Karnataka DBT schemes: ಪಿಂಚಣಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್! ಪ್ರತಿ ತಿಂಗಳು ಈ ದಿನಾಂಕದ ಒಳಗೆ ನಿಮ್ಮ ಖಾತೆಗೆ ಹಣ.

karnataka DBT schemes: ಪಿಂಚಣಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಅರ್ಥಿಕ ಇಲಾಖೆಯು ಗುಡ್ ನ್ಯೂಸ್ ನೀಡಿದೆ ಇನ್ನು ಮುಂದೆ ಪ್ರತಿ ತಿಂಗಳು DBT ಮೂಲಕ ಹಣ ವರ್ಗಾವಣೆ ಮಾಡಲು ನಿರ್ಧಿಷ್ಟ ದಿನಾಂಕ ನಿಗದಿ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಪಿಂಚಣಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಅರ್ಥಿಕ ಇಲಾಖೆಯು ಗುಡ್ ನ್ಯೂಸ್ ನೀಡಿದೆ ಇನ್ನು ಮುಂದೆ ಪ್ರತಿ ತಿಂಗಳು DBT ಮೂಲಕ ಹಣ ವರ್ಗಾವಣೆ ಮಾಡಲು ನಿರ್ಧಿಷ್ಟ ದಿನಾಂಕ ನಿಗದಿ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಈ ಮೊದಲು ಪ್ರತಿ ತಿಂಗಳು ವಿವಿಧ ಬಗ್ಗೆಯ ಪಿಂಚಣಿ ಮತ್ತು ಅನ್ನಭಾಗ್ಯ ಅಕ್ಕಿ ಹಣ , ಗೃಹಲಕ್ಷ್ಮಿ ರೂ 2,000 ಅರ್ಥಿಕ ನೆರವು ಸರಿಯಾದ ಸಮಯಕ್ಕೆ ಫಲಾನುಭವಿಗೆ DBT ಮೂಲಕ ವರ್ಗಾವಣೆ ಮಾಡಲು ಅನುಷ್ಥಾನ ಇಲಾಖೆಗಳಿಂದ ಅಗುತ್ತಿರಲ್ಲಿಲ್ಲ ಈ ಸಮಸ್ಯೆಯನ್ನು ಬಗೆಯರಿಸಲು ಸೂಕ್ತ ಮಾರ್ಗದರ್ಶನ ನೀಡಿ ಈಗ ಅರ್ಥಿಕ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಈ ಆದೇಶದಲ್ಲಿ ಪಿಂಚಣಿ ಯೋಜನೆ ಮತ್ತು ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ಪ್ರತಿ ತಿಂಗಳ ಹಣವನ್ನು DBT ಮೂಲಕ ವರ್ಗಾವಣೆ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ.

ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ನಿಗಧಿತ ಅವಧಿಯೊಳಗೆ ಯೋಜನೆ ಹಣ ಖಾತೆಗೆ ಜಮಾ ಆಗಲಿದೆ.

ಇದನ್ನೂ ಓದಿ: New ration card-  ಆಹಾರ ಇಲಾಖೆಯಿಂದ ಗ್ರಾಹಕರಿಗೆ ಸಿಹಿ ಸುದ್ದಿ!

Annabhagya, gruhalakshmi, pinvhani scheme DBT transfer Date-ಪ್ರತಿ ತಿಂಗಳು ಹಣ ವರ್ಗಾವಣೆಗೆ ನಿಗದಿಪಡಿಸಿದ ದಿನಾಂಕದ ವಿವರ:

