Anganwadi Recruitment 2024 : SSLC ಪಾಸಾದವರಿಗೆ ಅಂಗನವಾಡಿಯಲ್ಲಿ 513 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನಿರೀಕ್ಷೆಯಲ್ಲಿರುವವರಿಗೆ(WCD Kolar Anganwadi Recruitment 2024) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಿಹಿಸುದ್ದಿ ನೀಡಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.

Anganwadi Recruitment 2024 : SSLC ಪಾಸಾದವರಿಗೆ ಅಂಗನವಾಡಿಯಲ್ಲಿ 513 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Anganwadi Recruitment-2024

ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನಿರೀಕ್ಷೆಯಲ್ಲಿರುವವರಿಗೆ(WCD Kolar Anganwadi Recruitment 2024) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಿಹಿಸುದ್ದಿ ನೀಡಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯು ಕೋಲಾರ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು, ವಯೋಮಾನ ವಿವರಗಳು ಹಾಗೂ ಇತರೆ ವಿವರಗಳನ್ನು ಈ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ.

ಇದನ್ನೂ ಓದಿ: Pension status check-ಮಾರ್ಚ-2024 ತಿಂಗಳ ಎಲ್ಲಾ ಬಗ್ಗೆಯ ಪಿಂಚಣಿ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

Anganwadi Recruitment 2024- ಖಾಲಿ ಇರುವ ಹುದ್ದೆಗಳ ವಿವರ:

WCD Kolar Anganawadi Recruitement 2024 ಕೋಲಾರ್ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ಸೇರಿ ಒಟ್ಟು 513 ಹುದ್ದೆಗಳು ಖಾಲಿ ಇರುತ್ತವೆ.

* ಅಂಗನವಾಡಿ ಕಾರ್ಯಕರ್ತೆ - 120 ಹುದ್ದೆಗಳು
* ಅಂಗನವಾಡಿ ಸಹಾಯಕಿ - 393 ಹುದ್ದೆಗಳು

Qualification- ಶೈಕ್ಷಣಿಕ ಅರ್ಹತೆ :

  • ಕೋಲಾರ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವಂತಹ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು PUC/SSLC ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. 
  • ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ವಿಷಯವನ್ನಾಗಿ ಓದಿರುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: PDO job notification-2024: 247 ಪಿಡಿಒ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಲ್ಲಿದೆ ಅಧಿಸೂಚನೆ ವಿವರ.


ಅರ್ಜಿ ಸಲ್ಲಿಸಲು ವಯೋಮಿತಿ : 

• ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ - 19 ವರ್ಷ
• ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ - 35 ವರ್ಷ
ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ವಿಕಲಚೇತನರಿಗೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗುತ್ತದೆ.

ವೇತನ ಶ್ರೇಣಿ - ಅಂಗನವಾಡಿ ಹುದ್ದೆಗಳ ವೇತನ :

ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿಯಮಗಳ ಅನುಸಾರ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: BBMP job notification- ಬಿ.ಬಿ.ಎಂ.ಪಿಯಿಂದ 11,307 "ಡಿ ಗ್ರೂಪ್ ಪೌರಕಾರ್ಮಿಕರ" ಭರ್ತಿಗೆ ಅರ್ಜಿ ಆಹ್ವಾನ!

ಆಯ್ಕೆ ಪ್ರಕ್ರಿಯೆ - ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿದ ನಂತರ ವಿದ್ಯಾರ್ಥಿಗಳನ್ನು ಸಂದರ್ಶನ ಮಾಡಿ (Interview ) ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.

Anganwadi Recruitment- ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸಲ್ಲಿಸಲು ಪ್ರಮುಖ ದಿನಾಂಕಗಳು :

• ಅರ್ಜಿ ಸಲ್ಲಿಕೆ ಪ್ರಾರಂಭಿಕ ದಿನಾಂಕ : 12 ಮಾರ್ಚ್ 2024
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19 ಏಪ್ರಿಲ್ 2024

ಇದನ್ನೂ ಓದಿ: Free sewing machine training- ಮಹಿಳೆಯರಿಗೆ 30 ದಿನ ಉಚಿತ ಹೊಲಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ!

Online Application- ಅರ್ಜಿ ಸಲ್ಲಿಸುವ ವಿಧಾನ :

ಕೋಲಾರ್ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು Apply Now ಈ  ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಗದಿಪಡಿಸಲಾಗಿರುವ ದಿನಾಂಕದ ಒಳಗಾಗಿ ಕರ್ನಾಟಕ ಒನ್ ವೆಬ್ಸೈಟ್ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ನಿಮ್ಮ ಹತ್ತಿರದ ಗ್ರಾಮ್ ಒನ್ ಅಥವಾ ಕರ್ನಾಟಕ ಒನ್ ಕೇಂದ್ರವನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಯ ನೇಮಕಾತಿ ಕುರಿತು ಮಾರ್ಗಸೂಚಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Download Now