- Advertisment -
HomeGovt SchemesHealth insurance-ಕೇಂದ್ರ ಸರಕಾರದಿಂದ ಕೇವಲ ₹456 ರೂ ಗೆ ₹4 ಲಕ್ಷ ವಿಮೆ ಪಡೆಯಲು ಅವಕಾಶ!

Health insurance-ಕೇಂದ್ರ ಸರಕಾರದಿಂದ ಕೇವಲ ₹456 ರೂ ಗೆ ₹4 ಲಕ್ಷ ವಿಮೆ ಪಡೆಯಲು ಅವಕಾಶ!

ನಮ್ಮ ದೇಶದಲ್ಲಿ ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ನಾಗರಿಕರಿಗೆ ಅತೀ ಕಡಿಮೆ ವಿಮಾ ಮೊತ್ತವನ್ನು(Health insurance) ಪಾವತಿ ಮಾಡಿ ಆರೋಗ್ಯ ವಿಮೆಯನ್ನು ಹೊಂದಲು ಕೇಂದ್ರ ಸರಕಾರವು ಎರಡು ಪ್ರಮುಖ ವಿಮಾ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಈ ಯೋಜನೆಗಳ ಕುರಿತು ಇಂದು ಈ ಲೇಖನದಲ್ಲಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಪ್ರಸ್ತುತ ದಿನ ಮಾನದಲ್ಲಿ ಪ್ರತಿಯೊಬ್ಬ ನಾಗರಿಕರು ತಪ್ಪದೇ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡಿರಬೇಕು ಏಕೆಂದರೆ ಅನಿರೀಕ್ಷಿತವಾಗಿ ಬರುವ ಆರೋಗ್ಯ ಸಮಸ್ಯೆಗಳಿಂದ ಅರ್ಥಿಕವಾಗಿ ಸದೃಡವಾಗಿರಲು ಈ ಯೋಜನೆಗಳು ನಮಗೆ ತುಂಬಾ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಕೇವಲ ₹456 ರೂ ಗೆ ₹4 ಲಕ್ಷ ವಿಮೆಯನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ(PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PMSBY) ಮೂಲಕ ಪಡೆಯಬಹುದಾಗಿದೆ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ(PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PMSBY) ಈ ಎರಡು ಯೋಜನೆಯಡಿ ನಾಗರಿಕರು ವಿಮೆಯನ್ನು(Best Health Insurance Scheme) ಮಾಡಿಸಿಕೊಳ್ಳಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Bisiuta Yojane- ಬೇಸಿಗೆಯಲ್ಲಿ ಬಿಸಿಯೂಟದ ಕುರಿತು ಸರಕಾರದಿಂದ ನೂತನ ಆದೇಶ ಪ್ರಕಟ!

Best Health Insurance Scheme-ಕೇವಲ ₹456 ರೂ ಗೆ ₹4 ಲಕ್ಷ ವಿಮೆ ಪಡೆಯಲು ಅವಕಾಶ:

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ(PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PMSBY) ಈ ಎರಡು ಯೋಜನೆಯಡಿ ನಾಗರಿಕರು ವಿಮೆಯನ್ನು ಮಾಡಿಸುವುದರ ಮೂಲಕ ಈ ಎರಡು ವಿಮಾ ಯೋಜನೆಗಳನ್ನು ಸೇರಿ ಒಟ್ಟು 4 ಲಕ್ಷ ವಿಮಾ ಮೊತ್ತವನ್ನು ಪಡೆಯಲು ಅವಕಾಶವಿರುತ್ತದೆ.

ಈ ವಿಮೆಗಳನ್ನು ಏಕೆ ಮಾಡಿಸಬೇಕು?

ಬಹುತೇಕ ಜನರಿಗೆ ಈ ಭಾವನೆ ಇದ್ದೆ ಇರುತ್ತದೆ ನಾವು ವಿಮೆಯನ್ನು ಮಾಡಿಸುವುದರಿಂದ ನಮಗೆ ಯಾವುದೇ ಪ್ರಯೋಜನವಿಲ್ಲ ಸುಮ್ಮನೆ ವಿಮಾ ಮೊತ್ತವನ್ನು ಪಾವತಿ ಮಾಡಿ ಹೆಚ್ಚು ವೆಚ್ಚ ವ್ಯರ್ಥವಾಗುತ್ತದೆ ಎಂದು ಅದರೆ ಇದು ತಪ್ಪು ಕಲ್ಪನೆಯಾಗಿದೆ ಏಕೆಂದರೆ ಒಂದು ಕುಟುಂಬದಲ್ಲಿ ದುಡಿಮೆ ಮಾಡುವ ವ್ಯಕ್ತಿಯು ಮರಣ ಹೊಂದಿದ್ದರೆ ಆ ವ್ಯಕ್ತಿಯನ್ನೇ ನಂಬಿಕೊಂಡ ಆ ಕುಟುಂಬದ ಕಥೆ ಏನು? ಅವರು ಜೀವನವನ್ನು ಹೇಗೆ ಸಾಗಿಸಬೇಕು? ಈ ಕಾರಣದಿಂದ ಒಂದೊಮ್ಮೆ ಈ ಎರಡು ಯೋಜನೆಯಡಿ ವಿಮೆ ಮಾಡಿಸಿದ್ದರೆ 4 ಲಕ್ಷ ವಿಮೆಯನ್ನು ಆ ಕುಟುಂಬಕ್ಕೆ ಸಿಗುತ್ತದೆ.

