- Advertisment -
HomeGovt SchemesPension Scheme-ವಿವಿಧ ಪಿಂಚಣಿ ಯೋಜನೆಯ ಹಣ ವರ್ಗಾವಣೆಯಲ್ಲಿ ಬದಲಾವಣೆ!

Pension Scheme-ವಿವಿಧ ಪಿಂಚಣಿ ಯೋಜನೆಯ ಹಣ ವರ್ಗಾವಣೆಯಲ್ಲಿ ಬದಲಾವಣೆ!

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ವಿವಿಧ ಪಿಂಚಣಿ ಯೋಜನೆಗಳ ಹಣವನ್ನು ಅರ್ಹ ಫಲಾನುಭವಿಗಳಿಗೆ ವರ್ಗಾವಣೆ(Pension Amount) ಮಾಡುವುದರ ಕುರಿತು ನಿನ್ನೆ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಂಬಂಧಪಟ್ಟ ಇಲಾಖೆಯ ಸಚಿವರು ನೀಡಿರುವ ಉತ್ತರದ ವಿವರವನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದ್ದು ಇದರ ಜೊತೆಗೆ ಹಳ್ಳಿವಾರು ಅರ್ಹ ಪಿಂಚಣಿದಾರರ ಪಟ್ಟಿಯನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ವಿವರವನ್ನು ಸಹ ತಿಳಿಸಲಾಗಿದೆ.

ಪ್ರಸ್ತುತ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಖಜಾನೆ 2 ಡಿಬಿಟಿ(DBT) ಇಂಟಿಗ್ರೇಷನ್ ಮೂಲಕವೇ ಪಾವತಿ ಮಾಡಲಾಗುತ್ತಿದೆ ಇದು 38 ವ್ಯಾಲಿಡೇಷನ್ ಗೆ ಒಳಪಡುವುದರಿಂದ ಒಂದಕ್ಕಿಂತ ಹೆಚ್ಚು ಬಾರಿ ಪಾವತಿಯಾಗುವುದಿಲ್ಲ ಎಂದು ಮುಖ್ಯಮಂತ್ರಿಗಳ ಪರವಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರು ಹಾಗೂ ಸಭಾನಾಯಕರಾದ ಎನ್.ಎಸ್. ಭೋಸರಾಜು ಅವರು ಸದನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Vasati Yojane-ವಿವಿಧ ವಸತಿ ಯೋಜನೆಯಡಿ ಈ ವರ್ಷ 2.30 ಲಕ್ಷ ಮನೆ ಮಂಜೂರು!

ನಿನ್ನೆ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿಧ ಯೋಜನೆಗಳಡಿಯಲ್ಲಿ ಸಂಬಂಧಪಟ್ಟ ಇಲಾಖೆಗಳು ಆಯ್ಕೆಗೊಂಡ ಫಲಾನುಭವಿಗಳಿಗೆ(Best Pension Scheme) ವಿವರಗಳನ್ನು ಅಗತ್ಯ ಪರಿಶೀಲನೆಯ ನಂತರ ಇ-ಆಡಳಿತ ಇಲಾಖೆಯ ಡಿಬಿಟಿ ಪೋರ್ಟಲ್ ಮೂಲಕ ಪಾವತಿಗಾಗಿ ಖಜಾನೆ – 2 ಕ್ಕೆ ಬಿಲ್ಲು ಸಲ್ಲಿಸುತ್ತಾರೆ. ಇಲಾಖಾ ಡಿ.ಡಿ.ಓಗಳು ಖಜಾನೆ – 2 ರಲ್ಲಿ ಸೃಜಿಸಿ ಖಜಾನೆಗೆ ಸಲ್ಲಿಸಲಾದ ಬಿಲ್ಲುಗಳನ್ನು ಪರಿಶೀಲಿಸಿ ತೀರ್ಣಗೊಳಿಸಲಾಗುತ್ತದೆ ಎಂದರು.

Karnataka Pension Schemes-2025: ರಾಜ್ಯದಲಿ ಯಾವೆಲ್ಲ ಯೋಜನೆಯಡಿ ನಾಗರಿಕರಿಗೆ ಪಿಂಚಣಿಯನ್ನು ನೀಡಲಾಗುತ್ತದೆ ಮತ್ತು ಎಷ್ಟು ಮೊತ್ತ?

  • ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ/ಸಂಧ್ಯಾ ಸುರಕ್ಷಾ- ₹1,200/-
  • ವಿಧವಾ ಪಿಂಚಣಿ ಯೋಜನೆ- ₹ 800/-
  • ಅಂಗವಿಕಲ ಪಿಂಚಣಿ- ₹1400/- ರಿಂದ ₹ 2000/- ರವರೆಗೆ.
  • ಸಂಧ್ಯಾ ಸುರಕ್ಷಾ ಯೋಜನ- ₹1200/-
  • ಮನಸ್ವಿನಿ ಯೋಜನೆ- ₹800/-
  • ಮೈತ್ರಿ ಯೋಜನೆ- ₹800/-
  • ಸಾಲದ ಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ – Rs. 800
  • ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ- ₹10,000/-
  • ಎಂಡೋಸಲ್ಫಾನ್‌ ಸಂತ್ರಸ್ಥರಿಗೆ ಮಾಸಿಕ ಪಿಂಚಣಿ- ₹2000/- ರಿಂದ ₹4000/- ರವರೆಗೆ.

ಇದನ್ನೂ ಓದಿ: Job Fair- ಬೃಹತ್ ಉದ್ಯೋಗ ಮೇಳ! ಇಲ್ಲಿದೆ ನೋಂದಣಿ ಲಿಂಕ್!

pinchani status

ಒಂದು ಯೋಜನೆಯ ಫಲಾನುಭವಿಗೆ ಒಂದೇ ಮಾಹೆಗೆ ಒಂದಕ್ಕಿಂತ ಹೆಚ್ಚು ಬಾರಿಗೆ ಪಾವತಿಯಾಗದಂತೆ ಕ್ರಮ ವಹಿಸಲಾಗಿದೆ. ಖಜಾನೆ – 2 ತಂತ್ರಾಂಶದ ಮೂಲಕ ಇಲಾಖೆಯು ಸಾರ್ವಜನಿಕರು / ನೌಕರರಿಗೆ ಮತ್ತು ಇತರೆ ವ್ಯಕ್ತಿಗಳಿಗೆ ಯಾವುದೇ ಮೊತ್ತವನ್ನು ಉಚಿತವಾಗಿ ಪಾವತಿಸುತ್ತಿಲ್ಲ ಎಂದು ಮಾಹಿತಿಯನ್ನು ತಿಳಿಸಿದರು.

ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ನಾಡಕಛೇರಿಗಳಲ್ಲಿ ಮಂಜೂರು ಮಾಡುವ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಲಾಗಿದ್ದ ಕಾರಣ ಒಂದೇ ಖಾತೆಗೆ ಹಲವು ಪಿಂಚಣಿದಾರರ ಪಿಂಚಣಿ ಖಜಾನೆ ಮುಖಾಂತರ ಜಮೆ ಆಗಿರುವುದನ್ನು ದಿನಾಂಕ:27-03-2019 ರಂದು ನಡೆದ ಸಭೆಯಲ್ಲಿ ಗಮನಿಸಲಾಗಿದೆ.

ಈ ರೀತಿ ವಿವಿಧ ಜಿಲ್ಲೆಗಳ ಒಟ್ಟು 7371 ಫಲಾನುಭವಿಗಳಿಗೆ ಪಾವತಿಯಾಗಿದ್ದ ಹೆಚ್ಚುವರಿ ಮೊತ್ತ ರೂ 3,01,31,291/- ಗಳನ್ನು ವಸೂಲಿ ಮಾಡಿ ಸಂಚಿತ ನಿಧಿಗೆ ಜಮೆ ಮಾಡಲಾಗಿದೆ. ಇದಲ್ಲದೆ ಖಜಾನೆ – 1 ರಿಂದ ಖಜಾನೆ – 2 ಕ್ಕೆ ಪಿಂಚಣಿ ದಾಖಲೆಗಳ ವರ್ಗಾವಣೆ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ಸಂಬಂಧಿಸಿದ 44964 ಫಲಾನುಭವಿಗಳಿಗೆ ಅಕ್ಟೋಬರ್ 2018 ರಿಂದ ಡಿಸೆಂಬರ್ 2018ರ ವರೆಗೆ ಖಜಾನೆ – 1 ಮತ್ತು ಖಜಾನೆ – 2 ಎರಡೂ ಕಡೆ ಪಾವತಿಯಾಗಿದ್ದು,

