Annabhagya September amount: ಅನ್ನಭಾಗ್ಯ ಯೋಜನೆ ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ! ನಿಮ್ಮ ಖಾತೆಗೆ ಹಣ ಬಂದಿರುವುದನ್ನು ಚೆಕ್ ಮಾಡಿ.

Annabhagya September amount: ಅನ್ನಭಾಗ್ಯ ಯೋಜನಯಡಿ ಸೆಪ್ಟೆಂಬರ್ ತಿಂಗಳ 5 ಕೆಜಿ ಅಕ್ಕಿಯ ಬದಲು ಹಣವನ್ನು ಪಡಿತರ ಚೀಟಿಯ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಆಹಾರ ಇಲಾಖೆಯಿಂದ ಆರಂಭಿಸಲಾಗಿದೆ. ಈ ಕೆಳಗೆ ನೀಡಿರುವ ಆಹಾರ ಇಲಾಖೆಯ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ ಗ್ರಾಹಕರು ನಿಮಗೆ ಎಷ್ಟು ಹಣ ವರ್ಗಾವಣೆ ಅಗಲಿದೆ ಮತ್ತು ಹಣ ಜಮಾ ಮಾಡುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಮಾಹಿತಿಯನ್ನು ನೋಡಬವುದು.

ಅನ್ನಭಾಗ್ಯ ಯೋಜನಯಡಿ ಸೆಪ್ಟೆಂಬರ್ ತಿಂಗಳ 5 ಕೆಜಿ ಅಕ್ಕಿಯ ಬದಲು ಹಣವನ್ನು(Annabhagya September amount) ಪಡಿತರ ಚೀಟಿಯ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಆಹಾರ ಇಲಾಖೆಯಿಂದ ಆರಂಭಿಸಲಾಗಿದೆ. ಈ ಕೆಳಗೆ ನೀಡಿರುವ

ಆಹಾರ ಇಲಾಖೆಯ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ ಗ್ರಾಹಕರು ನಿಮಗೆ ಎಷ್ಟು ಹಣ ವರ್ಗಾವಣೆ ಅಗಲಿದೆ ಮತ್ತು ಹಣ ಜಮಾ ಮಾಡುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಮಾಹಿತಿಯನ್ನು ತಿಳಿದುಕೊಳ್ಳಬವುದಾಗಿದೆ.

ಸರಕಾರದಿಂದ ಅನ್ನಭಾಗ್ಯ ಯೋಜನೆಯಡಿ ಈ ಹಿಂದೆ 5 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ ಬದಲು ಪ್ರತಿ ಸದಸ್ಯರಿಗೆ 170 ರೂ ರಂತೆ ಅರ್ಥಿಕ ಸಹಾಯಧನವನ್ನು ರೇಷನ್ ಕಾರ್ಡ ಮುಖ್ಯಸ್ಥರ ಖಾತೆಗೆ ನೇರವಾಗಿ DBT ಮೂಲಕ ಹಣ ಜಮಾ ಮಾಡಲಾಗಿತ್ತು, ಇದೇ ಮಾದರಿಯನ್ನು ಅನುಸರಿಸಿ  ಸೆಪ್ಟೆಂಬರ್ ತಿಂಗಳಿನಲ್ಲಿ ನೇರ ನಗದು ವರ್ಗಾವಣೆ-DBT ಮೂಲಕ ಹಣ ವರ್ಗಾವಣೆ ಮಾಡುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ.

ರಾಜ್ಯದ್ಯಂತ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಅಕ್ಕಿ ಮತ್ತು ಇತರೆ ಧಾನ್ಯಗಳ ವಿತರಣೆ ಮಾಡಲಾಗುತ್ತಿದ್ದು ಉಳಿದಂತೆ ಈ ಯೋಜನೆಯಡಿ ಅರ್ಥಿಕ ನೆರವಿನ ಹಣವನ್ನು ಜಿಲ್ಲಾವಾರು ಹಂತ ಹಂತವಾಗಿ ಫಲಾನುಭವಿಗಳ ಬ್ಯಾಂಕ್ ಅಕೌಂಟ್ ಗೆ ಆಹಾರ ಇಲಾಖೆಯಿಂದ ಹಣ ವರ್ಗಾಹಿಸಲಾಗುತ್ತಿದೆ.

ಇದನ್ನೂ ಓದಿ: PM-kisan amount- ಈ ರೀತಿ  ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!

