ರಾಜ್ಯ ಸರಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಪ್ರತಿ ತಿಂಗಳು ನೀಡುತ್ತಿದ್ದ ಮಾಸಿಕ ವೇತನ(Asha Workers Salary) ಹೆಚ್ಚಳ ಮಾಡುವ ಬೇಡಿಕೆಗೆ ಸರಕಾರದಿಂದ ಅಧಿಕೃತವಾಗಿ ಒಪ್ಪಿಗೆ ನೀಡಲಾಗಿದ್ದು, ಇದರನ್ವಯ ಆಶಾ ಕಾರ್ಯಕರ್ತೆಯರ ಬಹುದಿನಗಳ ಬೇಡಿಕೆಗೆ ಸರಕಾರ ಒಪ್ಪಿಗೆ ಸೂಚಿಸಿದೆ.
ಆಶಾ ಕಾರ್ಯಕರ್ತೆಯರು(Asha Workers) ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಗೆ ಜಯ ಸಿಕ್ಕಂತಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು ಆಶಾ ಕಾರ್ಯಕರ್ತೆಯರ ಮಾಸಿಕ ವೇತನ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ ಮಾಹಿತಿ ವಿವರ ಮತ್ತು ಪರಿಷ್ಕೃತ ವೇತನ ಯಾವಾಗಿನಿಂದ ಜಾರಿಗೆ ಬರುತ್ತದೆ? ಇನ್ನಿತರೆ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Bele Parihara Amount-₹48.45 ಕೋಟಿ ಬೆಳೆ ಹಾನಿ ಪರಿಹಾರ ರೈತರ ಖಾತೆಗೆ! ನಿಮಗೆ ಬಂತಾ ಚೆಕ್ ಮಾಡಿ!
Asha Workers Salary Hike-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಂಧಾನ ಸಭೆ:
ಕೋವಿಡ್ ಸಮಯ ಹಾಗೂ ಇನ್ನಿತರೆ ಅನೇಕ ಆರೋಗ್ಯ ಇಲಾಖೆ ಯೋಜನೆಗಳನ್ನು ಮತ್ತು ಸೇವೆಗಳನ್ನು ಗ್ರಾಮೀಣ ಮಟ್ಟದ ಬಡ ಜನರಿಗೆ ತಲುಪಿಸಲು ಆಶಾ ಕಾರ್ಯಕರ್ತೆಯರ ಪಾತ್ರ ಅತೀ ಮುಖ್ಯವಾಗಿದ್ದು ಅದರೆ ಇವರಿಗೆ ನೀಡುವ ಮಾಸಿಕ ವೇತನವು ತುಂಬಾ ಕಡಿಮೆಯಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಬಹುದಿನಗಳಿಂದ ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳ ವೇತನ ಹೆಚ್ಚಳಕ್ಕೆ ಪ್ರತಿಭಟನೆಗಳನ್ನು ಮಾಡಿಕೊಂಡು ಬರುತ್ತಲೇ ಇದ್ದರು ಯಾವುದೇ ಸರಕಾರ ಬಂದರು ಇವರ ಬೇಡಿಕೆಯು ಬೇಡಿಕೆಯಾಗಿಯೇ ಉಳಿದಿತ್ತು ಅದರೆ ಪ್ರಸ್ತುತ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಟನೆಯಲ್ಲಿ ತೊಡಗಿರುವವರ ಜೊತೆ ಸಂಧಾನ ಸಭೆಯನ್ನು ನಡೆಸಿ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಇದನ್ನೂ ಓದಿ: Voter Id List-ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ!
Asha Workers Monthly Salary-ಮಾಸಿಕ 10,000 ಸಾವಿರ ವೇತನಕ್ಕೆ ಒಪ್ಪಿಗೆ:
ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ 2ನೇ ದಿನ ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ನೇರವಾಗಿ ಭೇಟಿ ಮಾಡಿ ಮಾಸಿಕ ವೇತನ ಪರಿಷ್ಕರಣೆಗೆ ಪರೀಶಿಲನೆ ಮಾಡಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಆಶ್ವಾಸನೆ ನೀಡಿದರು ಅದರೆ ಇದಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯ ಮುಂದುವರಿಸಿದ್ದರು.
