Free CCTV Installation training: ಉಚಿತ ಅಣಬೆ ಬೇಸಾಯ, ಸಿಸಿಟಿವಿ ಕ್ಯಾಮೆರಾ ಇನ್ಸ್ಟಾಲೇಶನ್ ತರಬೇತಿಗೆ ಅರ್ಜಿ ಆಹ್ವಾನ!

rudset trainings: ರುಡ್ ಸೆಟ್ ಸಂಸ್ಥೆ ವಿಜಯಪುರವತಿಯಿಂದ ಉಚಿತ ವಸತಿ-ಊಟ ಸಹಿತ ವಿವಿಧ ಬಗ್ಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿಯಿರುವ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. 

rudset trainings: ರುಡ್ ಸೆಟ್ ಸಂಸ್ಥೆ ವಿಜಯಪುರವತಿಯಿಂದ ಉಚಿತ ವಸತಿ-ಊಟ ಸಹಿತ ವಿವಿಧ ಬಗ್ಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿಯಿರುವ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಈ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಿವಿಧ ಬಗ್ಗೆಯ ತರಬೇತಿ ನೀಡುವುದರ ಜೊತೆಗೆ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಆರಂಭಿಕ ಹಂತದಲ್ಲಿ ಬೇಕಾಗುವ ಬಂಡವಾಳಕ್ಕೆ ಅರ್ಥಿಕವಾಗಿ ನೆರವಾಗಲು ಬ್ಯಾಂಕ್ ಗಳಿಂದ ಹೇಗೆ ಸಾಲ ಪಡೆಯಬವುದು ಎಂದು ಸೂಕ್ತ ಮಾರ್ಗದರ್ಶನವನ್ನು ಸಹ ನೀಡಲಾಗುತ್ತದೆ.

ರುಡ್ ಸೆಟ್ ಸಂಸ್ಥೆ , ವಿಜಯಪುರ (ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ  ತರಬೇತಿ ಸಂಸ್ಥೆ )ಶ್ರೀ ಕ್ಷೇತ್ರ ಧಮ೯ಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಕೆನರಾ ಬ್ಯಾಂಕ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ನಮ್ಮ ಸಂಸ್ಥೆಯಲ್ಲಿ ನವಂಬರ್ ಮತ್ತು ಡಿಸೆಂಬರ್ 2023 ರಲ್ಲಿ ಈ ಕೆಳಗಿನ ತರಬೇತಿಗಳನ್ನು ಆಯೋಜಿಸಲಾಗುತ್ತದೆ ಅದ ಕಾರಣ ಈ ತರಭೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರು ಅರ್ಜಿ ಸಲ್ಲಿಸಲು ಕೋರಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ: Elsol irrigation solution: ಬಿಜಾಪುರದ ಈ ರೈತ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ 20 ಎಕರೆ ದ್ರಾಕ್ಷಿ ತೋಟಕ್ಕೆ ನೀರು ಮತ್ತು ಗೊಬ್ಬರ ಕೊಡುತ್ತಾರೆ!

free training details: ಪ್ರಸ್ತುತ ಯಾವೆಲ್ಲ ತರಬೇತಿಗಳಿವೆ:

1. ಸಿಸಿಟಿವಿ ಕ್ಯಾಮೆರಾ  ಇನ್ಸ್ಟಾಲೇಶನ್-CCTV Installation  (13 ದಿನಗಳ) 
2. ಪಾಸ್ಟ್ ಫುಡ್ ತಯಾರಿಕೆ-fast food (10ದಿನಗಳ)
3.ಅಣಬೆ ಬೇಸಾಯ-mushroom farming (10 ದಿನಗಳ)

ಇದನ್ನು ಹೊರತುಪಡಿಸಿ ಇತರೆ ಕ್ಷೇತ್ರದಲ್ಲಿ ತರಬೇತಿ ಪಡೆಯಲು ಆಸಕ್ತಿಯಿರುವವರು ಸಹ ಸಂಸ್ಥೆಯಲ್ಲಿ ಹೆಸರು ನೊಂದಾವಣೆ ಮಾಡಿಕೊಳ್ಳಬವುದು ಆ ವಿಷಯದ ಕುರಿತು ತರಬೇತಿ ಇರುವಾಗ ಸಂಸ್ಥೆಯವರು ನಿಮ್ಮನ್ನು ಸಂಪರ್ಕಿಸುತ್ತಾರೆ.

ತರಬೇತಿಗೆ ಬರುವ ಆಸಕ್ತರು ಸಂಸ್ಥೆಯ ದೂರವಾಣಿಗೆ ಕರೆ ಮಾಡಿ  ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
    
How can join for free training: ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬವುದು?

1. ಅಭ್ಯಥಿ೯ಯು ಗ್ರಾಮೀಣ ಪ್ರದೇಶವರಾಗಿರಬೇಕು.

2. ವಯೋಮಿತಿ 19 ರಿಂದ 45 ವಯಸ್ಸಿನ ಒಳಗಿರಬೇಕು.

3.ಅಭ್ಯಥಿ೯ಯು ಗ್ರಾಮೀಣ ಭಾಗದ ಬಿಪಿಎಲ್ ಅಥವಾ ಅಂತ್ಯೋದಯ ಅಥವಾ ನರೇಗಾ ಜಾಬ್ ಕಾಡ೯ ಹೊಂದಿರಬೇಕು.
  
ವಿಶೇಷ ಸೂಚನೆ: ತರಬೇತಿಯು ಸಂಪೂಣ೯ ಊಟ ವಸತಿಯೊಂದಿಗೆ ವಸತಿ ಸಹಿತ ಉಚಿತವಾಗಿರುತ್ತದೆ. ಮತ್ತು ತರಬೇತಿಯ ಕೊನೆಯ ದಿನ ಪ್ರಮಾಣ ಪತ್ರ ನೀಡಲಾಗುತ್ತದೆ.

ಇದನ್ನೂ ಓದಿ: Ganga kalyana application last date-ಗಂಗಾ ಕಲ್ಯಾಣ,ಸ್ವಾವಲಂಬಿ ಸಾರಥಿ ಸೇರಿದಂತೆ ಇತರೆ 6 ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

ಅರ್ಜಿ ಸಲ್ಲಿಸಲು ಸಂಪಕಿ೯ಸಬೇಕಾದ ವಿಳಾಸ:

ರುಡ್ ಸೆಟ್ ಸಂಸ್ಥೆ 
ರಾಘವೇಂದ್ರ ಕಾಲೋನಿ
ಬಾಗಲಕೋಟ ಜಮಖಂಡಿ ಬೈಪಾಸ್ ರಸ್ತೆ, ವಿಜಯಪುರ 
ಫೋನ ನಂಬರ-9739511914, 9731065632, 7483987824, 9480078829, 9845490323

Karnataka rudset training centers: ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯು ಇವೆ ಈ ತರಬೇತಿ ಕೇಂದ್ರಗಳು:

ಸ್ವ ಉದ್ಯೋಗ ಶ್ರೇಷ್ಠ ಉದ್ಯೋಗ ಎನ್ನುವ ಗಾಧೆಯಿದೆ ಈ ಕ್ಷೇತ್ರದಲ್ಲಿ ಆಸಕ್ತಿಯಿರುವವರು ನಿಮಗೆ ಕೌಶಲ್ಯವಿರುವ ವಿಭಾಗದಲ್ಲಿ ಈ ಕೇಂದ್ರಗಳ ಮೂಲಕ ಸೂಕ್ತ ತರಬೇತಿಯನ್ನು ಪಡೆದು ಸ್ವ-ಉದ್ಯೋಗವನ್ನು ಪ್ರಾರಂಭಿಸಬವುದು.

ನಮ್ಮ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿಯು ಈ ತರಬೇತಿ ಸಂಸ್ಥೆಗಳಿವೆ ಇಲ್ಲಿ ಕ್ಲಿಕ್ ಮಾಡಿ: Karnataka rudset training center list ನಿಮ್ಮ ಜಿಲ್ಲೆಯಲ್ಲಿ ಎಲ್ಲಿ ಈ ತರಬೇತಿ ಸಂಸ್ಥೆಯಿದೆ ಎಂದು ಮಾಹಿತಿ ತಿಳಿಯಬವುದು.

ಇನ್ನು ಹೆಚ್ಚಿನ ಮಾಹಿತಿ ತಿಳಿಯಲು:
ವೆಬ್ಸೈಟ್ : https://rudsetitraining.org/web/

ಇದನ್ನೂ ಓದಿ: Solar pumpset subsidy- ಸೋಲಾರ್ ಪಂಪ್ ಸೆಟ್‌ಗೆ ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬವುದು?