BBMP job notification- ಬಿ.ಬಿ.ಎಂ.ಪಿಯಿಂದ 11,307 "ಡಿ ಗ್ರೂಪ್ ಪೌರಕಾರ್ಮಿಕರ" ಭರ್ತಿಗೆ ಅರ್ಜಿ ಆಹ್ವಾನ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(BBMP job notification-2024) ಘನತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಗಳ ನಿರ್ವಹಣೆಗಾಗಿ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ನೇರಪಾವತಿಯಡಿ (DPS) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಇದೆ.

BBMP job notification- ಬಿ.ಬಿ.ಎಂ.ಪಿಯಿಂದ 11,307 "ಡಿ ಗ್ರೂಪ್ ಪೌರಕಾರ್ಮಿಕರ" ಭರ್ತಿಗೆ ಅರ್ಜಿ ಆಹ್ವಾನ!
BBMP job notification-2024

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(BBMP job notification-2024) ಘನತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಗಳ ನಿರ್ವಹಣೆಗಾಗಿ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ನೇರಪಾವತಿಯಡಿ (DPS) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಇದೆ.

ಒಟ್ಟು 11,307 ಹುದ್ದೆಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಡಿಯಲ್ಲಿನ ತ್ಯಾಜ್ಯ ನಿರ್ವಹಣೆ ಕಾರ್ಯಗಳಲ್ಲಿ ಹಾಲಿ ನೇರಪಾವತಿ ಅಥವಾ ಕ್ಷೇಮಾಭಿವೃದ್ಧಿ ಅಥವಾ ದಿನಗೂಲಿ (ಪೌರಕಾರ್ಮಿಕರು) ಆಧಾರದ ಮೇಲೆ ಕನಿಷ್ಟ 02 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿರಂತರವಾಗಿ, ಸೇವೆಯನ್ನು ಸಲ್ಲಿಸಿರುವ ಹಾಗೂ ಸದರಿ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ (ಅಂದರೆ ದಿನಾಂಕ: 02.03.2023) ಕಾರ್ಯ ನಿರ್ವಹಿಸುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: Scholarship application- ಕಾರ್ಮಿಕ ಮಂಡಳಿಯಿಂದ ರೂ. 10,000ರವರೆಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

BBMP job application- ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 15.03.2024 ಬೆಳಿಗ್ಗೆ 10:00 ಗಂಟೆಯಿಂದ 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.04.2024 ಸಂಜೆ 5:30 ರವರೆಗೆ (ಸಾರ್ವತ್ರಿಕ ರಜೆಯ ದಿನ ಹೊರತುಪಡಿಸಿ)

Salary- ವೇತನ:
 
17,000/- ರೂ ರಿಂದ 28,950/- ರೂ

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಾಲಿಕೆಯ ಆಯಾ ವಾರ್ಡ್‌ಗೆ ಸಂಬಂಧಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಘನ ತ್ಯಾಜ್ಯರವರಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅದೇ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಘನತ್ಯಾಜ್ಯ)ರವರಿಗೆ ಮಾತ್ರ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಪಾಲಿಕೆ ವೆಬ್‌ ಸೈಟ್ www.bbmp.gov.in ನಲ್ಲಿ ವಿವರ ಪಡೆಯಬಹುದಾಗಿದೆ.

ಇದನ್ನೂ ಓದಿ: Free sewing machine training- ಮಹಿಳೆಯರಿಗೆ 30 ದಿನ ಉಚಿತ ಹೊಲಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ!

Application form Download link- ಅರ್ಜಿ ನಮೂನೆ ಡೌನ್ಲೋಡ್ ಮಾಡುವ ವಿಧಾನ:

ಆಸಕ್ತ ಅರ್ಹ ಅರ್ಜಿದಾರರು Application form ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(BBMP) ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: School admission- ಉಚಿತವಾಗಿ  12 ಸಾವಿರ ಸೀಟ್ ಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

How can apply for this job- ಯಾರೆಲ್ಲ ಅರ್ಜಿ ಸಲ್ಲಿಸಬಹುದು?

