Data entry operator Job: ಹೊಸದಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಡಾಟಾ ಎಂಟ್ರಿ ಆಪರೇಟ‌ರ್ ನೇಮಕಕ್ಕೆ ಆದೇಶ! 

Data entry operator job-2023: ಗ್ರಾಮ ಪಂಚಾಯತಿಯಲ್ಲಿ ಕೆಲಸದ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಒಂದು ಗ್ರಾಮ ಪಂಚಾಯತಿಗೆ ಒಂದು ಡಾಟಾ ಎಂಟ್ರಿ ಆಪರೇಟ‌ರ್(grama panchayat data entry operator)ನೇಮಕ ಮಾಡಿಕೊಳ್ಳುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಎಲ್ಲಾ ಜಿಲ್ಲೆಯ  ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ(CEO) ಆದೇಶ ಹೊರಡಿಸಿದ್ದಾರೆ.

Data entry operator job-2023: ಗ್ರಾಮ ಪಂಚಾಯತಿಯಲ್ಲಿ ಕೆಲಸದ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಒಂದು ಗ್ರಾಮ ಪಂಚಾಯತಿಗೆ ಒಂದು ಡಾಟಾ ಎಂಟ್ರಿ ಆಪರೇಟ‌ರ್(grama panchayat data entry operator)ನೇಮಕ ಮಾಡಿಕೊಳ್ಳುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಎಲ್ಲಾ ಜಿಲ್ಲೆಯ  ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ(CEO) ಆದೇಶ ಹೊರಡಿಸಿದ್ದಾರೆ.

ಈ ಆದೇಶದ್ವಯ  ಆಯಾ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಈ ನೇಮಕಾತಿ ಮಾಡಿಕೊಳ್ಳಬೇಕೆಂದು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಸೂಚಿಸಿದ್ದಾರ‍ೆ. ಈ ರೀತಿ ಆಯ್ಕೆ ಮಾಡಿಕೊಂಡ ಡೇಟಾ ಆಪರೇಟರ್‌ಗಳಿಗೆ ಬಾಪೂಜಿ ಸೇವಾ ಕೇಂದ್ರದಲ್ಲಿ ಸಂಗ್ರಹವಾಗುವ ಮೊತ್ತದಿಂದ ವೇತನವನ್ನು ಪಾವತಿಸಬೇಕು ಎಂದು ಆಯುಕ್ತಾಲಯ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್‌ಗಳ ಸಿಇಒಗಳಿಗೆ ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

Data entry operator notification- ಡಾಟಾ ಎಂಟ್ರಿ ಆಪರೇಟ‌ರ್ ನೇಮಕಾತಿ ವಿವರ:

ಒಟ್ಟು ಹುದ್ದೆಗಳು: 

ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗೆ ಒಂದರಂತೆ ಒಟ್ಟು 5980 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

Data entry operator salary- ವೇತನ: 

ಈ ಹುದ್ದೆಗೆ ಆಯ್ಕೆಯ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 16,738 ರೂ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: Fruits ID: ಸರಕಾರದ ಎಲ್ಲಾ ಬಗ್ಗೆಯ ಬೆಳೆ ಪರಿಹಾರ ಪಡೆಯಲು ಈ ವೆಬ್ಸೈಟ್ ನಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರಿಸುವುದು ಕಡ್ಡಾಯ!

Data entry operator recruitment 2023: ನೇಮಕಾತಿ ವಿಧಾನ: 

ಮೆರಿಟ್‌ ಆಧಾರದ ಮೇಲೆ ಈ ಹುದ್ದೆಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಒಟ್ಟು ಸಲ್ಲಿಕೆಯಾದ ಎಲ್ಲಾ ಅರ್ಜಿಗಳನ್ನು ಹೆಚ್ಚು ಅಂಕ ಪಡೆದ ಆಧಾರದ ಮೇಲೆ ಮೆರಿಟ್‌ ಲಿಸ್ಟ್ ತಯಾರಿಸಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ಈ ಹುದ್ದೆಗೆ ಆಯ್ಕೆಯನ್ನು ಮಾಡುತ್ತದೆ.

ಸಮಿತಿ ವಿವರ:

Data entry operator qualification-ಡಾಟಾ ಎಂಟ್ರಿ ಆಪರೇಟ‌ರ್  ಹುದ್ದೆಗೆ ಅರ್ಹತೆಗಳು:

(1) ಕನ್ನಡವನ್ನು ಭಾಷೆಯನ್ನಾಗಿ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರಬೇಕು.

(2) ಕಂಪ್ಯೂಟರ್ ತರಬೇತಿ ಕೋರ್ಸ್‌ನಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಆರು ತಿಂಗಳ ತರಬೇತಿ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು.

(3) ಆಯ್ಕೆ ಸಮಿತಿ ವತಿಯಿಂದ ಕಂಪ್ಯೂಟರ್ ಸಮಿತಿಯು ಸಾಕ್ಷರತಾ ಪರೀಕ್ಷೆಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ.

(4) ಅರ್ಹತಾ ಪರೀಕ್ಷೆಯಲ್ಲಿ ಪಡೆದ 50% ಕಂಪ್ಯೂಟರ್ ಪರೀಕ್ಷೆಯಲ್ಲಿ ಅಂಕಗಳನ್ನು ಅಂಕಗಳನ್ನು ಮತ್ತು ಸಾಕ್ಷರತಾ 50% ಪಡೆದ ಒಳಗೊಂಡಿರುವ ಅರ್ಹತೆಯ ಆಧಾರದ ಆಯ್ಕೆ ಸಿದ್ಧಪಡಿಸಬೇಕು. ಆಧಾರದ ಮೇಲೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಇದನ್ನೂ ಓದಿ: KSRTC Job Notification-2023: ಸರಕಾರಿ ಉದ್ಯೋಗಾಂಕ್ಷಿಗಳಿಗೆ ಶುಭ ಸುದ್ದಿ, 8 ವರ್ಷದ ಬಳಿಕ ಕರ್ನಾಟಕ ಸಾರಿಗೆ ನಿಗಮಕ್ಕೆ 6,500 ಹುದ್ದೆ ನೇಮಕಾತಿಗೆ ಅನುಮೋದನೆ!

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರ ಸುತ್ತೋಲೆ ಪ್ರತಿ:

Data entry operator appointment- ಅಧಿಸೂಚನೆ ಮತ್ತು ಅರ್ಜಿ ಸ್ವೀಕಾರ ಯಾವಾಗಿನಿಂದ ಪ್ರಾರಂಭ?

ಪಂಚಾಯತ್ ರಾಜ್ ಇಲಾಖೆಯಿಂದ ಈಗಾಗಲೇ ಸುತ್ತೋಲೆಯನ್ನು ಹೊರಡಿಸಲಾಗಿದ್ದು ಇನ್ನು ಕೆಲವೇ ದಿನಗಳನ್ನು ಅಧಿಸೂಚನೆ ಹೊರಡಿಸಿ ಅರ್ಜಿ ಸ್ವೀಕಾರ ಆರಂಭವಾಗಲಿದೆ.

ಈ ಮಾಹಿತಿ ಪ್ರಕಟವಾದ ತಕ್ಷಣ ನಮ್ಮ ಪುಟದಲ್ಲಿ ಸಂಪೂರ್ಣ ಮಾಹಿತಿ ತಿಳಿಸಲಾಗುವುದು ಪ್ರತಿನಿತ್ಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: krushikamitra whatsapp channel ನಮ್ಮ ವಾಟ್ಸಾಪ್ ಚಾನಲ್ ಸೇರಿಕೊಳ್ಳಿ.

ಇದನ್ನೂ ಓದಿ: Bele parihara status- 2019 ರಿಂದ ಇಲ್ಲಿಯವರೆಗೆ ಎಷ್ಟು ಬಾರಿ ಬೆಳೆ ಹಾನಿ ಪರಿಹಾರ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!