ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರುದಡಿ ಕಾರ್ಯನಿರ್ವಹಿಸುವ ವಿಸ್ತರಣಾ ನಿರ್ದೇಶನಾಲಯದ ದೂರ ಶಿಕ್ಷಣ ಘಟಕದಿಂದ ಒಂದು ವರ್ಷದ ಕೃಷಿ ಡಿಪ್ಲೊಮಾ(one year diploma agriculture course) ಮತ್ತು ಇತರೆ ಕೋರ್ಸ್ ಗಳಿಗೆ(gkvk certificate course) ಅರ್ಜಿಯನ್ನು ಆಹ್ವಾನಿಸಿದ್ದು ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಕೃಷಿಯಲ್ಲಿ ಆಸಕ್ತಿಯಿದ್ದು ಈ ಕ್ಷೇತ್ರದಲ್ಲಿ ತಾಂತ್ರಿಕ ಜ್ನಾನವನ್ನು ಪಡೆಯಲು ಇಚ್ಚೆಯನ್ನು ಹೊಂದಿರುವವರು ಈ ಕೋರ್ಸ್ ಪ್ರವೇಶವನ್ನು ಪಡೆದು ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಇದನ್ನೂ ಓದಿ: Anganavadi Recruitment-558 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಈ ಲೇಖನದಲ್ಲಿ ಕೋರ್ಸ್ ಗಳ ಪ್ರವೇಶಕ್ಕೆ ನಿಗದಿಪಡಿಸಿರುವ ಅರ್ಹತೆಗಳು ಮತ್ತು ವಿದ್ಯಾರ್ಹತೆ, ಕೋರ್ಸ್ ಕಲಿಕಾ ಅವಧಿ, ಅರ್ಜಿ ಸಲ್ಲಿಸಲು ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ, ಸೇರಿದಂತೆ ಸಂಪೂರ್ಣ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
GLVK Certificate Course-ಕೋರ್ಸ್ ಗಳ ಪ್ರವೇಶಕ್ಕೆ ನಿಗದಿಪಡಿಸಿರುವ ಅರ್ಹತೆಗಳು ಮತ್ತು ವಿದ್ಯಾರ್ಹತೆ:
- ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಒಂದು ವರ್ಷದ ಡಿಪ್ಲೊಮಾ ಕೃಷಿಗೆ ಪ್ರವೇಶವನ್ನು ಪಡೆಯಲು ಅಭ್ಯರ್ಥಿಗಳು 10ನೇ ತರಗತಿಯನ್ನು ಪಾಸಾಗಿರಬೇಕು.
- ಕೃಷಿಯಲ್ಲಿ ಬೀಜೋತ್ಪಾದನೆ ತಾಂತ್ರಿಕತೆಗಳು ಸರ್ಟಿಫಿಕೇಟ್ ಕೋರ್ಸ್ ಗೆ ಸೇರಿಕೊಳ್ಳಲು 10ನೇ ತರಗತಿಯನ್ನು ಪಾಸಾಗಿರಬೇಕು.
- ಕೃಷಿಯಲ್ಲಿ ಯಂತ್ರೋಪಕರಗಳ ನಿರ್ವಹಣೆ ಸರ್ಟಿಫಿಕೇಟ್ ಕೋರ್ಸ್ ಪ್ರವೇಶಕ್ಕೆ 10ನೇ ತರಗತಿಯನ್ನು ಪಾಸಾಗಿರಬೇಕು.
- ಜೇನು ಸಾಕಣಿ ಸರ್ಟಿಫಿಕೇಟ್ ಕೋರ್ಸ್ ಪ್ರವೇಶಕ್ಕೆ 7ನೇ ತರಗತಿಯನ್ನು ಪಾಸಾಗಿರಬೇಕು.
- ಸಮಗ್ರ ಕೃಷಿ ಸರ್ಟಿಫಿಕೇಟ್ ಕೋರ್ಸ್ ಪ್ರವೇಶಕ್ಕೆ 7ನೇ ತರಗತಿಯನ್ನು ಪಾಸಾಗಿರಬೇಕು.
- ಸಾವಯವ ಕೃಷಿ ಸರ್ಟಿಫಿಕೇಟ್ ಕೋರ್ಸ್ ಪ್ರವೇಶಕ್ಕೆ ಓದು ಬರಹ ಬಲ್ಲವರಾಗಿರಬೇಕು.
ಇದನ್ನೂ ಓದಿ: Vidyasiri Yojane-2025: ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ! ವಿದ್ಯಾಸಿರಿ ಯೋಜನೆಯ ವಿದ್ಯಾರ್ಥಿವೇತನ ಏರಿಕೆ!

Agriculture Certificate Course Duration-ಕೋರ್ಸ್ ಕಲಿಕಾ ಅವಧಿ:
ಈ ಮೇಲಿನ ಪಟ್ಟಿಯಲ್ಲಿ ನಮೂದಿಸಿರುವ ಎಲ್ಲ ಕೋರ್ಸಗಳು ಒಟ್ಟು 12 ತಿಂಗಳು ಕಲಿಕಾ ಅವಧಿಯನ್ನು ಹೊಂದಿವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 03 ಮೇ 2025
Application Fee-ಅರ್ಜಿ ಸಲ್ಲಿಸಲು ಶುಲ್ಕ:
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಕೇಂದ್ರದ ಮೂಲಕ ಈ ಕೋರ್ಸ್ ಪ್ರವೇಶವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಸರ್ಕಾರದಿಂದ ನಿಗದಿಪಡಿಸುರುವ ಶುಲ್ಕದ ವಿವರ ಈ ಕೆಳಗಿನಂತಿದೆ:
1) ಒಂದು ವರ್ಷದ ಡಿಪ್ಲೊಮಾ ಕೃಷಿ- 10,000/-
2) ಕೃಷಿಯಲ್ಲಿ ಬೀಜೋತ್ಪಾದನೆ ತಾಂತ್ರಿಕತೆಗಳು-3,000/-
3) ಕೃಷಿಯಲ್ಲಿ ಯಂತ್ರೋಪಕರಗಳ ನಿರ್ವಹಣೆ-3,000/-
4) ಜೇನು ಸಾಕಣಿ -3,000/-
5) ಸಮಗ್ರ ಕೃಷಿ- 1,500/-
6) ಸಾವಯವ ಕೃಷಿ-200/-
ಇದನ್ನೂ ಓದಿ: Free Bus-ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ!
Apply Method-ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ನಿಗದಿತ ಅರ್ಜಿ ಶುಲ್ಕವನ್ನು ಡಿ.ಡಿ ಮೂಲಕ Comptroller, UAS, GKVK, Bengaluru ಇವರ ಹೆಸರಿಗೆ ಪಾವತಿ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ದೂರ ಶಿಕ್ಷಣ ಘಟಕ, ವಿಸ್ತರಣಾ ನಿರ್ದೇಶನಾಲಯ ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು-560065 ಈ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
Application Download Link-ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:
ಅಭ್ಯರ್ಥಿಗಳು Download Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಇದಾದ ನಂತರ PDF ಪೈಲ್ ತೆರೆದುಕೊಳ್ಳುತ್ತದೆ, ಇಲ್ಲಿ 2 ನೇ ಪೇಜ್ ನಲ್ಲಿ ಅರ್ಜಿ ನಮೂನೆ ಇರುತ್ತದೆ ಇದನ್ನು ಪ್ರಿಂಟ್ ತೆಗೆದುಕೊಂಡು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ಇದನ್ನೂ ಓದಿ: Home Documents-ಮನೆ ಖರೀದಿಸುವಾಗ ಈ 6 ದಾಖಲೆಗಳನ್ನು ತಪ್ಪದೇ ಪರಿಶೀಲಿಸಿ!
For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:
ಸಹಾಯವಾಣಿ ಸಂಖ್ಯೆ: 080-23636353
ಅಧಿಕೃತ ಜಾಲತಾಣ: Click here
ಅರ್ಜಿ ನಮೂನೆ ಮತ್ತು ಅಧಿಸೂಚನೆ ಡೌನ್ಲೋಡ್ ಲಿಂಕ್- Download Now