ಆರೋಗ್ಯಕ್ಕೆ ಸಂಬಂಧಪಟ್ಟ ವಿಮಾ ಯೋಜನೆಗಳು ಒಂದು ರೀತಿ ಇನ್ವೆಸ್ಟ್ ಮೆಂಟ್ ಇದಂತೆ ಇವು ಯಾವಾಗಲು ನಮ್ಮನ್ನು ಅರ್ಥಿಕವಾಗಿ ಸದೃಡರನ್ನಾಗಿ ಇರಿಸಿಕೊಳ್ಳಲು ನೆರವು ನೀಡುತ್ತವೆ ಅದ್ದರಿಂದ ನಾಗರಿಕರು ಈ ಎರಡು ವಿಮಾ ಯೋಜನೆಯಡಿ ವಿಮೆಯನ್ನು ತಪ್ಪದೇ ಮಾಡಿಸಿಕೊಳ್ಳಿ.

ಇದನ್ನೂ ಓದಿ: PM Surya Ghar-20 ವರ್ಷಗಳ ಉಚಿತ ವಿದ್ಯುತ್ ಹಾಗೂ ಪ್ರತಿ ತಿಂಗಳು ಹಣ ಸಂಪಾದನೆ!

Health insurance

ಇದನ್ನೂ ಓದಿ: Togari MSP-ರಾಜ್ಯ ಸರಕಾರದಿಂದ ತೊಗರಿಗೆ ಹೆಚ್ಚುವರಿಯಾಗಿ ₹450 ರೂ ಪ್ರೋತ್ಸಾಹಧನ!

How To Apply For Insurance scheme-ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ(PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PMSBY) ಈ ಎರಡು ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಅರ್ಜಿದಾರರು ನಿಮ್ಮ ಹತ್ತಿರದ ಅಂಚೆ ಕಛೇರಿ ಅಥವಾ ಬ್ಯಾಂಕ್ ಶಾಖೆಯನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

Required Documents For Insurance scheme-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

1) ಅರ್ಜಿ ನಮೂನೆ(ಬ್ಯಾಂಕ್ ಶಾಖೆ/ಅಂಚೆ ಕಚೇರಿಯಲ್ಲಿ ಪಡೆಯಬೇಕು)
2) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
3) ಬ್ಯಾಂಕ್ ಪಾಸ್ ಬುಕ್
4) ಅರ್ಜಿದಾರರ ಪೋಟೋ
5) ಮೊಬೈಲ್ ನಂಬರ್

ಇದನ್ನೂ ಓದಿ: Land registration-ಆಸ್ತಿ ನೋಂದಣಿ ಮಾಡಿಕೊಳ್ಳುವರಿಗೆ ಇಲ್ಲಿದೆ ನೂತನ ಮಾಹಿತಿ!

Who Can Apply For ಅರ್ಜಿಯನ್ನು ಸಲ್ಲಿಸಲು ಅರ್ಹರು:

1) ಈ ಯೋಜನೆಯಡಿ ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿದಾರರು ಭಾರತ ದೇಶದ ನಾಗರಿಕರಾಗಿರುವುದು ಕಡ್ಡಾಯವಾಗಿದೆ.

2) ಅರ್ಜಿದಾರರ ವಯಸ್ಸು 18 ರಿಂದ 70 ವರ್ಷದ ಒಳಗಿರಬೇಕು.

PMJJBY Benefits-ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ(PMJJBY) ಪ್ರಯೋಜನಗಳು:

ಈ ಯೋಜನೆಯಡಿ ಅರ್ಜಿ ಸಲ್ಲಿಸಿ ವಿಮಾ ಯೋಜನೆಯಡಿ ನೋಂದಣಿಯನ್ನು ಮಾಡಿಕೊಂಡವರು ಯಾವುದೇ ಕಾರಣದಿಂಡ ಮರಣ ಹೊಂದಿದ್ದರೆ ಈ ವ್ಯಕ್ತಿ ಸೂಚಿಸಿರುವ ನಾಮಿನಿಗೆ ರೂ ₹2 ಲಕ್ಷ ವಿಮಾ ಮೊತ್ತವನ್ನು ನೀಡಲಾಗುತ್ತದೆ.

ಇದನ್ನೂ ಓದಿ: PM-Kisan 19th installment- ಈ ದಿನ ಪಿ ಎಂ ಕಿಸಾನ್ 19ನೇ ಕಂತಿನ ಹಣ ರೈತರ ಖಾತೆಗೆ!

PMSBY Benefits-ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PMSBY) ಪ್ರಯೋಜನಗಳು:

ಅರ್ಜಿದಾರರು ಅಪಘಾತವಾಗಿ ಮರಣ ಹೊಂದಿದ್ದರೆ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯ ಹೊಂದಿದ್ದರು ಸಹ ಈ ಯೋಜನೆಯಡಿ ₹2 ಲಕ್ಷ ವಿಮೆಯನ್ನು ಪಡೆಯಬಹುದಾಗಿದೆ.

PMJJBY Guidelines-ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ(PMJJBY) ಯೋಜನೆಯ ಅಧಿಕೃತ ಮಾರ್ಗಸೂಚಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Download Now

PMSBY Guidelines-ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PMSBY) ವೆಬ್ಸೈಟ್- CLICK HERE

- Advertisment -
LATEST ARTICLES

Related Articles

- Advertisment -

Most Popular

- Advertisment -