Crop survey details- ಕೃಷಿ ಇಲಾಖೆಯಿಂದ ಸರ್ವೆ ನಂಬರ್ ವಾರು ಬೆಳೆ ಸಮೀಕ್ಷೆ ವಿವರ ಬಿಡುಗಡೆ! ನಿಮ್ಮ ಜಮೀನಿನ ಬೆಳೆ ವಿವರ ಚೆಕ್ ಮಾಡಿ.

September 15, 2023 | Siddesh

ಕೃಷಿ ಇಲಾಖೆಯಿಂದ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ನಡೆಸುತ್ತಿರುವ ಬೆಳೆ ಸಮೀಕ್ಷೆ(Crop survey) ಮಾಹಿತಿಯನ್ನು ರೈತರಿಗೆ ಸರಿಯಾಗಿದಿಯೇ ಅಥವಾ ಇಲ್ಲವೋ ಎಂದು ತಿಳಿದುಕೊಂಡು ಮರು ಸಮೀಕ್ಷೆಗೆ ಅರ್ಜಿ ಸಲ್ಲಿಸಲು ಸರ್ವೆ ನಂಬರ್ ವಾರು ಬೆಳೆ ಮಾಹಿತಿಯ ಪಟ್ಟಿ ಬಿಡುಗಡೆ ಮಾಡಲಾಗಿದೆ.

ರೈತರು ತಮ್ಮ ಮೊಬೈಲ್ ಮೂಲಕ ಈ ಬೆಳೆ ವಿವರವನ್ನು ಹೇಗೆ ಪಡೆಯಬವುದು ಮತ್ತು ನಿಮ್ಮ ಜಮೀನಿನಲ್ಲಿರುವ ಮಾಹಿತಿಗೂ ಬೆಳೆ ಸಮೀಕ್ಷೆ(crop survey mobile app) ಬಳಿಕ ಇಲ್ಲಿ ದಾಖಲಾದ ಮಾಹಿತಿಗೂ ತಾಳೆ ಅಗದಿದ್ದಲ್ಲಿ ಮರು ಸಮೀಕ್ಷೆಗೆ ಯಾವ ವಿಧಾನ ಅನುಸರಿಸಿ ಅರ್ಜಿ ಸಲ್ಲಿಸಬೇಕು ಎಂದು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Bele samikshe-2023: ನಿಮ್ಮ ಸರ್ವೆ ನಂಬರ್ ಹಾಕಿ ಬೆಳೆ ಸಮೀಕ್ಷೆ ವಿವರ ಪಡೆಯುವ ವಿಧಾನ:

ರಾಜ್ಯ ಸರಕಾರದ ಬೆಳೆ ಸಮೀಕ್ಷೆಯ ಈ https://cropsurvey.karnataka.gov.in ಅಧಿಕೃತ ವೆಬ್ಸೈಟ್ ಭೇಟಿ  ಮಾಡಿ ರೈತರು ತಮ್ಮ ಜಮೀನಿನ ಸರ್ವೆ ನಂಬರ್ ಹಾಕಿ ಬೆಳೆ ಸಮೀಕ್ಷೆಯ ಬೆಳೆ ಮಾಹಿತಿಯನ್ನು ಪಡೆದುಕೊಳ್ಳಬವುದು.

Step-1: ಮೊದಲಿಗೆ ಈ ಲಿಂಕ್  ಮೇಲೆ ಕ್ಲಿಕ್ ಮಾಡಿ  https://cropsurvey.karnataka.gov.in/2023/CropSurveyDetails ಬೆಳೆ ಸಮೀಕ್ಷೆ ವೆಬ್ಸೈಟ್ ಭೇಟಿ ಮಾಡಬೇಕು ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಾಕಿ "Get Crop Survey Details" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಈ ರೀತಿ ಹಂತಗಳನ್ನು ಅನುಸರಿಸಿ ನಿಮ್ಮ ಸರ್ವೆ ನಂಬರ್ ಹಾಕಿದ ಬಳಿಕ ಕೆಳಗಡೆ ಹಿಸ್ಸಾ ವಾರು ಜಮೀನಿನ ಸರ್ವೆ ನಂಬರ್, ಮಾಲೀಕನ ಹೆಸರು, ಜಮೀನಿನ ಒಟ್ಟು ವಿಸ್ತೀರ್ಣ, ಜಂಟಿ ಮಾಲೀಕರ ಸಂಖ್ಯೆ ವಿವರ ಗೋಚರಿಸುತ್ತದೆ. ಇದೆ ಪುಟದಲ್ಲಿ ಇರುವ ಮೊದಲ ಕಾಲಂ ನ "Select" ಆಯ್ಕೆಯಲ್ಲಿ ನಿಮ್ಮ ಹೆಸರಿನ ಮುಂದೆ ಟಿಕ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ವಿವರ ಅಂದರೆ ನಿಮ್ಮ ಸರ್ವೆ ನಂಬರ್ ನ ಬೆಳೆ ವಿವರ ಗೋಚರಿಸುತ್ತದೆ.

Step-3: ಕೆಳೆಗಡೆ "Crop Information" ಎಂದು ಗೋಚರಿಸಿ ನಿಮ್ಮ District, Taluk, Hobli, Village, Year, Season, Crop,Survey No, ವಿವರ ತೋರಿಸುತ್ತದೆ ಕೊನೆಯ ಕಾಲಂ ನಲ್ಲಿ ಇರುವ view photo ಮೇಲೆ ಕ್ಲಿಕ್ ಮಾಡಿ ಬೆಳೆಯ ಪೋಟೋ ವನ್ನು ಸಹ ನೋಡಬವುದು.

