Forest Guard Recruitment 2023: ಪಿಯುಸಿ ಪಾಸ್ ಆದವರಿಗೆ ಅರಣ್ಯ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! 540 ಹುದ್ದೆಗಳಿಗೆ ಅರ್ಜಿ ಆಹ್ವಾನ.

Forest Guard Recruitment 2023: ಪಿಯುಸಿ ಪಾಸ್ ಆದವರಿಗೆ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪಿಯುಸಿ ಪಾಸ್ ಆದವರಿಗೆ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಆಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಈ ಅಂಕಣದಲ್ಲಿ ತಿಳಿಸಿರುವ ವಿವರವನ್ನು ಸಂಪೂರ್ಣವಾಗಿ ಓದಿ ಅಗತ್ಯ ದಾಖಲಾತಿಗಳ ಸಮೇತ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬವುದು.

ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು, ವಯೋಮಿತಿ, ಅರ್ಜಿ ಸಲ್ಲಿಸಲು ಪ್ರಾರಂಭ ಮತ್ತು ಕೊನೆಯ ದಿನಾಂಕ ಇತ್ಯಾದಿ ಸಂಪೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ ಈ ಮಾಹಿತಿಯು ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಸಹಕಾರಿಯಾಗಿದ್ದು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Bara Parihara-2023: ರಾಜ್ಯ ಸರಕಾರದಿಂದ ಮೊದಲ ಕಂತಿನ ಬರ ಪರಿಹಾರ! ರೈತರಿಗೆ ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

Forest Guard Recruitment -2023: ಅರಣ್ಯ ರಕ್ಷಕ ಹುದ್ದೆಯ ವಿವರ ಹೀಗಿದೆ:

ಇಲಾಖೆ: ಅರಣ್ಯ ಇಲಾಖೆ
ಹುದ್ದೆಯ ಹೆಸರು: ಅರಣ್ಯ ರಕ್ಷಕ
ಶ್ರೇಣಿ: "ಸಿ"
ಮಾಸಿಕ ವೇತನ: 23,500 ರಿಂದ 47,650 ರೂ 
ಒಟ್ಟು ಹುದ್ದೆಗಳು: 540
ಅರ್ಜಿ ಸಲ್ಲಿಸಲು ಲಿಂಕ್: Apply Now 

ಇದನ್ನೂ ಓದಿ: Irrigation Facility Subsidy: ನೀರಾವರಿ ಸೌಲಭ್ಯಕ್ಕೆ 75,000/- ರೂ. ಸಹಾಯಧನಕ್ಕೆ ಅರ್ಜಿ ಆಹ್ವಾನ

Forest Guard Qualification-ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:

ಅಭ್ಯರ್ಥಿಯು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ ಪಿ.ಯು.ಸಿ. ವಿದ್ಯಾರ್ಹತೆ ಅಥವಾ ಪಿ.ಯು.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ಈ ಮೇಲೆ ನಿಗಧಿಪಡಿಸಿದ ಪ್ರಾರಂಭಿಕ ದಿನಾಂಕಕ್ಕೆ ಹೊಂದಿರಬೇಕು.

ವಿಶೇಷ ಸೂಚನೆಗಳು: ಮೂರು ವರ್ಷಗಳ ಡಿಪ್ಲೊಮಾ ಅಥವಾ ಎರಡು ವರ್ಷಗಳ ಐ.ಟಿ.ಐ. ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮಾ (ಜೆ.ಓ.ಸಿ/ಜೆ.ಓ.ಡಿ.ಸಿ./ಜೆ.ಎಲ್.ಡಿ.ಸಿ.) ಅಭ್ಯರ್ಥಿಗಳು ಎನ್.ಐ.ಒ.ಎಸ್. ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ ಪದವಿಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿ.ಯು.ಸಿ. ಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ.

Forest Guard Age limit-ನಿಗದಿಪಡಿಸಿದ ವಯೋಮಿತಿ:

ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 6ರಲ್ಲಿ ಒಳಗೊಂಡಿರುವ ಯಾವುದೇ ವಿಷಯದ ಹೊರತಾಗಿಯೂ ಅಭ್ಯರ್ಥಿಗಳು ದಿನಾಂಕ 01.12.2023 ಕ್ಕೆ ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ ಅಧಿಸೂಚನೆಯ ಪ್ರಾರಂಭಿಕ ದಿನಾಂಕಕ್ಕೆ ಗರಿಷ್ಠ ವಯೋಮಿತಿ ತಿಳಿದುಕೊಳ್ಳಲು ಈ ಅಂಕಣದ ಕೊನೆಯಲ್ಲಿರಿವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ನೋಡಿ.

Forest Guard application date-ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಾರಂಭ: 01 ಡಿಸೆಂಬರ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನ: 30 ಡಿಸೆಂಬರ್ 2023

ಇದನ್ನೂ ಓದಿ: Nigamada Yojane-ಸ್ವಯಂ ಉದ್ಯೋಗ ನೇರಸಾಲ, ಸ್ವಾವಲಂಬಿ ಸಾರಥಿ ಯೋಜನೆ ಸೇರಿ ಇತರೆ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

Forest Guard application-ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳ ಸಮೇತ Application link 
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬವುದು ಅಥವಾ ನಿಮ್ಮ ಹತ್ತಿರಿದ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿಯು ಸಹ ಅರ್ಜಿ ಸಲ್ಲಿಸಬವುದಾಗಿದೆ. 

Forest Guard job-ಅರ್ಹತೆಗಳು:

(1) ಭಾರತೀಯ ನಾಗರಿಕನಾಗಿರತಕ್ಕದ್ದು.

(2) ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಪತ್ನಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೆ ನೇಮಕಾತಿಗೆ ಅರ್ಹರಾಗುವುದಿಲ್ಲ.

(3) ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಹಾಗೂ ಅವರ ನೇಮಕಾತಿಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟುಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನ್ಯತೆಯಿಂದ ಮುಕ್ತರಾಗಿರಬೇಕು.

(4) ದೈಹಿಕವಾಗಿ ಅನರ್ಹರಾಗಿದ್ದಾರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ಆಯ್ಕೆ ಪ್ರಾಧಿಕಾರವು ಕಾಯ್ದಿರಿಸಿಕೊಂಡಿದೆ ಮತ್ತು ಸರ್ಕಾರದ ವಿವೇಚನೆಯು ಯಾವುದೇ ವಿಧದಲ್ಲೂ ಈ ನಿಯಮಗಳ ಮೂಲಕ ಸೀಮಿತವಾಗಿರುವುದಿಲ್ಲ.

ಇದನ್ನೂ ಓದಿ: Ujjwala Yojana-2023: ಉಜ್ವಲ ಯೋಜನೆಯಡಿ ಗ್ಯಾಸ್ ಸಬ್ಸಿಡಿ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

Forest Guard application fee-ಅರ್ಜಿ ಶುಲ್ಕ ಪಾವತಿ ವಿಧಾನ:

ಆನ್‌ಲೈನ್ (Online) (ಎಲೆಕ್ಟ್ರಾನಿಕ್ ಮಾರ್ಗ) ಮೂಲಕ ಅರ್ಜಿ ಸಲ್ಲಿಸಿದ ನಂತರ, ಇಲಾಖಾ ಜಾಲತಾಣ ನಿಂದ ಮುದ್ರಿತ ಅರ್ಜಿ ಶುಲ್ಕದ ಚಲನ್ ಪ್ರತಿಯನ್ನು ತೆಗೆದುಕೊಂಡು, ಇ-ಪಾವತಿ ಸೌಲಭ್ಯವಿರುವ ಭಾರತೀಯ ಅಂಚೆ ಕಚೇರಿಯಲ್ಲಿ ಸದರಿ ಪ್ರತಿಯನ್ನು ಹಾಜರುಪಡಿಸಿ, ಪವರ್ಗವಾರು ನಿಗದಿತ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕವನ್ನು ಭಾರತೀಯ ಅಂಚೆ ಕಛೇರಿಯಲ್ಲಿ ಮೇಲೆ ತಿಳಿಸಿರುವಂತೆ ನಿಗದಿತ ದಿನಾಂಕ ಹಾಗೂ ಸಮಯದೊಳಗೆ ಕಡ್ಡಾಯವಾಗಿ ಪಾವತಿಸತಕ್ಕದ್ದು.

ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ, ಅದನ್ನು ಯಾವುದೇ ಸಂದರ್ಭದಲ್ಲಿ ಹಿಂತಿರುಗಿಸಲಾಗುವುದಿಲ್ಲ ಅಥವಾ ಅದನ್ನು ಅರಣ್ಯ ಇಲಾಖೆ ನಡೆಸುವ ಇತರೆ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ನಿಗಧಿತ ಶುಲ್ಕವನ್ನು ಸಂದಾಯ ಮಾಡದಿದ್ದಲ್ಲಿ ಅಂತಹ ಅರ್ಜಿಗಳನ್ನು ಅಪೂರ್ಣ ಎಂದು ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಸಲು ಲಿಂಕ್: Apply Now 
ಅರಣ್ಯ ರಕ್ಷಕ ನೇಮಕಾತಿ ಅಧಿಸೂಚನೆ: Download Now

ಇದನ್ನೂ ಓದಿ: Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.