ಯೋಜನೆ ಪಾವತಿಗಾಗಿ ನಿಗದಿ ಮಾಡಿದ ದಿನಾಂಕ  DBT Status check link
ಸಾಮಾಜಿಕ ಭದ್ರತಾ ಪಿಂಚಣಿ (ಸಾಮಾಜಿಕ ಭದ್ರತಾ ಪಿಂಚಣಿ ನಿರ್ದೇಶನಾಲಯ)  ಪ್ರತಿ ತಿಂಗಳ ದಿನಾಂಕ: 5 ರೊಳಗೆ  Pinchani Status check
ಅನ್ನಭಾಗ್ಯ ಯೋಜನೆ (ಆಹಾರ ಇಲಾಖೆ)  ಪ್ರತಿ ತಿಂಗಳ ದಿನಾಂಕ 20 ರೊಳಗೆ  Annabhagya DBT status
ಗೃಹಲಕ್ಷ್ಮಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ)  ಪ್ರತಿ ತಿಂಗಳ ದಿನಾಂಕ 20 ರೊಳಗೆ  Gruhalakshmi amount Status 

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

ಈ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿಯವರ ಆದೇಶದ ವಿವರ ಈ ಕೆಳಗಿದಂತಿದೆ:

ಖಜಾನ- 2ರ ಮುಖಾಂತರ ನಿರ್ವಹಿಸಲಾಗುತ್ತಿರುವ ಪ್ರಮುಖ ಫಲಾನುಭವಿ ಯೋಜನೆಗಳ ಪಾವತಿಗಾಗಿ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ವೇಳಾಪಟ್ಟಿ ರೂಪಿಸುವ ಬಗ್ಗೆ,

ಸರ್ಕಾರದ ಸುತ್ತೋಲೆ ಸಂ:ಆಇ 37 ಟಿಎಆರ್ 2021, ದಿ:26.07.2021 ರಲ್ಲಿ ಎಲ್ಲಾ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಫಲಾನುಭವಿ ಆಧಾರಿತ ಯೋಜನೆಗಳಿಗೆ ಸಂಬಂಧಿಸಿದಂತೆ ಸಿ.ಆ.ಸು. (ಇ-ಆಡಳಿತ) ಇಲಾಖೆಯೊಂದಿಗೆ ಸರ್ಕಾರದ ಏಕೀಕೃತ ನೇರ ನಗದು ವರ್ಗಾವಣೆ ವೇದಿಕ (DBT Platform) ಮೂಲಕ ಅನುಷ್ಠಾನಗೊಳಿಸಲು ತಿಳಿಸಲಾಗಿದೆ.

2) ಖಜಾನೆ ಆಯುಕ್ತರ ಪ್ರಸ್ತಾವನೆಯಲ್ಲಿ, ಸರ್ಕಾರದ ಎಲ್ಲಾ ಇಲಾಖೆಗಳ ಫಲಾನುಭವಿ ಆಧಾರಿತ ಕಲ್ಯಾಣ ಹಾಗೂ ಸಬ್ಸಿಡಿ ಸ್ಟ್ರೀಂಗಳ ಪಾವತಿಗಳನ್ನು ನೇರ ವರ್ಗಾವಣೆ ಮಾಡುವ ವ್ಯವಸ್ಥೆ (Direct Benefit Transfer) ಮುಖಾಂತರ ಫಲಾನುಭವಿಗಳ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮತ್ತು ಖಜಾನೆ-2 ರ ಮೂಲಕ ಹಣವನ್ನು ಯಾವುದೇ ಅಡೆ ತಡೆಗಳಿಲ್ಲದೇ ಪಾವತಿಸಲಾಗುತ್ತಿದೆ ಎಂದು ತಿಳಿಸಿರುತ್ತಾರೆ.

3) ವೇತನ ಪಾವತಿಸುವ ಸಮಯದಲ್ಲಿ ಸರ್ಕಾರದ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳ ಬಿಲ್ಲುಗಳ ಸಂಖ್ಯೆ ಹೆಚ್ಚಾದಲ್ಲಿ ವೇತನ ಪಾವತಿ ಮತ್ತು ಡಿ.ಬಿ.ಟಿ ಪಾವತಿಯಲ್ಲಿಯೂ ವಿಳಂಬವಾಗುವ ಸಂಭವವಿರುತ್ತದೆ. ಅಲ್ಲದೇ ಪ್ರತಿ ಕಡತದ ಪರಿಶೀಲನೆಗೆ ಸಮಯ ಬೇಕಾಗಿರುವುದರಿಂದ ಮಂಜೂರಾತಿ ಪಟ್ಟಿ ಸೃಜನೆಯಲ್ಲಿಯೂ ತಡವಾಗುವುದರಿಂದ ಪಾವತಿಯಲ್ಲಿ ತೊಂದರೆಯಾಗುವ ಸಂಭವವಿರುವುದಾಗಿ ತಿಳಿಸಿರುತ್ತಾರೆ.

