Free equipment- ಉಚಿತವಾಗಿ ಸುಧಾರಿತ ಉಪಕರಣಗಳನ್ನು ಪಡೆಯಲು ಕರಕುಶಲ ಕರ್ಮಿಗಳಿಂದ ಅರ್ಜಿ ಆಹ್ವಾನ!

Free equipment yojana: ಗ್ರಾಮೀಣ ಪ್ರದೇಶದ ಬಡಗಿತನ, ಗೌಂಡಿ ಕ್ಷೌರಿಕ ಮತ್ತು ಧೋಬಿ ವೃತ್ತಿಯ ಕುಶಲಕರ್ಮಿಗಳಿಂದ ಉಚಿತವಾಗಿ ಸುಧಾರಿತ ಉಪಕರಣಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

Free equipment- ಉಚಿತವಾಗಿ ಸುಧಾರಿತ ಉಪಕರಣಗಳನ್ನು ಪಡೆಯಲು ಕರಕುಶಲ ಕರ್ಮಿಗಳಿಂದ ಅರ್ಜಿ ಆಹ್ವಾನ!
Free equipment yojana-2024

ಗ್ರಾಮೀಣ ಪ್ರದೇಶದ ಬಡಗಿತನ, ಗೌಂಡಿ ಕ್ಷೌರಿಕ ಮತ್ತು ಧೋಬಿ ವೃತ್ತಿಯ ಕುಶಲಕರ್ಮಿಗಳಿಂದ ಉಚಿತವಾಗಿ ಸುಧಾರಿತ ಉಪಕರಣಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ ವಿಜಯಪುರ ಕಛೇರಿಯಿಂದ 2023- 24 ನೇ ಸಾಲಿಗೆ, ಜಿಲ್ಲಾ ವಲಯ ಯೋಜನೆಯಡಿ 18 ರಿಂದ 55 ವರ್ಷ ವಯೋಮಿತಿಯ ಅರ್ಹ ಗ್ರಾಮೀಣ ಪ್ರದೇಶದ ಬಡಗಿತನ, ಗೌಂಡಿ ಕ್ಷೌರಿಕ ಮತ್ತು ಧೋಬಿ ವೃತ್ತಿಯ ಕುಶಲಕರ್ಮಿಗಳಿಂದ ಉಚಿತವಾಗಿ ಉಪಕರಣಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು.

ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದ್ದು, ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ನಮೂನೆ ಡೌನ್ಲೋಡ್ ಮಾಡುವ ವಿಧಾನ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Panchayat raj job- 51 ಪಂಚಾಯತ್ ರಾಜ್ ಫೆಲೋಶಿಪ್ ಹುದ್ದೆಗೆ ಅರ್ಜಿ ಆಹ್ವಾನ! ತಿಂಗಳಿಗೆ 61,500/- ವೇತನ.

Free equipment application- ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ಅರ್ಜಿದಾರರರು ಈ Application download link ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಮೂಲಕ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಇಲ್ಲವೆ 'ಕಛೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳುವುದು. ಭರ್ತಿ ಮಾಡಿದ ಅರ್ಜಿಯನ್ನು ಅವಶ್ಯಕ ದಾಕಲಾತಿಗಳನ್ನು ಲಗತ್ತಿಸಿ ಈ ಕಛೇರಿಗೆ ಖುದ್ದಾಗಿ ಇಲ್ಲವೇ ಪೋಸ್ಟ್ ಮುಖಾಂತರ ಸಲ್ಲಿಸಬಹುದಾಗಿದೆ.

office address- ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕಛೇರಿ ವಿಳಾಸ :

ಉಪನಿರ್ದೇಶಕರ ರವರ ಕಛೇರಿ, 
ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ.
ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ ಸ್ಟೇಶನ್ ಬ್ಯಾಕ್ ರೋಡ, ಶಿಕಾರಖಾನೆ ವಿಜಯಪುರ-586104.

ಇದನ್ನೂ ಓದಿ: Swavalambi Yojana application-ಸ್ವಾವಲಂಬಿ ಯೋಜನೆಯಡಿ 1.00 ಲಕ್ಷದವರೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Required documents for application- ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

1) ಇತ್ತೀಚಿನ ಭಾವಚಿತ್ರ.
2) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
3) ತಹಶೀಲ್ದಾರರಿಂದ ಪಡೆದ ಜಾತಿ ಪ್ರಮಾಣ ಪತ್ರ.(ಪ.ಜಾತಿ ಮತ್ತಿ ಪ.ಪಂಗಡದ ಅಭ್ಯರ್ಥಿಗಳಿಗೆ ಮಾತ್ರ)
4) ಪಡಿತರ ಚೀಟಿ/ರೇಶನ್ ಕಾರ್ಡ್
5) ಗ್ರಾಮ ಪಂಚಾಯತಿಯ ವೃತ್ತಿ ಧೃಢೀಕರಣ ಪತ್ರ.

ಇದನ್ನೂ ಓದಿ: Parihara list-ಬೆಳೆ ಪರಿಹಾರದ ಹಣ ಜಮಾ ಅಗಿರುವ ಫಲಾನುಭವಿ ರೈತರ ಪಟ್ಟಿ ಬಿಡುಗಡೆ!

Last date for application- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 01-02-2024 ಸಾಯಂಕಾಲ 5.30.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿಗೆ ದೂರವಾಣಿ ಸಂಖ್ಯೆ : 08352-254851, ಕೈಗಾರಿಕಾ ವಿಸ್ತರಣಾಧಿಕಾರಿಗಳು ವಿಜಯಪುರ/ಸಿಂದಗಿ/ಇಂಡಿ ಮೊಬೈಲ್ ಸಂಖ್ಯೆ : 9972162222 ಮತ್ತು ಮುದ್ದೇಬಿಹಾಳ/ಬಾಗೇವಾಡಿ ಮೊಬೈಲ್ ಸಂಖ್ಯೆ: 9945779798 ಸಂಪರ್ಕಿಸಬುಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.