crop survey app-2024: ರೈತರೇ ಬೆಳೆ ಮಾಹಿತಿಯನ್ನು ಪಹಣಿಯಲ್ಲಿ ದಾಖಲಿಸಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Facebook
Twitter
Telegram
WhatsApp

2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರೇ ತಮ್ಮ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯ ಮಾಹಿತಿಯನ್ನು ಪಹಣಿಯಲ್ಲಿ ದಾಖಲಿಸಲು ಬೆಳೆ ಸಮೀಕ್ಷೆ(Kharif crop survey-2024)ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ.

ರೈತರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಮಾಹಿತಿಯನ್ನು ಮೊಬೈಲ್ ಮೂಲಕ ಹೇಗೆ ದಾಖಲಿಸುವುದು? ಮತ್ತು ಬೆಳೆ ಸಮೀಕ್ಷೆಯ ಪ್ರಯೋಜನಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ರೈತರು Google Play Store ನಲ್ಲಿ Kharif Farmer Crop Survey – 2024-25 ಆ್ಯಪ್ ನ್ನು ಡೌನ್ಲೋಡ್ ಮಾಡಿ ಆರ್ಥಿಕ ವರ್ಷ ಹಾಗೂ ಋತುವನ್ನು ದಾಖಲಿಸುವುದು. ತದನಂತರ ಆಧಾರನಲ್ಲಿರುವಂತೆ ಮಾಹಿತಿ ದಾಖಲಿಸಿ, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್ ಸಂಖ್ಯೆಗೆ OTP ಬರಲಿದೆ. 

OTP ಯನ್ನು ದಾಖಲಿಸಿ ಸಲ್ಲಿಸುವುದು. ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸುವುದು. ಸರ್ವೆ ನಂಬರ್ ಗಳ ಗಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್ ಲೋಡ್ ಮಾಡಿದರೆ ತಮ್ಮ ಜಮೀನಿನ ಬೆಳೆ ವಿವರ ಪಹಣಿಯಲ್ಲಿ ದಾಖಲಾಗುತ್ತದೆ.

ಇದನ್ನೂ ಓದಿ: North Eastern Railway Jobs : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ!

What is the benefits of crop survey- ಬೆಳೆ ಸಮೀಕ್ಷೆಯಿಂದ ರೈತರಿಗೆ ಅಗುವ ಲಾಭಗಳೇನು?

ಬಹುತೇಕ ರೈತರಿಗೆ ನೀಡುವ ಎಲ್ಲಾ ಯೋಜನೆಗಳಿಗೆ ಬೆಳೆ ಸಮೀಕ್ಷೆಯ ಬೆಳೆ ವಿವರವನ್ನು ಪರಿಗಣಿಸಲಾಗುತ್ತದೆ ಮುಖ್ಯವಾಗಿ ಹೇಳುವುದಾದರೆ ಪೃಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬೆಳೆ ಸಮೀಕ್ಷೆ ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.

Kharif crop survey app-2024: ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವವುದು ಹೇಗೆ?

Step-1: ಈ ಲಿಂಕ್ Kharif crop survey app link ಮೇಲೆ ಕ್ಲಿಕ್ ಮಾಡಿ ಮೊಬೈಲ್ ಅಪ್ಲಿಕೇಶನ್ ಒಪನ್ ಮಾಡಿಕೊಂಡು 3 ರಿಂದ 4 ಬಾರಿ allow ಎಂದು ಒತ್ತಿ ಬಳಿಕ ಕೊನೆಯಲ್ಲಿ “Agree” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ “E-KYC ಮೂಲಕ ಆಧಾರ್ ದೃಡೀಕರಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರೈತರ ಅಧಾರ್ ಕಾರ್ಡ ನಂಬರ್ ಅನ್ನು ಹಾಕಿ ಸಹಮತಿ ಇದೆ ಎಂದು ಟಿಕ್ ಮಾಡಿಕೊಂಡು ಕೆಳಗಡೆ ದೃಡೀಕರಣ ವಿಧಾನವನ್ನು ಆಯ್ಕೆ ಮಾಡಿ ಅಲ್ಲಿ OTP ಮೇಲೆ ಕ್ಲಿಕ್ ಮಾಡಿ “ಓಟಿಪಿ ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: PM-kisan village list-ಪಿ ಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹ ರೈತರ ಹಳ್ಳಿವಾರು ಪಟ್ಟಿ ಬಿಡುಗಡೆ!

Step-2: ತದನಂತರ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ಹಾಕಿ ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ  ನಿಮ್ಮ ಎಲ್ಲಾ ವಿವರ ಇಲ್ಲಿ ತೋರಿಸುತ್ತದೆ. ಇಲ್ಲಿ ಮೊಬೈಲ್ ನಂಬರ್ ಹಾಕಿ “ಸಕ್ರಿಯಗೊಳಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ “ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ಸಕ್ರಿಯಗೊಳಿಸಿಕೊಳ್ಳಬೇಕು.

Step-3: ಇದಾದ ಬಳಿಕ ನಿಮ್ಮ ಸರ್ವೆ ನಂಬರ್ ಗಳು ಇಲ್ಲಿ ತೋರಿಸುತ್ತವೆ ನಂತರ ನಿಮ್ಮ ಜಮೀನಿನ್ನು ಭೇಟಿ ಮಾಡಿ ಒಂದು ಒಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ “ಬೆಳೆ ವಿವರ ದಾಖಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಪ್ರಸ್ತುತ ಬೆಳೆದಿರುವ ಬೆಳೆ ವಿವರವನ್ನು ಹಾಕಿ ಬೆಳೆಯ 2 ಪೋಟೋ ಕ್ಲಿಕ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕು.

Step-4: ಒಂದೊಮ್ಮೆ ನಿಮ್ಮ ಸರ್ವೆ ನಂಬರ್ ಗಳು ಕಾಣಿಸದೇ ಇದ್ದಲ್ಲಿ “ಸರ್ವೆ ನಂಬರ್ ಸೇರಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ಬಿಟ್ಟು ಹೋದ ಸರ್ವೆ ನಂಬರ್ ಅನ್ನು ಸೇರಿಸಬಹುದು.

ಇದನ್ನೂ ಓದಿ: Crop Insurance- ಬೆಳೆ ವಿಮೆ ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಸಲ್ಲಿಸಬೇಕಾದ ದಾಖಲೆಗಳೇನು?

Crop survey- ಬೆಳೆ ಸಮೀಕ್ಷೆ ವಿವರ ಅಪ್ಲೋಡ್ ಮಾಡುವ ವಿಧಾನ:

ಈ ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಜಮೀನಿನ ಬೆಳೆ ವಿವರ ದಾಖಲಿಸಿದ ಬಳಿಕ ಕೊನೆಯಲ್ಲಿ “ಅಪ್ಲೋಡ್ ಮಾಡಿ” ಬಟನ್ ಮೇಲೆ ಕ್ಲಿಕ್ ಮಾಡಿ ತಪ್ಪದೇ ನೀವು ಮಾಡಿರುವ ಬೆಳೆ ಸಮೀಕ್ಷೆ ವರದಿಯನ್ನು ಅಪ್ಲೋಡ್ ಮಾಡಬೇಕು ಇಲ್ಲವಾದಲ್ಲಿ ಈ ವಿವರವು ನಿಮ್ಮ ಮೊಬೈಲ್ ನಲ್ಲೇ ಉಳಿದು ಬಿಡುತ್ತದೆ.

PR details-ನಿಮ್ಮ ಗ್ರಾಮದ ಖಾಸಗಿ ನಿವಾಸಿಯ ಸಹಾಯ ಪಡೆಯಬವುದು:

ರೈತರು ತಮಗೆ ಮೊಬೈಲ್ ಅಪ್ಲಿಕೇಶನ್ ಮೂಲಕ ಬೆಳೆ ಸಮೀಕ್ಷೆ ಮಾಡಲು ಗೊತ್ತಾಗದೇ ಇದ್ದ ಪಕ್ಷದಲ್ಲಿ ನಿಮ್ಮ ಗ್ರಾಮ ಬೆಳೆ ಸಮೀಕ್ಷೆ ಮಾಡಲು ಕೃಷಿ ಇಲಾಖೆಯಿಂದ ನೇಮಿಸಿರುವ ಖಾಸಗಿ ನಿವಾಸಿಯ ಸಹಾಯ ಪಡೆಯಬವುದು ಖಾಸಗಿ ನಿವಾಸಿಯ ವಿವರ ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ.

ಇದನ್ನೂ ಓದಿ: MSP Price-2024: ದೇಶದ ರೈತರಿಗೆ ಗುಡ್ ನ್ಯೂಸ್ ಭತ್ತ,ರಾಗಿ ಸೇರಿದಂತೆ 14 ಬೆಳೆಗಳ ಬೆಂಬಲ ಬೆಲೆ ಏರಿಕೆ!

Crop survey helpline-ಇನ್ನು ಹೆಚ್ಚಿನ ಮಾಹಿತಿ:

  • ನಿಮ್ಮ ಹಳ್ಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಹೆಚ್ಚಿನ ಮಾಹಿತಿ ತೆಗೆದುಕೊಳ್ಳಬಹುದು.
  • ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ: 8448447715 ಅಥವಾ 18004253553
  • ವೆಬ್ಸೈಟ್ ಲಿಂಕ್: click here
  • Crop survey App link: Download Now
  • ಬೆಳೆ ಸಮೀಕ್ಷೆ ಮಾಡುವ ವಿಧಾನದ ವಿಡಿಯೋ: View Now
Facebook
Twitter
Telegram
WhatsApp
Picture of siddesh

siddesh

Leave a Comment

Top Stories

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ

Crop insurance

Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು(Rabi Crop Insurance) ಮಾಡಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು? ಅರ್ಜಿ