- Advertisment -
HomeAgricultureSeed Kit- ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ ಆಹ್ವಾನ!

Seed Kit- ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ ಆಹ್ವಾನ!

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ತೋಟಗಾರಿಕೆ ಇಲಾಖೆಯಿಂದ(Karnataka Horticulture Department) ಸಮಗ್ರ ತೋಟಗಾರಿಕೆ ಅಧಿವೃದ್ದಿ ಯೋಜನೆಯಡಿ ಅರ್ಹ ರೈತರಿಗೆ ತರಕಾತಿ ಬೀಜದ ಕಿಟ್ ಗಳನ್ನು ವಿತರಣೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

2024-25 ನೇ ಸಾಲಿನ ಸಮಗ್ರ ತೋಟಗಾರಿಕೆ ಅಧಿವೃದ್ದಿ ಯೋಜನೆಯ ಮೂಲಕ ತರಕಾರಿ ಕೃಷಿಯನ್ನು ಮಾಡುವ ರೈತರಿಗೆ ಬೀಜಗಳನ್ನು(Free Vegetable Seed Kit) ವಿತರಣೆ ಮಾಡುವ ಮೂಲಕ ಉತ್ತೇಜನವನ್ನು ನೀಡಲು ಅರ್ಹ ರೈತರಿಗೆ ಅರ್ಜಿಯನ್ನು ಕರೆಯಲಾಗಿದೆ.

ಉಚಿತವಾಗಿ ತರಕಾರಿ ಬೀಜಗಳನ್ನು(Vegetable Seed Kit) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕವಾಗಿ ಒದಗಿಸಬೇಕಾದ ದಾಖಲಾತಿಗಳೇನು? ಹಾಗೂ ತೋಟಕಾರಿಗೆ ಇಲಾಖೆಯ ಪ್ರಸ್ತುತ ಸಬ್ಸಿಡಿ ಯೋಜನೆಗಳ ಮಾಹಿತಿಯನ್ನು ಸಹ ಈ ಕೆಳಗೆ ಪ್ರಕಟಿಸಲಾಗಿದೆ.

ಇದನ್ನೂ ಓದಿ: Gruhalakshmi Yojane-2025: ಗೃಹಲಕ್ಷ್ಮಿ ಹಣ ವರ್ಗಾವಣೆಯಲ್ಲಿ ಪ್ರಮುಖ ಬದಲಾವಣೆ!

Vegetable Seed Kit Scheme-ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ:

ರೈತರಿಗೆ ತರಕಾರಿ ಕೃಷಿಯನ್ನು ಮಾಡಲು ಹಾಗೂ ತರಕಾರಿ ಬೆಳೆಗಳನ್ನು ಬೆಳೆಯಲು ಬೆಂಬಲವನ್ನು ನೀಡಲು ರೂ 2,000 ಮೊತ್ತದ ವಿವಿಧ ಬಗ್ಗೆಯ ತರಕಾರಿ ಬೀಜಗಳನ್ನು ನೀಡಲು ತೋಟಕಾರಿಕೆ ಇಲಾಖೆಯಿಂದ ಈ ಯೋಜನೆಯಡಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ರೈತರು ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

Who Can Apply-ಅರ್ಜಿ ಸಲ್ಲಿಸಲು ಅರ್ಹರು:

ಅರ್ಜಿದಾರರ ರೈತರ ಹೆಸರಿನಲ್ಲಿ ಕೃಷಿ ಜಮೀನು/ಪಹಣಿಯನ್ನು ಹೊಂದಿರಬೇಕು.

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರ ರೈತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿ ಸಣ್ಣ ಮತ್ತು ಅತಿ ಸಣ್ಣ ರೈತ ವರ್ಗದಲ್ಲಿರಬೇಕು.

ಇದನ್ನೂ ಓದಿ: E-Khata Documents-ಇ-ಆಸ್ತಿ ಖಾತಾ ಪಡೆಯಲು ಈ ದಾಖಲೆ ಸಲ್ಲಿಸುವುದು ಕಡ್ಡಾಯ!