ಅಂತಹ ಹೆಚ್ಚುವರಿ ಪಾವತಿಗಳನ್ನು ಸದರಿ ಫಲಾನುಭವಿಗಳಿಗೆ ಮುಂದಿನ ಮೂರು ತಿಂಗಳುಗಳ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸುವ ಮೂಲಕ ಸಂಪೂರ್ಣವಾಗಿ ವಸೂಲಿ ಮಾಡಲಾಗಿರುತ್ತದೆ ಎಂದು ವಿವರಣೆಯನ್ನು ನೀಡಿದ್ದಾರೆ.

ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

ಯಾವುದೇ ಯೋಜನೆಯ ಫಲಾನುಭವಿಗಳನ್ನು ನಿಗದಿತ ಮಾನದಂಡಗಳ ಪ್ರಕಾರ ಆಯ್ಕೆ ಮಾಡುವ ಹಾಗೂ ಮಂಜೂರಾತಿ ನೀಡುವ ಪ್ರಕ್ರಿಯೆ ಸಂಬಂಧಪಟ್ಟ ಇಲಾಖೆ ಹಂತದಲ್ಲಿಯೇ ನಡೆಯುತ್ತದೆ. ಈ ರೀತಿ ಆಯ್ಕೆಗೊಂಡ ಫಲಾನುಭವಿಗಳ ವಿವರಗಳನ್ನು ಅಗತ್ಯ ಪರಿಶೀಲನೆಯ ನಂತರ ಇ-ಆಡಳಿತ ಇಲಾಖೆಯ ಡಿ.ಬಿ.ಟಿ ಪೋರ್ಟಲ್ ಮೂಲಕ ಪಾವತಿಗಾಗಿ ಖಜಾನೆ – 2ಕ್ಕೆ ರವಾನಿಸಲಾಗುತ್ತದೆ. ಆದ್ದರಿಂದ ಅರ್ಹರಲ್ಲದ ಫಲಾನುಭಿಗಳಿಗೆ ಹಣ ಪಾವತಿಸುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

Pension beneficiary list-2025: ಹಳ್ಳಿವಾರು ಅರ್ಹ ಪಿಂಚಣಿದಾರರ ಪಟ್ಟಿ ಬಿಡುಗಡೆ:

ಸಾರ್ವಜನಿಕರು ಪಿಂಚಣಿ ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಪ್ರತಿ ತಿಂಗಳು ಪಿಂಚಣಿ ಹಣವನ್ನು ಪಡೆಯಲು ಅರ್ಹರಿರುವ ಪಟ್ಟಿಯನ್ನು ಪಡೆಯಬಹುದು.

Step-1: ಮೊದಲಿಗೆ Village Wise Pension beneficiary list ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಇಲಾಖೆಯ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: BPL Ration Card- ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ನೂತನ ಕ್ರಮ!

Step-2: ತದನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮೀಣ/ನಗರ ಆಯ್ಕೆ ಮಾಡಿ ನಂತರ ನಿಮ್ಮ ಹೋಬಳಿ, ಗ್ರಾಮ ಸೆಲೆಕ್ಟ್ ಮಾಡಿಕೊಂಡು ಅಲ್ಲೇ ಕೆಳಗೆ ಗೋಚರಿಸುವ Captcha ಕೋಡ್ ಅನ್ನು ನಮೂದಿಸಿ Serach ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಹಳ್ಳಿಯಲ್ಲಿ ಪಿಂಚಣಿ ಪಡೆಯಲು ಅರ್ಹರಿರುವ ಹೆಸರುಗಳು ಪಟ್ಟಿ ತೆರೆದುಕೊಳ್ಳುತ್ತದೆ ಈ ಹೆಸರಿರುವವರಿಗೆ ಮಾತ್ರ ಪ್ರತಿ ತಿಂಗಳು ಪಿಂಚಣಿ ನೇರವಾಗಿ DBT ಮೂಲಕ ಹಣ ಜಮಾ ಅಗುತ್ತದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -