Bara Parihara-2023: ರಾಜ್ಯ ಸರಕಾರದಿಂದ ಮೊದಲ ಕಂತಿನ ಬರ ಪರಿಹಾರ! ರೈತರಿಗೆ ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

ರಾಜ್ಯದಲ್ಲಿ ಈ ಬಾರಿ ಉಂಟಾಗಿರುವ ಮುಂಗಾರು ಮಳೆ ಕೊರತೆಯಿಂದ ರೈತರಿಗೆ ತುಂಬಲಾರದ ನಷ್ಟ ಉಂಟಾಗಿರುತ್ತದೆ ಬೀಜ ಗೊಬ್ಬರಕ್ಕೆ ಖರ್ಚು ಮಾಡಿರುವ ಮೊತ್ತವು ಮರಳಿ ಬಂದಿರುವುದಿಲ್ಲ.

ರಾಜ್ಯದಲ್ಲಿ ಈ ಬಾರಿ ಉಂಟಾಗಿರುವ ಮುಂಗಾರು ಮಳೆ ಕೊರತೆಯಿಂದ ರೈತರಿಗೆ ತುಂಬಲಾರದ ನಷ್ಟ ಉಂಟಾಗಿರುತ್ತದೆ ಬೀಜ ಗೊಬ್ಬರಕ್ಕೆ ಖರ್ಚು ಮಾಡಿರುವ ಮೊತ್ತವು ಮರಳಿ ಬಂದಿರುವುದಿಲ್ಲ.

ದೊಡ್ಡ ಮಟ್ಟದ ಪರಿಹಾರದ ನಿರೀಕ್ಷೆಯಲ್ಲಿದ ರೈತರಿಗೆ ರಾಜ್ಯ ಸರಕಾರವು ನಿರಾಸೆ ಮೂಡಿಸಿದೆ ಮೊದಲ ಕಂತಿನಲ್ಲಿ ಬರ ಪರಿಹಾರವನ್ನು ರೈತರಿಗೆ ವರ್ಗಾವಣೆ ಮಾಡಲು ರಾಜ್ಯ ಸರಕಾರ ನಿರ್ಣಯ ಕೈಗೊಂಡಿದ್ದು ಈ ಮೊತ್ತವು ತುಂಬಾ ಕಡಿಮೆ ಇರುವುದರಿಂದ ರೈತರಲ್ಲಿ ನಿರಾಸೆ ಮೂಡಿಸಿದೆ.

ಮೊದಲ ಕಂತಿನ ಹಣ ವರ್ಗಾವಣೆ ಕುರಿತು ಸುದೀರ್ಘ ವಿವರಣೆಯೊಂದಿಗೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬರ ಪರಿಹಾರ ಬಿಡುಗಡೆ ಕುರಿತು ಕೇಂದ್ರ ಸರಕಾರದಕ್ಕೆ ಅನೇಕ ಬಾರಿ ಬರೆದ ಪತ್ರಗಳಿಗೆ ಈವರೆಗೆ ಯಾವುದೇ ಮರುಉತ್ತರ/ಪ್ರತಿಕ್ರಿಯೆ ಮರಳಿ ಬಂದಿರುವುದಿಲ್ಲ.

ಇದನ್ನೂ ಓದಿ: Nigamada Yojane-ಸ್ವಯಂ ಉದ್ಯೋಗ ನೇರಸಾಲ, ಸ್ವಾವಲಂಬಿ ಸಾರಥಿ ಯೋಜನೆ ಸೇರಿ ಇತರೆ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

ಈ ಹಿಂದೆ ರಾಜ್ಯದಿಂದ ಮೂರು ಸಚಿವರನ್ನು ದೆಹಲಿಗೆ ಕೇಂದ್ರ ಸರಕಾರದ ಸಚಿವರೊಂದಿಗೆ ಪರಿಹಾರ ಬಿಡುಗಡೆ ಕುರಿತು ಚರ್ಚೆಗೆ ಕಳುಹಿಸಿದರು ಸಕಾರಾತ್ಮಕ ಫಲಿತಾಂಶ ಸಿಕ್ಕಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಈ ಕುರಿತು ಇನ್ನು ಹೆಚ್ಚುವರಿ ಮಾಹಿತಿ ತಿಳಿಸಿರುವ ಅವರು ಕೇಂದ್ರ ಸರಕಾರವು ರಾಜ್ಯದ ರೈತರಿಗೆ ಬರ ಪರಿಹಾರ ಹಣ ವರ್ಗಾವಣೆ ಕುರಿತು ಇನ್ನೂ ಸಹ ಪ್ರಾಥಮಿಕ ಸಭೆಯನ್ನೆ ನಡೆಸದಿರುವ ಹಿನ್ನೆಲೆಯಲ್ಲಿ.

ರಾಜ್ಯ ಸರಕಾರದಿಂದ ರೈತರಿಗೆ ತುರ್ತು ಅರ್ಥಿಕವಾಗಿ ನೆರವು ನೀಡುವ ನಿಟ್ಟಿನಲ್ಲಿ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ ರೂ 2,000 ವರೆಗೆ ಬೆಳೆ ಹಾನಿ ಪರಿಹಾರದ ಹಣವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: PM Kisan Scheme: ನಿಮ್ಮ ಪಿಎಂ ಕಿಸಾನ್ ಯೋಜನೆ ಜಾಲ್ತಿಯಲ್ಲಿ ಇದೆಯೇ Or ರದ್ದಾಗಿದೆಯೇ ಪರೀಕ್ಷಿಸಿಕೊಳ್ಳಿ

Bara parihara-ರೈತರಿಗೆ ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

ಮೊದಲ ಕಂತಿನ ಬರ ಪರಿಹಾರದ ಹಣ ವರ್ಗಾವಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಅರ್ಹ ರೈತರಿಗೆ ಮೊದಲ ಕಂತಿನಲ್ಲಿ ರೂ 2,000 ಹಣ ಸಿಗಲಿದೆ.

ಬರ ಪರಿಹಾರ ಪಡೆಯಲು ರೈತರು ಈ ಐಡಿಯನ್ನು ಹೊಂದಿರುವುದು ಕಡ್ಡಾಯ!

Crop Insurance Amount-460 ಕೋಟಿ ಮಧ್ಯಂತರ ಬೆಳೆ ವಿಮೆ ಪರಿಹಾರ ಬಿಡುಗಡೆ:

ಬರ ಪರಿಹಾರದ ಹಣ ವರ್ಗಾವಣೆ ಮಾಹಿತಿ ಜೊತೆಗೆ ಬೆಳೆ ಮಧ್ಯಂತರ ಬೆಳೆ ವಿಮೆ ಪರಿಹಾರದ ಹಣ ವರ್ಗಾವಣೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು  ಇಲ್ಲಿಯವರೆಗೆ ಬಿತ್ತನೆ ವೈಫಲ್ಯ ಮತ್ತು ಮಳೆ ಕೊರತೆಯಿಂಡ ಉಂಟಾದ ಬೆಳೆ ಹಾನಿಗೆ ಈಗಾಗಲೇ 6.5 ಲಕ್ಷ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ರೂ 460 ಕೋಟಿ  ಮಧ್ಯಂತರ ಬೆಳೆ ವಿಮೆ ಜಮಾ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.

ಬೆಳೆ ವಿಮೆ ಅರ್ಜಿ ಸ್ಥಿತಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Bele vime status

ಜಾನುವಾರುಗಳಿಗೆ ಮೇವಿಗೆ ರೂ 327 ಕೋಟಿ ಬಿಡುಗಡೆ:

ರಾಜ್ಯದ್ಯಂತ ಜಾನುವಾರುಗಳಿಗೆ ಬರ ದಿಂದಾಗಿ ಉಂಟಾಗುವ ಮೇವಿನ ಕೊರತೆಯನ್ನು ನೀಗಿಸಲು ಮೇವಿನ ಬೀಜದ ಕಿಟ್ ಮತ್ತು ಇತರೆ ಕಾರ್ಯಕ್ರಮ ಅನುಷ್ಥಾನಕ್ಕೆ ಎಲ್ಲಾ ಜಿಲ್ಲೆಗಳಿಗೆ ಸೇರಿ ಇಲ್ಲಿಯವರೆಗೆ ರೂ 327 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ!

ಈ ಬಾರಿ ಉಂಟಾದ ಮುಂಗಾರು ಮಳೆ ಕೊರತೆಯಿಂದ ರಾಜ್ಯದ್ಯಂತ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಅಗಿರುತ್ತದೆ ಕೇಂದ್ರದ ತಂಡವು ರಾಜ್ಯದಲ್ಲಿ ಅಧ್ಯಯನ ನಡೆಸಿದ ಬಳಿಕ ರಾಜ್ಯದಿಂದ ಕೇಂದ್ರಕ್ಕೆ ರೂ.4,663 ಕೋಟಿ ಬೆಳೆ ನಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿರುತ್ತದೆ.

ರಾಜ್ಯ ಸರಕಾರವು ಕೇಂದ್ರ ಸರಕಾರದ ಜೊತೆಗೆ ಸಮನ್ವಯ ಸಾಧಿಸಿ  ಅದಷ್ಟು ಶೀಘ್ರವಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ಎರಡು ಪರಿಹಾರದ ಹಣವನ್ನು ಒಗ್ಗೂಡಿಸಿ ಇನ್ನು ಮುಂದಿನ ದಿನಗಳಲ್ಲಿ ಯಾದರು ರೈತರಿಗೆ ಹೆಚ್ಚಿನ ಮೊತ್ತದ ಬರ ಪರಿಹಾರದ ಹಣ ವರ್ಗಾವಣೆ ಮಾಡಿ ರೈತಾಪಿ ವರ್ಗದಲ್ಲಿ ಉಂಟಾಗಿರುವ ಅರ್ಥಿಕ ಸಂಕಷ್ಟಕ್ಕೆ ನೆರವಾಗುವಂತಾಗಲಿ.

ಇದನ್ನೂ ಓದಿ: Ujjwala Yojana-2023: ಉಜ್ವಲ ಯೋಜನೆಯಡಿ ಗ್ಯಾಸ್ ಸಬ್ಸಿಡಿ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!