Cyber fraud- ಈ ಕೆಲಸ ಮಾಡದಿದ್ದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿರುವ ಹಣ ಕಳೆದುಕೊಳ್ಳುತ್ತೀರಿ!

Cyber safety tips: ನಂಬಲು ಅಸಾಧ್ಯ ಅನಿಸಿದರು ಇದು ಸತ್ಯ! ಸೈಬರ್ ಕಳ್ಳರು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿರುವ ಹಣವನ್ನು ಒಟಿಪಿ ಇಲ್ಲದೆ ದೋಚುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಡಿಜಿಟಲ್ ತಂತ್ರಜ್ಞಾನ ಬಳಕೆ ಹೆಚ್ಚುತಿರುವ ಪ್ರಸ್ತುತ ಸನ್ನಿವೇಶದಲ್ಲಿ ಇದರ ಉಪಯೋಗಗಳ ಜೊತೆಗೆ ದುರುಪಯೋಗವು ಸಹ ನಡೆಯುತ್ತಿದೆ.

Cyber safety tips: ನಂಬಲು ಅಸಾಧ್ಯ ಅನಿಸಿದರು ಇದು ಸತ್ಯ! ಸೈಬರ್ ಕಳ್ಳರು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿರುವ ಹಣವನ್ನು ಒಟಿಪಿ ಇಲ್ಲದೆ ದೋಚುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಡಿಜಿಟಲ್ ತಂತ್ರಜ್ಞಾನ ಬಳಕೆ ಹೆಚ್ಚುತಿರುವ ಪ್ರಸ್ತುತ ಸನ್ನಿವೇಶದಲ್ಲಿ ಇದರ ಉಪಯೋಗಗಳ ಜೊತೆಗೆ ದುರುಪಯೋಗವು ಸಹ ನಡೆಯುತ್ತಿದೆ.

ಇದಕ್ಕೆ ಉದಾಹರಣೆ ಎನ್ನುವಂತೆ ಸೈಬರ್ ಕಳ್ಳರು ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಯಾವುದೇ ಒಟಿಪಿ ನೆರವು ಇಲ್ಲದೇ ಕ್ಷಣಾರ್ಧದಲ್ಲಿ ಆನ್ಲೈನ್ ಮೂಲಕ ಹ್ಯಾಕ್ ಮಾಡಿ ತನ್ನ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಳ್ಳುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಈ ಕುರಿತು ಮಾಹಿತಿ ಹಂಚಿಕೊಂಡುರುವ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ ಬಂಡಾರು, IPS ಬಳ್ಳಾರಿ ಜಿಲ್ಲೆ ಸೈಬರ್ ಪೋಲಿಸ್ ವಿಭಾಗದಿಂದ ಹೇಗೆ ಸೈಬರ್ ಕಳ್ಳರು ಸಾರ್ವಜನಿಕರಿಗೆ ವಂಚನೆ ಮಾಡುತ್ತಾರೆ. ಮತ್ತು ಈ ವಂಚನೆಗಳಿಂದ ಸಾರ್ವಜನಿಕರು ಹೇಗೆ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದರ ವಿವರ ಈ ಕೆಳಗಿನಂತಿದೆ.

ಇತ್ತೀಚಿನ ದಿನಗಳಲ್ಲಿ ನಮಗೆ ಬರುವ Cyber fraud Case ಗಳಲ್ಲಿ ದೂರುದಾರರ ಗಮನಕ್ಕೆ ಬಾರದೇ ಹಣ ಕಳೆದುಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ಕಾರಣ ಆಧಾರ ಕಾರ್ಡ ನೊಂದಾಯಿಸುವಾಗ ನಾವು ನೀಡಿದ Biometrics ( Firnger print), Aadhaar Card data ವನ್ನು ಬಳಸಿಕೊಂಡು AEPS- Aadhaar Enable Payment System ಮೂಲಕ ಈ ಕೆಳಕಂಡ ಸೇವೆಗಳನ್ನು ಪಡೆಯಬಹುದಾಗಿದೆ. 