ಇದನ್ನೂ ಓದಿ: Crop insurance status: ಬೆಳೆ ವಿಮೆ ಕುರಿತು ಈ ರೀತಿ ನಿಮ್ಮ ಮೊಬೈಲ್ ಗೆ ಮೆಸೇಜ್ ಬಂದಿದೆಯೇ? ಹಾಗಾದರೆ ಇದಕ್ಕೆ ಪರಿಹಾರವೇನು?

ಬೆಳೆ ಸಮೀಕ್ಷೆ ವಿವರ ತಪ್ಪಾಗಿದರೆ ಏನು ಮಾಡಬೇಕು?

ಈ ಮೇಲೆ ವಿವರಿಸಿರುವ ವಿಧಾನ ಅನುಸರಿಸಿ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ವಿವರ ಚೆಕ್ ಮಾಡಿದಾಗ ಬೆಳೆ ಮಾಹಿತಿ ತಪ್ಪಾಗಿ ತೋರಿಸಿದರೆ ರೈತರು ಮರು ಸಮೀಕ್ಷೆಗೆ ಅರ್ಜಿ ಸಲ್ಲಿಸಿ ಸರಿಯಾದ ಬೆಳೆ ಮಾಹಿತಿಯನ್ನು ಪಹಣಿಯಲ್ಲಿ ದಾಖಲಿಸಿಕೊಳ್ಳಬೇಕು.

ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ರೈತರು ಮರು ಸಮೀಕ್ಷೆಗೆ ಅರ್ಜಿ ಸಲ್ಲಿಸಬವುದು ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ಈ ಲಿಂಕ್ https://krushikamitra.com ಮೇಲೆ ಕ್ಲಿಕ್ ಮಾಡಿ.

ಬೆಳೆ ಸಮೀಕ್ಷೆ ವಿವರ ತಪ್ಪಾದರೆ ಯಾವೆಲ್ಲ ತೊಂದರೆಗಲಾಗುತ್ತವೆ?

  • ಬೆಳೆ ವಿಮೆ ಅರ್ಜಿ ತಿರಸ್ಕಾರವಾಗುತ್ತದೆ.
  • ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.
  • ಬೆಳೆ ಸಾಲ ಪಡೆಯಲು ಬೆಳೆ ಸಮೀಕ್ಷೆ ಅಗಿರುವುದು/ ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಾಗಿರುವುದು ಕಡ್ಡಾಯವಾಗಿರುತ್ತದೆ.
  • ಬೆಳೆ ಪರಿಹಾರದ ಹಣ ಪಡೆಯಲು ಬೆಳೆ ಸಮೀಕ್ಷೆ ಮಾಹಿತಿ ಸಹಕಾರಿಯಾಗಿದೆ. 
  • ರೈತರು ವಿವಿಧ ಇಲಾಖೆಗಳಿಂದ ಸಹಾಯಧನದಡಿ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಮಾಹಿತಿ ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: Baragala Taluk list-2023: ರಾಜ್ಯ ಸರಕಾರದಿಂದ ಅಧಿಕೃತ ಬರಪೀಡಿತ ತಾಲ್ಲೂಕುಗಳ ಪಟ್ಟಿ ಬಿಡುಗಡೆ!ಇಲ್ಲಿದೆ 195 ತಾಲ್ಲೂಕುಗಳ ಪಟ್ಟಿ.

ಬೆಳೆ ಸಮೀಕ್ಷೆ ನಡೆಸುವ ಪ್ರಕ್ರಿಯೆ ಹೇಗೆ?

ಪ್ರತಿ ವರ್ಷ ಕೃಷಿ ಇಲಾಖೆಯಿಂದ ಮುಂಗಾರು , ಹಿಂಗಾರು ,ಬೇಸಿಗೆ ಹಂಗಾಮಿನಲ್ಲಿ ವರ್ಷಕ್ಕೆ 2-3 ಭಾರಿ ಖಾಸಗಿ ನಿವಾಸಿಗಳಿಂದ(PR) ಪ್ರತಿ ಸರ್ವೆ ನಂಬರ್ ಭೇಟಿ ಮಾಡಿ ಜಿ.ಪಿ.ಎಸ್ ಆಧಾರಿತ ಪೋಟೊ ಸಹಿತ ಬೆಳೆ ಮಾಹಿತಿ ದಾಖಲು ಮಾಡಲಾಗುತ್ತದೆ. ಈ ಖಾಸಗಿ ನಿವಾಸಿಗಳು(PR) ಸಂಗ್ರಹಿಸಿದ ಮಾಹಿತಿಯನ್ನು ಮೆಲ್ವಿಚಾರಕರು ಪರಿಶೀಲನೆ ಮಾಡಿ ಅಂತಿಮವಾಗಿ ಬೆಳೆ ಸಮೀಕ್ಷೆ ಬೆಳೆ ಮಾಹಿತಿ ಅಪ್ರೊವಲ್ ನೀಡುತ್ತಾರೆ.

ಬೆಳೆ ಸಮೀಕ್ಷೆ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ: 8448447715 ವೆಬ್ಸೈಟ್ ಲಿಂಕ್: https://cropsurvey.karnataka.gov.in

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: