- Advertisment -
HomeGovt SchemesSolar Subsidy-ಮನೆ ಮೇಲೆ ಸೋಲಾರ್ ಅಳವಡಿಕೆಗೆ ₹78,000 ರೂ ಸಬ್ಸಿಡಿ ಪಡೆಯಲು ಅರ್ಜಿ!

Solar Subsidy-ಮನೆ ಮೇಲೆ ಸೋಲಾರ್ ಅಳವಡಿಕೆಗೆ ₹78,000 ರೂ ಸಬ್ಸಿಡಿ ಪಡೆಯಲು ಅರ್ಜಿ!

ಸಾರ್ವಜನಿಕರು ಸೂರ್ಯಘರ್ ಯೋಜನೆಯಡಿ ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸಬ್ಸಿಡಿಯಲ್ಲಿ(Solar Subsidy) ಸೌರವಿದ್ಯುತ್ ಘಟಕವನ್ನು ಸ್ಥಾಪಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸೂರ್ಯ ಮುಪ್ತ್ ಬಿಜ್ಲಿ ಯೋಜನೆಯಡಿ(Solar Subsidy Yojana) ಮನೆ ಬಳಕೆಯ ವಿದ್ಯುತ್ ಅನ್ನು ಉಳಿತಾಯ ಮಾಡಲು ಸಾರ್ವಜನಿಕರಿಗೆ ನೆರವು ನೀಡಲು ಸಹಾಯಧನವನ್ನು ಒದಗಿಸಲಾಗಿದ್ದು ರಾಜ್ಯದ ಎಲ್ಲಾ ಎಸ್ಕಾಂ ಗಳ ಮೂಲಕ ಈ ಯೋಜನೆಯಡಿ ಮನೆಯ ಮೇಲೆ ಸೋಲಾರ್ ಅನ್ನು ಅಳವಡಿಕೆ ಮಾಡಿಕೊಳ್ಳಲು ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ.

ಸೂರ್ಯಘರ್ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ದಾಖಲಾತಿಗಳೇನು? ಇನ್ನಿತರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: E-Swathu Application-90 ಲಕ್ಷ ಆಸ್ತಿಗಳ ಇ-ಸ್ವತ್ತು ಬಾಕಿ! ಇ-ಸ್ವತ್ತು ಎಲ್ಲಿ ಮಾಡಿಸಬೇಕು? ಪ್ರಯೋಜನಗಳೇನು?

PM- Surya Ghar Muft Bijli Yojana-ಪ್ರಧಾನ ಮಂತ್ರಿ ಸೂರ್ಯ ಮುಪ್ತ್ ಬಿಜ್ಲಿ ಯೋಜನೆ:

a) 2024 ರ ಜನವರಿ 22 ರಂದು ಕೇಂದ್ರ ಸರ್ಕಾರ ಘೋಷಿಸಿದ ಪ್ರಧಾನಮಂತ್ರಿ ಸೂರ್ಯ ಘರ್ ಮುಪ್ತ್ ಬಿಜ್ಜಿ ಯೋಜನೆ ಅಡಿಯಲ್ಲಿ ದೇಶದ ಜನರ ಮನೆಗಳ ಮೇಲ್ಚಾವಣಿಯಲ್ಲಿ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಸ್ವಾವಲಂಬನೆಯನ್ನು ಸಾಧಿಸುವ ಗುರಿ ಹೊಂದಲಾಗಿದೆ.

b) ಈ ಯೋಜನೆಯಡಿ ಸಾರ್ವಜನಿಕರು ತಮ್ಮ ಮನೆಯ ಮೇಲೆ ಸ್ಥಾಪನೆ ಮಾಡುವ ಸೋಲಾರ್ ಘಟಕಕ್ಕೆ ಆಕರ್ಷಕ ಸಬ್ಸಿಡಿ ಮೊತ್ತದ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ಇದನ್ನೂ ಓದಿ: Bagar Hukum-ಬಗರ್ ಹುಕುಂ ಯೋಜನೆಯ ಅರ್ಜಿ ವಿಲೇವಾರಿಗೆ ನೂತನ ಆದೇಶ ಪ್ರಕಟ!

