Crop insurance guideline-2024ರ ಮುಂಗಾರು ಬೆಳೆ ವಿಮೆ ಯೋಜನೆಯ ಅಧಿಕೃತ ಮಾರ್ಗಸೂಚಿ ಬಿಡುಗಡೆ!

2024ರ ಮುಂಗಾರು ಬೆಳೆ ವಿಮೆ( insurance) ಯೋಜನೆಯ ಮಾರ್ಗಸೂಚಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ರೈತರು ಬೆಳೆ ವಿಮೆ ಯೋಜನೆಯ ಸಮಗ್ರ ಮಾಹಿತಿಯನ್ನು ಈ ಮಾರ್ಗಸೂಚಿಯನ್ನು ನೋಡಿ ಪಡೆದುಕೊಳ್ಳಬಹುದು. ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ(Bele vime) ಮಾಡಿಸಬಹುದು? ಬೆಳೆ ವಿಮೆ ಪರಿಹಾರವನ್ನು ಹೇಗೆ ಪಡೆಯುವುದು? ಯಾವೆಲ್ಲ ಸಮಯದಲ್ಲಿ ಬೆಳೆ ನಷ್ಟವಾದಗ ಬೆಳೆ ವಿಮೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು ಎನ್ನುವ ಸಂಪೂರ್ಣ ವಿವರ ಇಲ್ಲಿ ಲಭ್ಯವಿರುತ್ತದೆ.

ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ samrakshane.karnataka.gov.in ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಬೆಳೆ ವಿಮೆ ಯೋಜನೆಯ ಅಧಿಕೃತ ಮಾರ್ಗಸೂಚಿಯನ್ನು ಡೌನ್ಲೋಡ್ ಮಾಡಬಹುದು.

ಇದನ್ನೂ ಓದಿ: Karnataka Weather forecast-2024: ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ! ಇಲ್ಲಿದೆ ರಾಜ್ಯದ ಮಳೆ ಮುನ್ಸೂಚನೆ!

Crop insurance guideline-2024: ಬೆಳೆ ವಿಮೆ ಯೋಜನೆಯ ಮಾರ್ಗಸೂಚಿ ಡೌನ್ಲೋಡ್ ಮಾಡುವ ವಿಧಾನ:

ಬೆಳೆ ವಿಮೆ ಯೋಜನೆಯಡಿ ಪ್ರಸ್ತುತ ವರ್ಷ ಬಿಡುಗಡೆ ಮಾಡಿರುವ ಅಧಿಕೃತ ಮಾರ್ಗಸೂಚಿಯನ್ನು samrakshane.karnataka.gov.in ವೆಬ್ಸೈಟ್ ಭೇಟಿ ಮಾಡಿ ರೈತರು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನೋಡಬಹುದು.

Step-1: ಮೊದಲಿಗೆ ಈ Crop insurance guideline ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: SSLC ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ : MTS, Clerks ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ!

Step-2: ತದನಂತರ ಇಲ್ಲಿ ಮುಖಪುಟದಲ್ಲಿ “ವರ್ಷದ ಆಯ್ಕೆ / Select Insurance Year : 2024-25” ಮತ್ತು “ಋತು ಆಯ್ಕೆ / Select Insurance Season: Kharif/ಮುಂಗಾರು”ಎಂದು ಆಯ್ಕೆ ಮಾಡಿಕೊಂಡು “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಈ ಹಂತ ಮುಗಿಸಿದ ಬಳಿಕ ಈ ಪೇಜ್ ನಲ್ಲಿ “Notices” ಕಾಲಂ ನಲ್ಲಿ ಕಾಣುವ “MFBY KHARIFF 2024 Preamble” ಬೆಳೆ ವಿಮೆ ಯೋಜನೆಯ ಅಧಿಕೃತ ಮಾರ್ಗಸೂಚಿ ತೆರೆದುಕೊಳ್ಳುತ್ತದೆ.

ಬೆಳೆ ವಿಮೆ ಯೋಜನೆ ಮಾರ್ಗಸೂಚಿ: Download Now

ಇದನ್ನೂ ಓದಿ: Guest Teachers Recruitment-2024: ಸರ್ಕಾರಿ ಶಾಲೆಗಳಲ್ಲಿ 35,000 ಅತಿಥಿ ಶಿಕ್ಷಕರ ಭರ್ತಿಗೆ ಅನುಮೋದನೆ!