Adhar card update: ಆಧಾರ್ ಕಾರ್ಡ ಹೊಂದಿರುವವರು 14 ಮಾರ್ಚ 2024 ಒಳಗಾಗಿ ಈ ಕೆಲಸ ಮಾಡುವುದು ಕಡ್ಡಾಯ!

Adhar card update: ದೇಶದ ಪ್ರತಿಯೊಬ್ಬ ಆಧಾರ್ ಕಾರ್ಡ ಹೊಂದಿರುವ ನಾಗರಿಕರು ತಮ್ಮ ಆಧಾರ್ ಕಾರ್ಡ ನವೀಕರಿಸಿ 10 ವರ್ಷ ಪೂರೈಸಿದಲ್ಲಿ ತಪ್ಪದೇ 14 ಮಾರ್ಚ 2024 ಒಳಗಾಗಿ ತಮ್ಮ ಆಧಾರ್ ಕಾರ್ಡ ಅನ್ನು ನವೀಕರಿಸಬೇಕು(Update) ಎಂದು ಆಧಾ‌ರ್ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ಆಧಾರ್ ಕಾರ್ಡ ಹೊಂದಿರುವವರು 14 ಮಾರ್ಚ 2024 ಒಳಗಾಗಿ ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ತಿಳಿದುಕೊಂಡು ಆ ಕೆಲಸ ಮಾಡುವುದು ಕಡ್ಡಾಯವಾಗಿರುತ್ತದೆ.

ಹೌದು ಓದುಗರೇ ಏನಪ್ಪ ವಿಷಯ ಎಂದರೆ? ಈ ಹಿಂದೆ ಬಾರತೀಯ ಆಧಾರ್ ಪ್ರಾಧಿಕಾರದಿಂದ ಕಳೆದ 10 ವರ್ಷದಿಂದ ಆಧಾರ್ ಕಾರ್ಡನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದವರು ಅಥವಾ ಯಾವುದೇ ರೀತಿಯ ಅಪ್ ಡೇಟ್ ಮಾಡಿಕೊಳ್ಳದವರು ತಮ್ಮ ಆಧಾರ್ ಕಾರ್ಡ ಅನ್ನು ಅಪ್ ಡೇಟ್ ಮಾಡಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

ದೇಶದ ಪ್ರತಿಯೊಬ್ಬ ಆಧಾರ್ ಕಾರ್ಡ ಹೊಂದಿರುವ ನಾಗರಿಕರು ತಮ್ಮ ಆಧಾರ್ ಕಾರ್ಡ ನವೀಕರಿಸಿ 10 ವರ್ಷ ಪೂರೈಸಿದಲ್ಲಿ ತಪ್ಪದೇ 14 ಮಾರ್ಚ 2024 ಒಳಗಾಗಿ ತಮ್ಮ ಆಧಾರ್ ಕಾರ್ಡ ಅನ್ನು ನವೀಕರಿಸಬೇಕು(Update) ಎಂದು ಆಧಾ‌ರ್ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: Agriculture Loan- ರೈತರ ಸಾಲ ಮರುಪಾವತಿ ರಾಜ್ಯ ಸರಕಾರದಿಂದ ನೂತನ ಕ್ರಮ!

ನಾಗರಿಕರು ಏಕೆ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳಬೇಕು?

ಆಧಾ‌ರ್ ಪ್ರಾಧಿಕಾರವು ದೇಶದ ಎಲ್ಲಾ ನಾಗರಿಕರಿಗೆ ಆಧಾರ್ ಕಾರ್ಡ ವಿತರಣೆ ಇತ್ಯಾದಿ ಸೇವೆಗಳನ್ನು ನೀಡುತ್ತಾ ಬಂದಿದೆ ಈ ಪ್ರಾದಿಕಾರ ಹೇಳಿರುವ ಮಾಹಿತಿಯನ್ವ ಪ್ರಸ್ತುತ ಚಾಲ್ತಿಯಲ್ಲಿರುವ ಆಧಾರ್ ಕಾರ್ಡ ಹೊಂದಿರುವವರ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಅಧಾರ್ ಕಾರ್ಡ ಹೊಂದಿರುವ ದೇಶದ ಪ್ರತಿಯೊಬ್ಬ ನಾಗರಿಕರು 10 ವರ್ಷಕ್ಕೊಮ್ಮೆ ತಮ್ಮ ದಾಖಲಾತಿಗಳನ್ನು ಪ್ರಾಧಿಕಾರದ ಮುಂದೆ ಆನ್ಲೈನ್ ಮೂಲಕ ಸಲ್ಲಿಸಿ ಆಧಾರ್ ಅಪ್ ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಈ ಕಾರಣದಿಂದಾಗಿ ಕಳೆದ 10 ವರ್ಷದಿಂದ ಇಲ್ಲಿಯವರೆಗೆ ಆಧಾರ್ ಕಾರ್ಡ ನವೀಕರಣ(update) ಮಾಡಿಕೊಳ್ಳದವರು ಕೂಡಲೇ ಅಗತ್ಯ ದಾಖಲಾತಿಗಳನ್ನು ಒದಗಿಸಿ ನಿಮ್ಮ ಆಧಾರ್ ಕಾರ್ಡ ಅನ್ನು ನವೀಕರಿಸಿಕೊಳ್ಳಬೇಕು.

ಇದನ್ನೂ ಓದಿ: Fruits Id updates: ಪ್ರೂಟ್ಸ್ ಐಡಿಯಲ್ಲಿ ನಮೂದಿಸಿದ ವಿವರದ ಕುರಿತು ರೈತರು ತಪ್ಪದೇ ಈ ಮಾಹಿತಿ ತಿಳಿಯಿರಿ!

ಯಾರೆಲ್ಲೆ ಈ ಕೆಲಸ ಮಾಡಬೇಕು?

ಕಳೆದ 10 ವರ್ಷದಲ್ಲಿ ಆಧಾರ್ ಕಾರ್ಡ ನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದವರು/ ನವೀಕರಣ ಮಾಡಿಕೊಳ್ಳದವರು ಕೊನೆಯ ದಿನಾಂಕದ ಒಳಗಾಗಿ ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಧಾರ್ ನವೀಕರಣ ಮಾಡಿಕೊಳ್ಳಬೇಕು.

ಆಧಾರ್ ಅಪ್ ಡೇಟ್ ಎಲ್ಲಿ ಮಾಡಿಸಬೇಕು?

10 ವರ್ಷ ಪೂರೈಸಿದ ಆಧಾರ್ ಕಾರ್ಡ ಹೊಂದಿರುವ ನಾಗರಿಕರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ್ ಒನ್ , ಕರ್ನಾಟಕ ಒನ್, ನಾಗರಿಕ ಸೇವಾ ಕೇಂದ್ರ(CSC center) ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಆಧಾರ್ ಅಪ್ ಡೇಟ್ ಗೆ ಅರ್ಜಿ ಸಲ್ಲಿಸಬೇಕು. ಅಥವಾ ಮೊಬೈಲ್ ಬಳಕೆ ಕುರಿತು ಮಾಹಿತಿಯಿರುವವರು ನಮ್ಮ ಈ ಅಂಕಣದ ಕೊನೆಯಲ್ಲಿ ಮೊಬೈಲ್ ನಲ್ಲೇ ಹೇಗೆ ಆಧಾರ್ ಕಾರ್ಡ ಅಪ್ ಡೇಟ್ ಗೆ ಅರ್ಜಿ ಸಲ್ಲಿಸಬವುದು ಎಂದು ವಿವರಿಸಲಾಗಿದ್ದು ಆ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬವುದು.

ಇದನ್ನೂ ಓದಿ: Ganga kalyana yojana-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 3 ದಿನ ಮಾತ್ರ ಬಾಕಿ!

ಆಧಾರ್ ಅಪ್ ಡೇಟ್ ಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಪಾನ್ ಕಾರ್ಡ್
  • ವೋಟರ್ ಕಾರ್ಡ್
  • ಡಿ ಎಲ್/ LIC ಬಾಂಡ್
  • ಪಾಸ್ಪೋರ್ಟ್
  • ಬ್ಯಾಂಕ್ ಪಾಸ್ ಪುಸ್ತಕ
  • SSLC ಮಾರ್ಕ್ಸ್ ಕಾರ್ಡ್ 

(ಆಧಾರ್ ಹೊರತುಪಡಿಸಿ ಹೆಸರು ಜನ್ಮ ದಿನಾಂಕ ಹೊಂದಾಣಿಕೆ ಆಗುವ ಯಾವುದಾದರೂ ಎರಡು ಒರಿಜಿನಲ್ ದಾಖಲೆ ಬೇಕಾಗುತ್ತದೆ)

ಆಧಾರ್ ಅಪ್ ಡೇಟ್ ಶುಲ್ಕ ಮತ್ತು ಕೊನೆಯ ದಿನಾಂಕ:

ನಾಗರಿಕರು ತಮ್ಮ ಮೊಬೈಲ್ ನಲ್ಲಿ ತಾವೇ ಆಧಾರ್ ಅಪ್ ಡೇಟ್ ಮಾಡಿಕೊಂಡಲ್ಲಿ ಅದ ಉಚಿತವಾಗಿರುತ್ತದೆ ಅಥವಾ ಹೊರಗಡೆ ಗ್ರಾಮ ಒನ್, ಕರ್ನಾಟಕ ಒನ್ ಇತರೆ ಕಂಪ್ಯೂಟರ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು 50 ರೂ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಆಧಾರ್ ಅಪ್ ಡೇಟ್ ಮಾಡಿಕೊಳ್ಳಲು ಈ ಮೊದಲು 14 ಡಿಸೆಂಬರ್ 2023 ಕೊನೆಯ ದಿನಾಂಕ ಎಂದು ಆಧಾರ್ ಪ್ರಾಧಿಕಾರವು ನಿಗದಿಪಡಿಸಲಾಗಿತ್ತು ಬಳಿಕ ಈಗ ಇದಕ್ಕೆ ಕೊನೆಯ ದಿನಾಂಕವನ್ನು 14 ಮಾರ್ಚ 2024 ರವರೆಗೆ ವಿಸ್ತರಣೆ ಮಾಡಿ ಹೊಸ ಪ್ರಕಟಣೆ ಹೊರಡಿಸಲಾಗಿದೆ.

Adhar update link-ಮೊಬೈಲ್ ನಲ್ಲೇ ಅಧಾರ್ ನವೀಕರಿಸುವ ವಿಧಾನ:

Step-1: ನಾಗರಿಕರು ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ> Adhar update link ಆಧಾರ್ ಕಾರ್ಡ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ತದನಂತರ ನಿಮ್ಮ ಆಧಾರ್ ಕಾರ್ಡ ನಂಬರ್ ಮತ್ತು ಕ್ಯಾಪ್ಚರ್ ಕೋಡ್ ನಮೂದಿಸಿ Send OTP ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ ನಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ಹಾಕಿ "Login" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bara parihara-2023: ರಾಜ್ಯ ಸರಕಾರದಿಂದ ಬರ ಪರಿಹಾರದ ಮೊತ್ತ ನಿಗದಿ! ಒಂದು ಎಕರೆಗೆ ಎಷ್ಟು ಸಿಗಲಿದೆ?

Step-2: ಇದಾದ ಬಳಿಕ ಈ ಪೇಜ್ ನಲ್ಲಿ "Documents update" ಬಟನ್ ಮೇಲೆ ಕ್ಲಿಕ್ ಮಾಡಿ 3 ಬಾರಿ "Next" ಬಟನ್ ಮೇಲೆ ಕ್ಲಿಕ್ ಮಾಡಬೇಕು ಬಳಿಕ "Please upload Proof Of Identity (POI) Document" ಆಯ್ಕೆ ವಿಭಾಗ ತೆರೆದುಕೊಳ್ಳುತ್ತದೆ ಇಲ್ಲಿ ನಿಮ್ಮ ಬಳಿಯಿರುವ ಯಾವುದಾದರು ಒಂದು ದಾಖಲಾತಿಯನ್ನು ಆಯ್ಕೆ ಮಾಡಿಕೊಂಡು(ಉದಾಹರಣೆಗೆ: Voter Id) ಅದನ್ನು ಆಯ್ಕೆ ಮಾಡಿಕೊಂಡು view details&upload document ಮೇಲೆ ಕ್ಲಿಕ್ ಮಾಡಿ "continue to upload" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ನೀವು ಆಯ್ಕೆ ಮಾಡಿಕೊಂಡಿರುವ ದಾಖಲಾತಿಯ ಪೈಲ್ ಅನ್ನು ಸ್ಕಾನ್ ಮಾಡಿ Jpeg/pdf  ಪಾರ್ಮೆಟ್ ನಲ್ಲಿ ಅಪ್ಲೋಡ್ ಮಾಡಿ ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ ಅಪ್ ಡೇಟ್ ಅಗುತ್ತದೆ.