Grama panchayat: ಗ್ರಾಮ ಪಂಚಾಯಿತಿಯಲ್ಲಿ ಯಾವೆಲ್ಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬವುದು?

Bapuji seva kendra: ಗ್ರಾಮೀಣ ಜನತೆಗೆ ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳು ಬೇಕಾಗುತ್ತವೆ. ಇವುಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಕೇಂದ್ರವೇ 'ಬಾಪೂಜಿ ಸೇವಾ ಕೇಂದ್ರ'.

ಗ್ರಾಮೀಣ ಜನತೆಗೆ ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳು ಬೇಕಾಗುತ್ತವೆ. ಇವುಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಕೇಂದ್ರವೇ 'ಬಾಪೂಜಿ ಸೇವಾ ಕೇಂದ್ರ'.

ಈ ಕೇಂದ್ರದ ಮೂಲಕ ಸಾರ್ವಜನಿಕರು ಗ್ರಾಮ ಪಂಚಾಯತಿ ಮಟ್ಟದಲ್ಲಿಯೆ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬವುದಾಗಿದೆ. ಯಾವೆಲ್ಲ ಯೋಜನೆಯನ್ನು ಪಡೆಯಲು ಅರ್ಜಿ ಸಲ್ಲಿಸಬವುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ, ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ.

ಪಂಚತಂತ್ರ, ನಾಡಕಛೇರಿ ತಂತ್ರಾಂಶ ಹಾಗೂ ಭೂಮಿ ತಂತ್ರಾಂಶಗಳನ್ನು ಸಮ್ಮಿಲನಗೊಳಿಸಿ ಗ್ರಾಮ ಪಂಚಾಯಿತಿಗಳು ಈ ಸೇವೆಯನ್ನು ನೀಡುತ್ತಿವೆ. ಈಗ ನೀಡುತ್ತಿರುವ 19 ಸೇವೆಗಳ ಜೊತೆಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರ ಒಳಗೊಂಡಂತೆ 40 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ. ಇದರಿಂದ ಸಾರ್ವಜನಿಕರು ತಮ್ಮ ದಾಖಲೆಗಳಗಾಗಿ ಕಛೇರಿಯಿಂದ ಕಛೇರಿಗೆ ಅಲೆಯುವುದು ತಪ್ಪುತ್ತದೆ. 'ಬಾಪೂಜಿ ಸೇವಾ ಕೇಂದ್ರ'ದಿಂದ ದೊರೆಯುವ ಸೇವೆಗಳು ಕೆಳಕಂಡಂತೆ ಇವೆ.

ಇದನ್ನೂ ಓದಿ: Solar pumpset subsidy- ಸೋಲಾರ್ ಪಂಪ್ ಸೆಟ್‌ಗೆ ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬವುದು? 

grama panchayat scheme-2023: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 19 ಸೇವೆಗಳು:

1. ಕಟ್ಟಡ ಪರವಾನಗಿ.

2. ತೆರಿಗೆ ನಿರ್ಧರಣಾ ಪಟ್ಟ ವಿತರಣೆ.

3. ಕಟ್ಟಡ ಸ್ವಾಧೀನ ಪತ್ರ.

4. ಹೊಸ ನೀರಿನ ಸಂಪರ್ಕಕ್ಕಾಗಿ ಅರ್ಜಿ.

5. ವ್ಯಾಪಾರಪರವಾನಗಿವಿತರಣಿ (ಹೊಟೇಲ್‌ಮತ್ತುಅಂಗಡಿ).

6. ಕಾರ್ಖಾನೆಗೆ ಅನುಮತಿ ಪತ್ರ.

7. ಜಾಹೀರಾತು ಪರವಾನಗಿ.

8. ನೀರಿನ ಸಂಪರ್ಕಕಡಿತ.

9. ಕುಡಿಯುವ ನೀರಿನ ನಿರ್ವಹಣೆ(ಸಣ್ಣ ರಿಪೇರಿ).

10, ಬೀದಿ ದೀಪಗಳ ನಿರ್ವಹಣೆ.

11. ಗ್ರಾಮನೈರ್ಮಲ್ಯನಿರ್ವಹಣೆ.

13. ESCOMS ನಿರಾಕ್ಷೇಪಣೆ ಪತ್ರ.

14. ಮನರಂಜನಾ ಪರವಾನಗಿ ನೀಡಿಕೆ ( ಹೊಸ/ಹೆಚ್ಚುವರಿ/ಬದಲಾವಣೆ)

15.ನಮೂನೆ 9/11 A-Form 9/11A

16. ನಮೂನೆ 9/11 B-Form 9/11B

17. ರಸ್ತೆ ಅಗೆಯುವುದಕ್ಕಾಗಿ ಅನುಮತಿ.

18. ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿಯನ್ನು ಒದಗಿಸುವುದು (ಎಂ.ಜಿ.ಎನ್.ಆರ್.ಇ.ಜಿ.ಎಸ್)

19. ಅಕುಶಲ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವುದು (ಎಂ.ಜಿ.ಎನ್.ಆರ್.ಇ.ಜಿ.ಎಸ್)

ಇದನ್ನೂ ಓದಿ: Cyber fraud- ಈ ಕೆಲಸ ಮಾಡದಿದ್ದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿರುವ ಹಣ ಕಳೆದುಕೊಳ್ಳುತ್ತೀರಿ!

ಕಂದಾಯ ಇಲಾಖೆಯ ಸೇವೆಗಳು:

1. ಜನಸಂಖ್ಯೆ ದೃಢೀಕರಣ ಪತ್ರ.

