Aadhar card Renewal: ಆಧಾರ್ ಕಾರ್ಡ ನವೀಕರಿಸಲು 14 ಡಿಸೆಂಬರ್ 2023 ಕೊನೆಯ ದಿನ! ತಪ್ಪಿದಲ್ಲಿ ಆಧಾರ್ ಕಾರ್ಡ ರದ್ದು!

Aadhar card Renewal: 10 ವರ್ಷ ಅವದಿ ಮುಗಿದ ಆಧಾರ್ ಕಾರ್ಡಗೆ ದಾಖಲಾತಿ ಅಪ್ಲೋಡ್ ಮಾಡಿ ಆಧಾರ್ ಕಾರ್ಡ ನವೀಕರಿಸಲು 14 ಡಿಸೆಂಬರ್ 2023 ಕೊನೆಯ ದಿನಾಂಕ ಎಂದು ಆಧಾರ್ ಪ್ರಾಧಿಕಾರ ತಿಳಿಸಿದೆ ತಪ್ಪಿದಲ್ಲಿ ಆಧಾರ್ ಕಾರ್ಡ ನಿಷ್ಟ್ರೀಯಗೊಳ್ಳಲಿದೆ ಎಂದು ಉಲ್ಲೇಖಿಸಲಾಗಿದೆ.

10 ವರ್ಷ ಅವದಿ ಮುಗಿದ ಆಧಾರ್ ಕಾರ್ಡಗೆ ದಾಖಲಾತಿ ಅಪ್ಲೋಡ್ ಮಾಡಿ ಆಧಾರ್ ಕಾರ್ಡ ನವೀಕರಿಸಲು 14 ಡಿಸೆಂಬರ್ 2023 ಕೊನೆಯ ದಿನಾಂಕ ಎಂದು ಆಧಾರ್ ಪ್ರಾಧಿಕಾರ ತಿಳಿಸಿದೆ ತಪ್ಪಿದಲ್ಲಿ ಆಧಾರ್ ಕಾರ್ಡ ನಿಷ್ಟ್ರೀಯಗೊಳ್ಳಲಿದೆ ಎಂದು ಉಲ್ಲೇಖಿಸಲಾಗಿದೆ.

ಆಧಾರ್ ಕಾರ್ಡ ಹೊಂದಿರುವ ನಾಗರಿಕರು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು 10 ವರ್ಷಕ್ಕೆ ಒಮ್ಮೆ ತಮ್ಮ ಆಧಾರ್ ಕಾರ್ಡ ನಲ್ಲಿ ದಾಖಲಾಗಿರುವ ಗುರುತಿನ ವಿವರ ಮತ್ತು ವಿಳಾಸದ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯವಾಗಿರುತ್ತದೆ.

ಇದರನ್ವ 10 ವರ್ಷ ಮುಗಿದಿರುವ ಆಧಾರ್ ಹೊಂದಿರುವ ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ ಅನ್ನು 14 ಡಿಸೆಂಬರ್ 2023ರ ಒಳಗಾಗಿ ಉಚಿತವಾಗಿ ಆಧಾರ್ ವೆಬ್ಸೈಟ್ uidai.gov.in ಗೆ ಲಾಗಿನ್ ಅಗಿ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರ ಭೇಟಿ ಮಾಡಿ  ನವೀಕರಿಸಬವುದು ಎಂದು ಆಧಾರ್ ಪ್ರಾಧಿಕಾರ ಜಾಲತಾಣದಲ್ಲಿ(uidai) ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: Pension eKYC: ಇನ್ನು ಮುಂದೆ ಪ್ರತಿ ತಿಂಗಳು ಪಿಂಚಣಿ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಆಧಾರ್ ನವೀಕರಣಕ್ಕೆ ಯಾವೆಲ್ಲ ದಾಖಲಾತಿಗಳನ್ನು ಒದಗಿಸಬೇಕು?

ಇತ್ತೀಚಿನ ಗುರುತಿನ ಪುರಾವೆ(ಉದಾ: ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲಾತಿ) ಮತ್ತು ವಿಳಾಸದ ಪುರಾವೆ( ವೋಟರ್ ಐಡಿ ,ಪಾನ್ ಕಾರ್ಡ ಅಥವಾ ಪಾಸ್ ಪೋರ್ಟ್ ಇತ್ಯಾದಿ) ಈ ಎರಡು ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ ಅನ್ನು ನವೀಕರಿಸಬವುದಾಗಿದೆ.

ಈ ರೀತಿ ದಾಖಲೆಗಳನ್ನು ಸಲ್ಲಿಸುವ ಮೂಲಕ ನಿಮ್ಮ ಆಧಾರ್ ಡೇಟಾಬೇಸ್‌ನಲ್ಲಿ ದಾಖಲೆಗಳನ್ನು ನವೀಕರಿಸುವುದರಿಂದ ನಿಮ್ಮ ಆಧಾರ್ ನವೀಕರಣ ಮಾಡಿದಂತಾಗುತ್ತದೆ. ನೀವು ಸಲ್ಲಿಸಿದ ದಾಖಲೆಗಳಲ್ಲಿನ ವಿವರಗಳು ನಿಮ್ಮ ಆಧಾರ್‌ನಲ್ಲಿ ನಮೂದಿಸಲಾದ ನಿಮ್ಮ ವಿವರಗಳೊಂದಿಗೆ ಹೊಂದಿಕೆಯಾಗಬೇಕು. ಆಧಾರ್ ಡೇಟಾಬೇಸ್‌ನಲ್ಲಿ ನಿಮ್ಮ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ ಎಂದು ಆಧಾರ್ ಪ್ರಾಧಿಕಾರ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Business loan- ಸ್ವಂತ ಬಿಸಿನೆಸ್ ಆರಂಭಿಸಲು ಸಬ್ಸಿಡಿಯಲ್ಲಿ ರೂ.2.00ಲಕ್ಷಗಳವರೆಗೆ ಸಾಲ ನೀಡಲು ಅರ್ಜಿ ಆಹ್ವಾನ!

ಆಧಾರ್ ನವೀಕಣರ ಎಲ್ಲಿ ಮಾಡಿಸಬೇಕು?

ನಾಗರಿಕರು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್ ಅಥವಾ ಕಂಪ್ಯೂಟರ್ ಸೆಂಟರ್ ಗಳನ್ನು ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಆಧಾರ್ ಕಾರ್ಡ ನವೀಕರಣ ಮಾಡಿಕೊಳ್ಳಬವುದು.

ನಿಮ್ಮ ಮೊಬೈಲ್ ನಲ್ಲೇ ಆಧಾರ್ ನವೀಕರಿಸಬವುದು: 

ಇಲ್ಲಿ ಕ್ಲಿಕ್ ಮಾಡಿ> Aadhar card Renewal link ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕ Adhar card wbeiste ಭೇಟಿ ಮಾಡಿ ಅಗತ್ಯ ದಾಖಲಾತಿಗಳ ಪಿಡಿಎಫ್ ಪೈನ್ ಅಪ್ಲೋಡ್ ಮಾಡಿ ಅಧಾರ್ ಕಾರ್ಡ ನವೀಕರಣ ಮಾಡಿಕೊಳ್ಳಬವುದಾಗಿದೆ.

Adhar helpline numbers- ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಆಧಾರ್ ಸಹಾಯವಾಣಿ: 1947

ಇದನ್ನೂ ಓದಿ: How to do GruhaLakshmi eKYC- ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು eKYCಗಾಗಿ ವೆಬ್ಸೈಟ್ ಲಿಂಕ್ ಬಿಡುಗಡೆ! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.