- Advertisment -
HomeGovt SchemesKrishi Pumpset-ಕೃಷಿ ಪಂಪ್ ಸೆಟ್ ಗೆ 7 ತಾಸು ವಿದ್ಯುತ್ ಪೂರೈಕೆ ಮಹತ್ವದ ಪ್ರಕಟಣೆ!

Krishi Pumpset-ಕೃಷಿ ಪಂಪ್ ಸೆಟ್ ಗೆ 7 ತಾಸು ವಿದ್ಯುತ್ ಪೂರೈಕೆ ಮಹತ್ವದ ಪ್ರಕಟಣೆ!

ರಾಜ್ಯದ್ಯಂತ ಕೃಷಿ ಬೆಳೆಗಳಿಗೆ ನೀರನ್ನು ಪೂರೈಕೆ ಮಾಡಲು ಬಳಕೆ ಮಾಡುವ 3 ಪೇಸ್ ವಿದ್ಯುತ್(Krishi Pumpset) ಅನ್ನು ರೈತರಿಗೆ ನಿರಂತರವಾಗಿ ಸಮರ್ಪಕವಾಗಿ ಪೂರೈಕೆ ಮಾಡುವುದರ ಕುರಿತು ಇಂದನ ಇಲಾಖೆಯ ಸಚಿವರಾದ ಕೆ.ಜೆ ಜಾರ್ಜ್ ಅವರು ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಹಂಚಿಕೊಂಡಿರುವ ಮಾಹಿತಿಯ ವಿವರವನ್ನು ಇಲ್ಲಿ ವಿವರಿಸಲಾಗಿದೆ.

ರೈತರ ಬಹುದಿನಗಳ ಬೇಡಿಕೆಯಲ್ಲಿ ಒಂದಾದ ನಿಯಮಿತವಾಗಿ 3 ಪೇಸ್ ವಿದ್ಯುತ್(KEB) ಅನ್ನು ಕೃಷಿ ಪಂಪ್ ಸೆಟ್ ಗಳಿಗೆ ಒದಗಿಸಬೇಕು ಎನ್ನುವ ಬೇಡಿಕೆಗೆ ಇಂದನ ಇಲಾಖೆ ಸಚಿವರಾದ ಕೆ.ಜೆ ಜಾರ್ಜ್(K J George) ಅವರು ತಮ್ಮ ಇಲಾಖೆಯಿಂದ ಈ ನಿಟ್ಟಿನಲ್ಲಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾದ ಸುರೇಶ್ ಕುಮಾರ್ ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Property Registration-ಆಸ್ತಿ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ!

KEB Helpline-ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವಿವರ ಈ ಕೆಳಗಿನಂತಿವೆ:

ಪ್ರಶ್ನೆ-1: ರಾಜ್ಯದಲ್ಲಿ ರೈತರ ಪಂಪ್ ಸೆಟ್ ಗಳಿಗೆ ಪ್ರತಿ ನಿತ್ಯ ಎಷ್ಟು ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ?

ಸಚಿವರ ಉತ್ತರ: ರಾಜ್ಯದ ರೈತರ ಪಂಪ್ ಸೆಟ್ ಗಳಿಗೆ ದಿನವಹಿ 07 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.

ಪ್ರಶ್ನೆ-2: ಪ್ರಸ್ತುತ ಬೇಸಿಗೆ ಅವಧಿಯಲ್ಲಿ ವಿದ್ಯುತ್ ಪೂರೈಸುತ್ತಿರುವ ಕಾಲಾವಧಿಯನ್ನು ಹಂತಗಳಲ್ಲಿ ವಿಭಜಿಸಿ ನೀಡುವುದರಿಂದ ಅಂತರ್ಜಲ ಕುಸಿಯದೇ ನೀರಿನ ಅಭಾವ ಉಂಟಾಗದಂತೆ ಬೆಳಿಗ್ಗೆ ಮತ್ತು ಸಂಜೆಯ ಕಾಲಮಿತಿಗಳಲ್ಲಿ ವಿದ್ಯುತ್ ಪೂರೈಸುವ ಕ್ರಮಕ್ಕೆ ಸರ್ಕಾರವು ಕೈಗೊಂಡಿರುವ ಕ್ರಮಗಳೇನು?

