- Advertisment -
HomeGovt SchemesProperty Documents-ಜಿಲ್ಲಾವಾರು ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ವಿವರ ಬಿಡುಗಡೆ!

Property Documents-ಜಿಲ್ಲಾವಾರು ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ವಿವರ ಬಿಡುಗಡೆ!

ರಾಜ್ಯ ಸರಕಾರದಿಂದ ನಗರ ಪ್ರದೇಶದಲ್ಲಿನ ಆಸ್ತಿಗಳ ಮಾಲೀಕತ್ವ ವಿವರವನ್ನು(E aasthi website) ಮತ್ತು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲು ಸಂಬಂಧಪಟ್ಟ ಇಲಾಖೆಯಿಂದ “ಇ-ಆಸ್ತಿ” ತಂತ್ರಾಂಶವನ್ನು ಈಗಾಗಲೇ ಜಾರಿಗೆ ತರಲಾಗಿದ್ದು ಈ ತಂತ್ರಾಂಶದು ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ನಿವೇಶನಗಳಿಗೆ ಮತ್ತು ಖಾಲಿ ಜಾಗಗಳಿಗೆ ಬಿ-ಖಾತಾವನ್ನು ವಿತರಣೆ ಮಾಡುವ ಅಭಿಯಾನವನ್ನು ಮಾಡಲಾಗುತ್ತಿದ್ದು ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಯ ವಿವರವನ್ನು ಆನ್ಲೈನ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳಬಹುದು ಮತ್ತು ಜಿಲ್ಲಾವಾರು ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ವಿವರ ಈ “ಇ-ಆಸ್ತಿ” ತಂತ್ರಾಂಶದಲ್ಲಿ ಪ್ರಕಟಿಸಲಾಗಿದು ಇದರ ವಿವರವನ್ನು ಹೇಗೆ ಪಡೆಯಬಹುದು ಎನ್ನುವ ಮಾಹಿತಿಯನ್ನು ಸಹ ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Land Records-ರಾಜ್ಯ ಸರಕಾರದಿಂದ ರೈತರ ಜಮೀನಿನ ದಾಖಲೆಗಳನ್ನು ಸುರಕ್ಷಿತವಾಗಿಡಲು “ಭೂ ಸುರಕ್ಷಾ” ಯೋಜನೆ!

“ಇ-ಆಸ್ತಿ” ತಂತ್ರಾಂಶದಲ್ಲಿ ಕೃಷಿಯೇತರ ಜಾಗದ ಮಾಲೀಕತ್ವ ವಿವರವನ್ನು(Real estate business) ದಾಖಲಿಸಿ ಅರ್ಹ ನಾಗರಿಕರಿಗೆ ಅಧಿಕೃತ ದಾಖಲಾತಿಗಳನ್ನು ಸರಕಾರದಿಂದ ವಿತರಣೆ ಮಾಡಲಾಗುತ್ತದೆ ಸಾರ್ವಜನಿಕರು ಈ ಆಸ್ತಿಯ ಡಿಜಿಟಲ್ ಗುರುತಿನ ಚೀಟಿಯನ್ನು ನಮೂದಿಸಿ ಆನ್ಲೈನ್ ನಲ್ಲಿ ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನಲ್ಲೇ ಆಸ್ತಿಯ ವಿವರವನ್ನು ಪಡೆಯಬಹುದು.

Online Property Details Check- ಆಸ್ತಿ/ಸ್ವತ್ತುಗಳ ವಿವರವನ್ನು ಹುಡುಕುವ ವಿಧಾನ:

ಆಸ್ತಿಯ ಅಧಿಕೃತ ಮಾಲೀಕರ ವಿವರವನ್ನು ನಾಗರಿಕರು ಉಚಿತವಾಗಿ ಈ ತಂತ್ರಾಂಶವನ್ನು ನೇರವಾಗಿ ಭೇಟಿ ಮಾಡಿ ನೋಡಲು ಅವಕಾಶವಿದ್ದು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.

Step-1: Property Details Check ಈ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ “ಇ-ಆಸ್ತಿ” ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: E-Swathu Download-ಉಚಿತವಾಗಿ ನಿಮ್ಮ ಆಸ್ತಿಯ ಇ-ಸ್ವತ್ತಿನ ವಿವರ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

Property documents

Step-2: ಇದಾದ ಬಳಿಕ ಮುಖಪುಟದಲ್ಲಿ ಮೇಲೆ ಕಾಣುವ “ನಾಗರಿಕ ಸೇವೆಗಳು” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “ಸ್ವತ್ತುಗಳನ್ನು ಹುಡುಕು” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ನಂತರ ನಗರವನ್ನು ಆಯ್ಕೆ ಮಾಡಿ ಕೊನೆಯ ಕಾಲಂ ನಲ್ಲಿ ಆಸ್ತಿ ಮಾಲೀಕರ ಹೆಸರನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಆಸ್ತಿಯ ಮಾಲೀಕರ ಹೆಸರು, ಆ ಆಸ್ತಿಯ ಡಿಜಿಟಲ್ ನೋಂದಣಿಯ ಸಂಖ್ಯೆ, ನಿರ್ದರಣಾ ಸಂಖ್ಯೆ, ಮಾಲೀಕರ ಹೆಸರು ಮತ್ತು ಆ ಆಸ್ತಿಯು ಅಧಿಕೃತವಾಗಿದ್ದರೆ ಅಧಿಕೃತ ಎಂದು ತೋರಿಸುತ್ತದೆ ಇಲ್ಲವಾದ್ದಲ್ಲಿ ಅನಧಿಕೃತ ಎಂದು ಕೊನೆಯ ಕಾಲಂ ನಲ್ಲಿ ತೋರಿಸುತ್ತದೆ.

ಇದನ್ನೂ ಓದಿ: Annabhagya status- ಫೆಬ್ರವರಿ-2025 ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ!

ಜಿಲ್ಲಾವಾರು ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ವಿವರ:

ಸಾರ್ವಜನಿಕರು ಇದೆ ತಂತ್ರಾಂಶದಲ್ಲಿ ಜಿಲ್ಲಾವರು ಆಸ್ತಿಗಳ ಅಧಿಕೃತ ಮತ್ತು ಅನಧಿಕೃತ ಅಂಕಿ-ಅಂಶವನ್ನು ನೋಡಲು ಅವಕಾಶವಿದ್ದು ಈ ಕೆಳಗಿನ ಹಂತಗಳನ್ನು ಅನುಸರಿಸಿ ಈ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬಹುದು.

Step-1: ಮೊಟ್ಟ ಮೊದಲಿಗೆ Property Details ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಇ-ಆಸ್ತಿ ಜಾಲತಾಣವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Waqf Bill-2025: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಕ್ಫ್ ತಿದ್ದುಪಡಿಗೆ ಒಪ್ಪಿಗೆ!

Property

Step-2: ಇದಾದ ನಂತರ ಈ ಪೇಜ್ ನಲ್ಲಿ “Reports” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “District Wise Approved Properties” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: “District Wise Approved Properties” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಎಲ್ಲಾ ಜಿಲ್ಲೆಗಳ ಹೆಸರು ಮತ್ತು ಆ ಜಿಲ್ಲೆಗಳಲ್ಲಿನ ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ವಿವರ ತೋರಿಸುತ್ತದೆ ತದನಂತರ ಆ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ ತಾಲ್ಲೂಕುವಾರು ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ವಿವರವನ್ನು ನೋಡಬಹುದಾಗಿದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -