Indian Army AgniVeer Recruitment 2025-ಭಾರತೀಯ ಸೇನೆಯಲ್ಲಿ 2025 ನೇ ಸಾಲಿಗೆ ಅಗ್ನಿಪಥ/ ಅಗ್ನಿವೀರ ಯೋಜನೆಯ ಅಡಿಯಲ್ಲಿ ಭೂ ಸೇನೆಯಲ್ಲಿ ಅಗ್ನಿವೀರರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳ ನೇಮಕಾತಿಯ ಅರ್ಜಿ ಸಲ್ಲಿಸಲು ಈಗಾಗಲೇ ಮಾರ್ಚ್ 12ನೇ ತಾರೀಕಿನಿಂದಲೇ ಆರಂಭವಾಗಿದ್ದು, ಭಾರತೀಯ ಮಿಲಿಟರಿ ಸೇವೆಗಳಲ್ಲಿ(Indian Army Jobs) ಸೇವೆ ಸಲ್ಲಿಸ ಬಯಸುವ ಪ್ರತಿಯೊಬ್ಬ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ತಪ್ಪದೆ ಸದುಪಯೋಗ ಪಡೆಸಿಕೊಳ್ಳಿ.
ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಈ ವರ್ಷದ ನೇಮಕಾತಿಯಲ್ಲಿ ಅಗ್ನಿವೀರ ಟ್ರೇಡ್ಸ ಮನ್(Agniveer Rally), ಸ್ಟೋರ್ ಕಿಪರ್ ಹಾಗೂ ಟೆಕ್ನಿಕಲ್ ವಿಭಾಗದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಮೊದಲೇ ತಿಳಿಸಿದಂತೆ ಎಂಟನೇ ತರಗತಿ ಪಾಸಾದವರಿಗೂ ಕೂಡ ಈ ಒಂದು ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
Agniveer Education Qualification-ಯಾವ ಯಾವ ಹುದ್ದೆಗಳಿಗೆ ಯಾವ ಅರ್ಹತೆ ಹೊಂದಿರಬೇಕು?
ಭಾರತೀಯ ಭೂ ಸೇನಾ ವಲಯದ ಈ ಕೆಳಗಿನ ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ.
• ಜನರಲ್ ಡ್ಯೂಟಿ – ಈ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ 45% ಅಂಕಗಳನ್ನು ಪಡೆದು ಪಾಸಾಗಿರಬೇಕು.
• ಟೆಕ್ನಿಕಲ್ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪಡೆದಿರಬೇಕು.
• ಗುಮಾಸ್ತ ಅಥವಾ ಸ್ಟೋರ್ ಕೀಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 12ನೇ ತರಗತಿ ಪಡೆದಿರಬೇಕು.
• ಅಗ್ನಿವೀರ ಟ್ರೇಡ್ಸ್ ಮನ್ ವಿಭಾಗದ ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸಾಗಿರಬೇಕು ಹಾಗೂ ಕೆಲವು ಹುದ್ದೆಗಳಿಗೆ 8ನೇ ತರಗತಿ ಪಾಸಾಗಿರಬೇಕು.
ಇದನ್ನೂ ಓದಿ: Vasati Yojane-ವಿವಿಧ ವಸತಿ ಯೋಜನೆಯಡಿ ಈ ವರ್ಷ 2.30 ಲಕ್ಷ ಮನೆ ಮಂಜೂರು!

Agniveer Rally-2025: ನೇಮಕಾತಿಯ ರ‍್ಯಾಲಿ ಯಾವಾಗ ನಡೆಯಲಿದೆ?
ಭಾರತ ದೇಶಾದ್ಯಂತ ಅಗ್ನಿವೀರ ಹುದ್ದೆಗಳ ನೇಮಕಾತಿಗಾಗಿ ವಿವಿಧ ಸೇನಾ ವಲಯ ನೇಮಕಾತಿ ಕಚೇರಿಗಳಲ್ಲಿ ಇದೆ ಜೂನ್ ತಿಂಗಳಿನಿಂದ ರ್ಯಾಲಿ ಆರಂಭವಾಗಲಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಕೆಳಗಿನ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
• ಬೆಂಗಳೂರು
• ಮಂಗಳೂರು
• ಬೆಳಗಾವಿ
AgniVeer Monthly Salary-ಅಗ್ನಿವೀರರಾಗಿ ನೇಮಕಗೊಂಡ ಬಳಿಕ ಸಿಗುವ ವೇತನ ಎಷ್ಟು?
ಅಗ್ನಿವೀರರಾಗಿ ಆಯ್ಕೆಯಾದವರು ಕೇವಲ 4 ವರ್ಷಗಳವರೆಗೆ ಸೇವೆ ಸಲ್ಲಿಸುವ ಅವಕಾಶವಿರುತ್ತದೆ. ಈ ನಾಲ್ಕು ವರ್ಷದ ಅವಧಿಯಲ್ಲಿ ಪ್ರತಿ ವರ್ಷ ಮಾಸಿಕ ವೇತನವನ್ನು ಈ ಕೆಳಗಿನಂತೆ ನೀಡಲಾಗುವುದು.
• ಮೊದಲನೇ ವರ್ಷ – 30,000ರೂ.
• ಎರಡನೇ ವರ್ಷ – 33,000ರೂ.
• ಮೂರನೇ ವರ್ಷ – 36,000ರೂ.
• ನಾಲ್ಕನೇ ನೇ ವರ್ಷ – 40,000ರೂ.
ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ
AgniVeer Age Limit-ಅರ್ಜಿ ಸಲ್ಲಿಕೆಗೆ ವಯೋಮಿತಿ ಅರ್ಹತೆ :
ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 17.5 ವರ್ಷದಿಂದ 21 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು.
Agniveer Application Fee-ಅರ್ಜಿ ಶುಲ್ಕ ಎಷ್ಟು?
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 250ರೂ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು – ಅಗ್ನಿವೀರ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾರ್ಚ್ 12 ರಿಂದ ಪ್ರಾರಂಭವಾಗಿದ್ದು, ಏಪ್ರಿಲ್ 10ನೇ ತಾರೀಕಿಗೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: BPL Ration Card- ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ನೂತನ ಕ್ರಮ!
AgniVeer Application Link-ಅರ್ಜಿ ಸಲ್ಲಿಕೆಗೆ ಭಾರತೀಯ ಸೇನಾ ಇಲಾಖೆಯ ಅಧಿಕೃತ ಜಾಲತಾಣ- Apply Now