ರಾಜ್ಯ ಸರಕಾರದಿಂದ 56,879 ರೈತರ ಒಟ್ಟು 440.30 ಕೋಟಿ ರೂ ಕೃಷಿ ಸಾಲದ ಬಡ್ಡಿ ಮನ್ನಾಕ್ಕೆ ಆದೇಶ ಹೊರಡಿಸಲಾಗಿದೆ.
ಯಾರಿಗೆಲ್ಲ ಈ ಯೋಜನೆಯಡಿ ಕೃಷಿ ಸಾಲದ ಮೇಲಿನ ಸಂಪೂರ್ಣ ಬಡ್ಡಿ ಮನ್ನಾ ಅಗಲಿದೆ? ಅರ್ಹತಾ ಮಾನದಂಡಗಳೇನು? ಇತ್ಯಾದಿ ವಿಷಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ರೈತರಿಗೆ ಅರ್ಥಿಕವಾಗಿ ಸಹಕರ ನೀಡುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್ ಗಳಲ್ಲಿ ಜಮೀನಿನ ಮೇಲೆ ಪಡೆದಿರುವ ಮಧ್ಯಮಾವಧಿ, ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲು ರಾಜ್ಯ ಸರಕಾರದಿಂದ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: Parihara amount-2024: 30 ಲಕ್ಷ ರೈತರಿಗೆ ಬರ ಪರಿಹಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ
Crop loan- ಯಾವೆಲ್ಲ ಬ್ಯಾಂಕ್ ಗಳಲ್ಲಿನ ಬಡ್ಡಿ ಮನ್ನಾ ಅಗಲಿದೆ:
ಗ್ರಾಮೀಣ ಭಾಗದಲ್ಲಿನ ಸಹಕಾರ ಸಂಘಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಗಳಲ್ಲಿನ ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ.
Crop loan interest yojana-ಬಡ್ಡಿ ಮನ್ನಕ್ಕೆ ಯಾರೆಲ್ಲ ಅರ್ಹರು?
ಈ ಮೇಲೆ ತಿಳಿಸಿರುವ ಬ್ಯಾಂಕ್ ಗಳಲ್ಲಿ ಕೃಷಿ ಸಾಲವನ್ನು ಮಾಡಿರುವ ರೈತರು 31 ಡಿಸೆಂಬರ್ 2023 ರವರೆಗಿನ ಕಂತುಗಳನ್ನು 20 ಫೆಬ್ರವರಿ 2024 ರ ಒಳಗಾಗಿ ನೀವು ಸಾಲ ಪಡೆದ ಸಂಬಂಧಪಟ್ಟ ಶಾಖೆಯಲ್ಲಿ ಸಂಪೂರ್ಣ ಸಾಲ ಬಾಕಿಯನ್ನು ಪಾವತಿಸಿದರೆ ಮಾತ್ರ ಬಡ್ಡಿ ಮನ್ನಾದ ಪ್ರಯೋಜನ ಪಡೆಯಬಹುದಾಗಿದೆ.
ಇದನ್ನೂ ಓದಿ: January Pension status: ಜನವರಿ-2024ರ ಎಲ್ಲಾ ವಿಧದ ಪಿಂಚಣಿ ಹಣ ಬಿಡುಗಡೆ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.
Crop loan interest- ಬಡ್ಡಿ ಮನ್ನಾದ ಪ್ರಕ್ರಿಯೆ:
ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಮೊದಲಿಗೆ ಬ್ಯಾಂಕ್ ಗಳಿಂದ ಸುಸ್ತಿ ಸಾಲಗಾರರಾಗಿರುವ ರೈತರಿಗೆ 5 ದಿನಗಳೊಳಗಾಗಿ ತಿಳಿವಳಿಕೆ ಪತ್ರವನ್ನು ಕಳುಹಿಸಬೇಕು.
ಸಾಲ ವಸೂಲಾತಿಗೆ ನಿಗದಿಪಡಿಸಿರುವ 20 ಫೆಬ್ರವರಿ 2024 ರಿಂದ 45 ದಿನಗಳೊಳಗಾಗಿ ಬಡ್ಡಿ ಮನ್ನಾದ ಎಲ್ಲಾ ಬಿಲ್ಲುಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಣ್ಘ, ಪಿಕಾರ್ಡ, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್ ಶಾಖೆಗಳು ಸಹಕಾರ ಇಲಾಖೆಗೆ ಬಿಲ್ಲನ್ನು ಸಲ್ಲಿಸಬೇಕು.
ಈ ಒಟ್ಟು ಕೃಷಿ ಸಾಲಕ್ಕೆ ತಗಲುವ ಒಟ್ಟು ಬಡ್ದಿ ಮೊತ್ತವನ್ನು ಸಹಕಾರ ಇಲಾಖೆಯಿಂದ ಭರಿಸಲಾಗುತ್ತದೆ ಎಂದು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: Milk incentive details-ಹಾಲಿನ ಪ್ರೋತ್ಸಾಹ ಧನ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ!
Crop loan status- ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ತೆಗೆದುಕೊಳ್ಳಲಾಗಿದೆ ಎಂದು ತಿಳಿಯುವ ವಿಧಾನ:
ರೈತರು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಜಮೀನಿನ ಮೇಲೆ ಎಷ್ಟು? ಸಾಲ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ.
Step-1: ಮೊದಲಿಗೆ ಈ Bele sala status check ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ಬಳಿಕ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸರ್ವೆ ನಂಬರ್ ಹಾಕಬೇಕು.
Step-2: ಇದಾದ ಬಳಿಕ View ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಪಹಣಿ/ಉತಾರ್/RTC ತೆರೆದುಕೊಳ್ಳುತ್ತದೆ ಇದೆ ಪಹಣಿಯ ಕೊನೆಯ ಕಾಲಂ ನಲ್ಲಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಪಡೆಯಲಾಗಿದೆ? ಯಾವ ಬ್ಯಾಂಕ್? ಎನ್ನುವ ಸಂಪೂರ್ಣ ಮಾಹಿತಿ ತೋರಿಸುತ್ತದೆ.