Indian Coast Guard Recruitment-2024: ನಾವಿಕ ಮತ್ತು ಯಾಂತ್ರಿಕ ಹುದ್ದೆಗಳ ನೇಮಕಾತಿ! PUC ವಿದ್ಯಾರ್ಹತೆ ನಿಗದಿ!

ಭಾರತೀಯ ಕರಾವಳಿ ಪಡೆಯಲ್ಲಿ ಪಿಯುಸಿ ಪಾಸಾದವರಿಗೆ ನಾವಿಕ ಮತ್ತು ಯಾಂತ್ರಿಕ ಹುದ್ದೆಗಳಿಗೆ ನೇಮಕಾತಿ(Indian Coast Guard Recruitment) ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಒಟ್ಟು 300ಕ್ಕೂ ಹೆಚ್ಚು ಹುದ್ದೆಗಳ ಖಾಲಿ ಇದ್ದು ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

Indian Coast Guard Recruitment-2024: ನಾವಿಕ ಮತ್ತು ಯಾಂತ್ರಿಕ ಹುದ್ದೆಗಳ ನೇಮಕಾತಿ! PUC ವಿದ್ಯಾರ್ಹತೆ ನಿಗದಿ!
Indian Coast Guard Recruitment-2024
ಭಾರತೀಯ ಕರಾವಳಿ ಪಡೆಯಲ್ಲಿ ಪಿಯುಸಿ ಪಾಸಾದವರಿಗೆ ನಾವಿಕ ಮತ್ತು ಯಾಂತ್ರಿಕ ಹುದ್ದೆಗಳಿಗೆ ನೇಮಕಾತಿ(Indian Coast Guard Recruitment)ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಒಟ್ಟು 300ಕ್ಕೂ ಹೆಚ್ಚು ಹುದ್ದೆಗಳ ಖಾಲಿ ಇದ್ದು ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ನಾವಿಕ (ಜನರಲ್ ಡ್ಯೂಟಿ) ಮತ್ತು ಯಾಂತ್ರಿಕ ಹುದ್ದೆಗಳಿಗೆ CGEPT (Coast Guard Enrolled Personnel Test) ಪರೀಕ್ಷೆ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ನೇಮಕಾತಿ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ.
ನಾವಿಕ ಮತ್ತು ಯಾಂತ್ರಿಕ ಹುದ್ದೆಗಳನ್ನು ಸೇರಿ ಒಟ್ಟು 320 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ಅರ್ಹತೆಗಳನ್ನು ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.
ನೇಮಕಾತಿಯ ಸಂಕ್ಷಿಪ್ತ ವಿವರ : 
• ನೇಮಕಾತಿ ಸಂಸ್ಥೆ : ಭಾರತೀಯ ಕರಾವಳಿ ಪಡೆ (Indian Coast Guard)
• ನೇಮಕಾತಿ ಹುದ್ದೆಗಳ ಸಂಖ್ಯೆ : 320 ಹುದ್ದೆಗಳು 
• ಹುದ್ದೆಗಳ ಹೆಸರು : ನಾವಿಕ ಮತ್ತು ಯಾಂತ್ರಿಕ 
• ಅರ್ಜಿ ಸಲ್ಲಿಸುವುದು : ಆನ್ಲೈನ್ ಮೂಲಕ 
ಹುದ್ದೆಗಳ ವಿವರ : 
ಭಾರತೀಯ ಕರಾವಳಿ ಪಡೆಯಲ್ಲಿ ಒಟ್ಟು 320 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಹುದ್ದೆಗಳ ವಿವರವು ಈ ಕೆಳಗಿನಂತಿದೆ.
• ನಾವಿಕ ಹುದ್ದೆಗಳು - 260
• ಯಾಂತ್ರಿಕ ಹುದ್ದೆಗಳು - 60
• ಒಟ್ಟು ಹುದ್ದೆಗಳು - 320
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ : 
 • ಕರಾವಳಿ ಪಡೆಯಲ್ಲಿ ಖಾಲಿ ಇರುವ ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ತೆರ್ಗಡೆಯಾಗಿರಬೇಕು. ವಿಜ್ಞಾನ ವಿಷಯದಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಕಡ್ಡಾಯವಾಗಿ ಓದಿರಬೇಕು.
• ಯಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೋಮಾ ಮುಗಿಸಿರಬೇಕು.
ವಯೋಮಿತಿ ಮಾನದಂಡ - Indian Coast Guard Recruitment 2024 
ಕನಿಷ್ಠ 18 ವರ್ಷ ಪೂರೈಸಿದ್ದು ಗರಿಷ್ಠ 22 ವರ್ಷದ ಒಳಗಿರಬೇಕು. ಅಂದರೆ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 2002ರ ಮೇ 1 ರಿಂದ 2007ರ ಫೆಬ್ರುವರಿ 28ರ ಅವಧಿಯಲ್ಲಿ ಜನಿಸಿರಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಸಡಿಲಿಕೆ  ನೀಡಲಾಗುವುದು.
ಆಯ್ಕೆಯ ವಿಧಾನ : Selection Procedure 
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಮುಖಾಂತರ ಅಂತಿಮ ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಜಿ ಶುಲ್ಕ /Application fee :
• SC/ ST ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಿದೆ.
• ಉಳಿದ ವರ್ಗಗಳ ಅಡಿಯಲ್ಲಿ ಬರುವ ಅಭ್ಯರ್ಥಿಗಳು ₹300/- ಆನ್ಲೈನ್ ಮೂಲಕ ಪಾವತಿಸಬೇಕು.
 ನೇಮಕಾತಿಗೆ ಸಂಬಂಧಿಸಿದಂತಹ ಪ್ರಮುಖ ದಿನಾಂಕಗಳು : 
• ಆನ್ಲೈನ್ ಮೂಲಕ ನೊಂದಣಿ ಆರಂಭ ದಿನಾಂಕ : 13 ಜೂನ್ 2024
• ಆನ್ಲೈನ್ ಮೂಲಕ ನೊಂದಣಿ ಕೊನೆಯ ದಿನಾಂಕ : 03 ಜುಲೈ 2024
ಪ್ರಮುಖ ಲಿಂಕ್ ಗಳು : 
• ಆನ್ಲೈನ್ ನೋಂದಣಿ ಡೈರೆಕ್ಟ್ ಲಿಂಕ್ : Click here
• ಅಧಿಸೂಚನೆ : ಡೌನ್ಲೋಡ್