ಕೃಷಿ ಇಲಾಖೆಯಿಂದ ಹಿಂಗಾರು ಹಂಗಾಮಿನಿ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದ್ದು ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ತಾವೇ ಸ್ವತಃ ತಮ್ಮ ಮೊಬೈಲ್ ಮೂಲಕ ಸಮೀಕ್ಷೆ ಮಾಡಿಕೊಳ್ಳಬವುದು.
ರೈತರು ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ-ಸ್ಟೋರ್(google play store) ಭೇಟಿ ಮಾಡಿ ಡೌನ್ಲೋಡ್ ಮಾಡಿಕೊಂಡು ಯಾವೆಲ್ಲ ವಿಧಾನಗಳನ್ನು ಅನುಸರಿಸಿ ಬೆಳೆ ಸಮೀಕ್ಷೆ ಮಾಡಬೇಕು? ಬೆಳೆ ಸಮೀಕ್ಷೆ ಮಾಡಿಕೊಳ್ಳುವುದರ ಪ್ರಯೋಜನೆಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಈ ಸಮೀಕ್ಷೆಯನ್ನು ಸರಕಾರ ನಿಗದಿಪಡಿಸಿದ ದಿನಾಂಕದ ಒಳಗಾಗಿ ಮಾಡಿಕೊಳ್ಳಬೇಕಾಗಿರುದರಿಂದ ಆಸಕ್ತ ರೈತ ಬಾಂಧವರು ಸಾಧ್ಯವಾದಷ್ಟು ಬೇಗ ಈ ಅಪ್ಲಿಕೇಶನ್ ಮೂಲಕ ತಮ್ಮ ಜಮೀನಿನ ಬೆಳೆ ವಿವರ ದಾಖಲಿಸಿದರೆ ಈ ಯೋಜನೆಯ ಲಾಭ ಪಡೆಯಬವುದಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ: Yuva nidhi application link-ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಬಿಡುಗಡೆ!
Rabi crop survey-2023: ಹಿಂಗಾರು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ವಿಧಾನ:
ರೈತರು ಅಥವಾ ತಮ್ಮ ಮನೆಯಲ್ಲಿರುವ ಯಾರದಾದರು ಒಬ್ಬರ ಸ್ಕ್ರೀನ್ ಟಚ್ ಮೊಬೈಲ್ ನಲ್ಲಿ ಮೊದಲಿಗೆ ಈ Rabi crop survey app link ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ-ಸ್ಟೋರ್ ಭೇಟಿ ಮಾಡಿ ಇಲ್ಲಿ “ಹಿಂಗಾರು ರೈತರ ಬೆಳೆ ಸಮೀಕ್ಷೆ 2023-24” ಎನ್ನುವ ಹೆಸರಿನ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Rabi crop survey app: ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವ ವಿಧಾನ:
ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಗೂಗಲ್ ಪ್ಲೇ-ಸ್ಟೋರ್ ನಿಂದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮ್ಮ ಜಮೀನಿಗೆ ಭೇಟಿ ಮಾಡುವ ಮೊದಲು ಮೊದಲಿಗೆ ನೆಟ್ ವರ್ಕ ಇರುವ ಸ್ಥಳದಲ್ಲೇ ಈ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ನಿಮ್ಮ ಅಧಾರ್ ವಿವರ ಮತ್ತು ಜಮೀನಿನ ಸರ್ವೆ ನಂಬರ್ ವಿವರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Step-1: ಈ ಲಿಂಕ್ crop survey app ಮೇಲೆ ಕ್ಲಿಕ್ ಮಾಡಿ ಮೊಬೈಲ್ ಅಪ್ಲಿಕೇಶನ್ ಒಪನ್ ಮಾಡಿಕೊಂಡು 3 ರಿಂದ 4 ಬಾರಿ allow ಎಂದು ಒತ್ತಿ ಬಳಿಕ ಕೊನೆಯಲ್ಲಿ “Agree” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ “E-KYC ಮೂಲಕ ಆಧಾರ್ ದೃಡೀಕರಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರೈತರ ಅಧಾರ್ ಕಾರ್ಡ ನಂಬರ್ ಅನ್ನು ಹಾಕಿ ಸಹಮತಿ ಇದೆ ಎಂದು ಟಿಕ್ ಮಾಡಿಕೊಂಡು ಕೆಳಗಡೆ ದೃಡೀಕರಣ ವಿಧಾನವನ್ನು ಆಯ್ಕೆ ಮಾಡಿ ಅಲ್ಲಿ OTP ಮೇಲೆ ಕ್ಲಿಕ್ ಮಾಡಿ “ಓಟಿಪಿ ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Adhar address-ಆಧಾರ್ ಕಾರ್ಡನಲ್ಲಿ ವಿಳಾಸ ಬದಲಾವಣೆಗೆ ನೂತನ ವ್ಯವಸ್ಥೆ ಜಾರಿ
Step-2: ತದನಂತರ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ಹಾಕಿ ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಎಲ್ಲಾ ವಿವರ ಇಲ್ಲಿ ತೋರಿಸುತ್ತದೆ. ಇಲ್ಲಿ ಮೊಬೈಲ್ ನಂಬರ್ ಹಾಕಿ “ಸಕ್ರಿಯಗೊಳಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ “ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ಸಕ್ರಿಯಗೊಳಿಸಿಕೊಳ್ಳಬೇಕು.
Step-3: ಇದಾದ ಬಳಿಕ ನಿಮ್ಮ ಸರ್ವೆ ನಂಬರ್ ಗಳು ಇಲ್ಲಿ ತೋರಿಸುತ್ತವೆ ನಂತರ ನಿಮ್ಮ ಜಮೀನಿನ್ನು ಭೇಟಿ ಮಾಡಿ ಒಂದು ಒಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ “ಬೆಳೆ ವಿವರ ದಾಖಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಪ್ರಸ್ತುತ ಬೆಳೆದಿರುವ ಬೆಳೆ ವಿವರವನ್ನು ಹಾಕಿ ಬೆಳೆಯ 2 ಪೋಟೋ ಕ್ಲಿಕ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕು.
Step-4: ಒಂದೊಮ್ಮೆ ನಿಮ್ಮ ಸರ್ವೆ ನಂಬರ್ ಗಳು ಕಾಣಿಸದೇ ಇದ್ದಲ್ಲಿ “ಸರ್ವೆ ನಂಬರ್ ಸೇರಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ಬಿಟ್ಟು ಹೋದ ಸರ್ವೆ ನಂಬರ್ ಅನ್ನು ಸೇರಿಸಬಹುದು.
ಇದನ್ನೂ ಓದಿ: PM-Vishwakarma Yojana-ಸ್ವ-ಉದ್ಯೋಗ ಆರಂಭಿಸಲು ಈ ಯೋಜನೆಯಡಿ ಯಾವುದೇ ಗ್ಯಾರಂಟಿಯಿಲ್ಲದೇ 3 ಲಕ್ಷ ಸಾಲ ಸಿಗುತ್ತದೆ!
Crop survey-ಬೆಳೆ ಸಮೀಕ್ಷೆ ವಿವರ ಅಪ್ಲೋಡ್ ಮಾಡುವ ವಿಧಾನ:
ಈ ಮೇಲಿನ ವಿಧಾನವನ್ನು ಅನುಸರಿ ನಿಮ್ಮ ಜಮೀನಿನ ಬೆಳೆ ವಿವರ ದಾಖಲಿಸಿದ ಬಳಿಕ ಕೊನೆಯಲ್ಲಿ “ಅಪ್ಲೋಡ್ ಮಾಡಿ” ಬಟನ್ ಮೇಲೆ ಕ್ಲಿಕ್ ಮಾಡಿ ತಪ್ಪದೇ ನೀವು ಮಾಡಿರುವ ಬೆಳೆ ಸಮೀಕ್ಷೆ ವರದಿಯನ್ನು ಅಪ್ಲೋಡ್ ಮಾಡಬೇಕು ಇಲ್ಲವಾದಲ್ಲಿ ಈ ವಿವರವು ನಿಮ್ಮ ಮೊಬೈಲ್ ನಲ್ಲೇ ಉಳಿದು ಬಿಡುತ್ತದೆ.
PR details-ನಿಮ್ಮ ಗ್ರಾಮದ ಖಾಸಗಿ ನಿವಾಸಿಯ ಸಹಾಯ ಪಡೆಯಬವುದು:
ರೈತರು ತಮಗೆ ಮೊಬೈಲ್ ಅಪ್ಲಿಕೇಶನ್ ಮೂಲಕ ಬೆಳೆ ಸಮೀಕ್ಷೆ ಮಾಡಲು ಗೊತ್ತಾಗದೇ ಇದ್ದ ಪಕ್ಷದಲ್ಲಿ ನಿಮ್ಮ ಗ್ರಾಮ ಬೆಳೆ ಸಮೀಕ್ಷೆ ಮಾಡಲು ಕೃಷಿ ಇಲಾಖೆಯಿಂದ ನೇಮಿಸಿರುವ ಖಾಸಗಿ ನಿವಾಸಿಯ ಸಹಾಯ ಪಡೆಯಬವುದು ಖಾಸಗಿ ನಿವಾಸಿಯ ವಿವರ ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ.
ಇದನ್ನೂ ಓದಿ: Gruhalakshmi Camp-ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ? ಹಣ ಬರದವರು ತಪ್ಪದೇ ಈ ದಿನ ನಿಮ್ಮ ಗ್ರಾಮ ಪಂಚಾಯತ್ ಭೇಟಿ ಮಾಡಿ.
Crop survey helpline-ಇನ್ನು ಹೆಚ್ಚಿನ ಮಾಹಿತಿ:
ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಮಾಹಿತಿ ಪಡೆಯಬವುದು.
ಸಹಾಯವಾಣಿ ಸಂಖ್ಯೆ: 8448447715 ಅಥವಾ 18004253553
ವೆಬ್ಸೈಟ್ ಲಿಂಕ್: click here