- Advertisment -
HomeGovt SchemesGruhalakshmi 16th installment-ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ!

Gruhalakshmi 16th installment-ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ!

ಗೃಹಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 15 ಕಂತುಗಳ ಹಣವನ್ನು ಬಿಡುಗಡೆಯಾಗಿದ್ದು, ಈಗ ಈ ಯೋಜನೆಯಡಿ 16ನೇ ಕಂತಿನ ಹಣವನ್ನು(Gruhalakshmi 16th installment) ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡಲು ಸಂಬಂಧಪಟ್ಟ ಇಲಾಖೆಯಿಂದ ತಯಾರಿಯನ್ನು ನಡೆಸಿಲಾಗುತ್ತಿದ್ದು ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಹೀಗಿದೆ.

ರಾಜ್ಯ ಸರಕಾರದಿಂದ ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ 2,000 ರೂ ಸಂದಾಯ(Gruhalakshmi Amount) ಮಾಡಲಾಗುತ್ತಿದ್ದು ಇದರಂತೆ 16ನೇ ಕಂತಿನ ಹಣವನ್ನು ಈ ತಿಂಗಳು ಯಾವ ದಿನಾಂಕದಂದು ಬಿಡುಗಡೆ ಅಗಲಿದೆ ಎನ್ನುವ ಮಾಹಿತಿಯನ್ನು ಸಹ ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಇದಲ್ಲದೇ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಜಮಾ ಅಗುವ ಹಣದ ಜಮಾ(Gruhalakshmi Status) ವಿವರವನ್ನು ತಮ್ಮ ಮೊಬೈಲ್ ನಲ್ಲೇ ಹೇಗೆ ಪಡೆಯುವುದು? ಮತ್ತು ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿಯನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವ ಮಾಹಿತಿಯನ್ನು ಸಹ ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Yuva nidhi scheme-ಯುವನಿಧಿ ಯೋಜನೆ ನೋಂದಣಿ ಕುರಿತು ಸರಕಾರದಿಂದ ನೂತನ ಆದೇಶ ಪ್ರಕಟ!

Gruhalakshmi 16th Installment Date-ಈ ದಿನ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಬಿಡುಗಡೆ:

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ 2,000 ಅರ್ಥಿಕ ನೆರವನ್ನು ರೇಷನ್ ಕಾರ್ಡ ಹೊಂದಿರುವ ಕುಟುಂಬದ ಯಜಮಾನಿಯರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ಜಮಾ ಮಾಡಲಾಗುತ್ತಿದೆ.

ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಬಹುತೇಕ ರಾಜ್ಯದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳ 12 ನೇ ತಾರೀಕಿನಿಂದ 16 ರ ಮಧ್ಯದಲ್ಲಿ ನೇರವಾಗಿ ಅರ್ಜಿದಾರರ ಬ್ಯಾಂಕ್ ಅಕೌಂಟ್ ಗೆ ರೂ 2,000 ಹಣವನ್ನು ಜಮಾ ಮಾಡಲಾಗುತ್ತದೆ.

ಇದರಂತೆ 16ನೇ ಕಂತಿನ ಹಣವನ್ನು ಅರ್ಹ ಫಲಾನುಭವಿ ಮಹಿಳೆಯರಿಗೆ 12 ಜನವರಿ 2025 ರಿಂದ 16 ಜನವರಿ 2025 ರ ಮಧ್ಯದಲ್ಲಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Kashi Yatra Subsidy-ನೀವೇನಾದರೂ ಕಾಶಿಯಾತ್ರೆ ಪ್ಲ್ಯಾನ್ ಮಾಡಿದ್ದೀರಾ? ಈ ಯೋಜನೆಯಡಿ ಸಿಗುತ್ತದೆ ಸಹಾಯಧನ!

Gruhalakshmi Scheme-ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಲು ಈ ಕ್ರಮ ಅನುಸರಿಸಿ:

1) ಅರ್ಜಿದಾರರು ತಪ್ಪದೇ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಮಾಡಿಸಿಕೊಳ್ಳುವುದನ್ನು ಮರೆಯದಿರಿ.

2) ಒಂದೊಮ್ಮೆ ಈ ಯೋಜನೆಯಡಿ ಹಣ ಬರುವುದು ತಾಂತ್ರಿಕ ಸಮಸ್ಯೆಯಿಂದ ನಿಂತು ಹೋಗಿದ್ದರೆ ಕೂಡಲೇ ನಿಮ್ಮ ತಾಲ್ಲೂಕಿನ CDPO ಕಚೇರಿಯನ್ನು ಭೇಟಿ ಮಾಡಿ ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಿ.

3) ಆಧಾರ್ ಕಾರ್ಡ ಲಿಂಕಿಂಗ್ ಸಮಸ್ಯೆಯಿಂದ ಈ ಯೋಜನೆಯಡಿ ಹಣ ಬರುವುದು ನಿಂತು ಹೋಗಿದ್ದರೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆಯನ್ನು ತೆರೆದರು ಸಾಕು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಸಮಸ್ಯೆಯನ್ನು ಬಗ್ಗೆಹರಿಸಿಕೊಳ್ಳಬಹುದು.

ಇದನ್ನೂ ಓದಿ: Land Registration-ರಾಜ್ಯ ಸರಕಾರದಿಂದ ಆಸ್ತಿ ಖಾತಾ ರಿಜಿಸ್ಟರ್‌ ಮಾಡಿಸಿಕೊಳ್ಳುವವರಿಗೆ ಸಿಹಿ ಸುದ್ಧಿ!

Gruhalakshmi Status- ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡುವ ವಿಧಾನ:

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಸಂದಾಯವಾಗುವ ಅರ್ಥಿಕ ನೆರವಿನ ಜಮಾ ವಿವರದ ಮಾಹಿತಿಯನ್ನು ಅರ್ಜಿದಾರರು ತಮ್ಮ ಮೊಬೈಲ್ ನಲ್ಲೇ ಪಡೆಯಲು ಅವಕಾಶವಿದ್ದು ಈ ಕೆಳಗೆ ತಿಳಿಸಿರುವ ವಿಧಾನಗಳನ್ನು ಅನುಸರಿಸಿ ಈ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: 2nd PUC Exam 2025- 2nd ಪಿಯುಸಿ ಮಾದರಿ ಪ್ರಶ್ನೆಪತ್ರಿಕೆ! ಇಲ್ಲಿದೆ ಡೌನ್ಲೋಡ್ ಲಿಂಕ್!

ಎರಡು ವಿಧಾನ ಅನುಸರಿಸಿ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಅವಕಾಸವಿದ್ದು ಒಂದನೇಯದು ಈ ಲಿಂಕ್ Download DBT Karnataka App ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿದಾರರ ಆಧಾರ್ ಕಾರ್ಡ ವಿವರವನ್ನು ನಮೂದಿಸಿ ಈ ಅಪ್ಲಿಕೇಶನ್ ಗೆ ಲಾಗಿನ್ ಆಗಿ “Payment Status” ಬಟನ್ ಮೇಲೆ ಕ್ಲಿಕ್ ಮಾಡಿ “ಗೃಹಲಕ್ಷ್ಮಿ” ಎಂದು ಕಾಣುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ತಿಂಗಳುವಾರು ಈ ಯೋಜನೆಯಡಿ ಜಮಾ ಅಗಿರುವ ಹಣದ ವಿವರವನ್ನು ಪಡೆಯಬಹುದು.

Gruhalakshmi

ಇದನ್ನೂ ಓದಿ: Free Hostel-ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ಎರಡೆನೇ ವಿಧಾನ ನೀವು ಯಾವ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರುತ್ತಿರೋ ಆ ಬ್ಯಾಂಕಿನ ಬ್ಯಾಲೆಸ್ ಚೆಕ್ ಸಹಾಯವಾಣಿಗೆ ಒಂದು ಮಿಸ್ ಕಾಲ್ ಅನ್ನು ಮಾಡಿ ನಿಮ್ಮ ಉಳಿತಾಯ ಖಾತೆಯ ಪ್ರಸ್ತುತ ಹಣ ಎಷ್ಟು? ಇದೆ ಎಂದು ತಿಳಿದುಕೊಳ್ಳುವುದರ ಮೂಲಕ ಈ ಯೋಜನೆಯಡಿ ಹಣ ಜಮಾ ಅಗಿದಿಯಾ? ಎಂದು ತಿಳಿಯಬಹುದು.

ನಿಮ್ಮ ಬ್ಯಾಂಕಿನ ಬ್ಯಾಲೆನ್ಸ್ ಚೆಕ್ ಸಹಾಯವಾಣಿ ಸಂಖ್ಯೆಯನ್ನು ಪಡೆಯಲು Google ನಲ್ಲಿ ಮೊದಲಿಗೆ ನಿಮ್ಮ ಬ್ಯಾಂಕ್ ಹೆಸರನ್ನು ಹಾಕಿ ಸಹಾಯವಾಣಿ(ಉದಾಹರಣೆಗೆ: SBI Balance check helpline number) ಸಂಖ್ಯೆ ಎಂದು ಸರ್ಚ್ ಮಾಡಿದರೆ ಸಾಕು ಸಹಾಯವಾಣಿ ವಿವರ ಬರುತ್ತದೆ.

Gruhalakshmi Beneficiary List-ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಲು ಅರ್ಹ ನಾಗರಿಕರ ಪಟ್ಟಿ:

ಗೃಹಲಕ್ಷ್ಮಿ ಯೋಜನೆಯಡಿ ರೂ 2,000 ಅರ್ಥಿಕ ನೆರವನ್ನು ಪಡೆಯಲು ಮುಖ್ಯವಾಗಿ ಪಡಿತರ ಚೀಟಿಯನ್ನು ಹೊಂದಿರಬೇಕು ನಾಗರಿಕರು ಈ Gruhalakshmi Beneficiary List ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆಯ ತಂತ್ರಾಂಶವನ್ನು ಪ್ರವೇಶ ಮಾಡಿ ಇಲ್ಲಿ

Gruhalakshmi list

“E-Services” ವಿಭಾಗದಲ್ಲಿ ಕಾಣುವ “Show Village List” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ, ಹಳ್ಳಿಯ ಹೆಸರನ್ನು ಸೆಲೆಕ್ಟ್ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ನಾಗರಿಕರ ಹಳ್ಳಿವಾರು ಪಟ್ಟಿಯನ್ನು ಪಡೆಯಬಹುದು.

- Advertisment -
LATEST ARTICLES

Related Articles

- Advertisment -

Most Popular

- Advertisment -