ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವುದು ಹೇಗೆ ಎಂದು ಬಹುತೇಕ ಮಂದಿಗೆ ತಿಳಿದಿರುವುದಿಲ್ಲ ಈ ಕುರಿತು ಇಂದು ಈ ಅಂಕಣದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಯಾರೆಲ್ಲ ಅರ್ಜಿ(RTI Application)ಸಲ್ಲಿಸಬಹುದು? ಯಾವೆಲ್ಲ ವಿಷಯಗಳ ಅಧಿಕೃತ ಮಾಹಿತಿಯನ್ನು ಈ ಕಾಯ್ದೆಯಡಿ ಸಾರ್ವಜನಿಕರು ಪಡೆಯಬಹುದು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
ಕೇಂದ್ರ ಸರಕಾರದಿಂದ 2005 ರಲ್ಲಿ ಮಾಹಿತಿ ಹಕ್ಕು(RTI ) ಕಾಯ್ದೆಯನ್ನು ಜಾರಿಗೆ ತರಲಾಗಿದ್ದು ಪ್ರಸ್ತುತ ದೇಶಾದ್ಯಂತ ಈ ಕಾಯ್ದೆ ಜಾರಿಯಲ್ಲಿದೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಯಲ್ಲಿನ ಯೋಜನೆಗಳ ಅಧಿಕೃತ ದತ್ತಾಂಶದ ಮಾಹಿತಿಯನ್ನು ಸಾರ್ವಜನಿಕರಿಗೆ ಪಡೆಯಲು ಈ ಯೋಜನೆ ಸಹಕಾರಿಯಾಗಿದೆ.
ದೇಶದ ಯಾವುದೇ ಪ್ರಜೆಯು ಮಾಹಿತಿ ಹಕ್ಕು(RTI ) ಕಾಯ್ದೆಯಡಿ ಸರಕಾರದ ಬಳಿ ಅಧಿಕೃತ ಲಿಖಿತ ಮಾಹಿತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಈ ಕಾಯ್ದೆಯಡಿ ಅರ್ಜಿ ಸಲ್ಲಿಸುವುದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಈ ಕೆಳಗಿನಂತಿದೆ.
ಇದನ್ನೂ ಓದಿ: National Horticulture Fair 2025-ರಾಜ್ಯದಲ್ಲಿ 3 ದಿನ ರಾಷ್ಟ್ರೀಯ ತೋಟಗಾರಿಕಾ ಮೇಳ! ಇಲ್ಲಿದೆ ಮೇಳದ ಸಂಪೂರ್ಣ ವಿವರ!
RTI-ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶ:
ಸಾರ್ವಜನಿಕರಿಗೆ ಸರಕಾರದ ಯೋಜನೆಗಳನ್ನು ತಲುಪಿಸಲು ಮತ್ತು ಯೋಜನೆಗಳ ಅನುಷ್ಥಾನದಲ್ಲಿ ಪಾರದರ್ಶಕತೆಯನ್ನು ತರುವುದು ಮತ್ತು ವಿವಿಧ ಯೋಜನೆಗಳ ಅನುಷ್ಥಾನದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಈ ಕಾಯ್ದೆಯ ಉದ್ದೇಶವಾಗಿರುತ್ತದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ಕೇಳಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ನಮ್ಮ ದೇಶದ ಯಾವುದೇ ನಾಗರಿಕರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದಡಿಯಲ್ಲಿ ಬರುವ ಯಾವುದೇ ಸಾರ್ವಜನಿಕ ಪ್ರಾಧಿಕಾರದಿಂದ ಮಾಹಿತಿ ಕೇಳಬಹುದಾಗಿದೆ.
ಇದನ್ನೂ ಓದಿ: Ration Angadi-ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು?
RTI Application Time Limit-ಅರ್ಜಿ ಸಲ್ಲಿಸಿದ ಇಂತಿಷ್ಟು ದಿನದ ಒಳಗಾಗಿ ಪ್ರತಿಕ್ರಿಯಿಸಬೇಕು:
ಯಾವುದೇ ನಾಗರಿಕರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ ನಂತರ 30 ದಿನದ ಒಳಗಾಗಿ ಲಿಖಿತ ಉತ್ತರದ ಮಾಹಿತಿಯನ್ನು ನೀಡಬೇಕು.
RTI Application Fee-ಅರ್ಜಿ ಶುಲ್ಕ ಎಷ್ಟು?
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ಸಾರ್ವಜನಿಕರು ರೂ 10/- ಶುಲ್ಕವನ್ನು ಡಿಡಿ ಮೂಲಕ ಪಾವತಿ ಮಾಡಬೇಕು.
ಇದನ್ನೂ ಓದಿ: Revenue Department-ರಾಜ್ಯ ಸರಕಾರದಿಂದ ಕಂದಾಯ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಮಹತ್ವದ ನಿರ್ಣಯ!
Who To Apply For RTI Application-ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಸಾರ್ವಜನಿಕರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಯನ್ನು ನೇರವಾಗಿ ಆ ಕಚೇರಿ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಬಹುದು.
RTI Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:
ಕೇಂದ್ರ ಮತ್ತು ರಾಜ್ಯ ಸರಕಾರದಡಿ ಬರುವ ವಿವಿಧ ಇಲಾಖೆಯಲ್ಲಿನ ಮಾಹಿತಿಯನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯ- Apply Now
ಕೇಂದ್ರ- Apply Now
ಇದನ್ನೂ ಓದಿ: Education Assistance-ವಿದ್ಯಾರ್ಥಿಗಳಿಗೆ ₹20 ಸಾವಿರದ ವರೆಗೆ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಆಹ್ವಾನ!
RTI Application-ಮಾಹಿತಿ ಹಕ್ಕು ಅರ್ಜಿ ಮಾದರಿ:
ಗೆ,
ಸಾರ್ವಜನಿಕ ಮಾಹಿತಿ ಅಧಿಕಾರಿ,
[ಇಲಾಖೆಯ ಹೆಸರು],
[ವಿಳಾಸ]
ವಿಷಯ: ಮಾಹಿತಿ ಹಕ್ಕು ಕಾಯ್ದೆ, 2005 ರ ಅಡಿಯಲ್ಲಿ ಮಾಹಿತಿಗಾಗಿ ವಿನಂತಿ
ಮಾನ್ಯರೇ
ನಾನು [ನಿಮ್ಮ ಹೆಸರು], [ನಿಮ್ಮ ವಿಳಾಸ] ದಲ್ಲಿ ವಾಸಿಸುವ ಭಾರತದ ನಾಗರಿಕ. [ನಿರ್ದಿಷ್ಟ ಮಾಹಿತಿ ಕೋರಲಾಗಿದೆ] ಕುರಿತು ಆರ್‌ಟಿಐ ಕಾಯ್ದೆ, 2005 ರ ಸೆಕ್ಷನ್ 6 ರ ಅಡಿಯಲ್ಲಿ ಮಾಹಿತಿಯನ್ನು ಪಡೆಯಲು ನಾನು ಬಯಸುತ್ತೇನೆ.
ಅರ್ಜಿ ಶುಲ್ಕವನ್ನು ಪಾವತಿಸಿದ ಪುರಾವೆಯಾಗಿ ಪಾವತಿ ರಶೀದಿಯನ್ನು ಲಗತ್ತಿಸಲಾಗಿದೆ.
ಧನ್ಯವಾದಗಳು.
ನಿಮ್ಮ ವಿಶ್ವಾಸಿ,
[ನಿಮ್ಮ ಹೆಸರು]
[ಮೊಬೈಲ್ ಸಂಖ್ಯೆ]
ಕೇಂದ್ರದ ಮಾಹಿತಿ ಹಕ್ಕು ಕಾಯ್ದೆಯ ಅಧಿಕೃತ ಜಾಲತಾಣ- CLICK HERE
ರಾಜ್ಯ ಸರಕಾರದ ಮಾಹಿತಿ ಹಕ್ಕು ಕಾಯ್ದೆಯ ಅಧಿಕೃತ ಜಾಲತಾಣ- CLICK HERE
ಮಾಹಿತಿ ಹಕ್ಕು ಕಾಯ್ದೆ ಕನ್ನಡ ಕೈಪಿಡಿ- Download Now