ಉತ್ತರ: ರಾಜ್ಯದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತಾಂತ್ರಿಕ ಸಾಧ್ಯತೆ ಇರುವ ವಿದ್ಯುತ್ ಉಪ ಕೇಂದ್ರಗಳಿಂದ ಹಗಲಿನ 2 ವೇಳೆಯಲ್ಲಿಯೇ ನಿರಂತರ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ತನ್ನು ಸರಬರಾಜು ಮಾಡಲಾಗುತ್ತಿದೆ.

ಇದನ್ನೂ ಓದಿ: Adike Bele Parihara-ರೈತರಿಗೆ ₹104 ಕೋಟಿ ಬೆಳೆ ನಷ್ಟ ಪರಿಹಾರ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

KEB

ತಾಂತ್ರಿಕ ಸಾಧ್ಯತೆ ಇಲ್ಲದಿರುವ ವಿದ್ಯುತ್ ಉಪ ಕೇಂದ್ರಗಳಿಂದ ಪಾಳಿಯಲ್ಲಿ ಹಗಲಿನ ವೇಳೆಯಲ್ಲಿ 4 ಗಂಟೆಗಳ ಕಾಲ ಹಾಗೂ ರಾತ್ರಿಯ ವೇಳೆಯಲ್ಲಿ 3 ಗಂಟೆಗಳ ಕಾಲ ಒಟ್ಟು 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ತನ್ನು ಸರಬರಾಜು ಮಾಡಲಾಗುತ್ತಿದೆ.

ಅರಣ್ಯ ಪ್ರದೇಶದ ಮೂಲಕ ಹಾದುಹೋಗುವ ಕೃಷಿ ಫೀಡರ್ ಗಳಿಗೆ ಹಗಲಿನ ವೇಳೆಯಲ್ಲಿಯೇ 7 ಗಂಟೆಗಳ ಕಾಲ ನಿರಂತರವಾಗಿ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಅಂತರ್ಜಲ ಕುಸಿತದ ಕಾರಣಗಳನ್ನು ಉಲ್ಲೇಖಿಸಿ 3 ಫೇಸ್ ವಿದ್ಯುತ್ ಸರಬರಾಜಿನ ಬ್ಯಾಚ್‌ಗಳ ಸಮಯವನ್ನು ಬದಲಾಯಿಸಲು ಯಾವುದೇ ಕೋರಿಕೆ ಬಂದಿರುವುದಿಲ್ಲ.

ಪ್ರಶ್ನೆ-3: ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರಸ್ತುತ ವಿದ್ಯುತ್ ಗುಣಮಟ್ಟವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆಯೇ?

ಉತ್ತರ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಪ್ರಸ್ತುತ ವಿದ್ಯುತ್ ಗುಣಮಟ್ಟವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ.

ಇದನ್ನೂ ಓದಿ: Bhagyalaxmi Bond-ಭಾಗ್ಯಲಕ್ಷ್ಮಿ ಬಾಂಡ್ 18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ₹1 ಲಕ್ಷ ಹಣ ಜಮಾ! ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?

ಪ್ರಶ್ನೆ-4: ಹಾಗಿದ್ದಲ್ಲಿ, ಪೂರೈಸುತ್ತಿರುವ 10 ಆಂಪ್ಸ್ ವಿದ್ಯುತ್‌ನಿಂದಾಗಿ ಪ್ರತಿನಿತ್ಯ ವಿದ್ಯುತ್ ಟ್ರಿಪ್ ಆಗುವುದಲ್ಲದೇ ಪಂಪ್ ಸೆಟ್ ಮತ್ತು ವಿದ್ಯುತ್ ಪರಿವರ್ತಕ (T.C) ಗಳು ಸುಟ್ಟು ಹೋಗುತ್ತಿರುವ ಪ್ರಕರಣಗಳು ಎಷ್ಟು?

ಉತ್ತರ: ಸರ್ಕಾರದ ದಿನಾಂಕ: 22-01-2025 ರ ಪತ್ರದಲ್ಲಿ ಫಾರ್ಮ್ ಹೌಸ್ ಗಳನ್ನು ಹೊಂದಿರುವ ಎಲ್ಲಾ ಕೃಷಿ ಫೀಡರ್ ಗಳಿಗೆ OLP ರಿಲೇಗಳನ್ನು ಬಳಸಿಕೊಂಡು ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ನಿರ್ದೇಶನ ನೀಡಿದೆ.

ಅದರಂತೆ, ಫಾರ್ಮ್ ಹೌಸ್ ಗಳ ಅಗತ್ಯಕ್ಕೆ ತಕ್ಕಂತೆ ಮತ್ತು ಸಾಕಷ್ಟು ವಿದ್ಯುತ್ ಅಗತ್ಯವನ್ನು ಪೂರೈಸುವ ದೃಷ್ಟಿಯಿಂದ ಮತ್ತು ಫಾರ್ಮ್ ಹೌಸ್ ಗಳ ಸಂಖ್ಯೆ ಹಾಗೂ ಮಂಜೂರಾದ ಲೋಡ್ ಗಳನ್ನು ಗಮನದಲ್ಲಿಟ್ಟುಕೊಂಡು OLP ರಿಲೇಗಳಲ್ಲಿ ಗರಿಷ್ಠ ವಿದ್ಯುತ್ 10 Amps ಸೆಟ್ಟಿಂಗ್ ಮಾಡಲಾಗಿದೆ ಹಾಗೂ ಎಲ್ಲೆಲ್ಲಿ ಫಾರ್ಮ್ ಹೌಸ್ ಗಳ ಸಂಖ್ಯೆ ಮತ್ತು ಮಂಜೂರಾದ ಲೋಡ್ ಹೆಚ್ಚಿರುತ್ತದೆಯೋ ಮತ್ತು ಹೆಚ್ಚಿನ ವಿದ್ಯುತ್ ಅಗತ್ಯವಿರುತ್ತದೆಯೋ ಅಂತಹ ಕೃಷಿ ಫೀಡರ್ ಗಳಲ್ಲಿ ವಿದ್ಯುತ್ ಮಿತಿಯನ್ನು 10 Amps ನಿಂದ 20 Amps ಗೆ ಹೆಚ್ಚಿಸಲಾಗಿದೆ.

hescom

ಪ್ರಶ್ನೆ-5: ಇದಕ್ಕಾಗಿ ಪ್ರಸ್ತುತ ಪೂರೈಸುತ್ತಿರುವ ವಿದ್ಯುತ್ ಗುಣಮಟ್ಟ ಸರಿಪಡಿಸಿ 20 ನಿಗದಿಪಡಿಸುವ ಕುರಿತು ಸರ್ಕಾರ ಯಾವ ಕ್ರಮ ಕೈಗೊಳ್ಳುವುದು?

ಉತ್ತರ: ವಿದ್ಯುತ್ ಸರಬರಾಜು ಕಂಪನಿಗಳು ಕೃಷಿ ಫೀಡರ್ ಗಳಲ್ಲಿ ಸಿಂಗಲ್ ಫೇಸ್ ವಿದ್ಯುತ್ ಸರಬರಾಜಿನ ಗುಣಮಟ್ಟ ಮತ್ತು ಅವಧಿಯನ್ನು ಮೇಲ್ವಿಚಾರಣೆ ಮಾಡುತ್ತವೆ. ಇದಲ್ಲದೆ. ಅಂತಹ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಅವಧಿಯಲ್ಲಿ ಯಾವುದೇ ವಿತರಣಾ ಟ್ರಾನ್ಸ್ ಫಾರ್ಮರ್ ಗಳು ವೈಫಲ್ಯವಾಗಿರುವುದಿಲ್ಲ.

KEB Helpline Number-ರೈತರು ವಿದ್ಯುತ್ ಗೆ ಸಂಬಂಧಿಸಿದಂತೆ ಟೋಲ್ ಪ್ರೀ ನಂಬರ್ 1912 ಗೆ ರೈತರ ಕರೆ ಮಾಡಿ ದೂರು ನೀಡಬಹುದಾಗಿದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -