BPL ration card: ಬಿ.ಪಿ. ಎಲ್ ರೇಷನ್ ಕಾರ್ಡದಾರರಿಗೆ ಮತ್ತೊಂದು ಶಾಕ್ ನೀಡಿದ ಆಹಾರ ಇಲಾಖೆ!

BPL ration card: ರಾಜ್ಯ ಸರಕಾರದಿಂದ ಬಿ.ಪಿ.ಎಲ್ ಕಾರ್ಡ ಪಡೆಯಲು ಇರುವ ಮಾನದಂಡಗಳನ್ನು ಕಟ್ಟು ನಿಟ್ಟಗಾಗಿ ಪಾಲಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದರ ಪರಿಣಾಮದಿಂದಾಗಿ ಇನ್ನು ಒಂದು ತಿಂಗಳ ಒಳಗಾಗಿ ರಾಜ್ಯದಲ್ಲಿ 5 ಲಕ್ಷ ರೇಶನ್ ಕಾರ್ಡಗಳು ರದ್ದಾಗಲಿವೆ. 

ರಾಜ್ಯ ಸರಕಾರದಿಂದ ನೂತನವಾಗಿ ಜಾರಿಯಾಗಿರುವ ಬಹುತೇಕ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ ಕಡ್ಡಾಯವಾಗಿರುತ್ತದೆ ಇದರ ಜೊತೆಗೆ ಈ ಯೋಜನೆಗಳನ್ನು ಹೊರತುಪಡಿಸಿ ಇತರೆ ಅನೇಕ ಸರಕಾರಿ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಲು ಫಲಾನುಭವಿಗಳು ಪಡಿತರ ಚೀಟಿಯನ್ನು(ration card) ಸಲ್ಲಿಸಬೇಕಾಗಿರುತ್ತದೆ.

ಅದರೆ ಈಗ ರಾಜ್ಯ ಸರಕಾರದಿಂದ ಬಿ.ಪಿ.ಎಲ್ ಕಾರ್ಡ ಪಡೆಯಲು ಇರುವ ಮಾನದಂಡಗಳನ್ನು ಕಟ್ಟು ನಿಟ್ಟಗಾಗಿ ಪಾಲಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದರ ಪರಿಣಾಮದಿಂದಾಗಿ ಇನ್ನು ಒಂದು ತಿಂಗಳ ಒಳಗಾಗಿ ರಾಜ್ಯದಲ್ಲಿ 5 ಲಕ್ಷ ರೇಶನ್ ಕಾರ್ಡಗಳು ರದ್ದಾಗಲಿವೆ. 

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಕಳೆದ ಒಂದು ತಿಂಗಳಿನಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಬಿ.ಪಿ. ಎಲ್ ಮತ್ತು ಎ.ಪಿ. ಎಲ್ ರೇಷನ್ ಕಾರ್ಡದಾರರ ಸಂಪೂರ್ಣ ಮಾಹಿತಿಯನ್ನು ಪರಿಶೀಲನೆ ನಡೆಸುತ್ತಿದ್ದು ಇನ್ನು ಒಂದೆರಡು ವಾರದಲ್ಲಿ ಸರಿಸುಮಾರು 5 ಲಕ್ಷ ರೇಷನ್ ಕಾರ್ಡ ರದ್ದು ಮಾಡುವ ಕ್ರಮವನ್ನು ಕೈಗೂಳ್ಳುವ ಸಾಧ್ಯತೆ ಇರುತ್ತದೆ.

ಮುಖ್ಯವಾಗಿ ರೇಷನ್ ಕಾರ್ಡದಾರರು ಸತತ ಕಳೆದ ಮೂರು(3) ತಿಂಗಳು ರೇಷನ್ ಪಡೆಯದೇ ಇದ್ದರೆ ಅಂತವರ ಕಾರ್ಡ ಅನ್ನು  ನಿಷ್ಕ್ರಿಯಗೊಳಿಸಲಿದೆ ಅದರೆ ಈ ನಿಷ್ಕ್ರಿಯವಾದ ಕಾರ್ಡಗಳಿಂದ ರೇಷನ್ ಪಡೆಯಲು  ಮಾತ್ರ ಸಾದ್ಯವಾಗುವುದಿಲ್ಲ ಇತರೆ ಸೌಲಭ್ಯ ಪಡೆಯಲು ಈ ಕಾರ್ಡಗಳನ್ನು ಬಳಕೆ ಮಾಡಿಕೊಳ್ಳಬವುದು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಆರೋಗ್ಯ ಸಂಬಂಧಿತ ಚಿಕಿತ್ಸೆ ಪಡೆಯಲು ರೇಷನ್ ಕಾರ್ಡ ಮುಖ್ಯವಾಗಿ ಬೇಕಾಗುತ್ತದೆ ಅಂತಹ ಸನ್ನಿವೇಶಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ದೇಸೆಯಲ್ಲಿ ರೇಷನ್ ಕಾರ್ಡ ರದ್ದಾದರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅರ್ಥಿಕ ನೆರವು ಪಡೆಯಲು ಈ ಕಾರ್ಡಗಳನ್ನು ಬಳಕೆ ಮಾಡಬವುದು.

ಇದನ್ನೂ ಓದಿ: Ration Card Update- ರೇಷನ್ ಕಾರ್ಡ ತಿದ್ದುಪಡಿ ಕುರಿತು ಸಿಹಿ ಸುದ್ದಿ ನೀಡಿದ ರಾಜ್ಯ ಸರಕಾರ!

ವೈಟ್ ಬೋರ್ಡ ಕಾರ ಇದಲ್ಲಿಯು ಸಹ ರೇಷನ್ ಕಾರ್ಡ ರದ್ದಾಗಲಿದೆ,  ಬಿ.ಪಿ.ಎಲ್ ಪಡಿತರ ಚೀಟಿ ನಿಮ್ಮ ಬಳಿ ಇದ್ದು ನಿವೇನಾದರು ನಿಮ್ಮ ಹೆಸರಿನಲ್ಲಿ ವೈಟ್ ಬೋರ್ಡ ಕಾರ ಅನ್ನು ಖರೀದಿ ಮಾಡಿದ್ದರೆ ನಿಮ್ಮ ರೇಷನ್ ಕಾರ್ಡ ಖಾಯಂ ಆಗಿ ರದ್ದಾಗಲಿದೆ.

ರಾಜ್ಯ ಸರಕಾರದಿಂದ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕೆ ಯಾವುದೇ ಹೊಸ ರೇಷನ್ ಕಾರ್ಡಗೆ ಅರ್ಜಿ ಸ್ವೀಕಾರ ಮಾಡುತ್ತಿಲ್ಲ ಜೊತೆಗೆ ಈಗಾಗಲೇ ಚಾಲ್ತಿಯಲ್ಲಿರುವ ರೇಷನ್ ಕಾರ್ಡದಾರರಿಗೂ ಕಟ್ಟು ನಿಟ್ಟಿನ ಮಾನದಂಡಗಳನ್ನು ಹಾಕಿ ವಿವಿಧ ಹಂತದಲ್ಲಿ ಸಮಗ್ರ ಪರಿಶೀಲನೆ ಮಾಡಿ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಯಲ್ಲೋ ಬೋರ್ಡ್ ಕಾರ್ ಇರುವವರಿಗೆ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ದುಡಿಯು ಉದ್ದೇಶದಿಂದ ಈ ಬೋರ್ಡ ನ ಕಾರನ್ನು ನಾಗರಿಕರು ಖರೀದಿಸಿರುವುದರಿಂದ ಇಂತಹ ಕಾರ್ಡ ಹೊಂದಿರುವವರು ಆತಂಕ ಪಡುವ ಅಗತ್ಯವಿರುವುದಿಲ್ಲ.

ತಪ್ಪದೇ ಈ ಕೆಲಸ ಮಾಡಿ:

ಬಿ.ಪಿ,ಎಲ್ ಕಾರ್ಡ ಇದ್ದರು ಕಳೆದ ಎರಡು ತಿಂಗಳಲ್ಲಿ ಒಂದು ಭಾರಿಯೂ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಿಂದ ರೇಷನ್ ತರದವರು ಕೂಡಲೇ ಈ ತಿಂಗಳು ತಪ್ಪದೇ ರೇಷನ್ ಅನ್ನು ತೆಗೆದುಕೊಂಡು ಬನ್ನಿ.

ಈ ಕೆಳಗಿನ 6 ಮಾನದಂಡಗಳನ್ನಿಟ್ಟುಕೊಂಡು ಆಹಾರ ಇಲಾಖೆಯಿಂದ ಬಿ.ಪಿ.ಎಲ್ ಕಾರ್ಡದಾರರ ಹೊಂದಿರುವವರ ಸರ್ವೆ ಮಾಡುತ್ತಿದೆ:

1) ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು.
2) 7.5 ಎಕರೆಗಿಂತ ಹೆಚ್ಚಿನ ಭೂಮಿಯನ್ನು ಫಲಾನುಭವಿಯು ಹೊಂದಿರಬಾರದು.
3) ವೈಟ್ ಬೋರ್ಡ ಹೊಂದಿರುವ ಕಾರನ್ನು ಇಟ್ಟುಕೊಂಡಿರಬಾರದು.
4) ಯಾವುದೇ ಸರಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರಬಾರದು.
5) ವಾಣಿಜ್ಯ ತೆರಿಗೆ(Income Tax) ಆದಾಯ ತೆರಿಗೆ IT Returns ಪಾವತಿದಾರ ಅಗಿರಬಾರದು.

ಇಲ್ಲಿಯವರೆಗೆ ರದ್ದಾದ ರೇಷನ್ ಕಾರ್ಡ ಪಟ್ಟಿಯನ್ನು ಪಡೆಯಲು ವೆಬ್ಸೈಟ್ ಲಿಂಕ್:

https://www.krushikamitra.com/ineligible-ration-card-list ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಂಗಳುವಾರು ಗ್ರಾಮ/ಹಳ್ಳಿ ಮಟ್ಟದ ರದ್ದಾದ ರೇಷನ್ ಕಾರ್ಡ ಪಟ್ಟಿಯನ್ನು ಹೇಗೆ ನಿಮ್ಮ ಮೊಬೈಲ್ ನಲ್ಲಿಯೇ ನೋಡಬವುದು ಎಂದು ತಿಳಿಸಲಾಗಿದೆ.

ರೇಷನ್ ಕಾರ್ಡ ಕುರಿತು ಇತರೆ ಅಂಕಣಗಳು: