Best life insurance plan-ತೆಂಗಿನ ಮರ ಏರುವ ವೃತ್ತಿಪರ ಕೌಶಲ್ಯದಾರರಿಗೆ ರೂ 5 ಲಕ್ಷದವರೆಗೆ ವಿಮಾ ನೀಡಲು ಅರ್ಜಿ ಆಹ್ವಾನ!

Best life insurance plan: ತೆಂಗಿನ ಮರ ಏರುವ ವೃತ್ತಿಪರ ಕೌಶಲ್ಯದಾರರಿಗೆ ರೂ 5 ಲಕ್ಷದವರೆಗೆ ವಿಮಾ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Best life insurance plan-ತೆಂಗಿನ ಮರ ಏರುವ ವೃತ್ತಿಪರ ಕೌಶಲ್ಯದಾರರಿಗೆ ರೂ 5 ಲಕ್ಷದವರೆಗೆ ವಿಮಾ ನೀಡಲು ಅರ್ಜಿ ಆಹ್ವಾನ!
Best life insurance plan-2024

ತೆಂಗಿನ ಮರ ಏರುವ ವೃತ್ತಿಪರ ಕೌಶಲ್ಯದಾರರಿಗೆ ರೂ 5 ಲಕ್ಷದವರೆಗೆ ವಿಮಾ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಜಿದಾರರು ಈ ಅಂಕಣದಲ್ಲಿ ವಿವರಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಈ ಯೋಜನೆಯಡಿ ಯಾವೆಲ್ಲ ಪ್ರಯೋಜನ ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Horticulture crop parihara amount- ತೋಟಗಾರಿಕ ಬೆಳೆಗಳಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ ನಿಗದಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

Kera Suraksha Insurance Scheme- ಯೋಜನೆಯ ವಿವರ:

ತೆಂಗು ಅಭಿವೃದ್ದಿ ಮಂಡಳಿವತಿಯಿಂದ ವಿಮಾ ಕಂಪನಿ ಸಹಯೋಗದೊಂದಿಗೆ ತೆಂಗಿನ ಮರ ಹತ್ತುವವರು/ ತೆಂಗಿನ ಕಾಯಿ ಕೀಳುವವರು/ ನೀರಾ ತಂತ್ರಜ್ಞರು/ ಕೃಷಿ ಕಾರ್ಮಿಕರು ತೆಂಗಿನ ತೋಟದಲ್ಲಿ ಕೆಲಸ ಮಾಡುವಾಗ ಅಕಸ್ಮಿಕ ಅಪಘಾತಕ್ಕೊಳಗಾಗಿ ಮರಣ ಹೊಂದಿದಲ್ಲಿ/ ಅಂಗವಿಕಲರಾಗಿದ್ದಲ್ಲಿ ವಿವಿಧ ಹಂತದಲ್ಲಿ ವಿಮೆಯನ್ನು ನೀಡಲು "ಕೇರಾ ಸುರಕ್ಷಾ ಯೋಜನೆಯನ್ನು"  ಅನುಷ್ಥಾನ ಮಾಡಲಾಗುತ್ತದೆ.

Application last date- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಫೆಬ್ರವರಿ 2024 

ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ಅರ್ಜಿಯನ್ನು ಪೊಸ್ಟ್ ಮೂಲಕ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಪ್ರಾದೇಶಕ ಕಚೇರಿ: ನಿರ್ದೇಶಕರು, ತೆಂಗು ಅಭೀವೃದ್ದಿ ಮಂಡಳಿ, ಹುಳಿಮಾವು, ಬನ್ನೇರು ಘಟ್ಟ ರಸ್ತೆ, ಬೆಂಗಳೂರು-560076 ದೂರವಾಣಿ ಸಂಖ್ಯೆ: 080-26593750, 808-26593743

ಅಥವಾ ನಿಮ್ಮ ಹತ್ತಿರದ ತೆಂಗು ಬೆಳೆಗಾರರ ಸಂಘದ ಕಚೇರಿಯನ್ನು ಭೇಟಿ ಮಾಡಿಯು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Sheep and Goat farming-ಕುರಿ,ಮೇಕೆ ಸಾಕಾಣಿಕೆಗಾಗಿ 1.75 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ!

Required documents for application-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

1) ಅರ್ಜಿ ನಮೂನೆ.

2) ಅರ್ಜಿದಾರರ ವಯಸ್ಸಿನ ಪುರಾವೆ ಪತ್ರ ನೀಡಬೇಕು. (ಅರ್ಜಿದಾರರ ವಯಸ್ಸು 18- 65 ರ ನಡುವೆ ಇರಬೇಕು).

3) ಆಧಾರ ಕಾರ್ಡ್ ಪ್ರತಿ.

4) ಬ್ಯಾಂಕ್ ಪಾಸ್ ಬುಕ್ ಪ್ರತಿ.

5) ರೈತರ ವಾರ್ಷಿಕ ವಂತಿಗೆ ಪಾವತಿಸಿದ ರಶೀದಿ (ತೆಂಗಿನ ಮರ ಹತ್ತುವವರು/ ತೆಂಗಿನ ಕಾಯಿ ಕೀಳುವವರು/ ನೀರಾ ತಂತ್ರಜ್ಞರು ವಾರ್ಷಿಕ ವಂತಿಗೆ  ರೂ. 94.00 ಅನ್ನು ಪಾವತಿಸಲು ಡಿಡಿ ಮೂಲಕ  Coconut Development Board, payble at Cochin ಪಾವತಿಸಬಹುದು. ಅಥವಾ NEFT/BHIM/Phone pay/ Google Pay/ PayTM/  ಮೂಲಕ State Bank of India, Iyyatti In, Ernakulam Branch (Acc No. 61124170321, IFSC code:SBIN0031449 ಗೆ ಪಾವತಿಸಬೇಕು.

ಇದನ್ನೂ ಓದಿ: Cancelled ration card list-ಫೆಬ್ರವರಿ-2024 ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ಇಲ್ಲಿದೆ ಪಟ್ಟಿ ನೋಡಲು ವೆಬ್ಸೈಟ್ ಲಿಂಕ್.

Insurance premium details- ಅರ್ಜಿ ಶುಲ್ಕದ ವಿವರ:

ರೈತರು ಪಾವತಿ ಮಾಡಬೇಕಾದ ಮೊತ್ತ:  94.00 rs(1 ವರ್ಷದ ಅವಧಿಗೆ) ತೆಂಗು ಅಭಿವೃದ್ದಿ ಮಂಡಳಿಯ ಸಹಾಯಧನ: 281.00 rs , ಒಟ್ಟು ವಿಮಾ ಮೊತ್ತ: 375.00 rs

Insurance benefits details- ವಿಮಾ ಸೌಲಭ್ಯದ ವಿವರ:

ಸೌಲಭ್ಯದ ವಿವರ

ವಿಮೆಯ ಮೊತ್ತ

ಮರಣ ಹೊಂದಿದಲ್ಲಿ

5,00,000.00

ಶಾಶ್ವತ ಅಂಗವಿಕಲತೆ

2,50,00.00

ಆಸ್ಪತ್ರೆ ವೆಚ್ಚದ ಮರುಪಾವತಿ (ಕನಿಷ್ಠ 24 ಗಂಟೆ ಆಸ್ಪತ್ರೆ ದಾಖಲಾಗಿದ್ದಲ್ಲಿ)

1,00,000.00

ಆಂಬುಲೆನ್ಸ್ ವೆಚ್ಚ

3,000.00

ಅಲ್ಪಕಾಲದ ಅಂಗಾಂಗ ಊನತೆ

18,000.00

ಅಂತ್ಯ ಸಂಸ್ಕಾರದ ವೆಚ್ಚ

5,000.00

ಇದನ್ನೂ ಓದಿ: Monsoon update 2024: ಎಲ್ ನಿನೊ ವಾತಾವರಣ ದುರ್ಬಲ ಈ ವರ್ಷ ಉತ್ತಮ ಮುಂಗಾರು ನಿರೀಕ್ಷೆ, ಹವಾಮಾನ ತಜ್ಞರಿಂದ ಮಾಹಿತಿ!

ಉಪಯುಕ್ತ ವೆಬ್ಸೈಟ್ ಲಿಂಕ್ ಗಳು:

ಕೇರಾ ಸುರಕ್ಷಾ ಯೋಜನೆಯ ಸಂಪೂರ್ಣ ಮಾಹಿತಿಗಾಗಿ: click here

ಅರ್ಜಿ ನಮೂನೆ: Download Now

ತೆಂಗು ಅಭಿವೃದ್ದಿ ಮಂಡಳಿ ಅಧಿಕೃತ ಜಾಲತಾಣ: click here