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋರಾಟಗಾರದಲ್ಲಿ ತೊಡಗಿಕೊಂಡಿರುವ ಆಶಾ ಕಾರ್ಯಕರ್ತೆಯರೊಂದಿಗೆ ಸಂಧಾನ ಸಭೆ ನಡೆಸಿದರಲ್ಲದೆ, ಅವರ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆಯೊಂದಿಗೆ ಪ್ರತಿ ತಿಂಗಳು 10,000 ರೂ. ಗೌರವಧನ ಸಿಗುವಂತೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಇದರಿಂದ ಸಮಾಧಾನಗೊಂಡ ಆಶಾ ಕಾರ್ಯಕರ್ತೆಯರು ಸರಕಾರಕ್ಕೆ ಕೃತಜ್ಞತೆ ತಿಳಿಸಿ, ಪ್ರತಿಭಟನೆ ಹಿಂಪಡೆದರು.
ಇದನ್ನೂ ಓದಿ: E-Khata-ಈ ದಿನಾಂಕದ ಒಳಗಾಗಿ ಆಸ್ತಿಗಳಿಗೆ ಇ-ಖಾತಾ ವಿತರಣೆ ಕಡ್ಡಾಯ: ಸಿ ಎಂ ಸಿದ್ದರಾಮಯ್ಯ ಸೂಚನೆ!
Asha Workers Salary Hike News-ಗೌರವಧನ ಸಹಿತ ರಜೆಗೆ ಆಸ್ತು:
ಆಶಾ ಕಾರ್ಯಕರ್ತೆಯರ ಇನ್ನೂಂದು ಬೇಡಿಕೆಯಲ್ಲಿ ಒಂದಾಗ ಗೌರವಧನ ಸಹಿತ ರಜೆಗೆ ಸರಕಾರ ಒಪ್ಪಿಗೆ ಸೂಚಿಸಿದೆ ವೈದ್ಯಕೀಯ ರಜೆಯನ್ನು ಅಂದರೆ ಆರೋಗ್ಯ ಸರಿಯಿಲ್ಲದೇ ಇರುವಾಗ ಪ್ರತಿ ತಿಂಗಳು ಸಿಗುವ ರಜೆ ಕ್ರೋಡೀಕರಿಸಿ, ಗರಿಷ್ಠ ಮೂರು ತಿಂಗಳವರೆಗೆ ಗೌರವ ಧನ ನಿಲ್ಲಿಸದೆ ರಜೆ ಮಂಜೂರು ಮಾಡಲು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಒಪ್ಪಿಗೆ ನೀಡಿದ್ದಾರೆ.
ಪರಿಷ್ಕೃತ ವೇತನ ಯಾವಾಗ ಜಾರಿ!
ರಾಜ್ಯ ಸರಕಾರದಿಂದ ಆಶಾ ಕಾರ್ಯಕರ್ತರ ಮಾಸಿಕ ಗೌರವಧನ ಪರಿಷ್ಕರಣೆ ಹಾಗೂ ಗೌರವಧನ ಸಹಿತ ರಜೆಗೆ ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬಜೆಟ್ ಮಂಡನೆಗೂ ಮುನ್ನ ವೇತನ ಹೆಚ್ಚಳ ಹಾಗೂ ಇನ್ನಿತರೆ ಬೇಡಿಕೆ ಕುರಿತು ಚರ್ಚೆಗೆ ಪೂರ್ವಭಾವಿ ಸಭೆಗೆ ಆಶಾ ಕಾರ್ಯಕರ್ತೆಯರ ಸಂಘದ ಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದ್ದು, ಏಪ್ರಿಲ್ ನಂತರ ಪರಿಷ್ಕೃತ ವೇತನ ಜಾರಿಗೆ ಬರುವ ಸಾಧ್ಯತೆ ಇರುತ್ತದೆ.