Vegetable Seed Kit

Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
ಪೋಟೋ
ಜಮೀನಿನ ಪಹಣಿ/ಊತಾರ್/RTC
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್ ಪ್ರತಿ

How To Apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ರೈತರು ಈ ತಿಂಗಳು ಕೊನೆಯ ದಿನಾಂಕದ ಒಳಗಾಗಿ ನಿಮ್ಮ ತಾಲ್ಲೂಕಿನ ತೋಟಕಾರಿಗೆ ಇಲಾಕೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ(SADH) ಕಛೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Karmika ilake Yojana-ಕಾರ್ಮಿಕ ಮಂಡಳಿಯಿಂದ ಈ ಯೋಜನೆಯಡಿ ಸಿಗುತ್ತೆ 1,00,000/- ಧನ ಸಹಾಯ!

Horticulture Department Schemes-ಪ್ರಸ್ತುತ ತೋಟಗಾರಿಕೆ ಇಲಾಖೆಯ ಇತರೆ ಸಬ್ಸಿಡಿ ಯೋಜನೆಗಳು ಈ ಕೆಳಗಿನಂತಿವೆ:

NHM-ರಾಷ್ಟ್ರಿಯ ತೋಟಗಾರಿಕೆ ಮಿಷನ್ ಯೋಜನೆ:

ಈ ಯೋಜನೆಯಡಿ ಎಲ್ಲಾ ವರ್ಗದ ರೈತರು ಶೇ 90% ಸಬ್ಸಿಡಿಯಲ್ಲಿ ನೀರು ಸಂಗ್ರಹಣಾ ಘಟಕವನ್ನು(Krishi Honda Subsidy) ನಿರ್ಮಾಣ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಇದಲ್ಲದೇ ನೆರಳು ಪರದೆ/ಪಾಲಿಹೌಸ್(Nursery) ಘಟಕಕ್ಕೂ ಸಹ ಸಬ್ಸಿಡಿಯನ್ನು ಪಡೆಯಲು ಈ ಯೋಜನೆಯಲ್ಲಿ ಅವಕಾಶವಿರುತ್ತದೆ.

ಜೊತೆಗೆ ಈ ಯೋಜನೆಯಡಿ ಅನುದಾನ ಲಭ್ಯತೆ ಆಧಾರದ ಮೇಲೆ ಮಿನಿ ಟ್ರಾಕ್ಟರ್(Mini Tractor Subsidy) ಸೇರಿದಂತೆ ಇನ್ನಿತರೆ ಕೃಷಿ ಉಪಕರಣಗಳನ್ನು(Farm machinery) ಪಡೆಯಲು ಸಹ ಅವಕಾಶವಿರುತ್ತದೆ.

ಇದನ್ನೂ ಓದಿ: Land Survey-ನಿಮ್ಮ ಜಮೀನಿನ ಸರ್ವೇ ಇನ್ನೂ ಮುಂದೆ ಕೇವಲ 10 ನಿಮಿಷದಲ್ಲಿ ಮಾಡಿಸಬಹುದು!

NAREGA-ನರೇಗಾ ಯೋಜನೆ:

ವಿವಿಧ ತೋಟಕಾರಿಗೆ ಬೆಳೆಗಳ ತೋಟವನ್ನು ನಿರ್ಮಾಣ ಮಾಡಿಕೊಳ್ಳಲು ಈ ಯೋಜನೆಯಡಿ ಸಹಾಯಧನ ಪಡೆಯಬಹುದು ಉದಾಹರಣೆಗೆ: ಡ್ರಾಗನ್ ಪ್ರೋಟ್ಸ್, ಅಡಿಕೆ,ಕೋಕೋ, ಕಾಳುಮೆಣಸು ಇತ್ಯಾದಿ.

ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ರೈತರು ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ನೇರವಾಗಿ ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.

Karnataka horticulture department official website-ಅಧಿಕೃತ ತೋಟಗಾರಿಕೆ ಇಲಾಖೆ ವೆಬ್ಸೈಟ್- CLICK HERE

- Advertisment -
LATEST ARTICLES

Related Articles

- Advertisment -

Most Popular

- Advertisment -