Fruits Id updates: ಪ್ರೂಟ್ಸ್ ಐಡಿಯಲ್ಲಿ ನಮೂದಿಸಿದ ವಿವರದ ಕುರಿತು ರೈತರು ತಪ್ಪದೇ ಈ ಮಾಹಿತಿ ತಿಳಿಯಿರಿ!

ಬರ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಇತ್ಯಾದಿ ಸರಕಾರಿ ಸೌಲಭ್ಯ ಪಡೆಯಲು ಪ್ರತಿಯೊಬ್ಬ ರೈತರು ಪ್ರೂಟ್ಸ್ ಐಡಿಯನ್ನು ಹೊಂದಿರುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಲಾಗಿದೆ. 

ಈ ಕಾರಣದಿಂದಾಗಿ ಈ ಪ್ರೂಟ್ಸ್ ಐಡಿಯಲ್ಲಿ ದಾಖಲಾಗಿರುವ ರೈತರ ಎಲ್ಲಾ ವಿವರವು ಸರಿಯಾಗಿದಲ್ಲಿ ಮಾತ್ರ ರೈತರಿಗೆ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಇಂದು ಈ ಅಂಕಣದಲ್ಲಿ FID Number ಅಥವಾ Fruits ID ಎಂದು ಕರೆಯುವ ಕೃಷಿ ಇಲಾಖೆಯ ಡಿಜಿಟಲ್ ದಾಖಲಾತಿ ಸಂಖ್ಯೆಯಲ್ಲಿ ರೈತರ ವಿವರ ತಪ್ಪದ್ದರೆ ಹೇಗೆ ಸರಿಪಡಿಸಿಕೊಳ್ಳಬೇಕು? ಮತ್ತು ಯಾವೆಲ್ಲ ಅಂಶಗಳು ಈ ಐಡಿಯಲ್ಲಿ ಸರಿಯಾಗಿ ದಾಖಲಾಗಿರಬೇಕು ಎಂದು ಸಂಪೂರ್ಣವಾಗಿ ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Ganga kalyana yojana-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 3 ದಿನ ಮಾತ್ರ ಬಾಕಿ!

(1) fruits Id- ಪ್ರೂಟ್ಸ್ ತಂತ್ರಾಂಶದಲ್ಲಿರಲಿ ನಿಮ್ಮ ಎಲ್ಲಾ ಸರ್ವೆ ನಂಬರ್:

ರೈತರು ತಮ್ಮ ಜಮೀನಿ ಮತ್ತು ವೈಯಕ್ತಿಯ ವಿವರವನ್ನು ಈ ತಂತ್ರಾಶದಲ್ಲಿ ದಾಖಲಿಸುವ ಸಮಯದಲ್ಲಿ ತಪ್ಪದೇ ಪ್ರೂಟ್ಸ್ ಐಡಿಯಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಅನ್ನು ಒಂದು ಬಿಡದೇ ಎಲ್ಲಾ ಸರ್ವೆ ನಂಬರ್ ಮತ್ತು ಹಿಸ್ಸಾ ಇದಲ್ಲಿ ಅವನ್ನು ಸಹ ತಪ್ಪದೇ ಸೇರ್ಪಡೆ ಮಾಡಿಸಿಕೊಳ್ಳಿ.

ಇಲ್ಲಿವಾದಲ್ಲಿ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ದೊರೆಯುವ ಬೆಳೆ ವಿಮೆ, ಬೆಳೆ ಪರಿಹಾರ, ಇತರೆ ಸೌಲಭ್ಯಗಳು ಸಂಪೂರ್ಣ ಪ್ರಮಾಣದಲ್ಲಿ ನಿಮಗೆ ಲಭ್ಯವಾಗುವುದಿಲ್ಲ.

ಇದಕ್ಕಾಗಿ ನೀವು ಒಮ್ಮೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಆಧಾರ್ ಕಾರ್ಡ ಪ್ರತಿಯೊಂದಿಗೆ ಭೇಟಿ ಮಾಡಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಗಳು FID/ಪ್ರೂಟ್ಸ್ ಐಡಿಯಲ್ಲಿ ಸೇರ್ಪಡೆಯಾಗಿವೆಯೇ? ಎಂದು ಚೆಕ್ ಮಾಡಿಕೊಳ್ಳುವುದು ಅತ್ಯಗತ್ಯ ಒಂದೊಮ್ಮೆ ಯಾವುದಾದರು ಒಂದೆರಡು ಸರ್ವೆ ನಂಬರ್ ಬಿಟ್ಟು ಹೋಗಿದ್ದರೆ ಅವನ್ನು ಸೇರ್ಪಡೆ ಮಾಡಿಕೊಳ್ಳಿ.

ಇದನ್ನೂ ಓದಿ: Bara parihara-2023: ರಾಜ್ಯ ಸರಕಾರದಿಂದ ಬರ ಪರಿಹಾರದ ಮೊತ್ತ ನಿಗದಿ! ಒಂದು ಎಕರೆಗೆ ಎಷ್ಟು ಸಿಗಲಿದೆ?

(2) fruits Id name- ನಿಮ್ಮ ಆಧಾರ್ ಕಾರ್ಡ ನಲ್ಲಿರುವಂತೆಯೇ ಹೆಸರು ಇರಬೇಕು:

ಹೌದು ರೈತ ಮಿತ್ರರೇ ನಿಮ್ಮ ಪ್ರಸ್ತುತ ಆಧಾರ್ ಕಾರ್ಡನಲ್ಲಿ ಯಾವ ರೀತಿ ಹೆಸರು ಇರುತ್ತದೆಯೋ ಅದೇ ರೀತಿ ನಿಮ್ಮ ಪ್ರೂಟ್ಸ್ ಐಡಿಯಲ್ಲಿ ನಿಮ್ಮ ಹೆಸರು ಇರಬೇಕಾಗುತ್ತದೆ ಒಂದು ಅಕ್ಷರ ತಪ್ಪಾದರು ನಿಮಗೆ ವಿವಿಧ ಯೋಜನೆಯ ನೇರ ನಗರು ವರ್ಗಾವಣೆ(DBT) ಹಣ ತಲುಪುವುದಿಲ್ಲ.

ಉದಾಹರಣೆಗೆ ಪ್ರಸ್ತುತ ನಿಮ್ಮ ಆಧಾರ್ ನಲ್ಲಿ “Revanasiddesh G S” ಎಂದು ಇದ್ದು FID/ಪ್ರೂಟ್ಸ್ ಐಡಿಯಲ್ಲಿ “revanasidesh G S” ಎಂದು  ಇಂಗ್ಲೀಷ್ ಅಕ್ಷರಗಳು ತಪ್ಪಾಗಿ ನಮೂದಿಸಿದರು ಅದನ್ನು ನೀವು ರೈತ ಸಂಪರ್ಕ ಕೇಂದರ ಭೇಟಿ ಮಾಡಿ ಸರಿಪಡಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: Yuvandhi-2023: ಯುವನಿಧಿ ಯೋಜನೆಗೆ ಅರ್ಜಿ! ಅರ್ಜಿ  ಸಲ್ಲಿಕೆ ಪ್ರಾರಂಭ ದಿನಾಂಕ? ಇತ್ಯಾದಿ ಸಂಪೂರ್ಣ ಮಾಹಿತಿ ಲಭ್ಯ.

