ರಾಜ್ಯ ಸರಕಾರದಿಂದ ಕರ್ನಾಟಕದ ಎಲ್ಲಾ ಸ್ಥಳಗಳಲ್ಲಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಕಾರ್ಮಿಕ ಇಲಾಖೆಯ ಇ-ಕಾರ್ಮಿಕ ತಂತ್ರಾಂಶದಲ್ಲಿ ನೋಂದಣಿಯನ್ನು(Shop registration) ಮಾಡಿಕೊಳ್ಳಲು ಇಲಾಖೆಯಿಂದ ಅಧಿಕೃತ ನಿಯಮವನ್ನು ಜಾರಿಗೆ ತರಲಾಗಿದೆ.
ರಾಜ್ಯದ ಎಲ್ಲಾ ಸ್ಥಳಗಳಲ್ಲಿ ಸ್ಥಾಪಿಸಲ್ಪಟ್ಟಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯಡಿ ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಇ-ಕಾರ್ಮಿಕ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಲು ಕಾರ್ಮಿಕ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.
ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961 ರ ಪ್ರಾವಧಾನಗಳ ಕಾರ್ಯವ್ಯಾಪ್ತಿಯನ್ನು ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಿದೆ. ಈ ಅಧಿಸೂಚನೆಯು 2025 ಜನವರಿ 1 ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಇದು ಈ ಹಿಂದೆ ಹೊರಡಿಸಲಾದ ಎಲ್ಲಾ ಅಧಿಸೂಚನೆಗಳ ಮುಂದುವರೆದ ಭಾಗವಾಗಿದ್ದು, ಅಧಿನಿಯಮದ ಉಪಬಂಧಗಳು ಈಗಾಗಲೇ ಜಾರಿಗೆ ಬಂದಿರುವ ಸ್ಥಳಗಳನ್ನು ಒಳಗೊಂಡಂತೆ ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ಮೂರು ತಿಂಗಳ ನಂತರದ ದಿನಾಂಕದಿಂದ 2025 ಏಪ್ರಿಲ್ 1 ರಿಂದ ರಾಜ್ಯದ ಎಲ್ಲಾ ಸ್ಥಳಗಳಲ್ಲಿ ಜಾರಿಗೆ ಬರಲಿದೆ.
ಇದನ್ನೂ ಓದಿ: Aadhar card-ಆಧಾರ್ ಕಾರ್ಡನಲ್ಲಿ ಪತಿ ಹೆಸರನ್ನು ಸೇರಿಸಲು ಈ ದಾಖಲೆ ಕಡ್ಡಾಯ!
ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಇ-ಕಾರ್ಮಿಕ ತಂತ್ರಾಂಶದಲ್ಲಿ ನೋಂದಣಿಯನ್ನು ಮಾಡಿಕೊಳ್ಳಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು?
ಹಿರಿಯ ಕಾಮಿಕ ನಿರೀಕ್ಷಕರು ಮತ್ತು ಕಾರ್ಮಿಕ ನಿರೀಕ್ಷಕರು ನೋಂದಣಿ ಅಧಿಕಾರಿಗಳಾಗಿರುತ್ತಾರೆ:
ಆನ್ಲೈನ್ನಲ್ಲಿ ಅರ್ಜಿಯನ್ನು ಜಾಲತಾಣ https://www.ekarmika.karnataka.gov.in/ekarmika/Static/Home.aspx ಮೂಲಕ ಸಲ್ಲಿಸಬಹುದು. ಇಲಾಖೆಯ ಹಿರಿಯ ಕಾಮಿಕ ನಿರೀಕ್ಷಕರು ಮತ್ತು ಕಾರ್ಮಿಕ ನಿರೀಕ್ಷಕರು ನೋಂದಣಿ ಅಧಿಕಾರಿಗಳಾಗಿರುತ್ತಾರೆ.
ಇದನ್ನೂ ಓದಿ: Health insurance-ಕೇಂದ್ರ ಸರಕಾರದಿಂದ ಕೇವಲ ₹456 ರೂ ಗೆ ₹4 ಲಕ್ಷ ವಿಮೆ ಪಡೆಯಲು ಅವಕಾಶ!
Shop registration Fee-ನೋಂದಣಿಗೆ ನಿಗದಿಪಡಿಸಿದ ಶುಲ್ಕದ ವಿವರ ಹೀಗಿದೆ:
ನೋಂದಣಿ ಮಾಡಲು ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಯಾವುದೇ ನೌಕರರು ಇಲ್ಲದಿದ್ದರೆ ಶುಲ್ಕ ರೂ. 405/- ನಿಗದಿಪಡಿಸಲಾಗಿರುತ್ತದೆ.
No. of Employees | Fees (Rs.) |
No Employees | 405/- |
1 to 9 Employees | 810/- |
10 to 19 Employees | 5400/- |
20 to 49 Employees | 13500/- |
50 to 99 Employees | 27000/- |
100 to 250 Employees | 54000/- |
251 to 500 Employees | 67500/- |
501 to 1000 Employees | 94500/- |
Above 1000 Employees | 101250/- |
ಇದನ್ನೂ ಓದಿ: Bisiuta Yojane- ಬೇಸಿಗೆಯಲ್ಲಿ ಬಿಸಿಯೂಟದ ಕುರಿತು ಸರಕಾರದಿಂದ ನೂತನ ಆದೇಶ ಪ್ರಕಟ!
Documents For Shop registration-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು:
1) ವಿಳಾಸ ದೃಢೀಕರಣ ಪ್ರಮಾಣ ಪತ್ರ/Address Proof for the Establishment(Rental / agreement / GST / BBMP Khata.
2) ಮಾಲೀಕರ ಗುರುತಿನ ಚೀಟಿ/Aadhar card/ Driving license/Voter Card etc.
3) ಅಂಗಡಿ/ವಾಣಿಜ್ಯ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ/Incorporation Certificate /Memorandum of Article (In Case of Private Ltd. Company.
4) ಮಾಲೀಕರ ಪೋಟೋ/Photo
5) ಮೊಬೈಲ್ ನಂಬರ್/Mobile Number
ಇದನ್ನೂ ಓದಿ: PM Surya Ghar-20 ವರ್ಷಗಳ ಉಚಿತ ವಿದ್ಯುತ್ ಹಾಗೂ ಪ್ರತಿ ತಿಂಗಳು ಹಣ ಸಂಪಾದನೆ!
Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅರ್ಜಿದಾರರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ನಲ್ಲೇ ನೋಂದಣಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Step-1: ಮೊದಲಿಗೆ Apply Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Togari MSP-ರಾಜ್ಯ ಸರಕಾರದಿಂದ ತೊಗರಿಗೆ ಹೆಚ್ಚುವರಿಯಾಗಿ ₹450 ರೂ ಪ್ರೋತ್ಸಾಹಧನ!
Step-2: ಇದಾದ ಬಳಿಕ ಈ ವೆಬ್ಸೈಟ್ ಗೆ ಮೊದಲ ಬಾರಿಗೆ ಭೇಟಿ ಮಾಡುತ್ತಿರುವವರು New User ಪೇಜ್ ನಲ್ಲಿ ಅಧಿಕೃತ ವಿವರವನ್ನು ಭರ್ತಿ ಮಾಡಿ ಲಾಗಿನ್ ಅಗಲು ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು.
Step-3: ಮೇಲಿನ ಹಂತವನ್ನು ಪೂರ್ಣಗೊಳಿಸಿ ಬಳಕೆದಾರ ಐಡಿಯನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಿ ಇಲ್ಲಿ ಕೇಳುವ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಶುಲ್ಕವನ್ನು ಪಾವತಿ ಮಾಡಿ ನಿಮ್ಮ ಅಂಗಡಿ/ಸಂಸ್ಥೆಯನ್ನು ನೋಂದಣಿಯನ್ನು ಮಾಡಿಕೊಳ್ಳಬೇಕು.
For More Information-ನೋಂದಣಿ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ:
Helpline Number-ಸಹಾಯವಾಣಿ-08029753059,
Mail-ಮೇಲ್ ವಿಳಾಸ-ekarmikalabour@gmail.com