ಇದನ್ನೂ ಓದಿ: mgnreg yojana- ವೈಯಕ್ತಿಕ ಫಲಾನುಭವಿಗಳಿಗೆ ನರೇಗಾ ನೆರವು ದ್ವಿಗುಣ! ಕಾಮಗಾರಿ ಮಿತಿ 5 ಲಕ್ಷಕ್ಕೆ ಏರಿಕೆ!

adhaar Biometrics ( Firnger print) ಬಳಕೆ ಮಾಡಿ ಪಡೆಯಬವುದಾದ ಸೇವೆಗಳು:

Cash Deposit, Cash Withdrawal, Balance Enquiry, Mini Statement, Fund Transfer, Authentication, Bhim Aadhaar Pay, E-KYC, SIM Purchase. Etc...

ಸೈಬರ್ ವಂಚಕರು/ಹ್ಯಾಕರ್ಸ್ ಗಳು ಒಬ್ಬ ಅಪರಿಚಿತ ವ್ಯಕ್ತಿಯ  Aadhaar Curd ನಲ್ಲಿರುವ Finger print - ಅನ್ನು ಹ್ಯಾಕ್ ಮಾಡುವ ಮೂಲಕ ಯಾವುದೇ OTP ಯ ಸಹಾಯವಿಲ್ಲದೇ ನಮಗೆ ಅರಿವಿಲ್ಲದೇ ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ. 

cyber safety- ಸೈಬರ್ ವಂಚಕರಿಂದ ತಪ್ಪಿಸಿಕೊಳ್ಳುವುದೇಗೆ?

ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣದ ಸುರಕ್ಷತೆ ದೃಷ್ಟಿಯಿಂದ ಮತ್ತು ಇತರೆ ವಿವರಗಳನ್ನು ಸೈಬರ್ ಕಳ್ಳರಿಂದ ರಕ್ಷಿಸಿಕೊಳ್ಳಲು ಪ್ರತಿ ಒಬ್ಬ ನಾಗರಿಕರು https://myaadhaar.uidai.gov.in/lock-unlock-aadhaar ಈ ಲಿಂಕ್ ಬಳಸಿ ಆಧಾರ್ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಹಾಗು ನಿಮ್ಮ ಕುಟುಂಬದವರ Biometric Lock/adhaar lock ಮಾಡುವುದು ಅಥವಾ ಸ್ಥಳೀಯ ಅವಾರ ಸೇವಾ ಕೇಂದ್ರಕ್ಕೆ ತೆರಳಿ ನಿಮ್ಮ ನಿಮ್ಮ ಆಧಾರ ಕಾರ್ಡ ಬಯೋಮೇಟ್ರಿಕ್ ಅನ್ನು ಲಾಕ್ ಮಾಡಿಸಬೇಕು.

ಇದರ ಜೊತೆಗೆ ಸಾಧ್ಯವಾದಷ್ಟು ಫಿಂಗರ್ ಪ್ರಿಂಟ್ ಕೋರುವ ಯಾವುದೇ ಅಪ್ಲಿಕೇಷನ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ಬಳಕೆ ಮಾಡದಿದ್ದರೆ ಸೂಕ್ತ ಎಂದು ಪೋಲಿಸ್ ಇಲಾಖೆಯಿಂದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Fruits ID: ಸರಕಾರದ ಎಲ್ಲಾ ಬಗ್ಗೆಯ ಬೆಳೆ ಪರಿಹಾರ ಪಡೆಯಲು ಈ ವೆಬ್ಸೈಟ್ ನಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರಿಸುವುದು ಕಡ್ಡಾಯ!

adhaar Biometric lock-ಆಧಾರ್ ಕಾರ್ಡ ಬಯೋಮೇಟ್ರಿಕ್ ಲಾಕ್ ಮಾಡುವ ವಿಧಾನ:

ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಅಧಾರ್ ವೆಬ್ಸೈಟ್ ಭೇಟಿ ಮಾಡಿ ಸ್ವಂತ ತಾವೇ ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಆಧಾರ್ ಆಧಾರ್ ಬಯೋಮೇಟ್ರಿಕ್ ಅನ್ನು ಲಾಕ್ ಮಾಡಬವುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ> click here  ಆಧಾರ್ ಕಾರ್ಡ ವೆಬ್ಸೈಟ್ ಭೇಟಿ ಮಾಡಬೇಕು. ನಂತರ ಈ ಪುಟದಲ್ಲಿ ಕಾಣುವ Click Here to Generate VID ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ ನಂಬರ್ ಮತ್ತು ಅಲ್ಲಿರುವ ಕ್ಯಾಪ್ಚರ್ ನಮೂದಿಸಿ Send OTP ಮೇಲೆ ಕಿಕ್ ಮಾಡಿ OTP ಹಾಕಿ 16 ಅಂಕಿಯ Virtual ID ಅನ್ನು ಪಡೆದುಕೊಳ್ಳಬೇಕು.

Step-2: Virtual ID ಅನ್ನು ಪಡೆದ ನಂತರ ಇಲ್ಲಿ ಕ್ಲಿಕ್ ಮಾಡಿ> click here "Next" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ Virtual ID, ಪೂರ್ಣ ಹೆಸರು, ಪಿನ್ ಕೋಡ್ ಮತ್ತು ಕ್ಯಾಪ್ಚರ್ ಕೋಡ ನಮೂದಿಸಿ Send OTP ಬಟನ್ ಮೇಲೆ ಕ್ಲಿಕ್ ಮಾಡಿ OTP ನಮೂದಿಸಿ ನಿಮ್ಮ ಆಧಾರ್ ಕಾರ್ಡ ಬಯೋಮೇಟ್ರಿಕ್  ಸೇವೆಯನ್ನು ಲಾಕ್ ಮಾಡಬೇಕು. ಇದರಿಂದ ನಿಮ್ಮ ಬಯೋಮೇಟ್ರಿಕ್ ಅನ್ನು ಇತರರು ಬಳಕೆ ಮಾಡಿಕೊಳ್ಳು ಸಾಧ್ಯವಾಗುವುದಿಲ್ಲ.

Cyber fraud-ಒಂದೊಮ್ಮೆ ನೀವೆನಾದರೂ ಸೈಬರ್ ವಂಚನೆಗೆ ಒಳಗಾದಲ್ಲಿ ಈ ವಿಧಾನ ಅನುಸರಿಸಿ ಪ್ರಕರಣ ದಾಖಲಿಸಿ:

ಒಂದು ವೇಳೆ ನೀವು AEPS ಮೂಲಕ ವಂಚನೆಗೆ ಒಳಗಾದಲ್ಲಿ ತಕ್ಷಣವೇ 1930 ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿ ತಿಳಿಸಿ ಅಥವಾ ಆನ್ಲೈನ್ ನಲ್ಲಿ ಸೈಬರ್ ಕ್ರೈಮ್ ಪ್ರಕರಣವನ್ನು ದಾಖಲಿಸಲು ಈ ವೆಬ್ಸೈಟ್ ಭೇಟಿ ಮಾಡಿ: https://cybercrime.gov.in 

ಸೈಬರ್ ವಂಚನೆ ಕುರಿತು ಪೋಲಿಸ್ ಇಲಾಖೆಯ ಪ್ರಕಟಣೆ ಪ್ರತಿ:

ಇದನ್ನೂ ಓದಿ: free tailoring machine-ಉಚಿತ ಹೊಲಿಗೆ ಯಂತ್ರ,ಕುಶಲಕರ್ಮಿಗಳು ಉಪಕರಣ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!