Bele vime-ಬೆಳೆ ವಿಮೆ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

Facebook
Twitter
Telegram
WhatsApp

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಈ ವರ್ಷ(2024) ಈಗಾಗಲೇ ಅನೇಕ ಬೆಳೆಗಳಿಗೆ ಅರ್ಜಿ ಸಲ್ಲಿಸಲು ಒಂದು ತಿಂಗಳಿಂದ ಅವಕಾಶ ಮಾಡಿಕೊಳಲಾಗಿದ್ದು, ಅನೇಕ ಬೆಳೆಗಳಿಗೆ ಬೆಳೆ ವಿಮೆ(Bele vime) ಪ್ರೀಮಿಯಂ ಪಾವತಿ ಮಾಡಲು ಕೊನೆಯ ದಿನಾಂಕ ಹತ್ತಿರ ಬಂದಿರುತ್ತದೆ.

ಇಂದು ಈ ಲೇಖನದಲ್ಲಿ ಬೆಳೆ ವಿಮೆ(Bele vime arji) ಪಡೆಯಲು ತಪ್ಪದೇ ರೈತರು ಮಾಡಬೇಕಾದ ಅಗತ್ಯ ಕ್ರಮ/ಕೆಲಸಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ಓದುಗ ಮಿತ್ರರು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಪೂರ್ಣ ಅಂಕಣವನ್ನು ಓದಲು ವಿನಂತಿಸಿದೆ.

ಈಗಾಗಲೇ ಸರಕಾರದ ಅಧಿಕೃತ ಬೆಳೆ ವಿಮೆ ವೆಬ್ಸೈಟ್ ಅದ ಸಂರಕ್ಷಣೆ ವೆಬ್ಸೈಟ್ ನಲ್ಲಿ ಬೆಳೆವಾರು ಮತ್ತು ಹಳ್ಳಿವಾರು ವಿಮೆ ಪ್ರೀಮಿಯಂ ಅನ್ನು ಪಾವತಿ ಮಾಡಲು ಕೊನೆಯ ದಿನಾಂಕ(bele vime last date), ಪ್ರೀಮಿಯಂ ಹಣ(crop insurance), ಇತರೆ ಮಾಹಿತಿಯನ್ನು ಪ್ರಕಟಣೆ ಮಾಡಲಾಗಿರುತ್ತದೆ.

ಇದನ್ನೂ ಓದಿ: Male nakshatragalu: 2024ರ ಮಳೆ ನಕ್ಷತ್ರಗಳು ಮತ್ತು ಹಿರಿಯರ ಗಾದೆಗಳು! ಇಲ್ಲಿದೆ ಉಪಯುಕ್ತ ಮಾಹಿತಿ!

Bele vime-ಬೆಳೆ ವಿಮೆ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

1) ತಪ್ಪದೇ ಕೊನೆಯ ದಿನಾಂಕದ ಒಳಗಾಗಿ ಪ್ರೀಮಿಯಂ ಪಾವತಿ ಮಾಡಿ:

ರೈತರು ತಾವು ಬೆಳೆದ ಬೆಳೆ ನಷ್ಟವಾದ ಸಮಯದಲ್ಲಿ ಬೆಳೆ ವಿಮೆ ಪರಿಹಾರವನ್ನು ಪಡೆಯಲು ಕೊನೆಯ ದಿನಾಂಕ(bele vime arji last date) ಇನ್ನು ಒಂದೆರಡು ದಿನ ಇರುವಾಗಲೇ ಬೆಳೆ ವಿಮೆಯನ್ನು ಮಾಡಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಏಕೆಂದರೆ ಕೊನೆಯ ದಿನಾಂಕ ಹತ್ತಿರವಿರುವಾಗ ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಅಗದಿರುವ ಸನ್ನಿವೇಶವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಅದ್ದರಿಂದ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.

