Parihara amount-2024: ಮಳೆಯಿಂದ ಉಂಟಾದ ನಷ್ಟಕ್ಕೆ ರಾಜ್ಯ ಸರಕಾರದಿಂದ 775 ಕೋಟಿ ಅನುದಾನ!ಯಾರಿಗೆಲ್ಲ ಸಿಗಲಿದೆ ಪರಿಹಾರದ ಹಣ!

ರಾಜ್ಯದ್ಯಂತ ಕಳೆದ ಎರಡು ವಾರಗಳಿಂದ ವಾಡಿಕೆಗಿಂತ ಅಧಿಕ ಮಳೆ ಅಗಿರುವ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಸಾರ್ವಜನಿಕ ಅಸ್ತಿ ಮತ್ತು ರೈತರ ಬೆಳೆ ನಷ್ಟವಾಗಿದ್ದು ಇದಕ್ಕೆ ಪರಿಹಾರ(Parihara amount-2024) ಒದಗಿಸಲು ಮೊದಲ ಹಂತದಲ್ಲಿ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ.

ಅತೀಯಾದ ಮಳೆಯಿಂದ ಬೆಳೆ ಮತ್ತು ಮನೆ-ಅಸ್ತಿ ನಷ್ಟಕ್ಕೆ ಒಳಗಾದ ಸಾರ್ವಜನಿಕರಿಗೆ ಸರಕಾರದಿಂದ ಪರಿಹಾರವನ್ನು ನೀಡಲು ಮೊದಲ ಹಂತದಲ್ಲಿ ರೂ 775/- ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ಕಂದಾಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಲೇಖನದಲ್ಲಿ ಪರಿಹಾರವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬಹುದು? ಯಾರಿಗೆಲ್ಲ ಸಿಗಲಿದೆ ಪರಿಹಾರದ ಹಣ?ಯಾವುದಕ್ಕೆ ಎಷ್ಟು ಪರಿಹಾರ ನೀಡಲಾಗುತ್ತದೆ?ನೀವು ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಎಂದು ನಿಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳಬಹುದು? ಎನ್ನುವ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

ಇದನ್ನೂ ಓದಿ: Southern Railway Recruitment-2024: ದಕ್ಷಿಣ ರೈಲ್ವೆ ಇಲಾಖೆಯಿಂದ 2438 ಹುದ್ದೆಗಳ ನೇಮಕಾತಿ!

ಬೆಳೆ ಹಾನಿಗೆ ತಕ್ಷಣವೇ ಪರಿಹಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ರೂ ರೂ 775/- ಕೋಟಿ ಒದಗಿಸಿದ್ದು ಇನ್ನು ಹೆಚ್ಚುವರಿಯಾಗಿ ರೂ 200/- ಕೋಟಿ ನೀಡಲು ಸಿದ್ದರಿದ್ದೇವೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವ ಜೊತೆಗೆ ಹೊಸ ಮನೆ ಮಂಜೂರು ಮಾಡಲು ತೀರ್ಮಾನಿಸಲಾಗಿದೆ.

ಬೆಳೆ ಹಾನಿಗೆ ತಕ್ಷಣವೇ ಪರಿಹಾರ ನೀಡಲು ಸೂಚಿಸಲಾಗಿದೆ ಮತ್ತು ಎಸ್ ಡಿ ಆರ್ ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ಕೊಡಲಾಗುತ್ತದೆ ಎಂದು ಕೃಷಿ ಬೈರೇಗೌಡ ಕಂದಾಯ ಸಚಿವರು ವಾರ್ತಾ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

How can apply-ಯಾರಿಗೆಲ್ಲ ಸಿಗಲಿದೆ ಪರಿಹಾರದ ಹಣ?

ಪ್ರಸ್ತುತ ರಾಜ್ಯ ಸರಕಾರದಿಂದ ಪರಿಹಾರ ನೀಡಲು ಬಿಡುಗಡೆ ಮಾಡಿರುವ ರೂ 775/- ಕೋಟಿ ಅನುದಾನವನ್ನು ಹೆಚ್ಚು ಮಳೆಯಿಂದ ಹಾಗೂ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಉಂಟಾದ ನಷ್ಟಕ್ಕೆ ವೆಚ್ಚ ಮಾಡಲಾಗುತ್ತಿದ್ದು ಮನೆ ಗೋಡೆ ಬಿದ್ದು ಹೊಗಿರುವುದು ಮತ್ತು ಸಂಪೂರ್ಣ ಮನೆ ಹಾನಿಗೆ ಒಳಗಾದವರು ಮಳೆ ನೀರಿನಿಂದ ಬೆಳೆ ಹಾನಿಯಾಗಿರುವವರು, ಜೀವ ಹಾನಿಗೆ ಒಳಗಾದವರಿಗೆ ಈ ಪರಿಹಾರ ಸಿಗಲಿದೆ.

ಇದನ್ನೂ ಓದಿ: Diploma in veterinary: 2 ವರ್ಷದ ಪಶುಸಂಗೋಪನಾ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

How to apply-ಪರಿಹಾರ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ರಾಜ್ಯ ಸರಕಾರದಿಂದ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಅರ್ಥಿಕವಾಗಿ ನೆರವು ನೀಡಲು ಪರಿಹಾರವನ್ನು ಒದಗಿಸಲಾಗಿದ್ದು ಅರ್ಹ ಫಲಾನುಭವಿ ನಾಗರಿಕರು ಮನೆ ಹಾನಿಗೆ ಒಳಗಾಗಿದರೆ ನಿಮ್ಮ ಹಳ್ಳಿಯ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಪರಿಹಾರವನ್ನು ಪಡೆದುಕೊಳ್ಳಬಹುದು.

