಂದು ತಿಳಿಯುವ ವಿಧಾನ:
Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ Online Crop Loan details check ಮಾಡಿ ಅಧಿಕೃತ ತಂತ್ರಾಂಶವನ್ನು ಭೇಟಿ ಮಾಡಬೇಕು.
Step-2: ಮೇಲಿನ ಲಿಂಕ್ ಅನ್ನು ಬಳಕೆ ಮಾಡಿಕೊಂಡು ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಸೆಲೆಕ್ಟ್ ಮಾಡಿಕೊಂಡು “Go” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Free Hostel-ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
Step-3: “Go” ಅಪ್ಶನ್ ಮೇಲೆ ಕ್ಲಿಕ್ ಮಾಡಿದ ಬಳಿಕ Surnoc, hissa no, Period ಅನ್ನು ಆಯ್ಕೆ ಮಾಡಿಕೊಂಡು “Fetch details” ಅಪ್ಶನ್ ಮೇಲೆ ಕ್ಲಿಕ್ ಮಾಡಬೇಕು.
Step-4: “Fetch Details”ಆಯ್ಕೆಯ ಮೇಲೆ ಒತ್ತಿ ನಂತರ ಇಲ್ಲಿ ಕೆಳಗೆ ಕಾಣುವ “View” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಅಧಿಕೃತ ಪಹಣಿ/ಊತಾರ್/RTC ತೆರೆದುಕೊಳ್ಳುತ್ತದೆ ಇಲ್ಲಿ ಪಹಣಿಯ/RTC 11 ಕಾಲಂ ನಲ್ಲಿ ಋಣಗಳು ವಿಭಾಗದ ಕೆಳಗೆ ಯಾವ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ಪಡೆಯಲಾಗಿದೆ ಎನ್ನುವ ಸಂಪೂರ್ಣ ಮಾಹಿತಿ ಕಾಣಬಹುದು.
ಇದನ್ನೂ ಓದಿ: Crop Insurance amount-ಈ ಜಿಲ್ಲೆಯ ರೈತರ ಖಾತೆಗೆ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಜಮಾ!
RTC Crop loan details-ಸಾಲ ಮರುಪಾವತಿ ಮಾಡಿದ್ದರು ಸಾಲದ ಮೊತ್ತ ಪಹಣಿಯಲ್ಲಿ ಕಾಣಿಸಿದ್ದರೆ ಏನು ಮಾಡಬೇಕು?
ನೀವು ಜಮೀನಿನ ಮೇಲಿನ ಎಲ್ಲಾ ಸಾಲವನ್ನು ಬ್ಯಾಂಕ್ ಗೆ ಮರು ಪಾವತಿ ಮಾಡಿದರೆ ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಜಮೀನಿನ ಮೇಲೆ ಎಷ್ಟು? ಸಾಲವಿದೆ ಎನ್ನುವ ಮಾಹಿತಿಯನ್ನು ನೋಡಿದಾಗ ನಿಮ್ಮ ಜಮೀನಿನ ಪಹಣಿಯಲ್ಲಿ ಸಾಲದ ವಿವರ ತೋರಿಸಿದ್ದರೆ ಇದನ್ನು ಪಹಣಿಯಿಂದ ತೆಗೆದುಹಾಕು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ.
ಮೊದಲಿಗೆ ನೀವು ಸಾಲ ಪಡೆದ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಸಾಲ ಮರು ಪಾವತಿ ಮಾಡಿರುವ ಬಗ್ಗೆ NOC ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು ಇದಾದ ಬಳಿಕ ನಿಮ್ಮ ಹೋಬಳಿಯ ನೆಮ್ಮದಿ/ನಾಡ ಕಚೇರಿಯನ್ನು ಭೇಟಿ ಮಾಡಿ ಪಹಣಿಯಲ್ಲಿರುವ ಸಾಲದ ವಿವರ ತೆಗೆದುಹಾಕಲು ಅರ್ಜಿಯನ್ನು ಸಲ್ಲಿಸಬೇಕು, ಅರ್ಜಿ ಸಲ್ಲಿಸಿದ ಕೆಲವು ದಿನಗಳ ಬಳಿಕ ನಿಮ್ಮ ಪಹಣಿಯಲ್ಲಿ ನಮೂದಿಸಿರುವ ಸಾಲದ ವಿವರ ವಜಾ ಅಗುತ್ತದೆ.
ಇದನ್ನೂ ಓದಿ: PM-Kisan Beneficiary List-ಪಿಎಂ ಕಿಸಾನ್ 19ನೇ ಕಂತಿನ ಹಣ ಪಡೆಯಲು ಅರ್ಹ ರೈತರ ಪಟ್ಟಿ ಪ್ರಕಟ!
ಬೇರೆ ಬ್ಯಾಂಕ್ ನಲ್ಲಿ ಸಾಲ ಪಡೆಯಲು ತಪ್ಪದೇ ಈ ಕ್ರಮ ಅನುಸರಿಸಿ:
ಪಹಣಿಯ 11 ಕಾಲಂ ನಲ್ಲಿ ಸಾಲದ ವಿವರ ಇದ್ದರೆ ಬೇರೆ ಬ್ಯಾಂಕ್ ನಲ್ಲಿ ರೈತರು ಸಾಲ ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ರೈತರು ಈ ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಪಹಣಿಯಲ್ಲಿನ ಸಾಲದ ವಿವರವನ್ನು ವಜಾಗೊಳಿಸಬೇಕು.