- Advertisment -
HomeGovt SchemesAadhar card-2025: ಈ ಕೆಲಸ ಮಾಡದಿದ್ದರೆ ನಿಮ್ಮ ಮಗುವಿನ ಆಧಾರ್ ಕಾರ್ಡ್ ರದ್ದಾಗುತ್ತದೆ!

Aadhar card-2025: ಈ ಕೆಲಸ ಮಾಡದಿದ್ದರೆ ನಿಮ್ಮ ಮಗುವಿನ ಆಧಾರ್ ಕಾರ್ಡ್ ರದ್ದಾಗುತ್ತದೆ!

ನಮ್ಮ ದೇಶದಲ್ಲಿ ಆಧಾರ್ ಕಾರ್ಡ(adhar) ಒಂದು ಬಹುಮುಖ್ಯ ದಾಖಲೆಯಲ್ಲಿ ಒಂದಾಗಿದ್ದು ಮಕ್ಕಳಿಗೆ ಆಧಾರ್ ಕಾರ್ಡ(adhar card)ದಾಖಲೆಯ ಕುರಿತು ಅಗತ್ಯವಾಗಿ ಎಲ್ಲ ಪೋಷಕರು ತಪ್ಪದೇ ತಿಳಿದಿರಬೇಕಾದ ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಆಧಾರ್ ಕಾರ್ಡ್ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಬಹುಮುಖ್ಯವಾದ ದಾಖಲೆಯಾಗಿದೆ. ವಯಸ್ಕರಿಗಷ್ಟೇ ಅಲ್ಲ, ಮಕ್ಕಳಿಗೂ ಇದು ಅಗತ್ಯವಿದೆ. ನಿಮ್ಮ ಮಗುವು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆಯಬೇಕೆಂದರೆ, ಆಧಾರ್ ಕಾರ್ಡ್(adhar card update)ತಪ್ಪದೇ ಇರಬೇಕು.

ಇದನ್ನೂ ಓದಿ: Monsoon Forecast-ಹಮಾಮಾನ ಇಲಾಖೆಯಿಂದ ಮುಂಗಾರು ಮಳೆ ಕುರಿತು ರೈತರಿಗೆ ಶುಭಸುದ್ದಿ!

ಇದೀಗ, ಪೋಷಕರಾಗಿ ನೀವು ಒಂದು ಪ್ರಮುಖ ಕೆಲಸವನ್ನು ಮರೆತರೆ, ನಿಮ್ಮ ಮಗುವಿನ ಬಾಲ್ ಆಧಾರ್ ನಿಷ್ಕ್ರಿಯವಾಗುವ ಅಪಾಯವಿದೆ. ಈ ಲೇಖನದಲ್ಲಿ ಆ ಮಾಹಿತಿಯನ್ನು ವಿವರಿಸುತ್ತೇವೆ.

ಬಾಲ್ ಆಧಾರ್(bal adhar)ಎಂದರೇನು? 5 ವರ್ಷದ ನಂತರ ಮಕ್ಕಳ ಆಧಾರ್ ಕಾರ್ಡ ಕುರಿತು ನೀವು ಮಾಡಬೇಕಾದ ಪ್ರಮುಖ ಕೆಲಸ ಯಾವುವು?ಮಕ್ಕಳಿಗೆ ಆಧಾರ್ ಏಕೆ ಅಗತ್ಯ?ಮಕ್ಕಳಿಗೆ ಆಧಾರ್ ಕಾರ್ಡ ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಬೇಕಾಗುವ ದಾಖಲೆಗಳ ಯಾವುವು?ಆನ್‌ಲೈನ್ ಮೂಲಕ ಆಧಾರ್ ನೋಂದಣಿ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: 1st standard admission age-ರಾಜ್ಯದಲ್ಲಿ 1ನೇ ತರಗತಿಗೆ ದಾಖಲಾತಿಗೆ ವಯೋಮಿತಿ ಸಡಿಲಿಕೆ

What Is Baal aadhar-ಬಾಲ್ ಆಧಾರ್ ಎಂದರೇನು?