ಅಥವಾ ಕೃಷಿ ಬೆಳೆ ಉದಾಹರಣೆಗೆ ಭತ್ತ, ಮೆಕ್ಕೆಜೋಳ್, ರಾಗಿ ಬೆಳೆಗಳು ಅತೀಯಾದ ಮಳೆಯಿಂದ ಹಾನಿಯಾಗಿದರೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿದಾರರ ಆಧಾರ್ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್, ಜಮೀನಿನ ಪಹಣಿ/RTC/ಸರ್ವೆ ನಂಬರ್ ಅನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇದೇ ರೀತಿ ತೋಟಗಾರಿಕೆ ಬೆಳೆ ಹಾನಿಯಾಗಿದರೆ ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Central budget 2024: ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಎಷ್ಟು ಅನುದಾನ? ಇಲ್ಲಿದೆ ಪಿ ಎಂ ಕಿಸಾನ್ ಹಣ ಹೆಚ್ಚಳದ ಅಧಿಕೃತ ಮಾಹಿತಿ!

Parihara amount details- ಯಾವುದಕ್ಕೆ ಎಷ್ಟು ಪರಿಹಾರ ನೀಡಲಾಗುತ್ತದೆ?

1) ಸಂಪೂರ್ಣ ಮನೆ ಹಾನಿಗೆ ರೂ 5,00,000 ದವರೆಗೆ ಪರಿಹಾರ ನೀಡಲಾಗುತ್ತದೆ.
2) ತೋಟಗಾರಿಕೆ ಬೆಳೆಗೆ ಎಕರೆಗೆ – ರೂ 22,500.
3) ಕೃಷಿ ಬೆಳೆಗಳಿಗೆ -ರೂ 8,500 ರಿಂದ 13,500 ರವರೆಗೆ ಪರಿಹಾರವನ್ನು ಮಾರ್ಗಸೂಚಿಯನ್ವಯ ಅರ್ಜಿದಾರರ ದಾಖಲಾತಿಗಳನ್ನು ಮತ್ತು ಸ್ಥಳ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಪರಿಹಾರವನ್ನು ಒದಗಿಸಲಾಗುತ್ತದೆ.

Parihara website-ಪರಿಹಾರ ನೀಡಲು ಡಿಜಿಟಲ್ ವ್ಯವಸ್ಥೆ:

ಅರ್ಹ ಫಲಾನುಭವಿಗಳಿಗೆ ನಷ್ಟದ ಪರಿಹಾರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕಳೆದ ಎರಡು ವರ್ಷದಿಂದ ಕಂದಾಯ ಇಲಾಖೆಯಿಂದ Parihara ತಂತ್ರಾಂಶವನ್ನು ಬಳಕೆ ಮಾಡಲಾಗುತ್ತಿದ್ದು ಪ್ರಥಮ ಹಂತದಲ್ಲಿ ಈ ವೆಬ್ಸೈಟ್ ನಲ್ಲಿ ಅರ್ಜಿದಾರರ ಅರ್ಜಿಯನ್ನು ಅಪ್ಲೋಡ್ ಮಾಡಿ ನಂತರ ದಾಖಲಾತಿ ಮತ್ತು ಸ್ಥಳ ಪರೀಶಿಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ(DBT) ಮೂಲಕ ಅರ್ಜಿದಾರರ ಬ್ಯಾಂಕ್ ಖಾತೆಗೆ ಪರಿಹಾರ ಹಣ ಜಮಾ ಮಾಡಲಾಗುತ್ತದೆ.

ಈ ಕ್ರಮದಿಂದಾಗಿ ಮದ್ಯವರ್ತಿ ಹಾವಳಿಯನ್ನು ತಪ್ಪಿಸಬಹುದು ಮತ್ತು ಅರ್ಹ ಫಲಾನುಭವಿಗಳಿಗೆ ಪರಿಹಾರದ ಹಣ ಕಡಿಮೆ ಅವಧಿಯಲ್ಲಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಅಗುತ್ತದೆ ಎಂದು  ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: IAS KAS Free Coaching -ಸರ್ಕಾರದಿಂದ IAS KAS ಉಚಿತ ತರಬೇತಿಗೆ ಅರ್ಜಿ ಅಹ್ವಾನ!

Parihara application-ನೀವು ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಎಂದು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು?

ಪರಿಹಾರ ಪಡೆಯಲು ನೀವು ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಅಧಿಕೃತ ಪರಿಹಾರ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅರ್ಜಿದಾರರ ಅಧಾರ್ ಕಾರ್ಡ ಸಂಖ್ಯೆಯನ್ನು ಹಾಕಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

Parihara application status check-2024: ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ:

ಮೊದಲಿಗೆ ಈ Parihara application status ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಅರ್ಜಿದಾರರ ಮೊಬೈಲ್ ನಂಬರ್ ಮತ್ತು ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ನಮೂದಿಸಿ “ಲಾಗಿನ್” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸ್ಥಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.