1) ಭಾರತೀಯ ನಾಗರೀಕನಾಗಿರತಕ್ಕದ್ದು.

2) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇರಪಾವತಿಯಡಿ (DPS) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಭರ್ತಿಗಾಗಿ ಸೃಜಿಸಿರುವ 11,307 ಸಂಖ್ಯಾತಿರಿಕ್ತ (Supernumerary posts) ಹುದ್ದೆಗಳನ್ನು ಸರ್ಕಾರದ ಆದೇಶ ಜಾರಿಗೆ ಬಂದ ದಿನಾಂಕದಿಂದ (ಅಂದರೆ 02-03-2023 ರಿಂದ) ಗರಿಷ್ಠ ವಯೋಮಿತಿ 55 ವರ್ಷಗಳು ಮೀರತಕ್ಕದ್ದಲ್ಲ.

3) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹಾಲಿ ನೇರಪಾವತಿ/ ಕ್ಷೇಮಾಭಿವೃದ್ಧಿ/ದಿನಗೂಲಿ ಆಧಾರದಲ್ಲಿ ಎರಡು ವರ್ಷಗಳು ಕಡಿಮೆ ಇಲ್ಲದಂತೆ, ನಿರಂತರವಾಗಿ, ಕೆಲಸ ನಿರ್ವಹಿಸಿರುವ ಹಾಗೂ ಎರಡು ವರ್ಷಗಳಿಗೂ ಮೇಲ್ಪಟ್ಟು ಪಾಲಿಕೆಯಿಂದ ವೇತನ ಪಡೆದ ದಾಖಲಾತಿಗಳನ್ನು ನೇಮಕಾತಿಗೆ ಆದ್ಯತೆ ನೀಡಲಾಗುವುದು.

4) ದೈಹಿಕ ದೃಢತೆ ಇರತಕ್ಕದ್ದು (ಸರ್ಕಾರಿ ಆಸ್ಪತ್ರೆಯ ಸಕ್ಷಮ ಪ್ರಾಧಿಕಾರದಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆಯತಕ್ಕದ್ದು) (ವಿಕಲ ಚೇತನರಿಗೆ (PH) ಹೊರತುಪಡಿಸಿ).

5) ಕನ್ನಡ ಭಾಷೆ ಮಾತನಾಡಲು ತಿಳಿದಿರಬೇಕು.

6) ಈ ಹುದ್ದೆಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿರುವುದಿಲ್ಲ.

ಇದನ್ನೂ ಓದಿ: Agriculture university courses- ಕೃಷಿ ವಿಶ್ವವಿದ್ಯಾನಿಲಯ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ!

ನೇಮಕಾತಿ ವಿಧಾನ:-

1) ನೇಮಕಾತಿಗೆ ಅರ್ಹರಾಗುವ ಅಭ್ಯರ್ಥಿಗಳ ಅರ್ಹತೆಗೆ ಅನುಗುಣವಾಗಿ ಅಂದರೆ ನೇರಪಾವತಿ / ಕ್ಷೇಮಾಭಿವೃದ್ಧಿ / ದಿನಗೂಲಿ ಆಧಾರದ ಮೇಲೆ ಸಲ್ಲಿಸಿದ ಸೇವಾವಧಿಯನ್ನು ಪರಿಗಣಿಸಿ ಚಾಲ್ತಿಯಲ್ಲಿರುವ ಮೀಸಲಾತಿ ನೀತಿಗೊಳಪಟ್ಟು ಅರ್ಹತೆ ಪಟ್ಟಿಯನ್ನು ತಯಾರಿಸಲಾಗುವುದು.

2) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳ ಸೇವಾ ಅವಧಿ ಒಂದೇ ಇದ್ದ ಪಕ್ಷದಲ್ಲಿ, ಅಂತಹ ಅಭ್ಯರ್ಥಿಗಳ ಜೇಷ್ಠತೆಯನ್ನು ಅವರ ವಯಸ್ಸಿಗೆ ಅನುಗುಣವಾಗಿ ಅಂದರೆ ಹೆಚ್ಚು ವಯಸ್ಕರನ್ನು ಕಡಿಮೆ ವಯಸ್ಕರಿಗಿಂತ ಮೇಲೆ ಪರಿಗಣಿಸಬೇಕು ಹಾಗೂ ಹುಟ್ಟಿದ ದಿನಾಂಕ ಹಾಗೂ ಸೇವಾ ಅವಧಿ ಒಂದೇ ಆಗಿದ್ದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು.

3) ಸಮತಳ ಮೀಸಲಾತಿಯಡಿ ಕನ್ನಡ ಮಾಧ್ಯಮ, ಗ್ರಾಮೀಣ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆಂದು ಮೀಸಲಾದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ, ಉಳಿದ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

4) ಅರ್ಹ ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

ಇದನ್ನೂ ಓದಿ: Revenue Department- ಕಂದಾಯ ಇಲಾಖೆಗೆ ಡಿಜಿಟಲ್ ಸ್ಪರ್ಶ! ಏನಿದು ನೂತನ ಮಾದರಿ? ಇಲ್ಲಿದೆ ಸಂಪೂರ್ಣ ವಿವರ.

5) ನೇರಪಾವತಿಯಡಿ (DPS) ಎರಡು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಿ ಪರಿಗಣಿಸಲಾಗುವುದು.

6) ಮೇಲಿನ ಮಾನದಂಡಗಳನ್ವಯ ಅರ್ಹ ಅಭ್ಯರ್ಥಿಗಳ ಮುಖ್ಯ ಪಟ್ಟಿಯನ್ನು ತಯಾರಿಸಲಾಗುವುದು.

7) ಅರ್ಹ ಅಭ್ಯರ್ಥಿಗಳ ಅಂತಿಮ ಮುಖ್ಯ ಪಟ್ಟಿಯನ್ನು ಪಾಲಿಕೆಯ ಮುಖ್ಯ ಆಯುಕ್ತರ ಕಛೇರಿಯ ಸೂಚನಾ ಫಲಕದಲ್ಲಿ, ಎಲ್ಲಾ ವಲಯ ಕಛೇರಿಗಳಲ್ಲಿ ಹಾಗೂ ಪಾಲಿಕೆಯ ಜಾಲತಾಣದಲ್ಲಿ (WEBSITE) ಪ್ರಕಟಿಸಲಾಗುವುದು.

8) ಆಯ್ಕೆಯಾಗಿರುವ ಅಭ್ಯರ್ಥಿಗೆ ನಿಗಧಿತ ಅವಧಿಯೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದಲ್ಲಿ ಸದರಿ ಅಭ್ಯರ್ಥಿಗೆ ಬದಲಾಗಿ ಅದೇ ಪ್ರವರ್ಗದ ಮೀಸಲಾತಿಯ ಹೆಚ್ಚುವರಿ ಪಟ್ಟಿಯಲ್ಲಿರುವ ಮತ್ತೊಬ್ಬ ಅಭ್ಯರ್ಥಿಯನ್ನು ನೇಮಕಾತಿಗಾಗಿ ಪರಿಗಣಿಸಲು ಕ್ರಮವಹಿಸಲಾಗುವುದು.

ಈ ಹುದ್ದೆಗೆ ಸಂಬಂಧಿಸಿದ ಪ್ರಮುಖ ಉಪಯುಕ್ತ ಲಿಂಕ್ ಗಳು:

ಅಧಿಕೃತ ಅಧಿಸೂಚನೆ: Download Now
ಅರ್ಜಿ ನಮೂನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Download Now