ಬಾಲ್ ಆಧಾರ್ ಕಾರ್ಡ್ ಅನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ.ಇದರಲ್ಲಿ ಬಯೋಮೆಟ್ರಿಕ್ ಮಾಹಿತಿ (ಬೆರಳಚ್ಚುಗಳು ಮತ್ತು ಕಣ್ಣಿನ ಸ್ಕ್ಯಾನ್) ಸಂಗ್ರಹಿಸಲಾಗುವುದಿಲ್ಲ.ಈ ಕಾರ್ಡ್ ನೀಲಿ ಬಣ್ಣದ ಥೀಮ್ ಹೊಂದಿದ್ದು, ಪೋಷಕರ ದಾಖಲೆಯ ಆಧಾರದ ಮೇಲೆ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ ಅನ್ನು ವಿತರಣೆ ಮಾಡಲಾಗುತ್ತದೆ.

Aadhar Card Update-5 ವರ್ಷದ ನಂತರ ನಿಮಗೆ ಮಾಡಬೇಕಾದ ಪ್ರಮುಖ ಕೆಲಸ

ನಿಮ್ಮ ಮಗುವಿಗೆ 5 ಭರ್ತಿ ಅದ ಬಳಿಕ ಕೊಡಲೇ ಆಧಾರ್ ಪ್ರಾಧಿಕಾರದ ಅಥವಾ UIDAI ನ ನಿಯಮದಂತೆ ಅವರ ಆ ಮಗುವಿನ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯ. ಈ ನವೀಕರಣವಿಲ್ಲದೆ ಆಧಾರ್ ಕಾರ್ಡ್ ನಿಷ್ಕ್ರಿಯವಾಗಬಹುದು, ಮತ್ತು ಸರ್ಕಾರಿ ಸೌಲಭ್ಯಗಳಿಂದ ವಂಚಿತರಗುತ್ತಿರಿ.

ಇದನ್ನೂ ಓದಿ: SSLC Result-2025: ಎಸ್ಸೆಸ್ಸೆಲ್ಸಿ ಫಲಿತಾಂಶ-2025: ಈ ದಿನ ಪ್ರಕಟಣೆ ಸಾಧ್ಯತೆ!

Baal aadhaar card-ಮಕ್ಕಳಿಗೆ ಆಧಾರ್ ಏಕೆ ಅಗತ್ಯ?

ಶಾಲಾ ಪ್ರವೇಶದ ಸಂದರ್ಭದಲ್ಲಿ ಆಧಾರ್ ಕಡ್ಡಾಯ

ಮಧ್ಯಾಹ್ನದ ಊಟ ಯೋಜನೆ, ಆರೋಗ್ಯ ಸೇವೆಗಳು ಮುಂತಾದ ಯೋಜನೆಗಳಲ್ಲಿ ಭಾಗವಹಿಸಲು ಅಗತ್ಯ

ಭವಿಷ್ಯದಲ್ಲಿ ಬ್ಯಾಂಕ್ ಖಾತೆ, ಪಾಸ್ಪೋರ್ಟ್ ಅರ್ಜಿ ಮುಂತಾದವುಗಳಿಗೆ ಪೂರಕ ದಾಖಲೆ

Required Documents For Baal adhar-ಬೇಕಾಗುವ ದಾಖಲೆಗಳು:

1) ಮಗುವಿನ ಜನನ ಪ್ರಮಾಣಪತ್ರ

2) ಪೋಷಕರಲ್ಲಿ ಯಾರಾದರೊಬ್ಬರ ಆಧಾರ್ ಕಾರ್ಡ್

3) ವಿಳಾಸ ಪುರಾವೆ (ಉದಾ: ವಿದ್ಯುತ್ ಬಿಲ್, ಪಡಿತರ ಚೀಟಿ, ಬ್ಯಾಂಕ್ ಸ್ಟೇಟ್‌ಮೆಂಟ್)

ಇದನ್ನೂ ಓದಿ: Agriculture Loan-ಬೆಳೆ ಸಾಲವನ್ನು ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!

