- Advertisment -
HomeGovt SchemesBisiuta Yojane- ಬೇಸಿಗೆಯಲ್ಲಿ ಬಿಸಿಯೂಟದ ಕುರಿತು ಸರಕಾರದಿಂದ ನೂತನ ಆದೇಶ ಪ್ರಕಟ!

Bisiuta Yojane- ಬೇಸಿಗೆಯಲ್ಲಿ ಬಿಸಿಯೂಟದ ಕುರಿತು ಸರಕಾರದಿಂದ ನೂತನ ಆದೇಶ ಪ್ರಕಟ!

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 1-8ನೇ ತರಗತಿ(Bisiuta) ಮಕ್ಕಳಿಗೆ ಬೇಸಿಗೆ ರಜೆ ದಿನಗಳಲ್ಲಿ ಬಿಸಿಯೂಟದ ವ್ಯವಸ್ಥೆಯನ್ನು ಮಾಡಲು ಸರಕಾರದಿಂದ ನೂತನ ಆದೇಶವನ್ನು ಪ್ರಕಟಿಸಲಾಗಿದೆ.

2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8ನೇ ತರಗತಿಯ ಮಕ್ಕಳಿಗೆ (karnataka government schools)ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸಲು ಇದಕ್ಕೆ ಸಂಬಂಧಿಸಿದಂತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ರಾಜ್ಯ ಸರ್ಕಾರದಿಂದ ನೂತನ ಆದೇಶವನ್ನು ಪ್ರಕಟಿಸಲಾಗಿದೆ.

2024-25ನೇ ಸಾಲಿಗಾಗಿ ಪಂಚಾಯತ್‌ಗಳಿಗೆ ಒದಗಿಸಲಾಗಿರುವ ಹಣದ ವಿವರಗಳಿಗೆ ಸಂಬಂಧಿಸಿದ 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಷೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು ಅನುಷ್ಠಾನ ಮಾಡಲು ವಿವಿಧ ಲೆಕ್ಕ ಶೀರ್ಷಿಕೆಗಳಡಿ ಕೆಳಕಂಡಂತೆ ಅನುದಾನವನ್ನು ಒದಗಿಸಲಾಗಿದೆ.

ಇದನ್ನೂ ಓದಿ: PM Surya Ghar-20 ವರ್ಷಗಳ ಉಚಿತ ವಿದ್ಯುತ್ ಹಾಗೂ ಪ್ರತಿ ತಿಂಗಳು ಹಣ ಸಂಪಾದನೆ!

ಸರ್ಕಾರದ ಆದೇಶದಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ (ಮಧ್ಯಾಹ್ನ ಉಪಹಾರ ಯೋಜನೆಯ) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ರಾಜ್ಯ ಯೋಜನೆ ಕ್ಷೀರಭಾಗ್ಯ ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ: 2202-00-101-0-18 (2202-01-196-1-02-300) 2 : 324 ಗೌರವ ಧನ ರಡಿ ನಿಗದಿಯಾಗಿರುವ ರೂ.30,300.00 ಲಕ್ಷಗಳ ಅನುದಾನದಿಂದ 2024-25ನೇ ಸಾಲಿನಲ್ಲಿ ಆಗಸ್ಟ್-2024 ರಿಂದ ಅಕ್ಟೋಬರ್-2024ರ ವರೆಗೆ 03 ತಿಂಗಳ ಅವಧಿಯ ಗೌರವ ಸಂಭಾವನೆವನ್ನು ಪಾವತಿಸಲು

ಕೇಂದ್ರದ ಪಾಲಿನ ಅನುದಾನ ರೂ.2039.71 ಲಕ್ಷಗಳು, ರಾಜ್ಯದ ಪಾಲಿನ ಅನುದಾನ ರೂ.1359.80 ಲಕ್ಷಗಳು ಹಾಗೂ ಹೆಚ್ಚುವರಿ ರಾಜ್ಯದ ಪಾಲಿನ ಅನುದಾನ ರೂ.8973.51 ಲಕ್ಷಗಳನ್ನು ಒಳಗೊಂಡಂತೆ ಒಟ್ಟಾರೆಯಾಗಿ ರೂ12,373.02 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಂತ್ರಾಲಯದ, ಆದೇಶದಲ್ಲಿ 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು (ಮಧ್ಯಾಹ್ನ ಉಪಹಾರ ಯೋಜನೆ) ಅನುಷ್ಠಾನ ಮಾಡಲು ಮೊದಲನೇ ಕಂತಿನಲ್ಲಿ ಆವರ್ತಕ ವೆಚ್ಚಗಳಿಗೆ (Recurring Expenses) ರೂ.12703.63 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿ, ಸದರಿ ಅನುದಾನಕ್ಕೆ ಎದುರಾಗಿ ರೂ.7501.76 ಲಕ್ಷಗಳ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.