2) ಬೆಳೆ ಸಮೀಕ್ಷೆ-ಬೆಳೆ ವಿಮೆ ಅರ್ಜಿಯಲ್ಲಿನ ಬೆಳೆ ತಾಳೆ ಅದರೆ ಮಾತ್ರ ಪರಿಹಾರ ಸಿಗಲಿದೆ:

ಬಹಳಷ್ಟು ಜನ ರೈತರಿಗೆ ಇದೆ ಕಾರಣಕ್ಕೆ ಕಳೆದ ವರ್ಷ ಅಂದರೆ 2023 ರಲ್ಲಿ ಬೆಳೆ ವಿಮೆ ಹಣ ಪಡೆಯಲು ಅರ್ಹರಿದರು ಬೆಳೆ ವಿಮೆ ಪರಿಹಾರ ಜಮಾ ಅಗಿರುವುದಿಲ್ಲ ಅದೆನೆಂದರೆ ರೈತರು ತಾವು ಯಾವ ಬೆಳೆಗೆ ಬೆಳೆ ವಿಮೆ(crop insurance-crop survey crop name) ಮಾಡಿಸಿರುತ್ತಿರೋ ಅದೇ ಬೆಳೆಯನ್ನು ಬೆಳೆದಿದ್ದಾರೆ ಎಂದು ಬೆಳೆ ಸಮೀಕ್ಷೆಯಲ್ಲಿ ಬೆಳೆ ವಿವರ ದಾಖಲಾಗಿದ್ದರೆ ಮಾತ್ರ ಬೆಳೆ ನಷ್ಟವಾದ ಸಮಯದಲ್ಲಿ ಬೆಳೆ ವಿಮೆ ಪರಿಹಾರ ಜಮಾ ಅಗುತ್ತದೆ.

ಇದನ್ನೂ ಓದಿ: Dam water level in karnataka: ರಾಜ್ಯದ ಯಾವ ಯಾವ ಡ್ಯಾಂ ಎಷ್ಟು? ನೀರು ಭರ್ತಿಯಾಗಿದೆ ಇಲ್ಲಿದೆ ಸಂಪೂರ್ಣ ವಿವರ!

ಉದಾಹರಣೆಗೆ: ನೀವು ಮೆಕ್ಕೆಜೋಳಕ್ಕೆ ಬೆಳೆ ವಿಮೆ ಮಾಡಿಸಿದ್ದರೆ ಬೆಳೆ ಸಮೀಕ್ಷೆಯನ್ನು ಮಾಡಲು ನಿಮ್ಮ ಜಮೀನಿನ ಪ್ರತಿನಿಧಿ ಬಂದಾಗ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಮೆಕ್ಕೆಜೋಳ ಎಂದು ಅವರು ಜಮೀನಿನ ಜಿ.ಪಿಎಸ್ ಪೋಟೊ ತೆಗೆದು ಬೆಳೆ ಮಾಹಿತಿಯನ್ನು ದಾಖಲಿಸಬೇಕು ಅಗ ಬೆಳೆ ವಿಮೆ ಅರ್ಜಿಯ ಬೆಳೆ ಮಾಹಿತಿ ಮತ್ತು ಬೆಳೆ ಸಮೀಕ್ಷೆಯ ಬೆಳೆ ಮಾಹಿತಿ ತಾಳೆ ಅಗಿ ನೀವು ಬೆಳೆ ವಿಮೆ ಪರಿಹಾರ ಪಡೆಯಲು ಅರ್ಹರಾಗುತ್ತೀರಿ.

3) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಯಶ್ವಸಿಯಾಗಿ ಅರ್ಜಿ ಸಲ್ಲಿಕೆಯಾಗಿದಿಯೇ ಎಂದು ಖಚಿತಪಡಿಸಿಕೊಳ್ಳಿ:

ರೈತರು ಗ್ರಾಮ ಒನ್/ಕರ್ನಾಟಕ ಒನ್/ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ತಪ್ಪದೇ ಒಮ್ಮೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೆಳಗೆ ತಿಳಿಸಿದ ವಿಧಾನವನ್ನು ಅನುಸರಿಸಿ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದಿಯೇ ಎಂದು ಖಚಿತಪಡಿಸಿಕೊಳ್ಳಿ.

Step-1: ಮೊದಲಿಗೆ ಈ Bele vime status ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಬೆಳೆ ವಿಮೆ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು. ತದನಂತರ Mobile No ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸುವಾಗ ನೀಡಿರುವ ಮೊಬೈಲ್ ಸಂಖ್ಯೆಯನ್ನು ಹಾಕಿ ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: LIC jobs-2024: ಎಲ್ಐಸಿಯಿಂದ 200 ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ!

Step-2: ಮೇಲಿನ ಹಂತವನ್ನು ಪೂರ್ಣಗೊಳಿಸಿದ ಬಳಿಕ ಈ ರೀತಿಯ ಸಂದೇಶ ತೋರಿಸುತ್ತದೆ “ಬ್ಯಾಂಕಿನಿಂದ ಅನುಮೋದಿಸಿ ಮತ್ತು ವಿಮಾ ಕಂಪನಿಗೆ ಸಲ್ಲಿಸಲಾಗಿದೆ/ Approved by bank and forwarded to insurance company ಅಥವಾ ನಿಮ್ಮ ಅರ್ಜಿಯು ಯಶಸ್ವಿಯಾಗಿ ಸಲ್ಲಿಕೆ ಅಗಿದೆ” ಎಂದು ತೋರಿಸುತ್ತದೆ. ಈ ರೀತಿ ಬಂದರೆ ಮಾತ್ರ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆ ಎಂದು.

3) ತಪ್ಪದೇ ಸ್ವೀಕೃತಿ ಪಡೆಯಿರಿ:

ರೈತರು ಆನ್ಲೈನ್ ಮೂಲಕ ಬೆಳೆ ವಿಮೆಗೆ ಪ್ರೀಮಿಯಂ ಅನ್ನು ಪಾವತಿ ಮಾಡಿ ಅರ್ಜಿ ಸಲ್ಲಿಸಿದ ಬಳಿಕ ತಪ್ಪದೇ ಕೊನೆಯಲ್ಲಿ ಬರುವ ಸ್ವೀಕೃತಿಯನ್ನು ಪಡೆದು ಬೆಳೆ ಕಟಾವಿಗೆ ಬರುವವರೆಗೆ ಕಾಯ್ದಿರಿಸಿಕೊಳ್ಳಬೇಕು. ಏಕೆಂದರೆ ವೈಯಕ್ತಿಕ ಬೆಳೆ ನಷ್ಟವಾದ ಸಮಯದಲ್ಲಿ ಅರ್ಜಿ ಸಲ್ಲಿಸಲು ಈ ಸ್ವೀಕೃತಿ ಬೇಕಾಗುತ್ತದೆ.

ಇದನ್ನೂ ಓದಿ: Vasati Yojane application-2024: ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳಿಗೆ ನೆರವು!

last date for crop insurance-ಬೆಳೆವಾರು ಬೆಳೆ ವಿಮೆ ಪಾವತಿ ಮಾಡಲು ಕೊನೆಯ ದಿನಾಂಕದ ಮಾಹಿತಿ ತಿಳಿಯುವ ವಿಧಾನ:

ಬೆಳೆ ವಿಮೆಯ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಬೆಳೆವಾರು ಬೆಳೆ ವಿಮೆ ಪಾವತಿ ಮಾಡಲು ಕೊನೆಯ ದಿನಾಂಕದ ಮಾಹಿತಿಯನ್ನು ಪಡೆದುಕೊಳ್ಳಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ bele vime last date ಮಾಡಿ ಬೆಳೆ ವಿಮೆ ಸಂರಕ್ಷಣೆ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು. ಇದಾದ ಬಳಿಕ ಇಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡರೆ ಬೆಳೆ ವಿಮೆ ಪ್ರೀಮಿಯಂ ಅನ್ನು ಪಾವತಿ ಮಾಡಲು ಬೆಳೆವಾರು ಕೊನೆಯ ದಿನಾಂಕದ ವಿವರ ತೋರಿಸುತ್ತದೆ. 

ಸೂಚನೆ: ಕನ್ನಡದಲ್ಲಿ ಮಾಹಿತಿಯನ್ನು ನೋಡಲು ಸ್ಕ್ರ‍ಿನ್ ನ ಮೇಲೆ ಬಲ ಬದಿಯಲ್ಲಿ ಕಾಣುವ “ಕನ್ನಡ” ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Bele parihara

Bele parihara- ಮಳೆಯಿಂದ ಜಮೀನಿನ ಬೆಳೆ ಹಾನಿಯಾಗಿದ್ದರೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ರಾಜ್ಯದಲ್ಲಿ ಕಳೆದ 2 ವಾರದಿಂದ ಬಿಟ್ಟು ಬಿಡದೇ ನಿರಂತರವಾಗಿ ಮಳೆ ಬರುತ್ತಿರುವ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಅತೀಯಾದ ಮಳೆಯಿಂದ ಬೆಳೆ ನಾಶವಾಗಿದ್ದು(Bele parihara) ಅಂತಹ ರೈತರು ಬೆಳೆ ಹಾನಿಯ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದು.

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