BPL card Application- ಹೊಸ ಬಿ.ಪಿ.ಎಲ್ ಕಾರ್ಡ ಪಡೆಯಲು ಅರ್ಜಿ ಆಹ್ವಾನ!

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸಾರ್ವಜನಿಕರಿಗೆ ಹೊಸ ಬಿ.ಪಿ. ಎಲ್ ಕಾರ್ಡ(BPL Ration card) ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

BPL card Application- ಹೊಸ ಬಿ.ಪಿ.ಎಲ್ ಕಾರ್ಡ ಪಡೆಯಲು ಅರ್ಜಿ ಆಹ್ವಾನ!
BPL card Application

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸಾರ್ವಜನಿಕರಿಗೆ ಹೊಸ ಬಿ.ಪಿ. ಎಲ್ ಕಾರ್ಡ(BPL Ration card) ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಹತಾ ಮಾನದಂಡಗಳೇನು? ಯಾವ ದಿನ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

BPL card eligibility- ಬಿ.ಪಿ.ಎಲ್ ರೇಶನ್ ಕಾರ್ಡ ಪಡೆಯಲು ಅರ್ಹತಾ ಮಾನದಂಡಗಳೇನು? 

1) ಅರ್ಜಿದಾರರ ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು.

2) 7.5 ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿರಬಾರದು.

3) ಅರ್ಜಿದಾರರು ವೈಟ್ ಬೋರ್ಡ್ ಕಾರು ಅನ್ನು ಹೊಂದಿರಬಾರದು.

4) ಯಾವುದೇ ರಾಜ್ಯ ಮತ್ತು ಕೇಂದ್ರ ಸರಕಾರದ ನೌಕರ ಅಗಿರಬಾರದು.

5) ನಗರ ಪ್ರದೇಶ ವ್ಯಾಪ್ತಿಯಲ್ಲಿ ಮನೆಯ ವಿಸ್ತೀರ್ಣ 1000 sq.ft ಮೀರಬಾರದು.

6) ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT Returns ಪಾವತಿದಾರ ಆಗಿರಬಾರದು.

ಇದನ್ನೂ ಓದಿ: Copra msp price- ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಪುನಃ ನೋಂದಣಿಗೆ ಅವಕಾಶ! ಎಷ್ಟು ದಿನ ಅವಕಾಶ ನೀಡಲಾಗಿದೆ?

BPL card application date- ಯಾವ  ದಿನ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ?

ಹೊಸ ಬಿಪಿಎಲ್ ಕಾರ್ಡ ಪಡೆಯಲು ಅರ್ಹ ನಾಗರಿಕರಿಗೆ ಅರ್ಜಿ ಸಲ್ಲಿಸಲು ದಿನಾಂಕ: 09 ಮಾರ್ಚ 2024 ರಂದು ಸಮಯ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

BPL card online application- ಎಲ್ಲಿ ಅರ್ಜಿ ಸಲ್ಲಿಸಬೇಕು? 

ನಾಗರಿಕರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ ನಿಗದಿಪಡಿಸಿದ ಸಮಯದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Scholarship application- ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

Required Documents for BPL card- ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ 
  • ಮನೆ ಯಾಜಮನಿಯ ಆದಾಯ ಪ್ರಮಾಣ ಪತ್ರ (ಆದಾಯ ಮಿತಿ 120000/-)
  • ಎಲ್ಲರ ಆಧಾರ್ ಲಿಂಕ್ ಇರುವ ಮೋಬೈಲ್ ಫೋನ್ ಗಳು
  • ಎಲ್ಲಾ ಕುಟುಂಬಸ್ಥರು ಖುದ್ದು ಹಾಜರಿರಬೇಕಾಗುತ್ತದೆ.
  • ಮನೆಯ ಕರೆಂಟ್ ಬಿಲ್ ಮತ್ತೂ ಕಂದಾಯ ರಶೀದಿ (ಬಾಡಿಗೆ ಮನೆ ಆಗಿದ್ದಲ್ಲಿ ಮನೆ ಬಾಡಿಗೆ ಕರಾರು ಮತ್ತೂ ಕರೆಂಟ್ ಬಿಲ್)

ರೇಶನ್ ಕಾರ್ಡ ತಿದ್ದುಪಡಿಗೂ ಅವಕಾಶ:

ಹೊಸ ರೇಶನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸುವುದರ ಜೊತೆಗೆ ರೇಶನ್ ಕಾರ್ಡ ತಿದ್ದುಪಡಿಗೂ ಅವಕಾಶ ನೀಡಲಾಗಿದ್ದು ದಿನಾಂಕ: 09 ಮಾರ್ಚ 2024 ರಂದು ಸಮಯ 2-00 ರಿಂದ 4-00 ಗಂಟೆಯವರೆಗೆ ತಿದ್ದುಪಡಿ ಮಾಡಿಕೊಳ್ಳಲು ಅವಶ್ಯವಿದವರು ಅರ್ಜಿ ಸಲ್ಲಿಸಬಹುದು.

ಆಹಾರ ಇಲಾಖೆಯಿಂದ ರೇಶನ್ ಕಾರ್ಡ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಈ ಬಾರಿಯೇ ಕೊನೆಯಾಗಿರುವುದಿಲ್ಲ ಇದಲ್ಲದೇ ಮುಂದಿನ ದಿನಗಳಲ್ಲಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಸಧ್ಯ ಮಾಹಿತಿ ತಿಳಿದವರು ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬವುದು ತಡವಾಗಿ ಮಾಹಿತಿ ಪಡೆದವರು ಮುಂದಿನ ದಿನಗಳಲ್ಲಿ ಮತ್ತೆ ಅವಕಾಶ ನೀಡಿದಾಗ ಅರ್ಜಿ ಸಲ್ಲಿಸಬಹುದಾಗಿದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ಸೈಟ್ ಭೇಟಿ ಮಾಡಲು: Click here