ಬಹುತೇಕ ರೈತರು ತಮ್ಮ ಜಮೀನಿಗೆ(Agriculture land info) ಹೋಗುವ ದಾರಿ ಅಳತೆ ಮತ್ತು ದಾರಿ ಎಲ್ಲಿ ಬರುತ್ತದೆ ಎನ್ನುವ ಕುರಿತು ಬಹಳಷ್ಟು ವ್ಯಾಜ್ಯ-ವಿವಾದಗಳನ್ನು ಅನುಭವಿಸುವ ಪರಿಸ್ಥಿತಿಯನ್ನು ತಂದುಕೊಳ್ಳುತ್ತಾರೆ ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಅನೇಕ ರೈತರಿಗೆ ಈ ಗೊಂದಲ ಇದೇ ಇರುತ್ತದೆ ಏನೆಂದರೆ ತಮ್ಮ ಜಮೀನಿಗೆ ಹೋಗಲು ದಾರಿ ಅಂದರೆ ಕಾಲು ದಾರಿ ಮತ್ತು ಬಂಡಿ ದಾರಿ ಅಳತೆ ಎಷ್ಟು? ಅದು ಯಾವ ಜಾಗದಲ್ಲಿ ಬರುತ್ತದೆ ಎಂದು ನಿಖರವಾಗಿ ಗೊತ್ತಿರುವುದಿಲ್ಲ ಕಾಲು ದಾರಿ ಮತ್ತು ಬಂಡಿ ದಾರಿ ಬಗ್ಗೆ ಅದರ ಅಳತೆ ಎಷ್ಟು ಇರುತ್ತೆ ಮತ್ತು ಅದರ ನಿಯಮಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.
ರೈತರು ತಮ್ಮ ಜಮೀನಿಗೆ ಹೋಗಿ-ಬರಲು ಮತ್ತೊಬ್ಬರ ಜಮೀನಿನ ಮೂಲಕ ಹಾಯ್ದು ಹೋಗುವ ಸನ್ನಿವೇಶಗಳಿರುತ್ತದೆ ಕುಟುಂಬಗಳು ಹೆಚ್ಚಾದಂತೆ ಜಮೀನಿನ ಕೊರತೆಯಿಂದ ಬರುಬರುತ್ತಾ ಕಾಲುದಾರಿ ಅಥವಾ ಬಂಡಿದಾರಿ ರೈತರ ನಡುವೆ ವ್ಯಾಜ್ಯಗಳು ಸಾಮಾನ್ಯವಾಗಿ ಬಿಟ್ಟಿದೆ. ಈ ಹಿನ್ನಲೆಯಲ್ಲಿ ಇದಕ್ಕೆ ಶಾಶ್ವತ ಪರಿಹಾರ ಎಂಬಂತೆ ಸರ್ಕಾರವು Easement Act ಕಾಯ್ದೆ ಜಾರಿಗೆ ತಂದಿದ್ದು, ಈ ಕಾಯ್ದೆ ಪ್ರಕಾರ ಪ್ರತಿಯೊಬ್ಬರಿಗು ತಮ್ಮ ಜಮೀನಿಗೆ ಹೋಗಿ ಬರಲು ದಾರಿಗೆ ಜಾಗ ಇದೆ ಇರುತ್ತದೆ. ಹಾಗೂ ದಾರಿ ಪಡೆಯುವುದು ನಿಮ್ಮ ಮೂಲಭೂತ ಹಕ್ಕು ಎಂದು ಸಹ ಹೇಳಬಹುದು.
ಇದನ್ನೂ ಓದಿ: Crop insurance-2024: ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು ಎನ್ನುವ ವಿವರ ಬಿಡುಗಡೆ!
ಬ್ರೀಟಿಷ್ ಸರ್ಕಾರ ಇದ್ದಾಗ ಅಂದರೆ ಬ್ರೀಟಿಷರು ಆಳುವಾಗ ಬ್ರಿಟೀಷ್ ಇಂಡಿಯಾ ಸರ್ಕಾರದಿಂದ ದೇಶದಲ್ಲಿ ಮೊಟ್ಟ ಮೋದಲು ಅಧಿಕೃತವಾಗಿ ಮೂಲ ಸರ್ವೇ ಮಾಡಲಾಯಿತು. ಆ ಸಂದರ್ಭದಲ್ಲಿ ದಾಖಲಿಸಿದ ಮಾಹಿತಿಯು ಈಗ ಅಳತೆ ಮಾಡಲು ಉರುಗೋಲು ಎಂದು ಹೇಳಬಹುದು. ಏಕೆಂದರೆ ಆ ಮೂಲ ಸರ್ವೇ ಮಾಡುವಾಗ ಅವರು ಪ್ರಮುಕವಾಗಿ ಮಾಡಿರುವ ದಾಖಲೆ ಅಂದರೆ ಟಿಪ್ಪಣೆ ರಚಿಸುವ ಕೆಲಸ. ಸದರಿ ಟಿಪ್ಪಣಿಯೇ ಈಗ ಪ್ರತಿಯೊಂದು ಜಮೀನಿಗೆ ಸರ್ವೇ ಕಾರ್ಯದಲ್ಲಿ ಆಧಾರ ಸ್ತಂಬವಾಗಿದೆ.
ಪ್ರತಿಯೊಂದು ಹೊಲದ ಸರ್ವೇ ಮಾಡುವಾಗ ಕಾಲು ದಾರಿಯಾಗಿರಬಹುದು ಅಥವಾ ಬಂಡಿ ದಾರಿಯಾಗಿರಬಹುದು ಅದನ್ನು ಸ್ಪಷ್ಟವಾಗಿ ದಾಖಲಿಸಿ ಇಡುತ್ತಿದ್ದರು ಈಗ ಅದನ್ನು ನಾವು ಖರಾಬು ಭೂಮಿ ಎಂದು ಕರೆಯುತ್ತೇವೆ. ಖರಾಬು ಭೂಮಿಯಲ್ಲಿ ಎರಡು ರೀತಿಯಲ್ಲಿ ವರ್ಗಗಳಿರುತ್ತವೆ “ಬ ಖರಾಬರಲ್ಲಿ” ಕಾಲುದಾರಿ ಮತ್ತು ಬಂಡಿದಾರಿ ವಿಸ್ತೀರ್ಣ ಅದರ ಸಂಪೂರ್ಣ ಮಾಹಿತಿಯ ವರದಿ ಅಡಕವಾಗಿರುತ್ತದೆ.
Karnataka land revenue Act 1966 ರ ಖಾಯ್ದೆ ಪ್ರಕಾರ ಕಾಲುದಾರಿ ಅಂದರೆ ನಡೆದುಕೊಂಡು ಜಮೀನಿಗೆ ಹೋಗಿಬರುವಂತ ದಾರಿ ವಿಸ್ತೀರ್ಣದ ಅಗಲ 8 ಅಡಿ 2 ಇಂಚು ಇರುತ್ತದೆ. ಮತ್ತು ಇದರ ಉದ್ದದ ವಿಸ್ತೀರ್ಣ ಎಷ್ಟಂತ ಹೇಳಲಿಕ್ಕೆ ಬರುವುದಿಲ್ಲ. ಏಕೆಂದರೆ ನಿಮ್ಮ ಜಮೀನಿಗೆ ಅಂತ್ಯದ ವರೆಗೂ ದಾರಿ ಇದ್ದರೆ ಅಲ್ಲಿಯವರೆಗೂ ವಿಸ್ತೀರ್ಣ ಲೆಕ್ಕ ಹಾಕಿದಾಗ ಬರುವ ವಿಸ್ತೀರ್ಣವೇ ಇದರ ಉದ್ದ ಎಂದು ನೀವು ಅರ್ಥಮಾಡಿಕೊಳ್ಳಬಹುದು. ಇನ್ನು ಬಂಡಿ ದಾರಿ ಬಗ್ಗೆ ಹೇಳೊದಾದರೆ ಇದರ ಅಗಲವು 20 ಅಡಿ ಇರುತ್ತೆ ಎಂದು ಉಹಿಸಬಹುದು. ಅದರಂತೆ ಇದರ ಉದ್ದ ನಿಮ್ಮ ಸರ್ವೇ ನಂಬರ ಮುಗಿಯುವ ವರೆಗೂ ಇದರ ಉದ್ದ ಇರುತ್ತೇ ಎಂದು ನೀವು ತಿಳಿದುಕೊಳ್ಳಬೇಕು.
ಇದನ್ನೂ ಓದಿ: Gruhalakshmi status-2024: ಇನ್ನು ಮುಂದೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಜಮಾ ಆಗಿರುವುದನ್ನು ತಿಳಿಯುವುದು ಭಾರೀ ಸುಲಭ!
Agriculture land road-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇದನ್ನು ಹೇಗೆ ಸರಿಪಡಿಸಿಕೊಳ್ಳುವುದು?
1) ಕಾಲು ದಾರಿ ಮತ್ತು ಬಂಡಿ ದಾರಿ ಇದು ಸಾರ್ವಜನಿಕ ಸ್ವತ್ತು. ಹೀಗಾಗಿ ಸಾರ್ವಜನಿಕರು ಬಂದು ನೀರಾಳವಾಗಿ ಹೋಗಿ ಬರಬಹುದು ಅದರಂತೆ ಅಕ್ಕ ಪಕ್ಕ ದ ರೈತರು ಯಾವುದೇ ರೀತಿ ತಕರಾರು ಮಾಡದೇ ಸಹಕರಿಸಿಕೊಂಡು ಹೋಗಬೇಕು.