Solar Benefits-ಸೋಲಾರ್ ಅಳವಡಿಕೆ ಪ್ರಯೋಜನಗಳು:

1) ವಿದ್ಯುತ್‌ ಬಿಲ್‌ನಲ್ಲಿ ಉಳಿತಾಯ.

2) ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡುವ ಮೂಲಕ ಆದಾಯಗಳಿಸಬಹುದು.

3) ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥೆ.

Solar Subsidy Amount Details-ಸಬ್ಸಿಡಿ ಮಾಹಿತಿ:

Solar Subsidy

ಇದನ್ನೂ ಓದಿ: Fertilizer Shop- ಬೀಜ ಮತ್ತು ಗೊಬ್ಬರ ಅಂಗಡಿ ಪರವಾನಗಿ ಪಡೆಯುವುದು ಹೇಗೆ? ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?

Documents-ಅರ್ಜಿ ಸಲ್ಲಿಸಲು ದಾಖಲೆಗಳು:

1) ಮನೆಯ ವಿದ್ಯುತ್ ಬಿಲ್
2) ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ
3) ಬ್ಯಾಂಕ್ ಪಾಸ್ ಬುಕ್ ಪ್ರತಿ
4) ಮೊಬೈಲ್ ನಂಬರ್

ಇದನ್ನೂ ಓದಿ: Borewell- ಇನ್ನು ಮುಂದೆ ಬೋರ್ ವೆಲ್ ಕೊರೆಸಲು ಈ ನಿಯಮ ಪಾಲನೆ ಕಡ್ಡಾಯ!

Solar Subsidy yojana

ಸೋಲಾರ್ ಘಟಕದ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಹೀಗಿದೆ:

A) 1 ಕಿ. ವ್ಯಾ ಸಾಮರ್ಥ್ಯದ ಸೌರಫಲಕದಿಂದ ತಿಂಗಳಿಗೆ 100 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದು, ಈ ಘಟಕವು 25 ವರ್ಷಗಳ ವರೆಗೆ ಸುದೀರ್ಘ ಬಾಳಿಕೆ ಬರುತ್ತದೆ ಇದಲ್ಲದೇ 5 ವರ್ಷಗಳ ನಿರ್ವಹಣೆಯನ್ನು ಒಳಗೊಂಡಿರಲಿದೆ.

B) 1 ಕಿ.ವ್ಯಾ ಸೌರಫಲಕ ಸ್ಥಾಪನೆಗೆ 10 x10 ಚದರ ಅಡಿ ಜಾಗ ಅವಶ್ಯಕವಿರುತ್ತದೆ.

Apply Method-ಅರ್ಜಿಯನ್ನು ಸಲ್ಲಿಸುವ ವಿಧಾನ:

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಈ ಯೋಜನೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅರ್ಜಿ ಸಲ್ಲಿಸಬಹುದು.

Online Application Link-ಅರ್ಜಿ ಸಲ್ಲಿಸಲು ವೆಬ್ಸೈಟ್- Apply Now

ಇದನ್ನೂ ಓದಿ: Murarji school admission- ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ!

ವಿಶೇಷ ಸೂಚನೆ: ಪಿಎಂ ಸೂರ್ಯಘರ್ ಪೋರ್ಟಲ್‌ನಲ್ಲಿ ನೀಡಲಾದ ನೋಂದಾಯಿತ ಪೂರೈಕೆದಾರರಿಂದ ಮಾತ್ರವೇ ಸೌರಫಲಕಗಳನ್ನು ಅಳವಡಿಸಿಕೊಳ್ಳಬೇಕು

For More Information-ಹೆಚ್ಚಿನ ಮಾಹಿತಿಗಾಗಿ:

ಸೂರ್ಯಘರ್ ಯೋಜನೆ ಅಧಿಕೃತ ಜಾಲತಾಣ- https://pmsuryaghar.gov.in

Helpline-ಸಹಾಯವಾಣಿ ಸಂಖ್ಯೆ- 080-22340816

- Advertisment -
LATEST ARTICLES

Related Articles

- Advertisment -

Most Popular

- Advertisment -