Arecanut Import-2023: ಭೂತಾನ್ ಅಡಿಕೆ ಆಮದು ಆತಂಕ ಬೇಡ ಎಂದ: ಕ್ಯಾಂಪ್ಕೋ

ಕೇಂದ್ರ ಸರಕಾರವು ನಮ್ಮ ದೇಶಕ್ಕೆ ಭೂತಾನ್‌ ನಿಂದ ಹಸಿ ಅಡಿಕೆಯನ್ನು ಆಮದು (Arecanut Import) ಮಾಡಿಕೊಳ್ಳುಲು ಅನುಮತಿ ನೀಡಿರುವುದರಿಂದ ದೇಶೀ ಮಟ್ಟದಲ್ಲಿ ಸ್ಥಳೀಯ ಮಾರುಕಟ್ಟೆಯ ಬೆಲೆಗಳಲ್ಲಿ ಸಂಭಾವ್ಯ ಇಳಿಕೆಯ ಬಗ್ಗೆ ಆತಂಕ ಬೇಡ ಎಂದ: ಕ್ಯಾಂಪ್ಕೋ(Campco) ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಡಿ.

ಕೇಂದ್ರ ಸರಕಾರವು ನಮ್ಮ ದೇಶಕ್ಕೆ ಭೂತಾನ್‌ ನಿಂದ ಹಸಿ ಅಡಿಕೆಯನ್ನು ಆಮದು (Arecanut Import) ಮಾಡಿಕೊಳ್ಳುಲು ಅನುಮತಿ ನೀಡಿರುವುದರಿಂದ ದೇಶೀ ಮಟ್ಟದಲ್ಲಿ ಸ್ಥಳೀಯ ಮಾರುಕಟ್ಟೆಯ ಬೆಲೆಗಳಲ್ಲಿ ಸಂಭಾವ್ಯ ಇಳಿಕೆಯ ಬಗ್ಗೆ  ರೈತರ ಮನದಲ್ಲಿ ಕಳವಳವನ್ನು ಹುಟ್ಟು ಹಾಕಿರಬಹುದು, ಆದರೆ ಈ ಬಗ್ಗೆ ಕಂಗಾಲಾಗುವ ಅಗತ್ಯವಿಲ್ಲ ಎಂದು ಕ್ಯಾಂಪೊ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಒಂದು ವಾರದಿಂದ ರೈತರ ವಾಟ್ಸಾಪ್ ಗುಂಪುಗಳಲ್ಲಿ ಭಾತಾನ್ ನಿಂದ ಅಧಿಕ ಪ್ರಮಾಣದಲ್ಲಿ ಅಡಿಕೆ ಆಮದಿಗೆ ಅನುಮತಿ ಕೊಡಲಾಗಿದೆ ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕಡಿಮೆಯಾಗುತ್ತದೆ ಎಂದು ಅನೇಕ ಸುದ್ದಿಗಳು ಹರಡುತ್ತಿರುವುದರಿಂದ ಅಡಿಕೆ ಬೆಳೆಗಾರರಲ್ಲಿ ಅತಂಕದ ವಾತಾವರಣ ಸೃಷ್ಟಿಯಾಗಿತ್ತು, ಇದಕ್ಕೆ ಪೂರಕವಾಗಿ ನಮ್ಮ ರಾಜ್ಯದ ಅಡಿಕೆ ಖರೀದಿ ಮಾಡುವ ಸಹಕಾರಿ ಸಂಸ್ಥೆಯ ಕ್ಯಾಂಪ್ಕೋದ(campco) ಅಧ್ಯಕ್ಷ  ಎ. ಕಿಶೋರ್ ಕುಮಾರ್ ಕೊಡ್ಡಿ  ರಾಜ್ಯ ಆಡಿಕೆ ಬೆಳೆಗಾರಾರು ಅತಂಕ ಪಡಬಾರದು ಎಂದು ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಭೂತಾನ್‌ ಹಸಿ ಅಡಿಕೆ:

ಇದನ್ನೂ ಓದಿ: How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

ಈ ಕುರಿತು ಇನ್ನಷ್ಟು ಮಾಹಿತಿ ಹೀಗಿದೆ:

ಭೂತಾನ್‌ ದೇಶದಿಂದ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ ಇದನ್ನು ನಮ್ಮ ದೇಶದ ಒಟ್ಟು ಉತ್ಪಾದನೆಗೆ ಹೋಲಿಸಿದಾಗ ಅತೀ ಕಡಿಮೆ ಇದ್ದು ದೇಶೀಯ ಮಾರುಕಟ್ಟೆ ಅಡಿಕೆ ಧಾರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಸ್ಥಳೀಯ ರೈತರು ಉತ್ಪಾದಿಸುವ ಬಿಳಿ ಅಡಿಕೆ ಬೆಲೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರತಿ ವರ್ಷ ಅಡಿಕೆ ದರ ಹೆಚ್ಚಾದಾಗಲು ಇದೊಂದು ಸುದ್ದಿ ಹರಿದಾಡಲು ಪ್ರಾರಂಭಿಸುತ್ತದೆ. ಇದು ವ್ಯಾಪಾರಸ್ತರ ಆಟವೇ ಹೊರತೂ ಇನ್ನೇನು ಅಲ್ಲ ಅನಿಸುತ್ತದೆ. 

Arecanut Import details: ಅಡಿಕೆ ಅಮದಿನ ಕುರಿತು ಒಂದಿಷ್ಟು ಮಾಹಿತಿ:

1) ಆಮದಿಗೆ  ಅವಕಾಶ ನೀಡಿದ್ದು 17000 ಟನ್ "ಗ್ರೀನ್ (ಹಸಿ) ಅಡಿಕೆಗೆ. ಡ್ರೈ ಅಡಿಕೆಗಲ್ಲ.

2) ರೂ 351 ಮಿನಿಮಂ ದರ, ಆದರೆ ಭೂತಾನಲ್ಲೇ ಒಳ್ಳೆಯ ಅಡಿಕೆಗೆ 400ರೂ ಮಾರುಕಟ್ಟೆ ಇದೆ. ಅದರ ಮೇಲೆ ಆಮದು ಡ್ಯೂಟಿ + ಲೋಕಲ್ ಟ್ಯಾಕ್ಸ್  ಸೇರಿದರೆ ಹೆಚ್ಚುವರಿ ನೂರು ಖಚಿತ. ಅದೂ 17000 ಹಸಿ ಅಂದರೆ ಅಂದಾಜು 2000 ಟನ್ (ಪ್ರಾಯಶಃ ಸಾಗರ ಪ್ರಾಂತ್ಯದ ಬೆಳೆ)

3) ಹಸಿ ಅಡಿಕೆಯ ತೂಕ ಹೆಚ್ಚು, ಸಂಸ್ಕರಣಾ ಘಟಕಕ್ಕೆ ಸಾಗಿಸುವಲ್ಲಿನ ಸಾಗಣಿಕೆ ದರ ಟನ್ನಿಗೆ 15000 ಆಗುತ್ತದೆ,  ಹದಿನೈದು ರೂಪಾಯಿ ನಿಕ್ಕಿ.

4)ಕಸ್ಟಮ್ಸ್ ಚೆಕ್ಕಿಂಗ್ ಇನ್ನಿತರೇ ದಾಟಿ  ರೈತನಿಂದ ಸಂಸ್ಕರಣಾ ಘಟಕ ತಲುಪಲು  15 ದಿನ ಬೇಕೇ ಬೇಕು, ಅಷ್ಟು ದಿನ ಹಸಿ ಅಡಿಕೆ ಉಳಿಯುತ್ತದೆಯೇ ಅನ್ನೋದು ಬೇಸಿಕ್ ಕಾಮನ್ ಪ್ರಶ್ನೆ, ಒಂದೊಮ್ಮೆ ಉಳಿದರೆ ಅದರ ಕ್ವಾಲಿಟಿ ಹೇಗಿರಬಹುದು ಅನ್ನೋದು ಅಡಿಕೆ ಬೆಳೆಗಾರರಿಗೆ ವಿವರಿಸಬೇಕಿಲ್ಲ.

ನಮ್ಮ ಅಡಿಕೆ ಅತ್ಯುತ್ತಮ ಕ್ವಾಲಿಟಿ ಹಸಿ ಅಡಿಕೆಗೆ 6000 (ಕ್ವಿಂಟಲ್) ಇದೆ.  ಕ್ವಾಲಿಟಿ ಇಲ್ಲದ ಅಡಿಕೆಯನ್ನ ಮೈಯೆಲ್ಲಾ ರಿಸ್ಕ್ ತೆಗೆದುಕೊಂಡು ಬರುವ ಮೂರ್ಖರು ವ್ಯಾಪಾರಸ್ತರಲ್ಲ.

ಸುಮ್ಮನೇ ಗಾಳಿಯಲ್ಲಿ ಗುಂಡು ಹೊಡೆದಂತೆ, ಒಂದಷ್ಟು ಸುದ್ದಿ ಮಾಡಿ ರೈತರಲ್ಲಿ ಭಯ ಮೂಡಿಸಿದರೆ ಮಾರ್ಕೆಟಿಗೆ ಜಾಸ್ತಿ ಅಡಿಕೆ ಬರುತ್ತದೆ, ಕಡಿಮೆ ರೇಟಿಗೆ ಖರೀದಿಸಬಹುದು ಅನ್ನೋದು ಒಂದಷ್ಟು ದುರಾಲೋಚನೆಯ ಲೆಕ್ಕಾಚಾರ ಅಷ್ಟೇ.

ಇದನ್ನೂ ಓದಿ: Gruhajoyti Yojana bill: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಶೂನ್ಯ ಬಿಲ್ ವಿತರಣೆ ಪ್ರಾರಂಭ! ನಿಮಗೆ ಯಾವಾಗ ಬರಲಿದೆ ಶೂನ್ಯ ಬಿಲ್?