ಇದನ್ನೂ ಓದಿ: Karnataka Drought Fund : ರಾಜ್ಯ ಸರಕಾರದಿಂದ 324 ಕೋಟಿ ರೂ. ಬರ ಪರಿಹಾರ ಬಿಡುಗಡೆ! ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆ?

4) ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಪಾವತಿ ಮಾಡಲು ಮತ್ತು ಡಿ.ಡಿ.ಓ, ಡಿ.ಬಿ.ಟಿ ಸೆಲ್ ಮತ್ತು ಖಜಾನೆಗಳಿಗೆ ಯಾವುದಾದರೂ ತಾಂತ್ರಿಕ/ಆಡಳಿತಾತ್ಮಕ ಸಮಸ್ಯೆ ಬಗೆಹರಿಸಲು ಮತ್ತು ಪ್ರತಿ ಹಂತದಲ್ಲೂ ಸಮನ್ವಯೀಕರಣ ಸುಲಭಗೊಳಿಸಲು ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವ, ಮಾಸಿಕವಾಗಿ ಪಾವತಿಸುವ ಗೃಹ ಲಕ್ಷ್ಮಿ, ಅನ್ನ ಭಾಗ್ಯ ಮತ್ತ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಹಂತ ಹಂತವಾಗಿ ಪಾವತಿ ಮಾಡಲು ವೇಳಾಪಟ್ಟಿಯೊಂದಿಗೆ ನಿರ್ಧಿಷ್ಟ ವೇಳೆಯೊಳಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಂಬಂಧಿತ ಇಲಾಖಾ ಡಿಡಿಓ ಗಳಿಗೆ ಸೂಚಿಸಲು ಕೋರಿರುತ್ತಾರೆ. 

5) ಆದ್ದರಿಂದ, ಸರ್ಕಾರದ ಫಲಾನುಭವಿ ಆಧಾರಿತ ಯೋಜನೆಗಳನ್ನು ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ತಲುಪಿಸಲು, ಪ್ರತಿ ಮಾಸಿಕದ ಕೊನೆಯಲ್ಲಿ ಖಜಾನಗಳಲ್ಲಿ ಕೆಲಸದ ಒತ್ತಡಗಳನ್ನು ಕಡಿಮೆಗೊಳಿಸಲು ಮತ್ತು ಹಣ ಸಂದಾಯ ಮಾಡುವುದಕ್ಕೆ ವ್ಯವಸ್ಥೆ ಮಾಡುವ ಪೂರ್ವದಲ್ಲಿ, ಖಜಾನೆಗಳಲ್ಲಿ ಬಿಲ್ಲುಗಳನ್ನು ಪರಿಶೋಧನೆ ಮಾಡಲು ಅನುಕೂಲವಾಗುವ ದೃಷ್ಠಿಯಿಂದ ಈ ಕೆಳಕಂಡ ಯೋಜನೆಗಳಿಗೆ ಸಂಬಂಧಪಟ್ಟ ಹಣ ಸೆಳೆಯುವ ಮತ್ತು ಬಟವಾಡ ಮಾಡುವ ಅಧಿಕಾರಿಗಳು ಈ ಕೆಳಕಂಡಂತೆ ನಮೂದಿಸಿರುವ ವೇಳಾಪಟ್ಟಿಯನ್ವಯ ನಿಗಧಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಖಜಾನೆಗಳಿಗೆ ಬಿಲ್ಲು ಸಲ್ಲಿಸಿ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕರಿಸುವಂತೆ ತಿಳಿಸಲಾಗಿದೆ.

ಆದೇಶದ ಪ್ರತಿ: