Akshayakalpa jobs-2023: ಹೈನುಗಾರಿಕೆ ಕ್ಷೇತ್ರದಲ್ಲಿ ಉದ್ಯೋಗವಕಾಶ ಮಾಸಿಕ ವೇತನ 35,000 ರೂ! ಇಲ್ಲಿದೆ ಅರ್ಜಿ ಸಲ್ಲಿಸಲು ಸಂಪೂರ್ಣ ವಿವರ.

akshayakalpa job vacancy: ಅಕ್ಷಯಕಲ್ಪ ಫಾರ್ಮ್ಸ್ ಅಂಡ್ ಫುಡ್ಸ್ ಪ್ರೈವೇಟ್ ಲಿಮಿಟೆಡ್, ತಿಪಟೂರು ವತಿಯಿಂದ ಹೈನುಗಾರಿಕೆ ಕ್ಷೇತ್ರದಲ್ಲಿ  ರೈತರೊಂದಿಗೆ ಕಾರ್ಯನಿರ್ವಹಿಸಲು ಕ್ಷೇತ್ರ ವಿಸ್ತರಣಾ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ಅಕ್ಷಯಕಲ್ಪ ಫಾರ್ಮ್ಸ್ ಅಂಡ್ ಫುಡ್ಸ್ ಪ್ರೈವೇಟ್ ಲಿಮಿಟೆಡ್, ತಿಪಟೂರು ವತಿಯಿಂದ ಹೈನುಗಾರಿಕೆ ಕ್ಷೇತ್ರದಲ್ಲಿ  ರೈತರೊಂದಿಗೆ ಕಾರ್ಯನಿರ್ವಹಿಸಲು ಕ್ಷೇತ್ರ ವಿಸ್ತರಣಾ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ಗ್ರಾಮೀಣ ಭಾಗದಲ್ಲಿ ರೈತರೊಂದಿಗೆ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿಯಿರುವ ಯುವಕರು ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯನ್ನು ತಿಳಿದು ಈ ಹುದ್ದೆಗೆ ಅರ್ಜಿ ಸಲ್ಲಿಸಬವುದು. ಈ ಹುದ್ದೆಗೆ ನೇಮಕ ಮಾಡಿಕೊಳ್ಳುವುದರ ಕುರಿತು ಅಕ್ಷಯಕಲ್ಪ ಕಂಪನಿಯಿಂದ ಹೊರಡಿಸಿರುವ ಪ್ರಕಟಣೆ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ. 

ನಿಜವಾದ ಸಂಪತ್ತು ಸೃಷ್ಟಿ ಕೃಷಿಯಲ್ಲಿ ಮಾತ್ರ ಸಾಧ್ಯ ಎಂದು ಅಕ್ಷಯಕಲ್ಪ ನಂಬುತ್ತದೆ. ನಮ್ಮ ಎಲ್ಲಾ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಬಳಸಿ ಹಾಲು ಉತ್ಪಾದಕರೊಂದಿಗೆ ಕೆಲಸ ಮಾಡುವ ಮೂಲಕ ಸುರಕ್ಷಿತ ಮತ್ತು ಆರೋಗ್ಯಕರ ಹಾಲನ್ನು ಸುಸ್ಥಿರ ರೀತಿಯಲ್ಲಿ ಉತ್ಪಾದಿಸಲು ಸಹಾಯ ಮಾಡುವ ಗುರಿಯನ್ನು ಅಕ್ಷಯಕಲ್ಪವು ಹೊಂದಿದೆ. 

ಈಗಾಗಲೇ, ಅಕ್ಷಯಕಲ್ಪದ ಹಾಲು ಉತ್ಪಾದಕರು ಪಶು ಆಧಾರಿತ ಸಮಗ್ರ ಕೃಷಿಯಿಂದ ತಿಂಗಳಿಗೆ ಲಕ್ಷಕ್ಕೂ ಅಧಿಕ ಆದಾಯದ ಸುಸ್ಥಿರ ಜೀವನ ನಡೆಸುತ್ತಿದ್ದಾರೆ. ಈ ಕ್ರಾಂತಿಕಾರಿ ಬದಲಾವಣೆಯನ್ನು ಮತ್ತಷ್ಟು ಹೆಚ್ಚಿಸಲು, ಹಾಲು ಉತ್ಪಾದಕರೊಂದಿಗೆ ನಿರಂತರ ಕೆಲಸ ಮಾಡಲು ಹಾಗೂ ಮಾರ್ಗದರ್ಶನ ನೀಡಲು ಉತ್ಸಾಹಿ ಮತ್ತು ಅರ್ಹ ಯುವಜನರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಇದನ್ನೂ ಓದಿ: Data entry operator Job: ಹೊಸದಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಡಾಟಾ ಎಂಟ್ರಿ ಆಪರೇಟ‌ರ್ ನೇಮಕಕ್ಕೆ ಆದೇಶ! 

Akshayakalpa job: ಹುದ್ದೆಯ ಹೆಸರು: ಕ್ಷೇತ್ರ ವಿಸ್ತರಣಾ ಅಧಿಕಾರಿ

ಹಾಲು ಉತ್ಪಾದಕರೊಂದಿಗೆ ನಿರಂತರ ಕೆಲಸ ಮಾಡುವ ಮನಸ್ಥಿತಿ ಹಾಗೂ ಗ್ರಾಮಗಳನ್ನು ಕಟ್ಟುವ ಕನಸಿರುವ ಉತ್ಸಾಹಿ- ಅರ್ಹ ಯುವ ಜನರಿಗೆ ಮೊದಲ ಅದ್ಯತೆ  ನೀಡಲಾಗುವುದು.

ಹುದ್ದೆಗಳು : 20

ಮಾಸಿಕ ವೇತನ : 20,000-35,000 ರೂಗಳು.

ವಿದ್ಯಾರ್ಹತೆ : ಕೃಷಿ ಡಿಪ್ಲೋಮಾ, ಯಾವುದೇ ಪದವಿ (ಅನುಭವ ಇದ್ದವರಿಗೆ ಆದ್ಯತೆ)

ಮುಖ್ಯವಾಗಿ: 

> ಕಂಪ್ಯೂಟರ್ ಜ್ಞಾನ ತಿಳಿದಿರಬೇಕು.

> ದ್ವಿಚಕ್ರ ವಾಹನ ಚಾಲನಾ ಪರವಾನಿಗೆ ಹಾಗೂ ವಾಹನದ ದಾಖಲೆ ಹೊಂದಿರಬೇಕು.

> ಸ್ಮಾರ್ಟ್‌ ಪೋನ್ ಕಡ್ಡಾಯ ಹಾಗೂ ಬಳಸಲು ತಿಳಿದಿರಬೇಕು.

> ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳು ಬರೆಯಲು ಹಾಗೂ ಮಾತನಾಡಲು ಬರಬೇಕು.

ಸೌಲಭ್ಯಗಳು:

> 100% ಮೋಟಾರು ವಾಹನ ಚಲಾವಣೆಯ ಖರ್ಚುಗಳ ಮರುಪಾವತಿ.

> ವೈದ್ಯಕೀಯ ವಿಮೆ ರೂ. 3 ಲಕ್ಷದ ವರೆಗೆ
> ರೂ.10 ಲಕ್ಷದವರೆಗೆ ಅಪಘಾತ ವಿಮೆ

> ಪಿಎಫ್ ಮತ್ತು ಇಎಸ್‌ಐ.

ಇದನ್ನೂ ಓದಿ: Fruits ID: ಸರಕಾರದ ಎಲ್ಲಾ ಬಗ್ಗೆಯ ಬೆಳೆ ಪರಿಹಾರ ಪಡೆಯಲು ಈ ವೆಬ್ಸೈಟ್ ನಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರಿಸುವುದು ಕಡ್ಡಾಯ!

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಯುವಜನರು ಈ ಕೆಳಗಿನ ವಿಳಾಸ ಅಥವಾ ಮಿಂಚಂಚೆಗೆ ವೈಯಕ್ತಿಕ ವಿವರಗಳೊಂದಿಗೆ ಅರ್ಜಿ ಸಲ್ಲಿಸುವುದು.

ಇ-ಮೇಲ್ : hr@akshayakalpa.org

ವಿಳಾಸ : ಅಕ್ಷಯಕಲ್ಪ ಫಾರ್ಮ್ಸ್ ಅಂಡ್ ಫುಡ್ಸ್ ಪ್ರೈವೇಟ್ ಲಿಮಿಟೆಡ್, ನಂ. 367/ಜಿ, ಶಾರದಾನಗರ, ತಿಪಟೂರು 572201 
ಮೊಬೈಲ್ ಸಂಖ್ಯೆ: +91 96060 59105

ಇದನ್ನೂ ಓದಿ: KSRTC Job Notification-2023: ಸರಕಾರಿ ಉದ್ಯೋಗಾಂಕ್ಷಿಗಳಿಗೆ ಶುಭ ಸುದ್ದಿ, 8 ವರ್ಷದ ಬಳಿಕ ಕರ್ನಾಟಕ ಸಾರಿಗೆ ನಿಗಮಕ್ಕೆ 6,500 ಹುದ್ದೆ ನೇಮಕಾತಿಗೆ ಅನುಮೋದನೆ!