ಬೆಸ್ಕಾಂ ನಿಂದ ಈಗಾಗಲೇ ಶೂನ್ಯ ಬಿಲ್ ವಿತರಣೆ ಆರಂಭ ಮಾಡಲಾಗಿದ್ದು ಈ ವಿಭಾಗದ ವ್ಯಾಪ್ತಿಯಲ್ಲಿಇಲ್ಲಿಯವರೆಗೆ 5 ಲಕ್ಷಕ್ಕೂ ಹೆಚ್ಚಿನ ಅರ್ಹ ಗ್ರಾಹಕರಿಗೆ ಶೂನ್ಯ ಬಿಲ್ ವಿತರಣೆ ಮಾಡಲಾಗಿದೆ. ಆಗಸ್ಟ್ 1 ರಿಂದ ಶೂನ್ಯ ಬಿಲ್ ವಿತರಣೆ ಆರಂಭವಾಗಿದ್ದು ಒಂದೇ ದಿನದಲ್ಲಿ 5 ಲಕ್ಷ ಜನರಿಗೆ ಶೂನ್ಯ ಬಿಲ್ ಕೋಡಲಾಗಿದೆ ಎಂದು ಬೆಸ್ಕಾಂ(Bescom) ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳನ್ನು ಸೇರಿ 89 ಲಕ್ಷ ಗೃಹ ಬಳಕೆದಾರರನ್ನು ಹೊಂದಿದ್ದು. ಈ ಪೈಕಿ ಗೃಹ ಜ್ಯೋತಿ/(Gruhajoythi Yojana) ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಜುಲೈ 27ರ ವರೆಗೆ 55 ಲಕ್ಷ ಗ್ರಾಹಕರು ಅರ್ಜಿ ಸಲ್ಲಿಸಿದಿ ನೋಂದಾವಣೆ ಮಾಡಿಕೊಂಡಿದ್ದಾರೆ. ಇದರಲ್ಲಿ ಮೊದಲ ದಿನವೇ 5 ಲಕ್ಷ ಮಂದಿಗೆ ಶೂನ್ಯ ಬಿಲ್ ನೀಡಲಾಗಿದೆ ಮುಂದಿನ 2-3 ವಾರದಲ್ಲಿ ಎಲ್ಲಾ ಗ್ರಾಹಕರಿಗೆ ಶೂನ್ಯ ಬಿಲ್ ಕೋಡುವ ಗುರಿಯನ್ನು ಬೆಸ್ಕಾಂ ಹಾಕಿಕೊಂಡಿದೆ.
ಗ್ರಾಹಕರಲ್ಲಿ ಗೊಂದಲ ಬೇಡ!
ಹಲವು ಗ್ರಾಹಕರು ನಾವು ಅರ್ಜಿ ಸಲ್ಲಿಸಿದ್ದೇವೆ ಅದರೆ ಅರ್ಜಿ ಸ್ಥಿತಿ ಚೆಕ್ ಮಾಡಿದಾಗ ಇನ್ನು ನಿಮ್ಮ ಅರ್ಜಿ ಪ್ರೊಸೆಸಿಂಗ್ ನಲ್ಲಿದೆ(Your application for GruhaJyothi Scheme is received and sent to ESCOM for processing) ಎಂದೆ ತೋರಿಸುತ್ತದೆ Aproval ಆಗಿದೆ ಎಂದು ತೋರಿಸುವುದಿಲ್ಲ ನಮಗೆ ಈ ತಿಂಗಳ ಶೂನ್ಯ ಬಿಲ್ ಬರುತ್ತದೆಯೋ ಅಥವಾ ಇಲ್ಲವೋ ಎಂದು ಗೊಂದಲದಲ್ಲಿದವರಿಗೆ ಬೆಸ್ಕಾಂ ಅಧಿಕಾರಿಗಳು ಸೂಕ್ತ ಮಾಹಿತಿ ಹಂಚಿಕೊಂಡುದ್ದು ಈ ರೀತಿ ಬಂದರೆ ಗ್ರಾಹಕರು ಆತಂಕ ಪಡಬೇಕಾಗಿಲ್ಲ ಅರ್ಜಿಗಳ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ. ಗ್ರಾಹಕರಿಗೆ ಅವರ ವಿದ್ಯುತ್ ಬಿಲ್ ಅವಧಿ ಆಧಾರದ ಮೇಲೆ ಮೀಟರ್ ರೀಡಿಂಗ್ ಮಾಡಿ ಶೂನ್ಯ ಬಿಲ್ ನೀಡಲಾಗುತ್ತದೆ.
ಇದನ್ನೂ ಓದಿ: Electric bill name change: ಮೊಬೈಲ್ ನಲ್ಲೇ ವಿದ್ಯುತ್ ಬಿಲ್ ಹೆಸರು ಬದಲಾಯಿಸಲು ಅವಕಾಶ? ಇಲ್ಲಿದೆ ವೆಬ್ಸೈಟ್ ಲಿಂಕ್.
ಇದನ್ನೂ ಓದಿ: ನಿಮ್ಮ ಹಲ್ಲಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?
Keb Zero bill: ನಿಮಗೆ ಯಾವಾಗ ಬರಲಿದೆ ಶೂನ್ಯ ಬಿಲ್?
ಒಂದು ಕಡೆ ತಿಂಗಳ ಮೊದಲ ವಾರದಲ್ಲಿ ಬಿಲ್ ವಿತರಿಸಿದರೆ ಮತ್ತೊಂದು ಕಡೆ ಎರಡನೇ ವಾಅದಲ್ಲಿ ಬಿಲ್ ವಿತರಿಸಲಾಗುತ್ತದೆ.