2) ಕಾಲು ದಾರಿ ಅಥವಾ ಬಂಡಿ ದಾರಿಯ ಒಟ್ಟೂ ವಿಸ್ತೀರ್ಣ ನೀವು ತಿಳಿದುಕೊಳ್ಳಲು ನೀವು ಪಹಣಿಯಲ್ಲಿರುವ ಮೂರನೇ ಕಾಲಂನಲ್ಲಿ ಬ ಖರಾಬ ನೋಡಬಹುದು.
3) ಅದರಂತೆ ಪ್ರತ್ಯೇಕ ವಿಸ್ತೀರ್ಣ ಅಂದರೆ ಕಾಲುದಾರಿ ಮತ್ತು ಬಂಡಿದಾರಿಯ ಉದ್ದ ಮತ್ತು ಅಗಲ ಬಗ್ಗೆ ಸ್ಪಷ್ಟವಾಗಿ ನೀವು ಮಾಹಿತಿ ತಿಳಿದುಕೊಳ್ಳಬೇಕೆಂದರೆ ನೀವು ಸರ್ವೇ ಕಚೇರಿಗೆ ಹೋಗಿ ಅರ್ಜಿ ಕೊಟ್ಟರೆ ಖಂಡಿತ ಅವರು ನಿಮಗೆ ಸಂಪೂರ್ಣ ಮಾಹಿತಿ ಪತ್ರ ಖರಾಬ ಎಕ್ಸಟ್ರಾಕ್ಟ ಪ್ರತಿ ನಿಮಗೆ ಕೊಡುತ್ತಾರೆ.
4) ಒಂದುವೇಳೆ ಸದರಿ ಜಮೀನಿಗೆ ಹೋಗಿ ಬರಲು ಅಧೀಕೃತವಾಗಿ ಅಂದರೆ ನಕ್ಷೆಯಲ್ಲಿ ಮತ್ತು ಟಿಪ್ಪಣಿಗಳಲ್ಲಿ ದಾರಿ ಇಲ್ಲ ಎಂದರೆ ನೀವು ಯಾವುದೇ ರೀತಿಯ ಬಯಪಡುವ ಅಗತ್ಯವಿಲ್ಲ. ಏಕೆಂದರೆ ನೀವು ಹೊಸದಾಗಿ ದಾರಿಯನ್ನು ಮಾಡಿಕೊಳ್ಳಬಹುದು ಹೌದು ದಾರಿ ಇಲ್ಲ ಮಾತ್ರಕ್ಕೆ ನೀವು ಬಯಪಡುವ ಅಗತ್ಯವಿಲ್ಲ. Easement Act ಪ್ರಕಾರ ಈ ವೊಂದು ಖಾಯ್ದೆ ಪ್ರಕಾರ ನೀವು ಹೊಸ ದಾರಿಯನ್ನು ಪಡೆದುಕೊಳ್ಳಬಹುದು. ಅದು ಹೇಗೆ ಅಂದರೆ ಎಲ್ಲಾ ದಾಖಲೆಗಳೊಂದಿಗೆ ಜಿಲ್ಲಾ ಕೇಂದ್ರದಲ್ಲಿರುವ ಡಿ.ಡಿ.ಎಲ್.ಆರ್‌ಅವರಿಗೆ ಅರ್ಜಿ ಕೊಟ್ಟು ದಾರಿ ಅಗತ್ಯತೆ ತಿಳಿಸಿದರೆ ಅವರು ನಿಮಗೆ ನ್ಯಾಯ ದೊರಕಿಸಿ ಕೊಡಬಹುದು.
5) ಇದಲ್ಲದೇ ನೀವು ಸಿವಿಲ್‌ನ್ಯಾಯಾಲಯಕ್ಕೆ Easement Act ಅಡಿಯಲ್ಲಿ ಹೊಸದಾಗಿ ದಾರಿ ಪಡೆಯಲು ದಾವೆಹೂಡಿ ನ್ಯಾಯ ಪಡೆದುಕೊಳ್ಳಬಹುದು.
ಈ ಮೇಲೆ ತಿಳಿಸಿರುವ ಮಾಹಿತಿಯು ನಮ್ಮ ಸ್ವಂತ ಅಭಿಪ್ರಾಯವಾಗಿದ್ದು ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ ತಾಲ್ಲೂಕಿನ ಸರ್ವೇ ಕಚೇರಿಗೆ ಭೇಟಿ ಮಾಡಿ ಕಾಲುದಾರಿ ಮತ್ತು ಬಂಡಿದಾರಿ ಕುರಿತು ಮಾಹಿತಿ ಪಡೆಯಬವುದು.