ಇದನ್ನೂ ಓದಿ: Togari MSP-ರಾಜ್ಯ ಸರಕಾರದಿಂದ ತೊಗರಿಗೆ ಹೆಚ್ಚುವರಿಯಾಗಿ ₹450 ರೂ ಪ್ರೋತ್ಸಾಹಧನ!

Bisiuta

ಸರ್ಕಾರದ ಆದೇಶದಲ್ಲಿ 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಷೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು (ಮಧ್ಯಾಹ್ನ ಉಪಹಾರ ಯೋಜನೆ) ಅನುಷ್ಠಾನ ಮಾಡಲು ಮೊದಲನೇ ಕಂತಿನಲ್ಲಿ ಆವರ್ತಕ ವೆಚ್ಚಗಳಿಗೆ (Recurring Expenses) ರೂ.12703.63 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು ಹಾಗೂ ರೂ.7501.76 ಲಕ್ಷಗಳ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಂತ್ರಾಲಯದ(government schools), ಆದೇಶದಲ್ಲಿ 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು (ಮಧ್ಯಾಹ್ನ ಉಪಹಾರ ಯೋಜನೆ) ಅನುಷ್ಠಾನ ಮಾಡಲು ಎರಡನೇ ಕಂತಿನಲ್ಲಿ ಆವರ್ತಕ ವೆಚ್ಚಗಳಿಗೆ (Recurring Expenses) ರೂ.12703.63 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿ, ಸದರಿ ಅನುದಾನಕ್ಕೆ ಎದುರಾಗಿ ರೂ.7501.75 ಲಕ್ಷಗಳ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.

ಇದನ್ನೂ ಓದಿ: Land registration-ಆಸ್ತಿ ನೋಂದಣಿ ಮಾಡಿಕೊಳ್ಳುವರಿಗೆ ಇಲ್ಲಿದೆ ನೂತನ ಮಾಹಿತಿ!

2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಷೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು (ಮಧ್ಯಾಹ್ನ ಉಪಹಾರ ಯೋಜನೆ) ಅನುಷ್ಠಾನ ಮಾಡಲು ಎರಡನೇ ಕಂತಿನಲ್ಲಿ ಆವರ್ತಕ ವೆಚ್ಚಗಳಿಗೆ (Recurring Expenses) ರೂ.12703.63 ಲಕ್‌ಷಗಳ ಕೇಂದ್ರದ ಪಾಲಿನ ಅನುದಾನವನ್ನು, ಸದರಿ ಅನುದಾನಕ್ಕೆ ಎದುರಾಗಿ ರೂ.7501.75 ಲಕ್ಷಗಳ ರಾಜ್ಯದ ಪಾಲಿನ ಅನುದಾನ ಹಾಗೂ ರಾಜ್ಯ ಸರ್ಕಾರದಿಂದ ಭರಿಸಲಾಗುತ್ತಿರುವ ಅಡುಗೆ ಸಿಬ್ಬಂದಿಗಳ ಹೆಚ್ಚುವರಿ ಸಂಭಾವನೆ ಮೊತ್ತದ ರೂ.7575.00 ಲಕ್ಷಗಳ ರಾಜ್ಯದ ಪಾಲಿನ ಹೆಚ್ಚುವರಿ ಅನುದಾನವನ್ನು (State Top-up Amount) ಒಳಗೊಂಡಂತೆ ಒಟ್ಟಾರೆಯಾಗಿ ರೂ.27780.38 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: PM-Kisan 19th installment- ಈ ದಿನ ಪಿ ಎಂ ಕಿಸಾನ್ 19ನೇ ಕಂತಿನ ಹಣ ರೈತರ ಖಾತೆಗೆ!

ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಂತ್ರಾಲಯದ, ಆದೇಶದಲ್ಲಿ 2024-25ನೇ ಸಾಲಿನಲ್ಲಿ ಬರಪೀಡಿತ ಪ್ರದೇಶಗಳಲ್ಲಿ 1-8ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ರೂ 2958.87 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿ ಸದರಿ ಅನುದಾನಕ್ಕೆ ಎದುರಾಗಿ ರೂ 1742.74 ಲಕ್ಷಗಳ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.

ಪ್ರಧಾನ ಮಂತ್ರಿ ಷೋಷಣ ಶಕ್ತಿ ನಿರ್ಮಾಣ ಯೋಜನೆ, ಇವರು 2024-25ನೇ ಸಾಲಿನ ಏಪ್ರಿಲ್-ಮೇ-2024ರ 41 ದಿನಗಳ ಬೇಸಿಗೆ ರಜಾ ಅವಧಿಯಲ್ಲಿ ರಾಜ್ಯದ 31 ಜಿಲ್ಲೆಗಳ ಒಟ್ಟು 223 ಬರಪೀಡಿತ ತಾಲ್ಲುಕುಗಳ ವ್ಯಾಪ್ತಿಯಲ್ಲಿನ 1-8ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ. ರೂ.2958.87 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು,

ಸದರಿ ಅನುದಾನಕ್ಕೆ ಎದುರಾಗಿ ರೂ.1742.74 ಲಕ್ಷಗಳ ರಾಜ್ಯದ ಪಾಲಿನ ಅನುದಾನವನ್ನು ಹಾಗೂ ರಾಜ್ಯ ಸರ್ಕಾರದಿಂದ ಭರಿಸಲಾಗುತ್ತಿರುವ ಅಡುಗೆ ಸಿಬ್ಬಂದಿಗಳ ಹೆಚ್ಚುವರಿ ಸಂಭಾವನೆ ಮೊತ್ತ 2692.17 ಲಕ್ಷಗಳನ್ನು (State Top-up Amount) ಒಳಗೊಂಡಂತೆ ಒಟ್ಟಾರೆಯಾಗಿ ರೂ.7393.78 ಲಕ್ಷಗಳ ಅನುದಾನವನ್ನು ವಿವಿಧ ಲೆಕ್ಕ ಶೀರ್ಷಿಕೆಗಳಡಿ ಬಿಡುಗಡೆ ಮಾಡುವಂತೆ ಕೋರಿರುತ್ತಾರೆ.

ಇದನ್ನೂ ಓದಿ: KSOU Admission-ಮನೆಯಲ್ಲೇ ಕುಳಿತು ಓದಿ ಡಿಗ್ರಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆಯಲು ಅವಕಾಶ!

ಪ್ರಸ್ತಾವನೆಯಲ್ಲಿ ವಿವರಿಸಲಾದ ಮೇಲ್ಕಂಡ ಅಂಶಗಳನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ:

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ರೂ.2958.87 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು, ಸದರಿ ಅನುದಾನಕ್ಕೆ ಎದುರಾಗಿ ರೂ.1742.74 ಲಕ್ಷಗಳ ರಾಜ್ಯದ ಪಾಲಿನ ಅನುದಾನ

ಹಾಗೂ ರಾಜ್ಯ ಸರ್ಕಾರದಿಂದ ಭರಿಸಲಾಗುತ್ತಿರುವ ಅಡುಗೆ ಸಿಬ್ಬಂದಿಗಳ ಹೆಚ್ಚುವರಿ ಸಂಭಾವನೆ ಮೊತ್ತ ರೂ.2692.17 ಲಕ್ಷಗಳ ರಾಜ್ಯದ ಪಾಲಿನ ಹೆಚ್ಚುವರಿ ಅನುದಾನವನ್ನು (State Top-up Amount) ಒಳಗೊಂಡಂತೆ ಒಟ್ಟಾರೆಯಾಗಿ ರೂ.7393.78 ಲಕ್ಷಗಳ ಅನುದಾನವನ್ನು ವಿವಿಧ ಲೆಕ್ಕ ಶೀರ್ಷಿಕೆಗಳಡಿ ಕೆಳಕಂಡಂತೆ ಬಿಡುಗಡೆ ಮಾಡಿ ಆದೇಶಿಸಿದೆ.

ಈ ಆದೇಶದಲ್ಲಿ ಬಿಡುಗಡೆ ಮಾಡಲಾಗಿರುವ ಅನುದಾನವನ್ನು ಪ್ರಧಾನ ಮಂತ್ರಿ ಷೋಷಣ ಶಕ್ತಿ ನಿರ್ಮಾಣ ಯೋಜನೆಯ (ಮಧ್ಯಾಹ್ನ ಉಪಹಾರ ಯೋಜನೆ) Single Nodal Agency ಖಾತೆಗೆ ಜಮೆ ಮಾಡಿ, ಪ್ರಧಾನ ಮಂತ್ರಿ ಷೋಷಣ ಶಕ್ತಿ ನಿರ್ಮಾಣ ಯೋಜನೆಯ (ಮಧ್ಯಾಹ್ನ ಉಪಹಾರ ಯೋಜನೆ) ಅನುಷ್ಠಾನಕ್ಕಾಗಿ ನಿಯಮಾನುಸಾರ ಬಳಸಿಕೊಳ್ಳತಕ್ಕದ್ದು ಎಂದು ನೂತನ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -