- Advertisment -
HomeMost PopularMoneyBank loans-ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ಹೊರೆಯಿಂದ ಪಾರಾಗಲು ಈ ಕ್ರಮ ಅನುಸರಿಸಿ!

Bank loans-ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ಹೊರೆಯಿಂದ ಪಾರಾಗಲು ಈ ಕ್ರಮ ಅನುಸರಿಸಿ!

What happens to Bank loans if borrower dies?- ಬ್ಯಾಂಕಿನಲ್ಲಿ ವಿವಿಧ ರೀತಿಯ ಸಾಲ ಅಥವಾ ಲೋನ್ ಪಡೆದ ವ್ಯಕ್ತಿಯು ಅಕಾಲಿಕ ಮರಣ ಅಥವಾ ವಯೋಸಹಜ ಕಾರಣಗಳಿಂದಾಗಿ ಮರಣ ಹೊಂದಿದರೆ, ಆ ಸಾಲದ ಹೊಣೆಗಾರರು ಯಾರಾಗುತ್ತಾರೆ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ಇದರ ಹೊಣೆ ತಪ್ಪಿಸಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ವೈಯಕ್ತಿಕ ಸಾಲ ಸೇರಿದಂತೆ ಯಾವುದೇ ರೀತಿಯ ಸಾಲವನ್ನು ಪಡೆದಾಗ, ಸಾಲದಾದರೂ ನೀವು ಪಡೆದ ಒಟ್ಟು ಮೊತ್ತದ ಮೇಲೆ ವಿವಿಧ ಶುಲ್ಕ ಸೇರಿದಂತೆ ವಾರ್ಷಿಕ ಬಡ್ಡಿಯನ್ನು ವಿಧಿಸುತ್ತಾರೆ. ಪಡೆದ ಒಟ್ಟು ಸಾಲದ ಮೊತ್ತದ ಜೊತೆಗೆ ವಾರ್ಷಿಕ ಬಡ್ಡಿ ದರವನ್ನು (Annual Interest Rate) ಪ್ರತಿ ತಿಂಗಳು EMI ಅಥವಾ ಸಮಾನ ಮಾಸಿಕ ಕಂತು” ಆಧಾರದ ಮೇಲೆ ಪಾವತಿಸಬೇಕು. ಪೂರ್ಣ ಮೊತ್ತವನ್ನು ಪಾವತಿಸಿದ ನಂತರ ಸಾಲಗಾರನ ಮೇಲಿನ ಜವಾಬ್ದಾರಿ ಕೊನೆಗೊಳ್ಳುತ್ತದೆ.

ಇದನ್ನೂ ಓದಿ: Seed Kit- ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ ಆಹ್ವಾನ!

ಹಲವಾರು ಜನರು ತಮ್ಮ ವೈಯಕ್ತಿಕ ಅನುಕೂಲಗಳಿಗೆ ಹಾಗೂ ವೈಯಕ್ತಿಕ ಅವಶ್ಯಕತೆಗಳಿಗಾಗಿ ಪರ್ಸನಲ್ ಲೋನ್ (Personal loan), ಹೋಂ ಲೋನ್ (Home loan), ಕಾರ್ ಲೋನ್ (Car loan/Bike Loan) ಸೇರಿದಂತೆ ವಿವಿಧ ರೀತಿಯ ಸಾಲವನ್ನು ಮಾಡುತ್ತಾರೆ. ಒಂದು ವೇಳೆ ತಮ್ಮ ಸಾಲದ ಮೊತ್ತವನ್ನು ಮರುಪಾವತಿಸುವ ಅವಧಿ ಒಳಗಾಗಿ ಸಾಲಗಾರನು ಮರಣ ಹೊಂದಿದರೆ ಈ ಸಾಲದ ಜವಾಬ್ದಾರಿ ಯಾರದ್ದು? ಇದನ್ನು ಮರುಪಾವತಿ (Repayment) ಯಾರು ಮಾಡಬೇಕು? ಎಂಬ ಆತಂಕ ಇರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.

Bank loan Useful Tips-ಸಾಲಗಾರ ಮರಣ ಹೊಂದಿದರೆ ಇದನ್ನು ಮರುಪಾವತಿ ಮಾಡುವ ಕರ್ತವ್ಯ ಯಾರದ್ದು?

ಕೆಲವು ಬಾರಿ ಸಾಲದ ಹೊಣೆಯನ್ನು ಅದರ ಉತ್ತರಾಧಿಕಾರಿಯ ಅಥವಾ ಸಹ ಸಾಲಗಾರ ಹೊರಬೇಕಾಗುತ್ತದೆ. ಆದರೆ ಕೆಲವು ಸಮಯದಲ್ಲಿ ಇದರ ಮರುಪಾವತಿಯನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ನಿಯಮಗಳ ಪ್ರಕಾರ ತಕ್ಕ ವ್ಯವಸ್ಥೆ ಮಾಡಿಕೊಳ್ಳುತ್ತದೆ. ಸಾಲದ ಮರುಪಾವತಿ ವ್ಯವಸ್ಥೆಯನ್ನು ಸಾಲಗಾರನ್ನು ಪಡೆದ ಸಾಲದ ವಿಧದ ಮೇಲೆ ನಿರ್ಧಾರ ಮಾಡಲಾಗುತ್ತದೆ.

ಇದನ್ನೂ ಓದಿ: Land Survey-ನಿಮ್ಮ ಜಮೀನಿನ ಸರ್ವೇ ಇನ್ನೂ ಮುಂದೆ ಕೇವಲ 10 ನಿಮಿಷದಲ್ಲಿ ಮಾಡಿಸಬಹುದು!

bike loan

Personal loan-ವೈಯಕ್ತಿಕ ಸಾಲ ಪಡೆದಿದ್ದರೆ!

ಒಂದು ವೇಳೆ ವ್ಯಕ್ತಿಯು ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದು ಮರುಪಾವತಿಯ ಅವಧಿಯ ಒಳಗೆ ಮರಣ ಹೊಂದಿದರೆ ಈ ಸಾಲದ ಹೊಣೆಯು ವಾರಸುದಾರನ ಮೇಲೆ ಇರುವುದಿಲ್ಲ. ವ್ಯಕ್ತಿಯು ಮರಣ ಹೊಂದಿದಲ್ಲಿ, ಈ ಸಾಲವನ್ನು ಬ್ಯಾಂಕ್ ಗಳು ಅಥವಾ ಹಣಕಾಸು ಸಂಸ್ಥೆಗಳು ಸ್ವತಃ ಮರುಪಾವತಿ ಮಾಡಿಕೊಳ್ಳುತ್ತವೆ. ಬ್ಯಾಂಕ್ ಗಳು ಈ ಸಾಲವನ್ನು NPA ಅಥವಾ ಅನುತ್ಪಾದಕ ಆಸ್ತಿಗಳು (Non Performing Asset) ಎಂದು ಘೋಷಿಸುತ್ತದೆ.

ಇದನ್ನೂ ಓದಿ: Gruhalakshmi Yojane-2025: ಗೃಹಲಕ್ಷ್ಮಿ ಹಣ ವರ್ಗಾವಣೆಯಲ್ಲಿ ಪ್ರಮುಖ ಬದಲಾವಣೆ!

Home Loan-ಗೃಹ ಸಾಲ ಅಥವಾ ಹೋಂ ಲೋನ್ ಪಡೆದಿದ್ದಲ್ಲಿ!

ಯಾವುದೇ ವ್ಯಕ್ತಿಯು ಗೃಹ ಸಾಲವನ್ನು ಪಡೆದು ಮರುಪಾವತಿಯ ಅವಧಿಯ ಒಳಗಾಗಿ ಮರಣ ಹೊಂದಿದರೆ ಇದರ ಮರುಪಾವತಿಯನ್ನು ಇದರ ಸಹ ಸಾಲಗಾರ ಅಥವಾ ವಾರಸುದಾರ ತೀರಿಸಬೇಕು. ಏಕೆಂದರೆ ಬ್ಯಾಂಕಗಳು ಅಥವಾ ಹಣಕಾಸು ಸಂಸ್ಥೆಗಳು ಗೃಹ ಸಾಲವನ್ನು ನೀಡುವಾಗ ಮನೆಯ ಆಸ್ತಿಯನ್ನು ಅಡಮಾನವಾಗಿ ಇಟ್ಟುಕೊಂಡಿರುತ್ತದೆ. ಅದೇ ರೀತಿ ಬ್ಯಾಂಕುಗಳು ಆಸ್ತಿಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸುವ ಆಯ್ಕೆಯನ್ನು ಕೂಡ ಹೊಂದಿರುತ್ತವೆ.

ಇದನ್ನೂ ಓದಿ: Karmika ilake Yojana-ಕಾರ್ಮಿಕ ಮಂಡಳಿಯಿಂದ ಈ ಯೋಜನೆಯಡಿ ಸಿಗುತ್ತೆ 1,00,000/- ಧನ ಸಹಾಯ!

home loan

Car Loan-ಕಾರಿನ ಸಾಲ ಅಥವಾ ವಿವಿಧ ವಾಹನಗಳ ಮೇಲೆ ಮಾಡಿದ ಸಾಲದ ಸ್ಥಿತಿ ಏನು?

ಯಾವುದೇ ವ್ಯಕ್ತಿಯು ವಿವಿಧ ರೀತಿಯ ವಾಹನಗಳ ಮೇಲೆ ಲೋನ್ ಮಾಡಿದ್ದರೆ, ಆ ವಾಹನವನ್ನು ಅಡಮಾನವಾಗಿ ಇಟ್ಟುಕೊಂಡಿರಲಾಗುತ್ತದೆ. ಮೊದಲು ಸಾಲ ಮಾಡಿದ ಮೃತನ ಕುಟುಂಬದ ಸದಸ್ಯರನ್ನು ಕೇಳಲಾಗುತ್ತದೆ. ಇವರು ಮರುಪಾವತಿ ಮಾಡುವ ಸ್ಥಿತಿಯಲ್ಲಿ ಇರದಿದ್ದರೆ ಈ ಸಂದರ್ಭದಲ್ಲಿ ವಾಹನವನ್ನು ಮಾರಾಟ ಮಾಡಿ ಸಾಲ ಮರುಪಾವತಿ ಮಾಡಲು ಸೂಚಿಸಲಾಗುತ್ತದೆ.

ಇದನ್ನೂ ಓದಿ: E-Khata Documents-ಇ-ಆಸ್ತಿ ಖಾತಾ ಪಡೆಯಲು ಈ ದಾಖಲೆ ಸಲ್ಲಿಸುವುದು ಕಡ್ಡಾಯ!

Bank loans Insurance-ಯಾವುದೇ ವ್ಯಕ್ತಿ ಸಾಲವನ್ನು ಮಾಡುವ ಮೊದಲು, ವಾರಸುದಾರರಿಗೆ ಈ ಹೊಣೆಯಿಂದ ತಪ್ಪಿಸಲು ಈ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳಿ:

ಯಾವುದೇ ರೀತಿಯ ಸಾಲವನ್ನು ಮಾಡುವಾಗ ಮೊದಲು ನಾವು ಅನಿಶ್ಚಿತ ಸಂದರ್ಭದಲ್ಲಿ ಮರಣ ಹೊಂದಿದಲ್ಲಿ ಇದರ ಹೊಣೆಯು ತಮ್ಮ ಕುಟುಂಬದ ಮೇಲೆ ಬರಬಾರದೆಂದರೆ ಸಾಲ ಮಾಡುವ ಸಂದರ್ಭದಲ್ಲಿ ವಿಮೆ ಅಥವಾ ಇನ್ಶೂರೆನ್ಸ್ ಮಾಡಿಸುವುದನ್ನು ಮರೆಯಬಾರದು. ಒಂದು ಮೇಲೆ ಮರುಪಾವತಿಯ ಅವಧಿಯ ಒಳಗೆ ನೀವು ಮರಣ ಹೊಂದಿದಲ್ಲಿ ಬ್ಯಾಂಕ್ ಗಳು ವಿಮೆಯ ಮುಖಾಂತರ ಹಣವನ್ನು ಕ್ಲೇಮ್ ಮಾಡಿಕೊಳ್ಳುತ್ತವೆ

- Advertisment -
LATEST ARTICLES

Related Articles

- Advertisment -

Most Popular

- Advertisment -