Gruhalakshmi camp date-ಗೃಹಲಕ್ಷ್ಮಿ ಕ್ಯಾಂಪ್ ನಿಮ್ಮ ಅರ್ಜಿ ಸರಿಪಡಿಸಲು ನಾಳೆ ಕೊನೆಯ ದಿನ!

Gruhalakshmi camp date: ಗೃಹಲಕ್ಷ್ಮಿ ಯೋಜನೆ ಅರ್ಜಿದಾರರಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಬುಧವಾರದಿಂದ ಶುಕ್ರವಾರದವರೆಗೆ ಅಂದರೆ ಡಿಸೆಂಬರ್ 27 ರಿಂದ 29ರವರೆಗೆ ಒಟ್ಟು 3 ದಿನಗಳು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ. 

ಗೃಹಲಕ್ಷ್ಮಿ ಯೋಜನೆ ಅರ್ಜಿದಾರರಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಬುಧವಾರದಿಂದ ಶುಕ್ರವಾರದವರೆಗೆ ಅಂದರೆ ಡಿಸೆಂಬರ್ 27 ರಿಂದ 29ರವರೆಗೆ ಒಟ್ಟು 3 ದಿನಗಳು
ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ. 

ಪಂಚಾಯತ್‌ ರಾಜ್‍‌ ಅಧಿಕಾರಿಗಳ ನೇತೃತ್ವದಲ್ಲಿ ಶಿಬಿರ ನಡೆಯಲಿದ್ದು, ಬಾಪೂಜಿ ಸೇವಾ ಕೇಂದ್ರದ ಕಂಪ್ಯೂಟರ್‌ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು, ಎಲೆಕ್ಟ್ರಾನಿಕ್‌ ಡೆಲಿವರಿ ಆಫ್‌ ಸಿಟಿಜನ್‌ ಸರ್ವಿಸಸ್‌ (ಇ.ಡಿ.ಸಿ) ತಂಡಗಳ ಸಿಬ್ಬಂದಿ, ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಹಾಗೂ ಇತರ ಬ್ಯಾಂಕ್‌ಗಳ ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಾರೆ.

ಗೃಹಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ ಒಂದು ಕಂತು ಹಣ ಪಡೆಯದವರು ಕೂಡಲೇ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯನ್ನು ಈ ಕೆಳಗೆ ತಿಳಿಸಿರುವ ದಾಖಲಾತಿಗಳ ಸಮೇತ ಅರ್ಜಿದಾರರನ್ನು ಕರೆದುಕೊಂಡು ಭೇಟಿ ಮಾಡಿ ನಿಮ್ಮ ಅರ್ಜಿಯ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬವುದು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: LPG e-KYC status- ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ?

Gruhalakshmi camp date: ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ನಡೆಯುವ ಅವಧಿ ಎಷ್ಟು?

ಶಿಬಿರ ನಡೆಯುವ ಸಮಯದ ವಿವರ:

ಬೆಳಗ್ಗೆ 9ರಿಂದ ಸಂಜೆ 5ರವರೆಗೆ

Gruhalakshmi camp place-ಶಿಬಿರ ನಡೆಯುವ ಸ್ಥಳ:

ನಿಮ್ಮ ಹಳ್ಳಿಯ ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ

ಇದನ್ನೂ ಓದಿ: LPG E-KYC: ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ  ಮಾಡಿಸಲು 31 ಡಿಸೆಂಬರ್ 2023 ಕೊನೆಯ ದಿನಾಂಕವಲ್ಲ!

Gruhalakshmi camp last date- ಯಾವೆಲ್ಲ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ:

  • ಆಧಾರ್ ಜೋಡಣೆ
  • ಬ್ಯಾಂಕ್ ಸಮಸ್ಯೆ
  • ಇ-ಕೆವೈಸಿ ಅಪ್ಲೇಟ್
  • ಹೊಸ ಬ್ಯಾಂಕ್‌ ಖಾತೆ ಆರಂಭ

Gruhalakshmi camp documents-ತೆಗೆದುಕೊಂಡು ಹೋಗಬೇಕಾದ ದಾಖಲಾತಿಗಳು:

  • ಅರ್ಜಿದಾರರ ಆಧಾರ್ ಕಾರ್ಡ್
  • ಪತಿಯ ಆಧಾರ್ ಕಾರ್ಡ್
  • ಪಡಿತರ ಚೀಟಿ/ರೇಷನ್ ಕಾರ್ಡ
  • ಬ್ಯಾಂಕ್ ಪಾಸ್ ಪುಸ್ತಕ

ಇದನ್ನೂ ಓದಿ: Yuva nidhi application link-ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಬಿಡುಗಡೆ!

ಗೃಹಲಕ್ಷ್ಮಿ ಯೋಜನೆಯ ಕುರಿತು ನಮ್ಮ ಪುಟದ ಉಪಯುಕ್ತ ಅಂಕಣಗಳು ಓದಲು ಇಲ್ಲಿ ಕ್ಲಿಕ್ ಮಾಡಿ: click here