2. ಜಾತಿ ಮತ್ತು ಆದಾಯ ದೃಢೀಕರಣ ಪತ್ರ.

3. ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-1).

4. ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ).

5. ಇತರೆ ಹಿಂದುಳದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ).

6. ವಾಸಸ್ಥಳ ದೃಢೀಕರಣ ಪತ್ರ.

7. ಆದಾಯ ದೃಢೀಕರಣ ಪತ್ರ.

8. ಗೇಣಿ ರಹಿತ ದೃಢೀಕರಣ ಪತ್ರ.

9. ವಿಧವಾ ದೃಢೀಕರಣ ಪತ್ರ.

10. ಜೀವಂತ ದೃಢೀಕರಣ ಪತ್ರ.

11. ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ.

12. ಮರು ವಿವಾಹವಾಗದಿರುವ ದೃಢೀಕರಣ ಪತ್ರ.

13. ಜಮೀನು ಇಲ್ಲದಿರುವ ದೃಢೀಕರಣ ಪತ್ರ.

14. ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ.

15. ನಿರುದ್ಯೋಗಿ ದೃಢೀಕರಣ ಪತ್ರ.

16. ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ.

17. ವ್ಯವಸಾಯಗಾರರ ದೃಢೀಕರಣ ಪತ್ರ.

18. ಆರೋಗ್ಯ ಕರ್ನಾಟಕ ಕಾರ್ಡ್‌.

19. ವಿಕಲಚೇತನರ ಗುರುತಿನ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬವುದು.

20. ಕಟ್ಟಡ ಪರವಾನಗಿ ಅನುಮತಿ/ಲೈಸನ್ಸ್ ಅರ್ಜಿ.

21. ವಾಣಿಜ್ಯ ಪರವಾನಗಿ /ಲೈಸನ್ಸ್

22. ಗ್ರಾಮ ಪಂಚಾಯಿತಿ ವ್ಯಾಪ್ತಿ ಆಸ್ತಿಗಳ ನಿರ್ವಹಣಿ/ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಬವುದು.(ಇ-ಸ್ವತ್ತು)

ಗ್ರಾಮ ಪಂಚಾಯಿತಿಯು ತನ್ನ ವ್ಯಾಪ್ತಿಯಲ್ಲಿ ಬರುವ ನಿವೇಶನ, ಕಟ್ಟಡ ಮತ್ತು ಕೃಷಿಯೇತರ ಭೂಮಿಗಳಿಗೆ ಖಾತೆ ಬದಲಾವಣೆ ಮಾಡಿಕೊಡಲು ಶುಲ್ಕವನ್ನು ವಿಧಿಸಬಹುದಾಗಿದೆ.ಸ್ವತ್ತುಗಳ/ ಆಸ್ತಿಗಳ ಖಾತೆ ಬದಲಾವಣಿಗೆ ಎಲ್ಲಾ ದಾಖಲೆಗಳು ಪಂಚಾಯಿತಿಗೆ ಸಲ್ಲಿಸಬೇಕು.ಶುಲ್ಕಗಳನ್ನು ಪಾವತಿಸಬೇಕು.ನಂತರ ಆನ್ ಲೈನಿನಲ್ಲಿ ಇ-ಸ್ವತ್ತಿನ 

ಮೂಲಕ ನಮೂನೆ-9 ಮತ್ತು ನಮೂನೆ -11 ನ್ನು ಪಡೆಯಬಹುದಾಗಿದೆ. ಗ್ರಾಮ ಪಂಚಾಯಿತಿಯ ಆಸ್ತಿಗಳ ಮೇಲಿನ ಒತ್ತುವರಿಯನ್ನು ತೆರವುಗೊಳಸುವುದು ಮತ್ತು ರಕ್ಷಿಸುವುದು ಪಂಚಾಯಿತಿಯ ಕೆಲಸವಾಗಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿಯು ತನ್ನ ಆಸ್ತಿ ರಿಜಿಸ್ಟರನ್ನು ನಿರ್ವಹಿಸಬೇಕಾಗಿರುತ್ತದೆ.

ಇದನ್ನೂ ಓದಿ: mgnreg yojana- ವೈಯಕ್ತಿಕ ಫಲಾನುಭವಿಗಳಿಗೆ ನರೇಗಾ ನೆರವು ದ್ವಿಗುಣ! ಕಾಮಗಾರಿ ಮಿತಿ 5 ಲಕ್ಷಕ್ಕೆ ಏರಿಕೆ!

Application Status check-ಅರ್ಜಿ ಸ್ಥಿತಿ ತಿಳಿಯುವ ವಿಧಾನ:

ನೀವು ಈ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ ನಂತರ ಇಲ್ಲಿ ಕ್ಲಿಕ್ ಮಾಡಿ> application Status check ಮೇಲೆ ಕ್ಲಿಕ್ ಮಾಡಿ ಬಾಪೂಜಿ ಸೇವಾ ಕೇಂದ್ರದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಅರ್ಜಿಯ ಸ್ವೀಕೃತಿ ಸಂಖ್ಯೆನ್ನು ನಮೂದಿಸಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಬವುದು.

Bapuji seva kendra- ಬಾಪೂಜಿ ಸೇವಾ ಕೇಂದ್ರದ ವೆಬ್ಸೈಟ್ ಲಿಂಕ್: Click here

ಸಹಾಯವಾಣಿ ಸಂಖ್ಯೆ: 080-22032238,080-22032650