ಉದಾಹರಣೆಗೆ ಜುಲೈ 1 ರಿಂದ ಆಗಸ್ಟ್ 1, ಜುಲೈ 10ರಿಂದ ಆಗಸ್ಟ್ 10 ಹೀಗೆ ಮೀಟರ್ ರೀಡಿಂಗ್ ಅವಧಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ವ್ಯತ್ಯಾಸವಿರುತ್ತದೆ. ಅವರ ಸರದಿ ಬಂದಾಗ ಬೆಸ್ಕಾಂ ಸಿಬ್ಬಂದಿ ಮೀಟರ್ ರೀಡ್ ಮಾಡಿ ಅರ್ಹರಿಗೆ ಉಚಿತ ಬಿಲ್ ನೀಡುತ್ತಾರೆ. ಈ ಬಗ್ಗೆ ಗೊಂದಲಗಳು ಬೇಡ ಎನ್ನುತಾರೆ ಬೆಸ್ಕಾಂ ಅಧಿಕಾರಿಗಳು.
ಶೂನ್ಯ ಬಿಲ್ ಪಾವತಿ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ?
ಗ್ರಾಹಕರು ಹಿಂದಿನ ವರ್ಷದ ಒಟ್ಟು ಸರಾಸರಿ ಬಳಕೆಗಿಂತ ಶೇ.10ರಷ್ಟು ಹೆಚ್ಚು ಬಳಕೆಯವರೆಗೆ ಶೂನ್ಯ ಬಿಲ್ ಕೊಡಲಾಗುತ್ತದೆ. ಒಂದು ವೇಳೆ ಒಂದು ತಿಂಗಳು 200 ಯುನಿಟ್‌ಗಿಂತ ಹೆಚ್ಚು ಬಳಕೆ ಮಾಡಿದ್ದರೆ ಈ ತಿಂಗಳು ಪೂರ್ಣ ಶುಲ್ಕ ಪಾವತಿಸಬೇಕು ಶೂನ್ಯ ಬಿಲ್ ಬರುವುದಿಲ್ಲ.
Gruhajoythi Application- ಅರ್ಜಿ ಸ್ಥಿತಿ ಚೆಕ್ ಮಾಡಿದಾಗ ಈ ರೀತಿ ಬಂದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು:
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://sevasindhu.karnataka.gov.in/StatucTrack/Track_Status ನಿಮ್ಮ ಎಸ್ಕಾಂ ಆಯ್ಕೆ ಮಾಡಿಕೊಂದು ನಿಮ್ಮ ಅಕೌಂಟ್ ಐಡಿಯನ್ನು ನಮೂದಿಸಿ check status ಮೇಲೆ ಕ್ಲಿಕ್ ಮಾಡಿದಾಗ “Data Not Found. Please Register to GruhaJyothi Scheme!” ಎಂದು ತೋರಿಸಿದರೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಏಕೆಂದರೆ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿರುವುದಿಲ್ಲ ಅದ ಕಾರಣ.
ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯಲು ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿರಬೇಕು!
ಜುಲೈ 27ರ ಒಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ವಿತರಣೆ ಮಾಡಲಾಗುತ್ತದೆ ಏಕೆಂದರೆ ಪ್ರತಿ ತಿಂಗಳ ಬಿಲ್ ಅವಧಿಯು 25 ರಿಂದ ಮರ ತಿಂಗಳಿನ 25ರವರೆಗೆ ಇರುತ್ತದೆ ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರಿಗೆ ಸೆಪ್ಟಂಬರ್ ನಲ್ಲಿ ಶೂನ್ಯ ಬಿಲ್ ಸಿಗಲಿದೆ ಅದೇ ರೀತಿ ಆಗಸ್ಟ್ 27 ರ ನಂತರ ಅರ್ಜಿ ಸಲ್ಲಿಸಿದರೆ ಅಕ್ಟೋಬರ್ ತಿಂಗಳಲ್ಲಿ ಶೂನ್ಯ ಬಿಲ್ ನೀಡಲಾಗುತ್ತದೆ. ಅದ್ದರಿಂದ ಇನ್ನೂ ಅರ್ಜಿ ಸಲ್ಲಿಸದವರು ಬೇಗನೆ ಅರ್ಜಿ ಸಲ್ಲಿಸಿ, ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಿಲ್ಲ ಅದರೆ ಶೂನ್ಯ ಬಿಲ್ ಪಡೆಯಲು ಬೇಗ ಅರ್ಜಿ ಸಲ್ಲಿಸುವುದು ಅವಶ್ಯಕ.
ಗೃಹ ಜ್ಯೋತಿ ಯೋಜನೆಯಡಿ ಅರ್ಹರಾದ ಗ್ರಾಹಕರಿಗೆ ಶೂನ್ಯ ಬಿಲ್ ಅನ್ನು ನೀಡಲಾಗುತ್ತಿದ್ದು, ನಮ್ಮ ಮೀಟರ್ ರೀಡರ್’ಗಳು ಗ್ರಾಹಕರಿಗೆ ಶೂನ್ಯ ಬಿಲ್ ಕುರಿತಾಗಿ ಸವಿವರವಾಗಿ ಮಾಹಿತಿ ನೀಡುತ್ತಿದ್ದಾರೆ.@mdbescom @BescomHelpline #GruhaJyothischeme @thekjgeorge @CMofKarnataka pic.twitter.com/uEd7P5uKEz — Namma BESCOM (ನಮ್ಮ ಬೆಸ್ಕಾಂ) (@NammaBESCOM) August 3, 2023