(3) FID survey numbers- ಎಲ್ಲಾ ಸರ್ವೆ ನಂಬರ್ ವಿಸ್ತೀರ್ಣ ಸರಿಯಾಗಿ ಸೇರ್ಪಡೆಯಾಗಿರಬೇಕು:

ರೈತ ಸಂಪರ್ಕ ಕೇಂದ್ರದಲ್ಲಿ ಒಂದೊಂದು ಬಾರಿ ರೈತರ ಪ್ರೂಟ್ಸ್ ಐಡಿಯಲ್ಲಿ ಸರ್ವೆ ನಂಬರ್ ಅನ್ನು ಸೇರ್ಪಡೆ ಮಾಡುವಾಗ ಆ ರೈತನ ಜಮೀನಿನ ವಿಸ್ತೀರ್ಣವನ್ನು ತಪ್ಪಾಗಿ ನಮೂದಿಸಿ ಬಿಡಲಾಗುತ್ತದೆ ಇಂತಹ ರೈತರಿಗೂ ಸಹ ಮುಂದೆ ಯೋಜನೆಗಳ ಸೌಲಭ್ಯ ಪಡೆಯಲು ತೊಂದರೆಯಾಗುತ್ತದೆ ಅದ್ದರಿಂದ ರೈತರು ಈ ರೀತಿಯ ಸಮಸ್ಯೆ ಕಂಡುಬಂದಲ್ಲಿ ತಪ್ಪದೇ ನಿಮ್ಮ ಸರ್ವೆ ನಂಬರ್ ಗಳ ವಿಸ್ತೀರ್ಣವನ್ನು ಸರಿಯಾಗಿ ಸೆರ್ಪಡೆ ಮಾಡಿಕೊಳ್ಳಬೇಕು.

ಪ್ರೂಟ್ಸ್ ಐಡಿಯಲ್ಲಿ ಎಲ್ಲಾ ಸರ್ವೆ ನಂಬರ್ ಗಳು ಸೇರ್ಪಡೆಯಾಗಿರುವು ಎಷ್ಟು ಮುಖ್ಯವೋ ಅದೇ ರೀತಿ ಎಲ್ಲಾ ಸರ್ವೆ ನಂಬರ್ ಗಳ ವಿಸ್ತೀರ್ಣವು ಸಹ ಸರಿಯಾಗಿ ಸೇರ್ಪಡೆಯಾಗಿರುವುದು ಅಷ್ಟೇ ಮುಖ್ಯವಾಗಿರುತ್ತದೆ.

(4) FID mobile number- ಮೊಬೈಲ್ ನಂಬರ್ ತಪ್ಪಾಗಿ ನಮೂದಿಸಿದಲ್ಲಿ:

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ದಾಖಲಾದ ಪ್ರೂಟ್ಸ್ ಐಡಿಗಳಲ್ಲಿ ರೈತರ ಮೊಬೈಲ್ ನಂಬರ್ ಗಳು ಸರಿಯಾಗಿ ನಮೂದಿಸಿರುವುದಿಲ್ಲ ಎಂದು ಅನೇಕ ರೈತರು ಹೇಳುತ್ತಿದ್ದು ಇದನ್ನು ಸರಿಪಡಿಸಿಕೊಳ್ಳು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿರುತ್ತಾರೆ. ಇದು ಅಂತಹ ಏನು ದೊಡ್ಡ ಸಮಸ್ಯೆ ಅಗಿರುವುದಿಲ್ಲ ಮೊಬೈಲ್ ನಂಬರ್ ತಪ್ಪಾಗಿ ದಾಖಲಾಗಿದರೆ ರೈತರಿಗೆ ಏನು ತಾಂತ್ರಿಕ ಸಮಸ್ಯೆಯಾಗುವುದಿಲ್ಲ ಯಾವಾಗಲಾದರು ನೀವು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಬೇಟಿ ಮಾಡಿದಾಗ ನಿಮ್ಮ ಮೊಬೈಲ್ ನಂಬರ್ ಅನ್ನು ಸರಿಪಡಿಸಿಕೊಳ್ಳಬವುದು.

ಇದನ್ನೂ ಓದಿ: Crop information- ಈ ತಂತ್ರಾಶದಲ್ಲಿ ತಾವು ಬೆಳೆದ ಬೆಳೆ ವಿವರ ಇದ್ದಲ್ಲಿ ಮಾತ್ರ ಬೆಳೆ ವಿಮೆ ಪರಿಹಾರ!