Bengalore police-ಪೊಲೀಸ್ ಇಲಾಖೆಯ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

Digital Forensic Analyst job: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿನ(Bengalore city police job) ಸೈಬ‌ರ್ ಸೆಕ್ಯುರಿಟಿ ಅನಾಲಿಸ್ಟ್ - 08 ಹುದ್ದೆಗಳು ಹಾಗೂ ಡಿಜಿಟಲ್ ಫಾರೆನ್ಸಿಕ್ ಅನಾಲಿಸ್ಟ್ - 08 ಹುದ್ದೆಗಳು ಹೀಗೆ 16 ತಾಂತ್ರಿಕ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ (Contract Basis) ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿನ(Bengalore city police job) ಸೈಬ‌ರ್ ಸೆಕ್ಯುರಿಟಿ ಅನಾಲಿಸ್ಟ್ - 08 ಹುದ್ದೆಗಳು ಹಾಗೂ ಡಿಜಿಟಲ್ ಫಾರೆನ್ಸಿಕ್ ಅನಾಲಿಸ್ಟ್ - 08 ಹುದ್ದೆಗಳು ಹೀಗೆ 16 ತಾಂತ್ರಿಕ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ (Contract Basis) ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರು ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನ ದಿನೇ ಏರಿಕೆ ಆಗುತ್ತಿರುವುದುರಿಂದ ಹಾಗೂ ಸಾರ್ವಜನಿಕರನ್ನು ಅರ್ಥಿಕವಾಗಿ, ಸಾಮಾಜಿಕವಾಗಿ ಕಾನೂನಿನನ್ವಯ ಸಬಲಗೊಳಿಸಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿ ಹೊಸದಾಗಿ ಸೃಜಿಸಲಾದ 08 ಸಿ.ಇ.ಎನ್ ಪೊಲೀಸ್ ಠಾಣೆಗಳನ್ನು ಬಲಪಡಿಸಲು ಪರಿಣಿತ ತಾಂತ್ರಿಕ ಸಿಬ್ಬಂದಿಗಳನ್ನು ಹೊಂದುವುದು ಅವಶ್ಯಕವಾಗಿರುತ್ತದೆ. 

ಇದನ್ನೂ ಓದಿ: Pension amount-ಮಾಸಿಕ ಪಿಂಚಣಿ ಪಾವತಿ ವಿಧಾನದಲ್ಲಿ ಬದಲಾವಣೆ! ಈ ಫಲಾನುಭವಿಗಳಿಗೆ ಮಾತ್ರ ಸಿಗಲಿದೆ ಈ ತಿಂಗಳ ಪಿಂಚಣಿ ಹಣ!

ಆದ್ದರಿಂದ ಕರ್ನಾಟಕ ಸರ್ಕಾರವು ಜಂಟಿ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ರವರ ಅಧ್ಯಕ್ಷತೆಯಲ್ಲಿ ನೇಮಕಾತಿ ಸಮಿತಿಯನ್ನು ರಚಿಸಿದ್ದು, ಸದರಿ ನೇಮಕಾತಿ ಸಮಿತಿಯ ನಿರ್ಣಯ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಆದೇಶ ಸಂಖ್ಯೆ ಹೆಚ್‌ಡಿ74 ಪಿಓಪಿ 2021 ದಿನಾಂಕ:19/08/2021 ರ ಅನ್ವಯ ಸಿ.ಇ.ಎನ್ ಪೊಲೀಸ್ ಠಾಣೆಗಳಿಗೆ ತಾಂತ್ರಿಕ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡುವ ಸಲುವಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿರುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Bengalore city police job notification-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-01-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-01-2024

ಇದನ್ನೂ ಓದಿ: Yuva nidhi amount-ಯುವನಿಧಿ ಯೋಜನೆಯ ಮೊದಲ ಕಂತಿನ ಹಣ ವರ್ಗಾವಣೆಗೆ ಡೇಟ್ ಫಿಕ್ಸ್!

Bengalore police job application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಪೊಲೀಸ್ ಇಲಾಖೆಯ https://bcp.karnataka.gov.in/notifications/kn ರಲ್ಲಿ ಪ್ರಕಟಿಸಲಾಗಿರುತ್ತದೆ.  ಈ ವೆಬ್‌ಸೈಟ್‌ಗಳ ಮುಖಾಂತರ ವಿವರಗಳನ್ನು ಪಡೆದು ಅರ್ಜಿಗಳನ್ನು ಕಛೇರಿಯ ವಿಳಾಸ ನಂ.01, ಇನ್‌ಫೆಂಟ್ರಿ ರಸ್ತೆ, ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು- 560001 ಅಥವಾ ಇಲಾಖೆಯ ಇ-ಮೇಲ್‌ಗೆ depadminbcp@ksp.gov.in ಸಲ್ಲಿಸಬೇಕು. 

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

1) ಬಯೋಡೇಟ / ರೆಸ್ಕೂಮ್

2) ಒಂದು ಬಿಳಿ ಹಾಳೆಯ ಮೇಲೆ ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವ ಚಿತ್ರವನ್ನು ಅಂಟಿಸಿ ಅದರ ಕೆಳಗೆ ಸಹಿ ಮಾಡಿರುವ ಮೂಲ ಪ್ರತಿ

3) ಎಸ್.ಎಸ್.ಎಲ್.ಸಿ ಅಂಕಪಟ್ಟಿ (ದೃಢೀಕೃತ ಜೆರಾಕ್ಸ್ ಪ್ರತಿ)

4) ವಿದ್ಯಾರ್ಹತೆಯ ಪ್ರಮಾಣ ಪತ್ರ (ದೃಢೀಕೃತ ಜೆರಾಕ್ಸ್ ಪ್ರತಿ)

5) ಆಧಾರ್ ಕಾರ್ಡ್/ ಪಾನ್ ಕಾರ್ಡ್ / ಡ್ರೈವಿಂಗ್ ಲೈಸ್‌ನ್ಸ್ (ದೃಢೀಕೃತ ಜೆರಾಕ್ಸ್ ಪ್ರತಿ)

6) ಕೆಲಸದ ಅನುಭವದ ಪ್ರಮಾಣ ಪತ್ರ

ಇದನ್ನೂ ಓದಿ: Parihara list-2024: ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಬರ ಪರಿಹಾರ! ನಿಮ್ಮ ಹೆಸರಿದಿಯಾ ಚೆಕ್ ಮಾಡಿ.

ಹುದ್ದೆವಾರು ವಿದ್ಯಾರ್ಹತೆ ಮತ್ತು ವೇತನ:

1) Cyber Security Analyst-8

B.E/B.Tech/B.C.A/M.Sc/M.C.A in Information Technology/ Computer Science Electronics Communication/ & Telecommunications and any equivalent or relevant degree

ವೇತನ: 75,000/- ಪ್ರತಿ ತಿಂಗಳಿಗೆ.

2) Digital Forensic Analyst-8

B.E/B.Tech/B.C.A/M.Sc/M.C.A in Information Technology/ Computer Science/ Electronics & Communication/ Telecommunications and any equivalent or relevant degree.

ಇದನ್ನೂ ಓದಿ: free skill training- ಉಚಿತ ಬ್ಯೂಟೀಷಿಯನ್, ಜಿಮ್ ಟ್ರೈನರ್, ವೀಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

ವೇತನ: 50,000/- ಪ್ರತಿ ತಿಂಗಳಿಗೆ.

ಇನ್ನು ಹೆಚ್ಚಿನ ಮಾಹಿತಿಗಾಗಿ:

ಅಧಿಕೃತ ನೇಮಕಾತಿ ಅಧಿಸೂಚನೆ: Download Now