Online Adhar-ಆನ್‌ಲೈನ್ ಮೂಲಕ ಆಧಾರ್ ನೋಂದಣಿ ಪ್ರಕ್ರಿಯೆ:

Step-1: ಮೊದಲಿಗೆ ಇಲ್ಲಿ ಕ್ಲಿಕ್ Online Aadhar Card ಮಾಡಿ ಅಧಿಕೃತ UIDAI ವೆಬ್‌ಸೈಟ್ ಅನ್ನು ಪ್ರವೇಶ ಮಾಡಬೇಕು.

aadhar card

Step-2: ತದನಂತರ ಇಲ್ಲಿ “Book Aadhaar Appointment” ಆಯ್ಕೆ ಮಾಡಿ.

Step-3: ಹತ್ತಿರದ ಆಧಾರ್ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು.

Step-4: ಮಗು ಮತ್ತು ಪೋಷಕರ ದಾಖಲೆಗಳೊಂದಿಗೆ ಆಧಾರ್ ಕಾರ್ಡಗೆ ಅರ್ಜಿ ಸಲ್ಲಿಸುವ ಕೇಂದ್ರವನ್ನು ಭೇಟಿ ಮಾಡಬೇಕು.

Step-5: ಮಗು 5 ವರ್ಷದೊಳಗಿನವರೆಂದರೆ, ಫೋಟೋ ಮಾತ್ರ ತೆಗೆದುಕೊಳ್ಳಲಾಗುತ್ತದೆ

Step-6: ಆಧಾರ್ ಕಾರ್ಡ್ ಅಂಚೆ ಮೂಲಕ ಅಥವಾ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತದೆ.

ಇದನ್ನೂ ಓದಿ: Scholarship-SSLC ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರೂ 15,000/- ಪ್ರೋತ್ಸಾಹ ಧನ!

Aadhar card renewal-ಆಧಾರ್ ನವೀಕರಣ:

5 ವರ್ಷ: ಮೊಟ್ಟಮೊದಲ ಬಯೋಮೆಟ್ರಿಕ್ ಅಪ್‌ಡೇಟ್ (ಫಿಂಗರ್‌ಪ್ರಿಂಟ್ + ಐರಿಸ್ ಸ್ಕ್ಯಾನ್) ಮಾಡಿಸಿಕೊಳ್ಳಬೇಕು.

15 ವರ್ಷ: ಮತ್ತೊಮ್ಮೆ ಬಯೋಮೆಟ್ರಿಕ್ ನವೀಕರಣ – ಗುರುತಿನ ನಿಖರತೆಗಾಗಿ ಮಾಡಿಸಿಕೊಳ್ಳಬೇಕು.

ಕೊನೆಯದಾಗಿ ಪೋಷಕರಿಗೆ ಸಲಹೆ:

ನಿಮ್ಮ ಮಗುವಿನ ಆಧಾರ್ ಕಾರ್ಡ ಮಾಡಿಸುವುದು ಮತ್ತು ಅದರ ನವೀಕರಣವನ್ನು ಸರಿಯಾಗಿ ಮಾಡಿದರೆ, ಅವರ ಭವಿಷ್ಯದಲ್ಲಿ ಯಾವುದೇ ತೊಂದರೆ ಉಂಟಾಗದು. ಸರ್ಕಾರದಿಂದ ಸಿಗುವ ಪ್ರತಿಯೊಂದು ಸಹಾಯವೂ ಸುಲಭವಾಗಿ ಲಭ್ಯವಾಗುತ್ತದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -