- Advertisment -
HomeGovt SchemesB-Khata Abiyana-ರಾಜ್ಯಾದ್ಯಂತ ಅಕ್ರಮ ಆಸ್ತಿಗಳಿಗೆ ಬಿ-ಖಾತಾ ವಿತರಣೆ ಅಭಿಯಾನ!

B-Khata Abiyana-ರಾಜ್ಯಾದ್ಯಂತ ಅಕ್ರಮ ಆಸ್ತಿಗಳಿಗೆ ಬಿ-ಖಾತಾ ವಿತರಣೆ ಅಭಿಯಾನ!

ರಾಜ್ಯ ಸರಕಾರದಿಂದ ಕಂದಾಯ ಭೂಮಿಯಲ್ಲಿ ಮನೆಯನ್ನು ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ಸಾರ್ವಜನಿಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದು ಇಂದಿನಿಂದ 3 ತಿಂಗಳವರೆಗೆ ಈ ಅಕ್ರಮ ಆಸ್ತಿಗಳಿಗೆ ಬಿ-ಖಾತಾ(B-Khata Abiyana) ಪ್ರಮಾಣ ಪತ್ರವನ್ನು ವಿತರಣೆ ಮಾಡುವ ಅಭಿಯಾನವನ್ನು ಜಾರಿಗೆ ತರಲಾಗಿದೆ.

ಏನಿದು ಬಿ-ಖಾತಾ ದಾಖಲೆ? ಆಸ್ತಿಗಳಿಗೆ ಬಿ-ಖಾತಾ(B-Khata) ವಿತರಣೆ ಅಭಿಯಾನ ಹೇಗೆ ನಡೆಸಲಾಗುತ್ತದೆ? ಇದ್ದರಿಂದ ಆಸ್ತಿ ಮಾಲೀಕರಿಗೆ ಯಾವೆಲ್ಲ ಪ್ರಯೋಜನಗಳು ದೊರೆಯಲಿವೆ? ಇನ್ನಿತರೆ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಕರ್ನಾಟಕದಲ್ಲಿ ನಿಯಮ ಬಾಹಿರವಾಗಿ ಕಂದಾಯ ಭೂಮಿಯಲ್ಲೇ ನಿರ್ಮಿಸಿದ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಮನೆಯನ್ನು ನಿರ್ಮಾಣ ಮಾಡಿಕೊಂಡಿರುವ ನಾಗರಿಕರಿಗೆ ರಾಜ್ಯ ಸರಕಾರವು ಸಿಹಿ ಸುದ್ದಿಯನ್ನು ನೀಡಿದ್ದು ಇಂದಿನಿಂದ ಅಂದರೆ 19 ಫೆಬ್ರವರಿ 2025 ರಿಂದ ಮೂರು ತಿಂಗಳ ವರೆಗೆ ಸಾರ್ವಜನಿಕರಿಗೆ ತಮ್ಮ ತಮ್ಮ ಆಸ್ತಿಗಳಿಗೆ ಬಿ ಖಾತಾವನ್ನು(B-Khata Information) ಪಡೆದುಕೊಳ್ಳಲು ಅಭಿಯಾನ ಮಾದರಿಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಇದನ್ನೂ ಓದಿ: Annabhagya Amount-ಸರಕಾರದಿಂದ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ ಕುರಿತು ನೂತನ ಪ್ರಕಟಣೆ!

What is B-Khata-ಏನಿದು ಬಿ-ಖಾತಾ ದಾಖಲೆ:

ಒಂದು ಆಸ್ತಿಗೆ ಎ-ಖಾತಾವನ್ನು ನೀಡಲು ಸಾಧ್ಯವಾಗದ ಸಮಯದಲ್ಲಿ ತೆರಿಗೆ ಸಂಗ್ರಹಣೆಗೆ ಅನುಕೂಲವಾಗುವ ದೇಸೆಯಲ್ಲಿ ಆ ಆಸ್ತಿಗೆ “ಬಿ-ಖಾತಾ” ದಾಖಲೆಯನ್ನು ನೀಡಲಾಗುತ್ತದೆ ಕಂದಾಯ ಭೂಮಿಯಲ್ಲಿ ನಿರ್ಮಾಣ ಮಾಡಿರುವ ಜಮೀನಿನ ಮಾಲೀಕತ್ವವನ್ನು ಗುರುತಿಸಲು ಈ ಬಿ-ಖಾತಾ ದಾಖಲೆಯನ್ನು ಆಸ್ತಿಯ ಮಾಲೀಕರಿಗೆ ನೀಡಲಾಗುತ್ತದೆ.

Required Documnets For B-Khata: ಬಿ-ಖಾತಾವನ್ನು ಪಡೆಯಲು ಅವಶ್ಯಕ ದಾಖಲೆಗಳು:

1) ಜಾಗದ ಮಾಲೀಕರ ಆಧಾರ್ ಕಾರ್ಡ
2) ಸ್ವತ್ತಿನೊಂದಿಗೆ ಮಾಲೀಕರ ಪೋಟೋ
3) ಮಾಲೀಕರ ಪೋಟೋ
4) ಕೈ ಬರಹದ ನಮೂನೆ-3, ಇ.ಸಿ ಪ್ರತಿ ಅಥವಾ 2015-16 ರಿಂದ ಚಾಲ್ತಿಯಲ್ಲಿರುವ ಅಥವಾ ಪ್ರಸಕ್ತ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿ ಮಾಡಿದ ಚಲನ್
5) ಭೂ ಪರಿವರ್ತನೆ ಆದೇಶ ಪ್ರತಿ/ಹಕ್ಕುಪತ್ರ-ನಿವೇಶನ ಹಂಚಿಕೆ ಪ್ರತಿ
ವಿದ್ಯುತ್ ಬಿಲ್ ಪ್ರತಿ

ಇದನ್ನೂ ಓದಿ: Karnataka Nigamagalu-ಕರ್ನಾಟಕ ಆರ್ಯ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅನುದಾನ ಬಿಡುಗಡೆ!

B-Khata

Why is the B-Katha campaign being done?-ಬಿ-ಖಾತಾ ಅಭಿಯಾನವನ್ನು ಏಕೆ ಮಾಡಲಾಗುತ್ತಿದೆ?

1) ಪ್ರಸ್ತುತ ರಾಜ್ಯದಲ್ಲಿಆಸ್ತಿತ್ವದಲ್ಲಿರುವ ಅನಧಿಕೃತ ಲೇಔಟ್ ಪ್ರಕರಣಗಳನ್ನು ಇತ್ಯರ್ಥಪಡಿಸಿ ಹೊಸದಾಗಿ ಈ ರೀತಿಯ ಲೇಔಟ್ ಗಳು ತಲೀತ್ತದಂತೆ ಕ್ರಮವಹಿಸಲು.

2) ಬಹುತೇಕ ಹೆಚ್ಚಿನ ಸಂಖ್ಯೆಯಲ್ಲಿ ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ಬಡವಾಣೆ/ನಿವೇಶನಗಳನ್ನು ಮಧ್ಯಮ ಮತ್ತು ಬಡ ವರ್ಗದ ಜನರು ಈ ಪ್ರಕರಣಗಳಲ್ಲಿ ಇದ್ದು ಎಲ್ಲರಿಗೂ ಒಂದೇ ಬಾರಿಗೆ ಅನುಕೂಲವಾಗುವಂತೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಈ ಅಭಿಯಾನವನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Karnataka Budget-2025: ಕರ್ನಾಟಕ ಬಜೆಟ್ ಮಂಡನೆ ದಿನಾಂಕ ಘೋಷಿಸಿದ ಸಿಎಂ ಸಿದ್ದರಾಮಯ್ಯ!

B-Khata Abiyana Details-ಅನಧಿಕೃತವಾಗಿ ಬಡಾವಣೆ/ನಿವೇಶನಗಳನ್ನು ನಿರ್ಮಾಣಕ್ಕೆ ಬ್ರೇಕ್ ಹಾಕಲು ಈ ಅಭಿಯಾನ:

ಕಂದಾಯ ಜಾಗವೂ ಸೇರಿ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿದ ಕಟ್ಟಡ, ಮನೆಗಳಿಗೆ ಬಿ- ಖಾತಾ ನೀಡುವ ಅಭಿಯಾನಕ್ಕೆ ತಕ್ಷಣವೇ ಚಾಲನೆಯನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅರಣ್ಯ ಸಚಿವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯ ವರದಿ ಆಧರಿಸಿ ಕಾನೂನು ರೂಪಿಸಲಾಗಿದ್ದು ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ ಅನಧಿಕೃತ, ಕಂದಾಯ ಬಡಾವಣೆಗಳು ಹಾಗೂ ಆಸ್ತಿಗಳಿಗೆ ನಾಗರೀಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದ್ದರಿಂದ ಸರ್ಕಾರಕ್ಕೆ ಬರಬೇಕಾದ ತೆರಿಗೆ ಸಂದಾಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: PM-Kisan Amount-ಪಿ ಎಂ ಕಿಸಾನ್ 9.7 ಕೋಟಿ ರೈತರ ಖಾತೆಗೆ ₹ 21,000 ಸಾವಿರ ಕೋಟಿ ಹಣ!

CM Siddaramaiah-ಅನಧಿಕೃತ ಬಡವಾಣೆಗಳಿಗೆ ಸಂಪೂರ್ಣ ಬ್ರೇಕ್: ಸಿಎಂ ಸಿದ್ದರಾಮಯ್ಯ

ಅನಧಿಕೃತವಾಗಿ ನಿರ್ಮಾಣ ಮಾಡಿರುವ ಬಡವಾಣೆಗಳು, ಕಂದಾಯ ಜಮೀನಿನಲ್ಲಿ ನಿರ್ಮಿಸಿರುವ ಬಡಾವಣೆಗಳಲ್ಲಿ ಸೈಟು, ನಿವೇಶನ, ಕಟ್ಟಡ ಕಟ್ಟಿಕೊಂಡಿರುವವರಿಗೆ ತೊಂದರೆ ಅಗದಂತೆ ಒಟ್ಟಾರೆಯಾಗಿ ಬಡವರು ಮತ್ತು ಮಧ್ಯಮ ವರ್ಗಕ್ಕೆ ಸೇರಿದ ನಾಗರಿಕರಿಗೆ ಅನುಕೂಲ ಮಾಡಿಕೊಡುವ ದೇಸೆಯಲ್ಲಿ ಏಕಕಾಲಕ್ಕೆ ಅಧಿಕೃತ ದಾಖಲೆಯನ್ನು ನೀಡಲು ಈ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದು ಮುಂದಿನ ದಿನಗಳಲ್ಲಿ ಈ ಕ್ರಮದಿಂದ ಅನಧಿಕೃತ ಬಡವಾಣೆಗಳಿಗೆ ಸಂಪೂರ್ಣ ಬ್ರೇಕ್ ಬಿಳಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

- Advertisment -
LATEST ARTICLES

Related Articles

- Advertisment -

Most Popular

- Advertisment -