Annabhagya DBT status check- ಅನ್ನಭಾಗ್ಯ ಸೆಪ್ಟೆಂಬರ್ ತಿಂಗಳ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ: 

Step-1: ಪ್ರಥಮದಲ್ಲಿ ನಿಮ್ಮ ಮೊಬೈಲ್ ನಲ್ಲಿ ಈ ಲಿಂಕ್ https://ahara.kar.nic.in/lpg/ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ನಂತರ ನಿಮ್ಮ ಜಿಲ್ಲೆಯ ಹೆಸರಿರುವ ವಿಭಾಗದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ "ನೇರ ನಗದು ವರ್ಗಾವಣೆಯ ಸ್ಥಿತಿ(DBT)" ಬಟನ್ ಮೇಲೆ ಕ್ಲಿಕ್ ಮಾಡಬೇಕು, ತದನಂತರ "select month" ಕಾಲಂ ನಲ್ಲಿ "September" ಎಂದು ಆಯ್ಕೆ ಮಾಡಿಕೊಂಡು ಕೆಳಗಿನ ಕಾಲಂ ನಲ್ಲಿ ನಿಮ್ಮ ರೇಷನ್ ಕಾರ್ಡನ ನಂಬರ್ ಅನ್ನು ಹಾಕಿ ಅಲ್ಲೇ ಕೆಳಗೆ ತೋರಿಸುವ ಕ್ಯಾಪ್ಚಾ ಅನ್ನು ನಮೂದಿಸಿ "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Pre Matric Scholarship- ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ!

Step-3: "Go" ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಅನ್ನಭಾಗ್ಯ ಯೋಜನೆಯಡಿ ಸೆಪ್ಟೆಂಬರ್ ತಿಂಗಳಲ್ಲಿ ಎಷ್ಟು ಹಣ ಜಮಾ ವಿವರ ತೋರಿಸುತ್ತದೆ ಈ ಪುಟದಲ್ಲಿ  ನಿಮ್ಮ ರೇಷನ್ ಕಾರ್ಡನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ? ನಿಮಗೆ ಎಷ್ಟು ಹಣ ಜಮಾ ಅಗುತ್ತದೆ ಎಂದು ತೋರಿಸುತ್ತದೆ. ಮತ್ತು ಈಗಾಗಲೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಅಗಿದ್ದರೆ "Payment Details" ಎಂದು ಕೆಳಗಡೆ ಗೋಚರಿಸುತ್ತದೆ, ಇಲ್ಲಿ ಯಾವ ದಿನ ಹಣ ವರ್ಗಾವಣೆ ಅಗಿದೆ, ಖಾತೆದಾರರ ಹೆಸರು ಮತ್ತು ಬ್ಯಾಂಕ್ ವಿವರ ತೋರಿಸುತ್ತದೆ.

ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಹಂತದಲ್ಲಿ ಇದಲ್ಲಿ "ಪಾವತಿ ಪ್ರಗತಿಯಲ್ಲಿದೆ(Payment in Progress)" ಎಂದು ತೋರಿಸುತ್ತದೆ. ಸ್ವಲ್ಪ ದಿನದ ನಂತರ ನಿಮ್ಮ ಖಾತೆಗೆ ಅರ್ಥಿಕ ನೆರವು ಜಮಾ ಅಗುತ್ತದೆ ಎಂದು.

Annabhagya DBT Status link: Click here

ಗ್ಯಾರಂಟಿ ಯೋಜನೆಗಳ ಅಂಕಣಗಳು:

Gruhalakhsmi-2023: ಅರ್ಜಿ ಸಲ್ಲಿಸಿದರು ಗೃಹಲಕ್ಷ್ಮಿ ಹಣ ಜಮಾ ಅಗದಿರಲು ಕಾರಣವೇನು? ಇವರಿಗೆ ಹಣ ಯಾವಾಗ ಜಮಾ ಅಗಲಿದೆ!

Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

Anna bhagya DBT amount- 1.07 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮಗೆ ಬಂತಾ? ಚೆಕ್ ಮಾಡಿ.

Gruha Lakshmi : ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.

Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

Electricity bill download: ಪ್ರತಿ ತಿಂಗಳ ಕರೆಂಟ್ ಬಿಲ್ ಅನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು! ಇಲ್ಲಿದೆ ವೆಬ್ಸೈಟ್ ಲಿಂಕ್.

ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department