ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ ನಿಗಮದ ಸಹಯೋಗದಲ್ಲಿ ಪುರುಷ ಭದ್ರತಾ ಸಿಬ್ಬಂದಿಯಾಗಿ(Security Guards) UAE ನಲ್ಲಿ ಕೆಲಸ ಮಾಡಲು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಒಂದಿಷ್ಟು ವರ್ಷ ವಿದೇಶದಲ್ಲಿ ಕೆಲಸ ಮಾಡಿ(UAE Security Guard Job) ಉತ್ತಮ ವೇತನವನ್ನು ಸಂಪಾದನೆಯನ್ನು ಮಾಡಬೇಕು ಎನ್ನುವ ಆಕಾಂಕ್ಷೆಯನ್ನು ಹೊಂದಿರುವ ಅಭ್ಯರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: Vasati Yojane-ವಿವಿಧ ವಸತಿ ಯೋಜನೆಯಡಿ ಈ ವರ್ಷ 2.30 ಲಕ್ಷ ಮನೆ ಮಂಜೂರು!
ನೇರ ಸಂದರ್ಶನದಲ್ಲಿ ಭಾಗವಹಿಸಲು ಅರ್ಜಿಯನ್ನು(Jobs In UAE) ಸಲ್ಲಿಸುವುದು ಹೇಗೆ? ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
UAE Security Guard Job-ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಅರ್ಜಿದಾರರು 10ನೇ ತರಗತಿಯನ್ನು (SSLC) ಉತೀರ್ಣರಾಗಿರಬೇಕು.
- ಕನಿಷ್ಠ 2 ವರ್ಷ ವೃತ್ತಿ ಸೇವಾನುಭವ ಹೊಂದಿರಬೇಕು (ಉದಾಹರಣೆಗೆ-ಸೇನೆ, ಪೊಲೀಸ್, ಖಾಸಗಿ ಭದ್ರತೆ, ಇತ್ಯಾದಿ ವಲಯಗಳಲ್ಲಿ ಸೇವಾನುಭವ)
- ಅರ್ಜಿದಾರರ ವಯಸ್ಸು 25 ರಿಂದ 40 ವರ್ಷದ ಒಳಗಿರಬೇಕು.
- ಎತ್ತರ:- ಕನಿಷ್ಠ 5 ಅಡಿ 9 ಇಂಚು ಎತ್ತರ ಇರಬೇಕು (175.26 ಸೆಂ.ಮೀ)
- ದೈಹಿಕ ಸದೃಢತೆ:- ಯಾವುದೇ ಖಾಯಿಲೆಗಳು ಇರಬಾರದು, ದೃಷ್ಟಿ ಮತ್ತು ಶ್ರವಣದೋಷ ಇರಬಾರದು (ಕನ್ನಡಕ / ಶ್ರವಣ ಸಹಾಯಕ ಉಪಯೋಗಿಸುತ್ತಿರಬಾರದು) ಮತ್ತು ದೇಹದಲ್ಲಿ ನೇರವಾಗಿ ಗೋಚರಿಸುವಂತಹ ಹಚ್ಚೆ/ಟ್ಯಾಟೂ ಹಾಕಿಸಿ ಕೊಂಡಿರಬಾರದು.
- ಅಭ್ಯರ್ಥಿಗೆ ಇಂಗ್ಲಿಷ್ ಓದುವುದು, ಬರೆಯುವುದು, ಮಾತನಾಡುವುದು ಕಡ್ಡಾಯ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

Monthly Salary-ಪ್ರತಿ ತಿಂಗಳ ವೇತನ:
ಅರ್ಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು AED 1,200 ಮೂಲ ವೇತನವನ್ನು ಪಾವತಿ ಮಾಡಲಾಗುತ್ತದೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ 28,426/- ಅಗಿರುತ್ತದೆ. ಜೊತೆಗೆ ಭದ್ರತಾ ಭತ್ಯೆ- AED 720(ಹಾಜರಾತಿಯನ್ನು ಆಧರಿಸಿ) ಮತ್ತು ಹೆಚ್ಚುವರಿ ಕೆಲಸದ ವೇತನ(OT)- AED 342(52 ಗಂಟೆಗಳು/ಪ್ರತಿ ತಿಂಗಳಿಗೆ) ಎಲ್ಲಾ ಸೇರಿ ಒಟ್ಟು ಒಂದು ತಿಂಗಳಿಗೆ- AED 2,262 ನಿಗದಿಪಡಿಸಲಾಗಿದ್ದು, ಭಾರತೀಯ ರೂಪಾಯಿಯಲ್ಲಿ ರೂ 53,584/- ಅಗಿರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ವಸತಿ ಮತ್ತು ಕೆಲಸದ ಸ್ಥಳಕ್ಕೆ ಪ್ರಯಾಣಿಸಲು ಸಾರಿಗೆ ವ್ಯವಸ್ಥೆ ಸಹ ಉಚಿತವಾಗಿರುತ್ತದೆ.
Online Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ವಿವರವನ್ನು ಭರ್ತಿ ಮಾಡಿ ಈ ಕೆಳಗೆ ನೀಡಿರುವ ಗೂಗಲ್ ಪಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲೇ ಕುಳಿತು ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: BPL Ration Card- ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ನೂತನ ಕ್ರಮ!
Application Link-ಅರ್ಜಿ ಸಲ್ಲಿಸಲು ಲಿಂಕ್- Apply Now
ನಿಮ್ಮ CV ಮತ್ತು ದಾಖಲಾತಿಗಳನ್ನು hr.imck@gmail.com ಈ ಮೇಲ್ ವಿಳಾಸಕ್ಕೆ ಕಳುಹಿಸಬೇಕು.
Interview Date And Place-ಸಂದರ್ಶನ ನಡೆಯುವ ದಿನ ಮತ್ತು ಸ್ಥಳ:
ಅರ್ಜಿಯನ್ನು ಸಲ್ಲಿಸಿದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಇದೆ ತಿಂಗಳು ಅಂದರೆ ಮಾರ್ಚ-2025 ರಂದು ನೇರ ಸಂದರ್ಶನ ನಡೆಯಲಿದೆ.
ಇದನ್ನೂ ಓದಿ: Bagar Hukum-ಬಗರ್ ಹುಕುಂ ಅರ್ಜಿ ವಿಲೇವಾರಿ ಕುರಿತು ಮಹತ್ವದ ಮಾಹಿತಿ ಪ್ರಕಟ!
For More Information-ಇನ್ನು ಹೆಚ್ಚಿನ ಮಾಹಿತಿಗಾಗಿ:
ಅಂತರಾಷ್ಟ್ರೀಯ ವಲಸೆ ಕೇಂದ್ರ – ಕರ್ನಾಟಕ (IMC-K)
4ನೇ ಮಹಡಿ ಕಲ್ಯಾಣ ಸುರಕ್ಷಾ ಭವನ, ITI ಕಾಲೇಜು ಆವರಣ, ಡೈರಿ ವೃತ್ತ. ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು – 560029